ಎ.ಆರ್.ರೆಹಮಾನ್ ಕನ್ನಡಕ್ಕೆ
ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು ಕೇಳುವ ಕುತೂಹಲ ಎರಡೂ ಇತ್ತು. ಮೊನ್ನೆ ಬಾನುಲಿಯಲ್ಲಿ ಆ ಚಿತ್ರದ ಹಾಡೊಂದನ್ನು ಕೇಳಿದೆ ಆದರೆ ಅದು ಪುಕಾರ್ ಎಂಬ ಹಿಂದಿ ಚಿತ್ರದ ಹಾಡೊಂದರ ಕನ್ನಡ ಅವತರಣಿಕೆ ಅಷ್ಟೆ.ಈ ಹಾಡನ್ನು ಕೇಳಿ ನನ್ನ ಆಸೆಗಳಿಗೆ ತಣೀರೆರಚಿದಂತಾಯಿತು. ನಿರ್ಮಾಪಕ ಹಾಗೂ ನಿರ್ದೇಶಕರ ಮೂರ್ಖತನಕ್ಕೆ ಮನದಲ್ಲೇ ನಕ್ಕೆ.ಹಾಗೊಂದು ವೇಳೆ ಅದೇ ಹಾಡನ್ನು ಬಳಸಬೇಕು ಅಂತಿದ್ದರೆ ಅಷ್ಟು ಹಣ ಸುರಿದು ರೆಹಮಾನ್ ಅವರನ್ನು ಯಾಕೆ ಕರೆಸಬೇಕಿತ್ತು?????? ನಮ್ಮ ರಾಜೇಶ್ ರಾಮನಾಥ್ ಅವರು ಆ ಕಾರ್ಯದಲ್ಲಿ ನಿಸ್ಸೀಮರು
.

- santoshbhatta ರವರ ಬ್ಲಾಗ್
- Login or register to post comments
- 491 hits
- Email this blog





RSS:
ಪ್ರತಿಕ್ರಿಯೆಗಳು
Re: ಎ.ಆರ್.ರೆಹಮಾನ್ ಕನ್ನಡಕ್ಕೆ
ಏಯಾರ್ರೆಹಮಾನ್ ಕನ್ನಡಕ್ಕೆ ಬಂದು ಸಂಗೀತ ನೀಡಿದರೆ ಅದೊಂದು ದೊಡ್ಡ ಭಾಗ್ಯ ಎಂದು ಭ್ರಮೆ ಯಾಕೆ? ಈತನ ಸಂಗೀತ ಒಂದು ಕ್ರೇಜನ್ನು ಹುಟ್ಟಿಸುವುದೇ ವಿನಃ ಜೀವನದುದ್ದಕ್ಕೂ ನೆನಪಿಡುವಂತ ಮಾಧರ್ಯದ ಲಹರಿಯನ್ನು (ಉದಾ ರಾಜನ್-ನಾಗೇಂದ್ರ,ಬರ್ಮನ್ ಇತ್ಯಾದಿ)ಇದುವರೆಗೂ ಹರಿಸಿಲ್ಲ. ಮೇಲಾಗಿ ಇಂತಹವರಿಗೆ ಕನ್ನಡವೆಂದರೆ ಅಸಡ್ಡೆ ಎನ್ನಲು ಈ ರೀತಿಯ ವರ್ತನೆಗಳೇ ಸಾಕ್ಷಿ. ನಾವಾಗಿಯೇ ಹೋಗಿ ಅವರ ಮುಂದೆ ನಿಂತು ದೀನರಾಗಿ ಹಲ್ಲುಗಿಂಜುವುದಕ್ಕಿಂತ ಕನ್ನಡಕ್ಕೆ ಸರಿಹೊಂದುವ ಮಧುರ ಸಂಗೀತಕಾರರನ್ನು ಗೌರವಿಸಿದರೆ ಒಳ್ಳೆಯ ಸಂಗೀತವಾದರೂ ಹುಟ್ಟೀತು.
ತಮಿಳು ತೆಲುಗರನ್ನು ಅನುಸರಿಸಿದರೆ ಅವರಂತೆ ಅಸಂಬದ್ಧ ವಾಕ್ಯಗಳ ಸರಣಿಯೇ ಹಾಡಾಗಿಬಿಡುತ್ತದೆ. ಹಂಸಲೇಖರೂ ಸಿಕ್ಸರಿನಲ್ಲಿ ಈ ತರಹದ ಒಂದು ಹಾಡನ್ನು ಕೊಡಮಾಡಿದ್ದಾರೆ! ಅವರಿಗ್ಯಾಕೆ ಮನಸ್ಸು ಕೆಟ್ಟಿತೋ ಏನೋ? ಕಾಡನೋಡಲು ಹೋಗಿ ಕವಿತೆ ತರೋದನ್ನ ಬಿಟ್ಟು, ಯಾಕೋ ಜೊಳ್ಳು ಶಬ್ದಗಳನ್ನು ಆಯ್ದುಬಿಟ್ಟಿದ್ದಾರೆ.
ವಿ.ಸೂ. ಕನ್ನಡಕ್ಕೆ ಸರಿಹೋಗುವ ಹಾಡುಗಾರಾರು ಎನ್ನುವ ಲೇಖನ ಇದಕ್ಕೆ ಪೂರಕವಾಗಬಲ್ಲದು.
ಎನಗಿಂತ ಕಿರಿಯರಿಲ್ಲ
ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ಸಂಗೀತಗಾರರನ್ನು ಬಹುಶಃ ಭಾಷೆಯ ಅಚ್ಚುಕಟ್ಟಿನಲ್ಲಿ ನೋಡುವುದು ತಪ್ಪು. ಕನ್ನಡಿಗನೋ ತಮಿಳನೋ, ಅವನಿಗೆ ಒಂದು ಭಾಷೆ ಎಂದರೆ ಅಸಡ್ಡೆ ಎಂದು ಹೇಗೆ ಹೇಳುತ್ತೀರಿ?
ಬಹುಶಃ ರೆಹಮಾನ್ ಗೆ ಕನ್ನಡದಿಂದ ಬ್ಯುಸಿನೆಸ್ ಬಂದಿಲ್ಲದಿರಬಹುದು, ಆದ್ದರಿಂದ ಕನ್ನಡ ಚಿತ್ರಗಳಿಗೆ ಬಹುಶಃ ಸಂಗೀತ ನೀಡಿಲ್ಲದಿರಬಹುದು.
ಹಿಂದೆ ಕನ್ನಡ ಮಾತೃಭಾಷೆಯಲ್ಲದ ಹಲವು ಸಂಗೀತ ನಿರ್ದೇಶಕರು ಬಹಳ ಒಳ್ಳೆಯ ಹಾಡುಗಳನ್ನು ನಮಗೆ ನೀಡಿದ್ದಾರೆ ಎಂಬುದನ್ನು ನಾವು ಮರೆಯಬಾರದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ನಾನು ಹೇಳ್ತಾ ಇರೋದೇನೆಂದ್ರೆ, ಆ ಅಂಟೆ ಅಮಲಾಪುರಂ ಎನ್ನುವ ಕರ್ಣಕಠೋರವಾದ ಹಾಡುಗಳಂಥವುಗಳಿಗೆ ಸಾಟಿಯಾಗುವ ಸಂಗೀತವನ್ನು ಕೊಡುವ ಪ್ರಯತ್ನ ನಮ್ಮವರು ಮಾಡುವುದು ತಪ್ಪು. ಕಳೆದ ಸುಮಾರು ಆರೇಳು ವರ್ಷಗಳಿಂದ ತೆಲುಗು ತಮಿಳುಗಳಲ್ಲಿ ಈ ರೀತಿಯಾದ "ಟೈಮ್ ಬೀಯಿಂಗ್ ಪಾಪ್ಯುಲಾರಿಟಿ" ತತ್ತ್ವದ ಮೇಲೆ ಸಂಗೀತ ನಿರ್ದೇಶನ ಜಾಸ್ತಿಯಾಗ್ತಾ ಇದೆ. ಇವು ತತ್ಕಾಲಕ್ಕೆ ಎಲ್ಲರ ಬಾಯಿಯ ಮೇಲೆ ಎಗರಾಡುತ್ತಿರುತ್ತವೆ. ಹೊಸ ಸಿನಿಮಾ ಬಂತೆಂದರೆ ಹಳೆಯದನ್ನು ಕೇಳುವುದೇ ಇಲ್ಲ. (ಉದಾ: ಊರ್ವಶಿ, ಊರ್ವಶಿ ಎನ್ನುವ ಬಸ್ಸಿನ ಮೇಲೆ ಕುಣಿಯುವ ಹಾಡು) ಮಾಧುರ್ಯಕ್ಕೆ ಹೆಚ್ಚಿನ ಮಹತ್ವ ಕೊಡದೇ ಇರುವುದೇ ಇದಕ್ಕೆ ಕಾರಣವಲ್ಲವೇ? ಕಿವಿಗಿಂಪೆನಿಸುವ ಸಂಗೀತ ಎಲ್ಲ ಕಾಲಕ್ಕೂ ಎಲ್ಲ ಭಾಷೆಗಳಲ್ಲೂ ಹರಿದಾಡುತ್ತಲೇ ಇರುತ್ತದೆ. ದುರ್ದೈವದಿಂದ ಆ ಸಂಗೀತ ಈಗ ಅತಿ ಅಪರೂಪವಾಗಿಹೋಗಿದೆ. ವಿಪರ್ಯಾಸವೆಂದರೆ ಕನ್ನಡದವರು ಈ ತರಹದ ಸಂಗೀತ ನಮ್ಮಲ್ಲಿಯೂ ಕ್ಲಿಕ್ಕಾಗಬಹುದು ಎನ್ನುವ ಭ್ರಮೆಯಿಂದ ಅವರನ್ನೇ ಕರೆಸಿ ಕನ್ನಡದ ಸಿನಿಮಾಗಳನ್ನು ಓಡಿಸುವ(ನಿಜವಾಗಿಯೂ?)ಪ್ರಯತ್ನ ಮಾಡುವುದು. ಹೀಗಾದಾಗ ಅಮರ ಸಂಗೀತದ ಅಲೆಯೊಂದು ವಿಹರಿಸುವುದಾದರೂ ಹೇಗೆ?
ಸಂಗೀತಗಾರರನ್ನು ಭಾಷೆಯ ಚೌಕಟ್ಟಿನಲ್ಲಿ ನೋಡುವುದು ತಪ್ಪು ಎನ್ನುವ ಮಾತೇನೋ ಸರಿ. ಹಾಗೆ ನೋಡಿದಲ್ಲಿ ಕನ್ನಡದ ಸಾರಸ್ವತ ಲೋಕಕ್ಕೆ ಹೆಚ್ಚಿನ ಸೇವೆ ಸಂದಿದ್ದು ಕನ್ನಡೇತರ ಚೇತನರಿಂದಲೇ ಅಲ್ಲವೇ? ಗೊರೂರು, ಮಾಸ್ತ್ರಿ, ಬೇಂದ್ರೆ, ತರಾಸು,ಕಾರ್ನಾಡರು, ಹೀಗೆ...... ಸಂಗೀತಗಾರರೂ ಇದ್ದಾರೆ.
ಆದರೆ ಹೊಸ ಲಹರಿಯೊಂದನ್ನು ಹುಟ್ಟು ಹಾಕಲು ಕನ್ನಡಿಗರು ಅಸಮರ್ಥರೇ? ಅನ್ನುವದು ನನ್ನ ಪ್ರಶ್ನೆ.
ಎನಗಿಂತ ಕಿರಿಯರಿಲ್ಲ
ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ಅವರು ಅಷ್ಟು ಹಣ ಸುರಿದರು ಎಂದು ಹೇಳುವಾಗ ಅವರೆಷ್ಟು ಹಣ ಸುರಿದರು ಎಂಬುದು ನಿಮಗೆ ಕರಾರುವಾಕ್ಕಾಗಿ ಗೊತ್ತೆ ಎಂದು ಕೇಳಬೇಕಾಗತ್ತೆ.
ಅವರುಗಳು ಏನು ಮಾತನಾಡಿಕೊಂಡಿರುತ್ತಾರೋ ಏನೋ. ನಿರ್ಮಾಪಕರಿಗೆ ಅದೇ ಟ್ಯೂನು ಇಷ್ಟವಾಗಿ "ಅದೇ ಮಾಡಿ" ಎಂದು ಹೇಳಿದ್ದರೂ ಹೇಳಿರಬಹುದು. ನಿಮಗೆ ನಿಜಾಂಶ ಗೊತ್ತೆ?
ಸರಿಯಾದ ಪುರಾವೆ ಇಲ್ಲದೆ ಹೀಗೆ ನೇರ ವ್ಯಕ್ತಿಗಳ ದೂಷಣೆ ಮಾಡಬಾರದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ಏ ಆರ್ ರೆಹೆಮಾನ್ ರವರು ಸಜನಿ ಚಿತ್ರಕ್ಕಾಗೇ ಹೊಸ ಸಂಗೀತವನ್ನು ಕಾಂಪೋಸ್ ಮಾಡಿಲ್ಲ. ನಮ್ಮ ನಿರ್ಮಾಪಕರು ಹಳೆಯ ಟ್ಯೂನ್ ಗಳನ್ನೇ ಉಪಯೋಗಿಸಿ ಕೊಂಡಿದ್ದಾರೆ ಅಷ್ಟೆ. ಪ್ರಚಾರದ ದೃಷ್ಟಿಯಿಂದ "ಕನ್ನಡಕ್ಕೆ ಏ ಆರ್ ರೆಹೆಮಾನ್" ಎಂದು ಹೇಳ್ಕೋತಿದ್ದಾರೆ ಅಷ್ಟೆ.
Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ಅವರು ಎಷ್ತು ಹಣ ಸುರಿದಿರುವರು ಎಂದು ಕರಾರುವಾಕ್ಕಾಗಿ ಗೊತ್ತಿರದಿದ್ದರೂ ರೆಹಮಾನ್ ಒಂದು ಚಿತ್ರಕ್ಕೆ ತೆಗೆದುಕೊಳ್ಳುವ ಹಣದ ಮೊತ್ತ ೧ ರಿಂದ ೩ ಕೋಟಿಗಳು. ನಮ್ಮ ಚಿತ್ರರಂಗದ ಇತರೇ ತಂತ್ರಜ್ನರ ಸಂಪಾದನೆಗೆ ಹೋಲಿಸಿದರೆ ಈ ಮೊಬಲಗು ದೊಡ್ಡದು.ನಾನು ನನ್ನ ಕಳವಳವನ್ನು ವ್ಯಕ್ತಪಡಿಸಿದನೇ ಹೊರತು ಯಾರನ್ನೂ ದೂಷಿಸಿಲ್ಲ. ನಾನು ಹೇಳಿದ್ದರಲ್ಲಿ ನಿಜಾಂಶವೂ ಇದೆಯೆಂದು ಭಾವಿಸುತ್ತೇನೆ.ನಾನು ರೆಹಮಾನ್ ಅವರಿಗೆ ಕನ್ನಡದ ಮೇಲೆ ಅಸಡ್ಡೆ ಎಂದು ನಾನು ಹೇಳಿಲ್ಲಾ. ನಮ್ಮ ನಿರ್ಮಾಪಕರು ಮತ್ತು ನಿರ್ದೇಶಕರು ಅವರಿಂದ ಹೊಸ ಟ್ಯೂನ್ ಗಳನ್ನು ಮಾಡಿಸಬಹುದಿತ್ತು ಅಂತ ಹೇಳಿದೆ
ಎಂಜಲು ಸಂಗೀತ ??????
ಇದನ್ನು ಒಂದು ರೀತಿ, ಎಂಜಲು ಸಂಗೀತ ಎನ್ನೋಣವೇ ?
Re: ಉ: ಎ.ಆರ್.ರೆಹಮಾನ್ ಕನ್ನಡಕ್ಕೆ
ಹೊಸ ಟ್ಯೂನ್ ಮಾಡಿಸಿದ್ದರೆ ಚೆನ್ನಾಗಿರೋದು, ಹೊಸ ಟ್ಯೂನ್‍ಗೆ ಇನ್ನೂ ಹೆಚ್ಚಿಗೆ ದುಡ್ಡು ಕೇಳಿರಬಹುದು, ಆದರೂ ಮೂರು ಕೋಟಿ ಸುರಿದು ಕನ್ನಡಿಗರಿಗೆ ಎಂಜಲು ಹಾಡುಗಳನ್ನು ಕೇಳಿಸುತ್ತಿರುವದು ಸರಿ ಅಲ್ಲ. ;-(
Re: ಎ.ಆರ್.ರೆಹಮಾನ್ ಕನ್ನಡಕ್ಕೆ
ಹೊರಗಿನವರು ಕನ್ನಡದಲ್ಲಿ ಹಾಡಲಿ ಮತ್ತು ಹಾಡುಗಳನ್ನು ಕೊಡಲಿ ಬೇಡಾ ಅನ್ನಲ್ಲಾ, ಆದರೆ ನುಡಿಯ ಚೆಂದವನ್ನು ಕೆಡಿಸದೇ ಇರಲಿ.
ಮುಂಗಾರಿನ ಮಳೆಯ ಹಾಡೊಂದರಲ್ಲಿ ಶ್ರೇಯಾ ಗೋಶಾಲ್ , 'ಕಳವಳ' ಎಂಬುದನ್ನು 'ಕಳಮಳ' ಅನ್ನುತ್ತಾಳೆ. ಇಂತ ತಪ್ಪುಗಳು ಆಗಬಾರದು.
Re: ಎ.ಆರ್.ರೆಹಮಾನ್ ಕನ್ನಡಕ್ಕೆ
ನನ್ನ ಲೇಖನಕ್ಕೆ ಪುಷ್ಟಿ ಕೊಡುವ ಲೇಖನವೊಂದು ದಟ್ಸ್ ಕನ್ನಡ ದಲ್ಲಿ ಬಂದಿದೆ ಓದಿ