ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರು ಯಾಕೋ ವಿಶ್ರಾಂತಿ ತಗೊಂಡಿದ್ರಿಂದ,ಟಿವಿ ಸುಮ್ಮನೆ ಕುಳಿತಿತ್ತು. ಹಂಗೇ ಹೈಸ್ಕೂಲಲ್ಲಿ ಮೇಷ್ಟ್ರು ಕಾಳಿದಾಸ ಹೇಳಿದ ಶ್ಲೋಕ ನೆನಪಾಯ್ತು,
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ
ಬಹಳ ಸುಂದರವಾದ ಶ್ಲೋಕ ಇದರ ಭಾವಾರ್ಥವನ್ನು ಹೇಳೋದಾದ್ರೆ, ಕಮಲದ ಒಳಗೆ ಕಮಲ ಹುಟ್ಟಿರುವದನ್ನು ಯಾರೂ ಕೇಳೂ ಇಲ್ಲ,ನೋಡೂ ಇಲ್ಲ ಆದ್ರೆ ಕನ್ಯೆ ನಿನ್ನ ಮುಖವೆಂಬ ಕಮಲದಲ್ಲಿ ಇನ್ನೆರಡು ಕಮಲಗಳು ಹೇಗೆ ಅರಳಿವೆ?. ಎಷ್ಟು ಸುಂದರವಾಗಿದೆ ಅಲ್ವಾ? ಕಾಳಿದಾಸ ನಿಜವಾಗಿಯೂ ಆ ಶಾರದಾಂಬೆಯ ಪುತ್ರನೇ
ಇದರ ಹಿಂದಿನ ಕಥೆ ನನಗೆ ತಿಳಿದಷ್ಟು ಹೇಳೋದಾದ್ರೆ, ಭೋಜರಾಜನ ಆಸ್ಥಾನ ವಿದ್ವಾಂಸರುಗಳ ಕಾಶಿಯಾಗಿತ್ತು. ಅಲ್ಲಿ ಸಾಹಿತ್ಯ ಪ್ರಪಂಚದ ಅಥಿರಥ ಮಹಾರಥಿಗಳಿದ್ರು. ಒಮ್ಮೆ ಒಬ್ಬ ವಿದ್ವಾಂಸ ಬಂದು ಸವಾಲು ಹಾಕಿದ, ’ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ’ ಇದರ ದ್ವಿತೀಯ ಚರಣವನ್ನ ಪೂರ್ತಿ ಮಾಡಿ.ಇದನ್ನ ಪೂರ್ತಿ ಮಾಡಿದ್ರೆ ನಾನು ಅವರ ದಾಸ ಆಗ್ತೀನಿ ಇಲ್ಲ ಅಂದ್ರೆ ಆಸ್ಥಾನದಲ್ಲಿರುವ ಎಲ್ಲ ವಿದ್ವಾಂಸರೂ ಅವನಿಗೆ ಶರಣಾಗ್ಬೇಕು ಮತ್ತು ರಾಜ್ಯದಲ್ಲಿ ಅರ್ಧ ಭಾಗ ಕೊಡ್ಬೇಕು ಅಂತ ಸವಾಲು ಹಾಕಿದ. ಆಸ್ಥಾನ ವಿದ್ವಾಂಸರೆಲ್ಲ ಮೂಕವಿಸ್ಮಿತರಾದ್ರು ಯಾರ ಹತ್ರಾನೂ ಇದಕ್ಕೆ ಉತ್ತರ ಇರ್ಲಿಲ್ಲ. ಇದನ್ನ ನೋಡಿ ಭೋಜ ಸಂಪೂರ್ಣವಾಗಿ ವಿಚಲಿತನಾಗಿ ಹೋದ. ಆಸ್ಥಾನದಲ್ಲಿ ಕಾಳಿದಾಸನ ಅನುಪಸ್ಥಿತಿ ಎದ್ದು ಕಾಣ್ತಾ ಇತ್ತು. ಭೋಜ ಕಾಳಿದಾಸನ ನಡುವೆ ಆದ ಕೆಲವು ತಪ್ಪು ಕಲ್ಪನೆಗಳಿಂದ ಕಾಳಿದಾಸನನ್ನ ದೇಶದ ಹೊರಗಟ್ಟಿದ್ದ. ಸಮಸ್ಯೆಯ ಗಂಭೀರತೆಯನ್ನು ನೋಡಿ ಭೋಜ ಡಂಗುರ ಸಾರಿಸ್ದ. ಯಾರು ಸಮಸ್ಯೆನಾ ಪರಿಹರಿಸ್ತಾರೋ ಅವರಿಗೆ ಅರ್ಧ ರಾಜ್ಯ ಕೊಡೋದಾಗಿ. ಇದನ್ನ ಕೇಳಿದ ಕಾಳಿದಾಸನಿಗೆ ಆಶ್ರಯ ಕೊಟ್ಟಿದ್ದ ವೇಶ್ಯೆಯೊಬ್ಬಳು ಕಾಳಿದಾಸನ ಹತ್ತಿರ ಈ ಸಮಸ್ಯೆಯನ್ನ ಪೂರ್ಣಗೊಳಿಸ್ತಾಳೆ.ಅದನ್ನ ಓದಿದಾಗ ಭೋಜನಿಗೆ ಇದು ಕಾಳಿದಾಸನೇ ಬರೆದ ವಾಕ್ಯ ಎಂದು ಅರ್ಥ ಆಗುತ್ತೆ ಮತ್ತು ಅವರ ಪುನರ್ಮಿಲನ ಆಗುತ್ತೆ.
ಈ ಶ್ಲೋಕವನ್ನ ಸೂಕ್ಷ್ಮವಾಗಿ ಗಮನಿಸ್ದ್ರೆ ’ಮುಖಾಂಭೋಜೇ’ಅಲ್ಲಿ ಭೋಜರಾಜ ಕಾಣ್ತಾನೆ. ಎಷ್ಟು ಸುಂದರವಾಗಿ ಪೋಣಿಸಿದ ವಾಕ್ಯ ಅಲ್ವಾ. ಅಂತಹ ಸುಂದರ ಶಬ್ದಗಳ ಹಾರವನ್ನು ಸೃಷ್ಟಿಸಿದ ಆ ಕಲಾವಿದನ್ನ ಎಷ್ಟು ಹೊಗಳಿದ್ರೂ ಸಾಲ್ದು ಅಲ್ವಾ?ಕಾಳಿದಾಸನ ಬಗ್ಗೆ ಮಾತಾಡೋಕ್ಕೆ ಹೋದ್ರೆ ಶಬ್ದಗಳೇ ಸಾಲಲ್ಲ. ಅಭಿಜ್ನಾನ ಶಾಕುಂತಲೆಯಲ್ಲಿ ಅವ ಸೃಷ್ಟಿಸಿದ ವಾಕ್ಯಸರಪಳಿಗಳಿಗೆ ಸಮನಾದ್ದು ಯಾವುದೂ ಇಲ್ಲ ಅನ್ಸುತ್ತೆ.ಅದರಲ್ಲಿ ಶಾಕುಂತಲೆ ಋಷ್ಯಾಶ್ರಮವನ್ನು ಬಿಟ್ಟು ಹೋಗುವಾಗ ಬರೆದ ನಾಲ್ಕು ಶ್ಲೋಕಗಳು ಜಗತ್ತಿನ ಅತಿಸುಂದರ ಶ್ಲೋಕ ಅಂತಾರೆ. ಸಂಸ್ಕೃತ ಭಾಷೆ ಇಷ್ಟು ಸುಂದರವಾಗಿ ಕಾಣೋದಕ್ಕೆ ಬಹುಶಃ ಇಂಥ ಮಹನೀಯರು ಬರೆದ ನುಡಿಮುತ್ತುಗಳೇ ಕಾರಣ ಅನ್ಸುತ್ತೆ.
ಇದೆಲ್ಲಾ ಆಲೋಚನೆ ಮಾಡ್ತಾ ಇರ್ಬೇಕಾದ್ರೆ ಕರಂಟು ಬಂತು. ಉಷೆ ಟಿವಿ ಯಲ್ಲಿ ನಮ್ಮ ಅಣ್ಣ ದರ್ಶನ್ ಅವ್ರು ರಕ್ಷಿತಾ ಅವ್ರಿಗೆ ’ತಬಲ ತಬಲ ತಬಲ ನನ್ನ ಮುದ್ದಿನ ತಬಲ...’ ಅಂತಾ ಹಾಡು ಹಾಡ್ತಾ ಇದ್ರು. ತಬಲ ಬದ್ಲು ಆನೆ ಅಂತಾ ಅಂದಿದ್ರೆ ಉಪಮಾನ ಸರಿಯಾಗಿ ಆಗ್ತಾ ಇತ್ತೋ ಏನೊ. ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳ ಉಪಮಾನ ಪರಾಕ್ರಮಕ್ಕೆ ಸುಸ್ತಾಗಿ ಮುಸ್ಕಾ ಎಳ್ಕೊಂಡೆ...
ಇದು ರೂಪಕ ಅಲ್ವಾ!! ಇಲ್ಲಿ 'ಇವ', 'ತಥಾ' ಇಲ್ಲ! ( ತಿಳಿದವರು ತುಸು ಹೇಳಿ )( simile ಅಲ್ಲ metaphor )
ಕಾಳಿದಾಸ ಇನ್ನೊಂದು ಕತೆಯಲ್ಲಿ ಬರುವ ಉಪಮೇ ಬೊಂಬಾಟ್... ( ನಂಗೆ ಇಡೀ ಶ್ಲೋಕ ಸರಿಯಾಗಿ ನೆನಪಿಲ್ಲ ! )
ಇದು 'ಛಂದಾಸಾಮ್ ಕವಿತಾ'( ವೇದಪಂಡಿತರ ಕವನ ) ಎಂಬ ಕತೆಯಲ್ಲಿ ಬರುವುದು.
'ಅಕ್ಷರಲಕ್ಷ'ದ ಆಸೆಯಿಂದ ಒಂದು ವೇದ ಪಂಡಿತರ ಗುಂಪು ಹೀಗೆ ಅರೆ ಶ್ಲೋಕ ಬರೆದು ಮುಂದು ಬರೆಯಲಾಗದೆ ಹಣಗಾಡುತ್ತಿರುತ್ತದೆ.
ಶ್ಲೋಕದ ಮೊದಲ ಸಾಲು... "ಭೋಜನಂ ದೇಹಿ ರಾಜೇಂದ್ರ, ಘೃತ-ಸೂಪ-ಸಮನ್ವಿತಂ" ( ಊಟ ಕೊಡೋ, ಅರಸನೇ, ತುಪ್ಪ, ತೊವ್ವೆ ಹಾಕಿ ) ಇಷ್ಟು ಬರೆದು ಕುಳಿತಿರುತ್ತಾರೆ.
ಆಗ ಅಲ್ಲಿಗೆ ಬಂದ ಕಾಳಿದಾಸ, ಅದನ್ನು ಹೀಗೆ ಪೂರೈಸುತ್ತಾನೆ.
"ಶರಚ್ಚಂದ್ರಮಿವ ಧವಳಂ ದಧಿ....(ಯುಕ್ತಂ?)" ( ಶರತ್ ಋತುವಿನ ಚಂದ್ರನಂತೆ ಬೆಳ್ಳಗಿನ ಮೊಸರನ್ನೂ ಕೊಡು ).
ಇಲ್ಲಿ 'ಶರಚ್ಚಂದ್ರಮಿವ ಧವಳಂ' ಇದು ಕವಿತ್ವ ಎಂದು ಭೋಜನು ಬರೀ ಎರಡನೇ ಸಾಲಿಗೆ ಬಿರುದು(ಬಹುಮಾನ) ಕೊಡುವನು.!
ಉಷೆ ಟಿವಿ ಯಲ್ಲಿ ನಮ್ಮ ಅಣ್ಣ ದರ್ಶನ್ ಅವ್ರು ರಕ್ಷಿತಾ ಅವ್ರಿಗೆ ’ತಬಲ ತಬಲ ತಬಲ ನನ್ನ ಮುದ್ದಿನ ತಬಲ...’ ಅಂತಾ ಹಾಡು ಹಾಡ್ತಾ ಇದ್ರು. ತಬಲ ಬದ್ಲು ಆನೆ ಅಂತಾ ಅಂದಿದ್ರೆ ಉಪಮಾನ ಸರಿಯಾಗಿ ಆಗ್ತಾ ಇತ್ತೋ ಏನೊ. ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳ ಉಪಮಾನ ಪರಾಕ್ರಮಕ್ಕೆ ಸುಸ್ತಾಗಿ ಮುಸ್ಕಾ ಎಳ್ಕೊಂಡೆ...
ಪಾಪಾ ದರ್ಶನ್, ರಕ್ಷಿತಾ ಇವೆರೆಲ್ಲ ಹುಡುಗರು. ಇವರು ತಬಲ, ಚಂಡು ಅಂತಾರೆ.!!
ಆದ್ರೆ ನೀವು ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ'ಅಲ್ಲಿ ಬರುವ 'ಸ್ತನವೇಪಥು'ವನ್ನು ಓದಿದರೇ ಇನ್ನೇನು ಹೇಳುವಿರೋ?
ಕಾಳಿದಾಸನ 'ಮೇಘದೂತ' ಬರೀ ಇದೇ... ಮಿಂಚು-ಸಿಡಿಲು ಪಟ್ಟಣದ ಅಭಿಸಾರಿಕೆಯರಿಗೆ ತಮ್ಮ ಬೇಟದ ನಲ್ಲನ ಮನೆಗೆ ಹೋಗಲು ದಾರಿ ತೋರಬೇಕಂತೆ !. ( ಸೌಧಾಮಿನೀ ಶ್ಲೋಕ )
ತುಸು.. ಕಾಳಿದಾಸ ಬೇಟದ/ಶೃಂಗಾರ ಕಾವ್ಯಗಳನ್ನು ಓದಿ ನೋಡಿದರೆ ತಿಳಿಯುವುದು!! ಬರೀ 'ಕುಚನಿತಂಬಾದಿಗಳ ಸವಿವರ ವರ್ಣನಾ-ವಿಲಾಸಭರಿತ ಮನೋಹಾರಿ ರೋಮಾಂಚಕ ಉತ್ತಮ ಕಾವ್ಯಗಳು'
ಒಂದು ಹೊತ್ತಿಗೆ ಕಾಳಿದಾಸ ಅದನ್ನು ಕನ್ನಡದಲ್ಲಿ ಬರೆದಿದ್ದರೆ ನೀವು ಹೀಗೆ ನೆನಪು ಮಾಡಿಕೊಳ್ಳುತ್ತಿದ್ದಿರಾ? ನನಗೆ ಅನುಮಾನ. ಇಲ್ಲಿ ನುಡಿ ಮೊದಲಾ, ತಿಳಿ ಮೊದಲಾ? ಸಕ್ಕದದಲ್ಲಿ ಬರೆದರೇನೇ 'ಪಾಂಡಿತ್ಯಾನಾ'?(ಜಾಣ್ಮೆ). ಈಗ ಮಂದಿ ಇಂಗ್ಲಿಸ್ ಸಾಲೆಯಲ್ಲಿ ಕಲಿತರೇನೇ ಮಕ್ಕಳು ಜಾಣರಾಗೋದು ಅಂದುಕೊಳ್ತಾರಲ್ಲಾ, ಹಾಗೇ.
ಬೇಂದ್ರೆಯವರ 'ಹಕ್ಕಿ ಹಾರುತಿದೆ ನೋಡಿದಿರಾ?' ದ ಕೆಲ ಸಾಲುಗಳು,
ಕೊಳಂಬೆ ಪುಟ್ಟೇಗೌಡರ 'ತಿಳಿಗನ್ನಡ ನುಡಿವಣಿಗಳು' ಇಂದ ಕೆಲ ಸಾಲು,
ನಲ್ಮೆ, ತಾಳ್ಮೆಗಳಿಂದ ಹೊರಹೊಮ್ಮುವಾ ಮಾತು
ಕಂಪು ತಂಪಿನ ಬೀಸುವೆಳೆಗಾಳಿಯಂತೆ
ಕಿನಿಸು ಕೀಳ್ಮೆಗಳಿಂದ ತೂರಿ ಹಾರುವ ನುಡಿ
ಸುಳಿಗಾಳಿ ಕೊಳೆ ತಿಪ್ಪೆ ಕೆದರಿ ಬಪ್ಪಂತೆ
ನಲ್ಮೆ ಅಂದರೆ ಪ್ರೀತಿ, ತಾಳ್ಮೆ = ಸಹನೆ. ಕನ್ನಡದ್ದೇ ಒರೆ ಇದ್ದರೂ ಸಕ್ಕದದ 'ಪ್ರೀತಿ'ಯನ್ನೇ ಏಕೆ ನಾವು ಅಂಟಿಸಿಕೊಂಡಿರುವದು? 'ತಾಳ್ಮೆ' ಇದ್ದರೂ 'ಸಹನೆ' ಏಕೆ? ಸಕ್ಕದದಲ್ಲಿ ಬರೆದದ್ದೆ ಮೇಲು ಎಂಬ ಕುರುಡು ನಂಬಿಕೆಯಿಂದಾಗಿ ಹೀಗಾಗಿರುವದು. ಇನ್ನಾದರೂ ಕನ್ನಡಿಗರು ಕಣ್ಣು ತೆರೆಯಬೇಕು.
ಒಂದು ಹೊತ್ತಿಗೆ ಕಾಳಿದಾಸ ಅದನ್ನು ಕನ್ನಡದಲ್ಲಿ ಬರೆದಿದ್ದರೆ ನೀವು ಹೀಗೆ ನೆನಪು ಮಾಡಿಕೊಳ್ಳುತ್ತಿದ್ದಿರಾ? ನನಗೆ ಅನುಮಾನ. ಇಲ್ಲಿ ನುಡಿ ಮೊದಲಾ, ತಿಳಿ ಮೊದಲಾ? ಸಕ್ಕದದಲ್ಲಿ ಬರೆದರೇನೇ,'ಪಾಂಡಿತ್ಯಾನಾ'?(ಜಾಣ್ಮೆ). ಈಗ ಮಂದಿ ಇಂಗ್ಲಿಸ್ ಸಾಲೆಯಲ್ಲಿ ಕಲಿತರೇನೇ ಮಕ್ಕಳು ಜಾಣರಾಗೋದು ಅಂದುಕೊಳ್ತಾರಲ್ಲಾ, ಹಾಗೇ.
ಸಂಸ್ಕ್ರುತದವರಿಗೆ ಇದೊಂದು ಕೆಟ್ಟ ಚಾಳಿ. 'ಬಾವಿ-ಕಪ್ಪೆತನ'ದಲ್ಲಿ ಈ ಹಲವು ಸಕ್ಕದದವರು ಎತ್ತಿದ ಕೈ.
ಕಾಳಿದಾಸನು ಅದು ಯಾವುದೋ ಸೂಳೆಯರ ಮನೆಯಲ್ಲೆಲ್ಲ ಇದ್ದು ಕಬ್ಬ ಬರೆದಿದ್ದಾನೆ, ಅದಕ್ಕೆ ಅಷ್ಟೊಂದು ಮೊಲೆ-ಪಿರ್ರೆಗಳ ಸಂಗತಿಯನ್ನೇ ತುಂಬಿದ್ದಾನೆ ಅಂತ ಮಾತು ಇವೆ.
ಹಲವು ಸಕ್ಕದವರು ಅಂದುಕೊಳ್ಳುವುದು, ಮೇಲಿನ ಸಾಲಲ್ಲಿ ನಾನು 'ಸೂಳೆ' ಬದಲು 'ವೈಶ್ಯೆ' ಅಂತ ಸಂಸ್ಕ್ರುತ ಹಾಗಿದ್ದರೆ ಅದು ಪರಮ-ಸಭ್ಯ-ಭಾಷೆ ಎಂದು
ಇಲ್ಲಿ ಕೆಲವ ಬರೆಯುತ್ತಾರೆ ಹತ್ತು ಸಂಸ್ಕ್ರುತ ನಡುವೆ ಕನ್ನಡದ ಒರೆಗಳನ್ನು ಇಣಿಕಿಸುತ್ತಾರೆ. ಇವು ಅವರ ಕನ್ನಡದ ಅರಿವಿನ(ಜ್ಞಾನದ) ಬರ(ದಾರಿದ್ಯಂ) ತೋರಿಸುತ್ತದೆ. ಇಂತವರೇ 'ಶಿಷ್ಟ-ಭಾಷೆ', 'ಸಭ್ಯ-ಭಾಷೆ' ಎಂದು ಪೊಳ್ಳಾಡಿಕೊಂಡೇ, ನಮ್ಮ ಕನ್ನಡದಲ್ಲಿ ಕಂಡಕಂಡಲ್ಲೆಲ್ಲ ಸಂಸ್ಕ್ರುತ ತುಂಬ ಹತ್ತಿದ್ದಾರೆ. ಕೆಲವರಂತೂ ಸಂಸ್ಕ್ರುತವಿಲ್ಲದೇ ಬರೆಯಲು ಆಗುವುದೇ ಇಲ್ಲವೆಂದು ಅಬ್ಬರಿಸುತ್ತಾರೆ. ಪಾಪ, ಆಂಡಯ್ಯ, ಕೊಳಂಬೆ ಪುಟ್ಟಣ್ಣಗೌಡರು, ಶಿವರಾಮಕಾರಂತರು ಮುಂತಾದವರಿಗೆ ಸಿಕ್ಕ ಕನ್ನಡದೊರೆಗಳು ಇವರಿಗೆ ಕಾಣವು!
ಈ ಎಳೆಯಲ್ಲಿ ಇನ್ನೊಂದು ಗಮನಿಸಬೇಕು.: ಕಾಳಿದಾಸನನ್ನು ಹೊಗಳುವುದು ಸರಿ. ಆದರೆ ಇಲ್ಲೂ ಕನ್ನಡ ಸಿನಿಮಗಳನ್ನು ಹಳಿಯುವುದೇಕೋ?
ಕನ್ನಡ ಸಿನಿಮಕ್ಕೂ ಕಾಳಿದಾಸನಿಗೂ ಎಲ್ಲಿಯ ನಂಟೋ?
'ಕವಿರತ್ನ ಕಾಳಿದಾಸ' ಸಿನಿಮದಲ್ಲೇ 'ಕಮಲೇ ಕಮಲೋತ್ಪತ್ತಿ:..' ಶ್ಲೋಕ ಬಂದಿದೆ. ಪಾಪಾ ಕನ್ನಡ ಸಿನಿಮ ನೋಡದೇ, ಕನ್ನಡ ಸಿನಿಮ ಬೈಯುವುದೇ 'ಸಭ್ಯತೆ' ಎಂದುಕೊಂಡವರಿಗೆ ಇರುವ 'ಬಾವಿ-ಕಪ್ಪೆ' ಬೇನೆಯನ್ನು ಕಂಡು ಮರುಗಬೇಕು.
"ಕಾಳಿದಾಸನು ಅದು ಯಾವುದೋ ಸೂಳೆಯರ ಮನೆಯಲ್ಲೆಲ್ಲ ಇದ್ದು ಕಬ್ಬ ಬರೆದಿದ್ದಾನೆ, ಅದಕ್ಕೆ ಅಷ್ಟೊಂದು ಮೊಲೆ-ಪಿರ್ರೆಗಳ ಸಂಗತಿಯನ್ನೇ ತುಂಬಿದ್ದಾನೆ ಅಂತ ಮಾತು ಇವೆ."
ಇ೦ತಹ ಮಾತನ್ನು ಕಾಳಿದಾಸನ ವಿಷಯದಲ್ಲಿ ಆಡುವುದು ಸರಿಯೇ ? ಅ೦ದಿನ ಸಾಮಾಜಿಕ ಜೀವನ ಪದ್ದತಿ ಏನಿತ್ತು ?
ಅವನ ಜೀವನ ಹೇಗೆ ನಡೆಸಿದ್ದ ? ಇವೆಲ್ಲಾ ತಿಳಿಯದೆ , ಈ ರೀತಿ ಹೇಳುವುದು ಯುಕ್ತವೇ ?
ಒಸಿ ಕನ್ನಡಿಗರಿಗೆ ಸಂಸ್ಕ್ರುತದದಲ್ಲಿ ಬರೆದ್ರೆನೆ ಅದಕ್ಕೆ ಬೆಲೆ ಯಾಕಂದ್ರ ಅವರಿಗೆ ಅದು ದೇವ ನುಡಿ... :)
ಸಂಸ್ಕ್ರುತದಲ್ಲಿರುವ ಕಾಳಿದಾಸನ ಪದಗಳನ್ನು ಕನ್ನಡದಲ್ಲಿ ಬರೆದರೆ ಅದು "ಪೋಲಿ ಹಾಡು" ಆಗೋಗುತ್ತಂತೆ...
ಕನ್ನಡಿಗರು ಕಣ್ಣು ತೆರೆದಿದ್ದಾರೆ ಆದರೆ ಹಾಳಾದ್ದು ಸಂಸ್ಕ್ರುತದ 'ಪೊರೆ' ಇದೆ... ಅದು ಹೋಗೋ ಮಟ್ಟ ಅವ್ರಿಗೆ ಕನ್ನಡ ಸರಿಯಾಗಿ ಕಾಣ್ಸೊಲ್ದು.
ಪ್ರತಿಕ್ರಿಯೆಗಳು
ಉ: ಉಪಮಾ ಕಾಳಿದಾಸಸ್ಯ.
ಯಾವುದೊ ಒಂದು ಹಾಡು ಕೇಳಿ ಅದನ್ನ ಎಲ್ಲ ಕನ್ನಡ ಚಲನಚಿತ್ರ ಸಾಹಿತಿಗಳ ಬಗ್ಗೆ ನೀವು ಕೀಳಾಗಿ ಹೇಳಿರುವುದು ಸರಿಯಲ್ಲ
"ಮುಂಗಾರು ಮಳೆ", "ಸವಿಸವಿ ನೆನಪು" ಹಾಡು ಕೇಳಿ....ಕನ್ನಡ ಒರೆಗಳನ್ನ ಹೇಗೆ ಜೋಡಿಸಿದಾರೆ ಅಂತಾ ಗೊತ್ತಾಗುತ್ತೆ.
http://www.kannadaaudio.com/Songs/Moviewise/home/MungaruMale.php
http://www.kannadaaudio.com/Songs/Moviewise/home/SaviSaviNenapu.php
ಉ: ಉಪಮಾ ಕಾಳಿದಾಸಸ್ಯ.
"ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ"
ಇದು ರೂಪಕ ಅಲ್ವಾ!! ಇಲ್ಲಿ 'ಇವ', 'ತಥಾ' ಇಲ್ಲ! ( ತಿಳಿದವರು ತುಸು ಹೇಳಿ )( simile ಅಲ್ಲ metaphor )
ಕಾಳಿದಾಸ ಇನ್ನೊಂದು ಕತೆಯಲ್ಲಿ ಬರುವ ಉಪಮೇ ಬೊಂಬಾಟ್... ( ನಂಗೆ ಇಡೀ ಶ್ಲೋಕ ಸರಿಯಾಗಿ ನೆನಪಿಲ್ಲ ! )
ಇದು 'ಛಂದಾಸಾಮ್ ಕವಿತಾ'( ವೇದಪಂಡಿತರ ಕವನ ) ಎಂಬ ಕತೆಯಲ್ಲಿ ಬರುವುದು.
'ಅಕ್ಷರಲಕ್ಷ'ದ ಆಸೆಯಿಂದ ಒಂದು ವೇದ ಪಂಡಿತರ ಗುಂಪು ಹೀಗೆ ಅರೆ ಶ್ಲೋಕ ಬರೆದು ಮುಂದು ಬರೆಯಲಾಗದೆ ಹಣಗಾಡುತ್ತಿರುತ್ತದೆ.
ಶ್ಲೋಕದ ಮೊದಲ ಸಾಲು... "ಭೋಜನಂ ದೇಹಿ ರಾಜೇಂದ್ರ, ಘೃತ-ಸೂಪ-ಸಮನ್ವಿತಂ" ( ಊಟ ಕೊಡೋ, ಅರಸನೇ, ತುಪ್ಪ, ತೊವ್ವೆ ಹಾಕಿ ) ಇಷ್ಟು ಬರೆದು ಕುಳಿತಿರುತ್ತಾರೆ.
