Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › santoshbhatta ರವರ ಬ್ಲಾಗ್

ಆಯಿ ಮದ್ದು...

July 5, 2007 - 8:25pm — santoshbhatta
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಾತಾವರಣನೇ ಒಂಥರಾ ಆಗೋಗ್ಬಿಟ್ಟಿದೆ. ರಾಜಕಾರಣಿಗಳ ಜತೆ ಇರೋ ಈ ಪರಿಸರಾನೂ ಅವರ ಥರಾನೇ ಆಗೋಗ್ಬಿಟ್ಟಿದೆ ಮೋಡ ಮಳೆ ಸುರಿಸ್ತೀನಿ ಅಂತ ಆಶ್ವಾಸನೆ ಕೊಡ್ತಾ ಇದೆಯೇ ಹೊರ್ತು ತೊಟ್ಟೂ ಹನಿಸಿಲ್ಲ ಇನ್ನ. ಸಹ-ವಾಸ ದೊಷ ಇರ್ಬೇಕು... ಈ ಥರಾ ವಾತಾವರಣ ಇದ್ರೆ ಕೆಮ್ಮು ಜ್ವರ ನೆಗ್ಡಿಗಳಿಗೆ ಹಬ್ಬ ಅಲ್ವ. ನಮ್ಮ ಕಛೇರಿಯಲ್ಲಂತೂ ಆಸ್ಟ್ರೇಲಿಯಾ ಎದ್ರುಗಡೆ ಆಡ್ತಾ ಇರೋ ನಮ್ಮ ಪ್ಲೇಯರ್ಗಳ ಥರ ಒಬ್ರಾದ ಮೇಲೆ ಒಬ್ರು ಈ ಜ್ವರಕ್ಕೆ ಬಲಿ ಆಗ್ತಾನೇ ಇದಾರೆ. ಇವತ್ತು ನೋಡಿದ್ರೆ ನಮ್ಮ ಕಾಟ್ಪಾಡಿ ಟೀಮ್ ಲೀಡ್ ಕರ್ಛೀಫ್ ಹಿಡ್ಕೊಂಡು ಕೂತಿದ್ದ. ಆಗ ನಂಗೆ ನೆನ್ಪಾದದ್ದು ನಮ್ಮನೆ ಡಾಕ್ಟರ್ ವಿಜಯಲಕ್ಷ್ಮಿ ಲಕ್ಷ್ಮೀನಾರಯಣ ಭಟ್ರದ್ದು (ನನ್ನಮ್ಮ Smiling). ಇಲ್ಲಿ ಕೆಲ ನೆಗಡಿ ಔಷಧಿಗಳನ್ನ ಹಂಚಿಕೊಳ್ಳಬಯಸ್ತೇನೆ..
೧. ನಿಂಬೇ ಹಣ್ಣಿನ ಕಷಾಯ:
ಬೇಕಾದ ಪದಾರ್ಥಗಳು: ಲಿಂಬೇ ಹಣ್ಣು ೨, ಜೀರಿಗೆ ೩ ಚಮಚ,ಮೆಣಸಿನಕಾಳು(ಬೇಕಾದಲ್ಲಿ) ೨ ರಿಂದ ೩, ತುಳಸಿ (ಇದ್ದಲ್ಲಿ) ಸ್ವಲ್ಪ, ಉಪ್ಪು ಇಲ್ಲವೇ ಕಲ್ಲು ಸಕ್ಕರೆ ರುಚಿಗೆ.
ಮಾಡುವ ವಿಧಾನ: ಒಂದು ಪಾತ್ರದಲ್ಲಿ ಮೂರು ಲೋಟ ನೀರು ಹಾಕಿ. ನಿಂಬೇಹಣ್ಣನ್ನು ಕತ್ತರಿಸಿ ಅದರಲ್ಲಿ ಹಾಕಿ ಉಳಿದೆಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಯಲು ಬಿಡಿ. ನೀರು ಸರಿ ಸುಮಾರು ಅರ್ಧ ಆಗುವ ವರೆಗೂ ಕುದಿಸಿ.
ಇದನ್ನು ಬಿಸಿ ಬಿಸಿಯಾಗೇ ಕುಡಿದರೆ ಉತ್ತಮ.
