ವಾಯುವ್ಯನೋ ಅಥವಾ ವಾಯವ್ಯನೋ
ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್ನು ರಚಿಸಲಾಯಿತು. ಈ ವಾಯುವ್ಯ ಸಂಸ್ಥೆಯ ಬಸ್ಸುಗಳ ಮೇಲೆ ಆಂಗ್ಲದಲ್ಲಿ "NWKRTC" ಅಂತಲೋ ಅಥವಾ ಕನ್ನಡದಲ್ಲಿ "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ" ಅಂತಲೋ ಬರೆದಿರುತ್ತಾರೆ. ಈ ಸಂಸ್ಥೆಯವರು ಬರೆಯುವ ವಾಯುವ್ಯದಲ್ಲಿ 'ಉ' ಪ್ರತ್ಯಯ ಇರುವದಿಲ್ಲ ಅದು 'ವಾಯವ್ಯ' ಎಂದಿರುತ್ತದೆ.
ವಾಯವ್ಯ ಸರಿಯೋ ವಾಯುವ್ಯ ಸರಿಯೋ?
ವಾಯವ್ಯ ತಪ್ಪಾಗಿದ್ದರೆ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ಜನರು ಇದನ್ನು ಏಕೆ ಗಮನಿಸಿಲ್ಲ ಎನ್ನುವದು ಸೋಜಿಗದ ಮಾತೆ ಸರಿ.

- sankul ರವರ ಬ್ಲಾಗ್
- Login or register to post comments
- 267 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ವಾಯುವ್ಯನೋ ಅಥವಾ ವಾಯವ್ಯನೋ
'ವಾಯವ್ಯ' ಸರಿ..
ವಾಯವ್ಯ= ಎಂಟು ದಿಕ್ಕುಗಳಲ್ಲಿ ಒಂದು ಉತ್ತರ ಮತ್ತು ಪಶ್ಚಿಮಗಳ ನಡುವೆ ಇರುವ ದಿಕ್ಕು;ವಾಯುವಿಗೆ ಸಂಬಂಧಿಸಿದ.
ಉ: ವಾಯುವ್ಯನೋ ಅಥವಾ ವಾಯವ್ಯನೋ
ಹೌದು, ವಾಯವ್ಯ ಸರಿಯಾದ ಪ್ರಯೋಗ
______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಾಯುವ್ಯನೋ ಅಥವಾ ವಾಯವ್ಯನೋ
ಹುಡುಕು ಪದ: ವಾಯವ್ಯ
೧. ವಾಯವ್ಯ (ಸಂ) (ನಾ) ಎಂಟು ದಿಕ್ಕುಗಳಲ್ಲಿ ಒಂದು ಉತ್ತರ ಮತ್ತು ಪಶ್ಚಿಮಗಳ ನಡುವೆ ಇರುವ ದಿಕ್ಕು
೨. ವಾಯವ್ಯ (ಸಂ) (ಗು) ವಾಯುವಿಗೆ ಸಂಬಂಧಿಸಿದ
*ಅಶೋಕ್