ಆಗ ಅಲ್ಲಿಗೆ ಬಂದ ಕಾಳಿದಾಸ, ಅದನ್ನು ಹೀಗೆ ಪೂರೈಸುತ್ತಾನೆ.
"ಶರಚ್ಚಂದ್ರಮಿವ ಧವಳಂ ದಧಿ....(ಯುಕ್ತಂ?)" ( ಶರತ್ ಋತುವಿನ ಚಂದ್ರನಂತೆ ಬೆಳ್ಳಗಿನ ಮೊಸರನ್ನೂ ಕೊಡು ).
ಇಲ್ಲಿ 'ಶರಚ್ಚಂದ್ರಮಿವ ಧವಳಂ' ಇದು ಕವಿತ್ವ ಎಂದು ಭೋಜನು ಬರೀ ಎರಡನೇ ಸಾಲಿಗೆ ಬಿರುದು(ಬಹುಮಾನ) ಕೊಡುವನು.!
ಉ: ಉಪಮಾ ಕಾಳಿದಾಸಸ್ಯ.
ಪಾಪಾ ದರ್ಶನ್, ರಕ್ಷಿತಾ ಇವೆರೆಲ್ಲ ಹುಡುಗರು. ಇವರು ತಬಲ, ಚಂಡು ಅಂತಾರೆ.!!
ಆದ್ರೆ ನೀವು ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ'ಅಲ್ಲಿ ಬರುವ 'ಸ್ತನವೇಪಥು'ವನ್ನು ಓದಿದರೇ ಇನ್ನೇನು ಹೇಳುವಿರೋ?
ಕಾಳಿದಾಸನ 'ಮೇಘದೂತ' ಬರೀ ಇದೇ... ಮಿಂಚು-ಸಿಡಿಲು ಪಟ್ಟಣದ ಅಭಿಸಾರಿಕೆಯರಿಗೆ ತಮ್ಮ ಬೇಟದ ನಲ್ಲನ ಮನೆಗೆ ಹೋಗಲು ದಾರಿ ತೋರಬೇಕಂತೆ
!. ( ಸೌಧಾಮಿನೀ ಶ್ಲೋಕ )
ತುಸು.. ಕಾಳಿದಾಸ ಬೇಟದ/ಶೃಂಗಾರ ಕಾವ್ಯಗಳನ್ನು ಓದಿ ನೋಡಿದರೆ ತಿಳಿಯುವುದು!! ಬರೀ 'ಕುಚನಿತಂಬಾದಿಗಳ ಸವಿವರ ವರ್ಣನಾ-ವಿಲಾಸಭರಿತ ಮನೋಹಾರಿ ರೋಮಾಂಚಕ ಉತ್ತಮ ಕಾವ್ಯಗಳು'
ಜಯದೇವನ 'ಗೀತ ಗೋವಿಂದ'ವೋ ಗೋವಿಂದಾ ಗೋವಿಂದಾ!!
ಉ: ಉಪಮಾ ಕಾಳಿದಾಸಸ್ಯ.
ಚೆನ್ನಾಗಿದೆ ಭಟ್ಟರೆ. ಸಂಸ್ಕೃತದ ಸವಿ ಮತ್ತೆ ನೆನಪಾಗುವಂತೆ ಮಾಡಿದಿರಿ.
ಉ: ಉಪಮಾ ಕಾಳಿದಾಸಸ್ಯ.
"ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ"
"ದೃಷ್ಟಮಿಂದೀ ವರದ್ವಯಂ " ಅಂತ ಕೇಳಿದ ಜ್ನಾಪಕ.
ಧನ್ಯವಾದ,
ಕೇಶವ ಮುರಳಿ
ಉ: ಉಪಮಾ ಕಾಳಿದಾಸಸ್ಯ.
ಒಂದು ಹೊತ್ತಿಗೆ ಕಾಳಿದಾಸ ಅದನ್ನು ಕನ್ನಡದಲ್ಲಿ ಬರೆದಿದ್ದರೆ ನೀವು ಹೀಗೆ ನೆನಪು ಮಾಡಿಕೊಳ್ಳುತ್ತಿದ್ದಿರಾ? ನನಗೆ ಅನುಮಾನ. ಇಲ್ಲಿ ನುಡಿ ಮೊದಲಾ, ತಿಳಿ ಮೊದಲಾ? ಸಕ್ಕದದಲ್ಲಿ ಬರೆದರೇನೇ 'ಪಾಂಡಿತ್ಯಾನಾ'?(ಜಾಣ್ಮೆ). ಈಗ ಮಂದಿ ಇಂಗ್ಲಿಸ್ ಸಾಲೆಯಲ್ಲಿ ಕಲಿತರೇನೇ ಮಕ್ಕಳು ಜಾಣರಾಗೋದು ಅಂದುಕೊಳ್ತಾರಲ್ಲಾ, ಹಾಗೇ.
ಬೇಂದ್ರೆಯವರ 'ಹಕ್ಕಿ ಹಾರುತಿದೆ ನೋಡಿದಿರಾ?' ದ ಕೆಲ ಸಾಲುಗಳು,
ಇರುಳಿರುಳಳಿದು ದಿನಗಳು ಬೆಳಗೆ,
ಸುತ್ತಮುತ್ತಲು ಮೇಲಕೆ ಕೆಳಗೆ,
ಗಾವುದ ಗಾವುದ ಗಾವುದ ಮುಂದೆ,
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ,
ಹಕ್ಕಿ ಹಾರುತಿದೆ ನೋಡಿದಿರಾ?
ನೋಡಿ ಹೇಗಿದೆ ಕನ್ನಡ ಒರೆಗಳ ಪೋಣಿಕೆ.