ಇದು ದಿನಕ್ಕೆ ೩ ಇಲ್ಲ ೪ ಬಾರಿ ಕುಡಿದರೆ ನೆಗಡಿ ಜ್ವರ ಕಡಿಮೆಯಾಗುತ್ತೆ. ನನ್ನಮ್ಮನ ಸ್ಟೈಲ್ ಅಲ್ಲಿ ಹೇಳೋದಾದ್ರೆ ರಾಮ ಬಾಣ. ಇದರಿಂದ ಬಾಯಿ ಇಛ್ಛೆನೂ ಆಗುತ್ತೆ.
೨. ಅರಿಷಿಣದ ಕಾಫಿ:
ಬೇಕಾದ ಪದಾರ್ಥಗಳು: ಅರಿಷಿಣ ಅರ್ಧ ಚಮಚ, ಬಿಸಿ ಹಾಲು ೧ ಲೋಟ, ಕಲ್ಲು ಸಕ್ಕರೆ ರುಚಿಗೆ.
ಮಾಡುವ ವಿಧಾನ: ಬಿಸಿ ಹಾಲಿಗೆ ಅರಿಷಿಣ ಮತ್ತು ಕಲ್ಲು ಸಕ್ಕರೆಯನ್ನು ಸೇರಿಸಿ ಕುಡಿಯಿರಿ.
ಇದು ಕೆಮ್ಮು ಮತ್ತು ಕಫಕ್ಕೆ ಒಳ್ಳೆಯದು. ** ಕೆಲವರಿಗೆ ಇದರಿಂದ ಕಫ ಬಿಗಿಯುತ್ತೆ.
೩. ಬಿಸಿ ಪಾನಕ:
ಬೇಕಾದ ಪದಾರ್ಥಗಳು: ನಿಂಬೇಹಣ್ಣು ೧, ಸಕ್ಕರೆ ರುಚಿಗೆ, ೧ ಲೋಟ ಬಿಸಿ ನೀರು.
ಮಾಡುವ ವಿಧಾನ: ಬಿಸಿನೀರಿಗೆ ನಿಂಬೇಹಣ್ಣಿನ ರಸ ಮತ್ತು ಸಕ್ಕರೆಯನ್ನ ಬೆರೆಸಿ ಕುಡಿಯಿರಿ.
ಇದು ಗಂಟಲು ನೋವಿದ್ದಾಗ,ಮೂಗು ಸುರಿಯುತ್ತಿದ್ದಾಗ ಕಫ ಕಟ್ಟಿದ್ದಾಗ ಆರಾಮ ನೀಡುತ್ತೆ.
ಇನ್ನ ಬಾಯಿಗೆ ಯೇನು ಸೇರ್ದೆ ಇದ್ದಾಗ ಮಾವಿನ ಕಾಯಿ ಕೂಗಿಲೆ ತಂಬ್ಳಿ ಇದೆ, ಈರುಳ್ಳಿ ತಂಬ್ಳಿ ಇದೆ ಅಷ್ಟೊಂದೆಲ್ಲ ಪಾಕಶಾಸ್ತ್ರ ಜ್ನಾನ ಇಲ್ಲ. ಮುಂದೆ ಆಯಿ ಕೇಳಿ ಬರೀತೀನಿ.
  • ಮನೆ ಮದ್ದು
Ornamental seperator
  • santoshbhatta ರವರ ಬ್ಲಾಗ್
  • Login or register to post comments
  • 265 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿರಹದಲಿಮನ
  • ಅಡುಗೆ ಮಾಡುವ ವಿಧಾನ - ಒಂದು ಚುಟುಕ
  • ಒಂಥರಾ ಪ್ರೀತಿ...
  • ಕಾದಿರುವೆ
  • ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....!
Syndicate content

ಲೇಖಕರು

santoshbhatta's picture

ಪರಿಚಯ

ನಾನು ಯೆಲ್ಲರಂತೆ ಸಾಧಾರಣ ಮನುಷ್ಯ ಅಂದ್ರೂ ಯಾರು ನಂಬೊಲ್ಲಾ Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator