ಆಯಿ ಮದ್ದು...

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಾತಾವರಣನೇ ಒಂಥರಾ ಆಗೋಗ್ಬಿಟ್ಟಿದೆ. ರಾಜಕಾರಣಿಗಳ ಜತೆ ಇರೋ ಈ ಪರಿಸರಾನೂ ಅವರ ಥರಾನೇ ಆಗೋಗ್ಬಿಟ್ಟಿದೆ ಮೋಡ ಮಳೆ ಸುರಿಸ್ತೀನಿ ಅಂತ ಆಶ್ವಾಸನೆ ಕೊಡ್ತಾ ಇದೆಯೇ ಹೊರ್ತು ತೊಟ್ಟೂ ಹನಿಸಿಲ್ಲ ಇನ್ನ. ಸಹ-ವಾಸ ದೊಷ ಇರ್ಬೇಕು... ಈ ಥರಾ ವಾತಾವರಣ ಇದ್ರೆ ಕೆಮ್ಮು ಜ್ವರ ನೆಗ್ಡಿಗಳಿಗೆ ಹಬ್ಬ ಅಲ್ವ.
 ಮುಂದೆ ಓದಿ »
Ornamental seperator

ರಕ್ತ ಸಂಗ್ರಾಹಕ ತಾಣಗಳ ಮಾಹಿತಿ ಕೇಂದ್ರ-1062

ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ದಯವಿಟ್ಟು ೧೦೬೨(1062) ಸಂಖ್ಯೆಗೆ ಕರೆ ಮಾಡಿ ಇದು ಬ್ಲಡ್ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುವ ಕಾಲ್ ಸೆಂಟರ್ ಮತ್ತು ಇದು ದಿನದ ೨೪ ಘಂಟೆಗಳೂ ಕಾರ್ಯನಿರತವಾಗಿರುತ್ತೆ. ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ತಿಳಿದವರಿಗೆಲ್ಲ ಹೇಳಿ. ನೀವು ಒಂದು ಜೀವವನ್ನ ಉಳೀಸಬಹುದು.

Ornamental seperator

ರಾಜಕೀಯ..

ಇದಲ್ಲ ಇಂದ್ರಜಾಲ, ಮಂತ್ರ ಮಾಯ
ಹೆರುವದು ಹಗರಣದ ಮಗುವ,
ಮಾಸುವಮುನ್ನ ಹಳೆಯ ಗಾಯ
ಹರಿಯುವುದು ಹಣದ ಹೊಳೆ,
ಹರಿದಂತೆ ಬಾರಿನಲಿ ಪೇಯ
ಹೆದರಬೇಡ ಗೆಳೆಯ,
ಇದುವೇ ರಾಜಕೀಯ.

Ornamental seperator

ಪ್ರಜಾಪ್ರಭುತ್ವ

ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..

ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..

ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..

ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,  ಮುಂದೆ ಓದಿ »

Ornamental seperator
Syndicate content