ಕೊಳಂಬೆ ಪುಟ್ಟೇಗೌಡರ 'ತಿಳಿಗನ್ನಡ ನುಡಿವಣಿಗಳು' ಇಂದ ಕೆಲ ಸಾಲು,
ನಲ್ಮೆ, ತಾಳ್ಮೆಗಳಿಂದ ಹೊರಹೊಮ್ಮುವಾ ಮಾತು
ಕಂಪು ತಂಪಿನ ಬೀಸುವೆಳೆಗಾಳಿಯಂತೆ
ಕಿನಿಸು ಕೀಳ್ಮೆಗಳಿಂದ ತೂರಿ ಹಾರುವ ನುಡಿ
ಸುಳಿಗಾಳಿ ಕೊಳೆ ತಿಪ್ಪೆ ಕೆದರಿ ಬಪ್ಪಂತೆ
ನಲ್ಮೆ ಅಂದರೆ ಪ್ರೀತಿ, ತಾಳ್ಮೆ = ಸಹನೆ. ಕನ್ನಡದ್ದೇ ಒರೆ ಇದ್ದರೂ ಸಕ್ಕದದ 'ಪ್ರೀತಿ'ಯನ್ನೇ ಏಕೆ ನಾವು ಅಂಟಿಸಿಕೊಂಡಿರುವದು? 'ತಾಳ್ಮೆ' ಇದ್ದರೂ 'ಸಹನೆ' ಏಕೆ? ಸಕ್ಕದದಲ್ಲಿ ಬರೆದದ್ದೆ ಮೇಲು ಎಂಬ ಕುರುಡು ನಂಬಿಕೆಯಿಂದಾಗಿ ಹೀಗಾಗಿರುವದು. ಇನ್ನಾದರೂ ಕನ್ನಡಿಗರು ಕಣ್ಣು ತೆರೆಯಬೇಕು.
ಉ: ಉಪಮಾ ಕಾಳಿದಾಸಸ್ಯ.
ಕಿನಿಸು = ಸಿಟ್ಟು. ಇವೆರಡೂ ಕನ್ನಡದ್ದೇ. ತೆಂಕಣಕ್ಕೆ ಸಕ್ಕದದ 'ಕೋಪ' ಹೆಚ್ಚಾಗಿ ಬಳಕೆಯಲ್ಲಿದೆ.
ಉ: ಉಪಮಾ ಕಾಳಿದಾಸಸ್ಯ.
ಸಂಗನ
ಸಂಸ್ಕ್ರುತದವರಿಗೆ ಇದೊಂದು ಕೆಟ್ಟ ಚಾಳಿ. 'ಬಾವಿ-ಕಪ್ಪೆತನ'ದಲ್ಲಿ ಈ ಹಲವು ಸಕ್ಕದದವರು ಎತ್ತಿದ ಕೈ.
ಕಾಳಿದಾಸನು ಅದು ಯಾವುದೋ ಸೂಳೆಯರ ಮನೆಯಲ್ಲೆಲ್ಲ ಇದ್ದು ಕಬ್ಬ ಬರೆದಿದ್ದಾನೆ, ಅದಕ್ಕೆ ಅಷ್ಟೊಂದು ಮೊಲೆ-ಪಿರ್ರೆಗಳ ಸಂಗತಿಯನ್ನೇ ತುಂಬಿದ್ದಾನೆ ಅಂತ ಮಾತು ಇವೆ.
ಹಲವು ಸಕ್ಕದವರು ಅಂದುಕೊಳ್ಳುವುದು, ಮೇಲಿನ ಸಾಲಲ್ಲಿ ನಾನು 'ಸೂಳೆ' ಬದಲು 'ವೈಶ್ಯೆ' ಅಂತ ಸಂಸ್ಕ್ರುತ ಹಾಗಿದ್ದರೆ ಅದು ಪರಮ-ಸಭ್ಯ-ಭಾಷೆ ಎಂದು
ಇಲ್ಲಿ ಕೆಲವ ಬರೆಯುತ್ತಾರೆ ಹತ್ತು ಸಂಸ್ಕ್ರುತ ನಡುವೆ ಕನ್ನಡದ ಒರೆಗಳನ್ನು ಇಣಿಕಿಸುತ್ತಾರೆ. ಇವು ಅವರ ಕನ್ನಡದ ಅರಿವಿನ(ಜ್ಞಾನದ) ಬರ(ದಾರಿದ್ಯಂ) ತೋರಿಸುತ್ತದೆ. ಇಂತವರೇ 'ಶಿಷ್ಟ-ಭಾಷೆ', 'ಸಭ್ಯ-ಭಾಷೆ' ಎಂದು ಪೊಳ್ಳಾಡಿಕೊಂಡೇ, ನಮ್ಮ ಕನ್ನಡದಲ್ಲಿ ಕಂಡಕಂಡಲ್ಲೆಲ್ಲ ಸಂಸ್ಕ್ರುತ ತುಂಬ ಹತ್ತಿದ್ದಾರೆ. ಕೆಲವರಂತೂ ಸಂಸ್ಕ್ರುತವಿಲ್ಲದೇ ಬರೆಯಲು ಆಗುವುದೇ ಇಲ್ಲವೆಂದು ಅಬ್ಬರಿಸುತ್ತಾರೆ.
ಪಾಪ, ಆಂಡಯ್ಯ, ಕೊಳಂಬೆ ಪುಟ್ಟಣ್ಣಗೌಡರು, ಶಿವರಾಮಕಾರಂತರು ಮುಂತಾದವರಿಗೆ ಸಿಕ್ಕ ಕನ್ನಡದೊರೆಗಳು ಇವರಿಗೆ ಕಾಣವು!
ಈ ಎಳೆಯಲ್ಲಿ ಇನ್ನೊಂದು ಗಮನಿಸಬೇಕು.: ಕಾಳಿದಾಸನನ್ನು ಹೊಗಳುವುದು ಸರಿ. ಆದರೆ ಇಲ್ಲೂ ಕನ್ನಡ ಸಿನಿಮಗಳನ್ನು ಹಳಿಯುವುದೇಕೋ?
ಕನ್ನಡ ಸಿನಿಮಕ್ಕೂ ಕಾಳಿದಾಸನಿಗೂ ಎಲ್ಲಿಯ ನಂಟೋ?
'ಕವಿರತ್ನ ಕಾಳಿದಾಸ' ಸಿನಿಮದಲ್ಲೇ 'ಕಮಲೇ ಕಮಲೋತ್ಪತ್ತಿ:..' ಶ್ಲೋಕ ಬಂದಿದೆ. ಪಾಪಾ ಕನ್ನಡ ಸಿನಿಮ ನೋಡದೇ, ಕನ್ನಡ ಸಿನಿಮ ಬೈಯುವುದೇ 'ಸಭ್ಯತೆ' ಎಂದುಕೊಂಡವರಿಗೆ ಇರುವ 'ಬಾವಿ-ಕಪ್ಪೆ' ಬೇನೆಯನ್ನು ಕಂಡು ಮರುಗಬೇಕು.
ಸಂಗನ, ಬೇಂದ್ರೆಯವರ ಸಾಲುಗಳಿಗಾಗಿ ನನ್ನಿ!!
ಉ: ಉಪಮಾ ಕಾಳಿದಾಸಸ್ಯ.
"ಕಾಳಿದಾಸನು ಅದು ಯಾವುದೋ ಸೂಳೆಯರ ಮನೆಯಲ್ಲೆಲ್ಲ ಇದ್ದು ಕಬ್ಬ ಬರೆದಿದ್ದಾನೆ, ಅದಕ್ಕೆ ಅಷ್ಟೊಂದು ಮೊಲೆ-ಪಿರ್ರೆಗಳ ಸಂಗತಿಯನ್ನೇ ತುಂಬಿದ್ದಾನೆ ಅಂತ ಮಾತು ಇವೆ."
ಇ೦ತಹ ಮಾತನ್ನು ಕಾಳಿದಾಸನ ವಿಷಯದಲ್ಲಿ ಆಡುವುದು ಸರಿಯೇ ? ಅ೦ದಿನ ಸಾಮಾಜಿಕ ಜೀವನ ಪದ್ದತಿ ಏನಿತ್ತು ?
ಅವನ ಜೀವನ ಹೇಗೆ ನಡೆಸಿದ್ದ ? ಇವೆಲ್ಲಾ ತಿಳಿಯದೆ , ಈ ರೀತಿ ಹೇಳುವುದು ಯುಕ್ತವೇ ?
ಉ: ಉಪಮಾ ಕಾಳಿದಾಸಸ್ಯ.
ಅದು ಸರಿಯೇ.... ತಕ್ಕುದ್ದೇ( ಯೋಗ್ಯವಾದುದೇ )
ಅಂದಿನ ಹೊತ್ತಿನಲ್ಲಿ 'ಸೂಳೆ' ಮನೆಯಲ್ಲಿ ಇರೋದು ಕೆಟ್ಟದು ಅಂತ ಇರಲಿಲ್ಲ. ನಾನು ಕಾಲಿದಾಸ ಸೂಳೆ-ಮನೆಯಲ್ಲಿ ಇದ್ದದ್ದು ಕೆಟ್ಟದ್ದು ಅಂತ ಬರೆದಿಲ್ಲ.
ಅವನ ಸ್ರುಂಗಾರಕ್ಕೆ ಮೊಲೆ-ಪಿರ್ರೆಗಳನ್ನು ಬಿಡಿಸಿ ಬಿಡಿಸಿ ಬಣ್ಣಿಸಕ್ಕೆ ಏನು 'ಸ್ಫೂತಿ'/'ಹುರುಪುಕೊಟ್ಟಿದುದು' ಅಂತ ಒಂದು ಓಸುಗರ/ಕಾರಣ ಹೇಳೀನಿ.!!
ಮಿಕ್ಕಿದೆಲ್ಲ, ಮುರುಳಿ ದ್ವಾವರ ತಲೆಯೊಳಗೇ ಬೆಂದ ಬದನೇಕಾಯಿ
ಉ: ಉಪಮಾ ಕಾಳಿದಾಸಸ್ಯ.
ಅಯ್ಯೋ ಸಂಗನ,
ಒಸಿ ಕನ್ನಡಿಗರಿಗೆ ಸಂಸ್ಕ್ರುತದದಲ್ಲಿ ಬರೆದ್ರೆನೆ ಅದಕ್ಕೆ ಬೆಲೆ ಯಾಕಂದ್ರ ಅವರಿಗೆ ಅದು ದೇವ ನುಡಿ...
:)
ಸಂಸ್ಕ್ರುತದಲ್ಲಿರುವ ಕಾಳಿದಾಸನ ಪದಗಳನ್ನು ಕನ್ನಡದಲ್ಲಿ ಬರೆದರೆ ಅದು "ಪೋಲಿ ಹಾಡು" ಆಗೋಗುತ್ತಂತೆ...
ಕನ್ನಡಿಗರು ಕಣ್ಣು ತೆರೆದಿದ್ದಾರೆ ಆದರೆ ಹಾಳಾದ್ದು ಸಂಸ್ಕ್ರುತದ 'ಪೊರೆ' ಇದೆ... ಅದು ಹೋಗೋ ಮಟ್ಟ ಅವ್ರಿಗೆ ಕನ್ನಡ ಸರಿಯಾಗಿ ಕಾಣ್ಸೊಲ್ದು.
ಪೊರೆ ತೆಗಿಯೋಕ್ಕೆ ದೊಡ್ಡ ಸರ್ಜರಿ ಮಾಡಬೇಕು.
ಉ: ಉಪಮಾ ಕಾಳಿದಾಸಸ್ಯ.
ಚೆನ್ನಾಗಿ ಬರೆದಿದ್ದೀರಾ. ಧನ್ಯವಾದಗಳು