ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › santoshbhatta ರವರ ಬ್ಲಾಗ್

ನಾನು ಬೆಂಗಳೂರಲ್ಲೇ ಇದ್ದೇನಾ??????

January 30, 2007 - 3:52pm — santoshbhatta

ಇದನ್ನು ನನ್ನ ಅಮಾಯಕತನವೋ ಇಲ್ಲಾ ನನಗಾದ ಸಾಂಸ್ಕೃತಿಕ ಆಘಾತ ಅಂತಾದರೂ ಅಂದ್ಕೋಬಹುದು.ಅಥವಾ ನನ್ನನ್ನು ತೀವ್ರ ಕ್ಶುಲ್ಲಕ ಬುದ್ಧಿಯ ಮನುಷ್ಯ ಅಂತಾದರೂ ಅನ್ನಿ ಆದರೆ ನನಗಾದ ಅನುಭವವನ್ನ ಹಂಚಿಕೋತಾ ಇದ್ದೇನೆ. ನಾನು ಬೆಂಗಳೂರಿಗೆ ಬಂದು ಸುಮಾರು ೫ ವರ್ಷ ಆಯ್ತು. ಇಲ್ಲಿಗೆ ಬರುವ ಮುಂಚೆ ಬೆಂಗಳೂರು ಹೀಗೆ ಬೆಂಗಳೂರು ಹಾಗೆ ಅಂತ ನಾನಾ ತರಹದ ರಂಗು ರಂಗಿನ ಕಥೆಗಳನ್ನ ಕೇಳಿದ್ದೆ, ಆದರೆ ಯಾವದೇ ರೀತಿಯ ಘಟನೆಗಳನ್ನು ಕಣ್ಣಾರೆ ನೋಡಿರಲಿಲ್ಲ.ಇಲ್ಲಿ ಬಂದ ಮೇಲೂ ನಾನಿದ್ದದ್ದು ಪಕ್ಕಾ ಕನ್ನಡಿಗರ ಪ್ರದೇಶಗವಾದ ಮಲ್ಲೇಶ್ವರಂ. ಓದಿದ್ದು ವಿಶ್ವೇಶ್ವರಯ್ಯ ಮಹಾವಿದ್ಯಾಲಯದಲ್ಲಿ.ಹಾಗಾಗಿ  ಸಭ್ಯತೆಯನ್ನು ಮೀರದಿರುವ ಹುಡುಗಿಯರನ್ನೇ ನೋಡಿದ್ದು. ಆಗಾಗ ಮಹಾತ್ಮ ಗಾಂಧಿ ರಸ್ತೆಗೆ ಸುತ್ತಲು ಹೋಗುತ್ತಿದ್ದರೂ ನಮಗೇ ನಾಚಿಕೆ ತರುವ ಘಟನೆಗಳನ್ನು ಯಾವುದನ್ನು ನೋಡಿರಲಿಲ್ಲ. ಸುಮಾರು ೫ ತಿಂಗಳ ಹಿಂದಿನ ಕಥೆ ಅಂತ ಹೇಳಬಹುದು.. ನನಗೆ ಕಾರ್ಯನಿಮಿತ್ತ ಕೋರಮಂಗಲದಲ್ಲಿ ಜ್ಯೋತಿನಿವಾಸ ಮಹಾವಿದ್ಯಾಲಯದ ಎದುರುಗಡೆ ಇರುವ ನಮ್ಮ ಸಂಸ್ಥೆಯ ಕಛೇರಿಗೆ ವರ್ಗವಾಯಿತು.ಆಗ ಕಂಡಿದ್ದು ಬೆಂಗಳೂರಿನ ಇನ್ನೊಂದು ಮುಖವನ್ನು...

ಇನ್ನು ಎರಡನೇ ಪಿ.ಯು.ಸಿ. ಓದುತ್ತಿರುವಂತೆ ಕಾಣುವ ತರುಣಿಯರು ಕಾಫಿ ಡೇಯಲ್ಲಿ ಕುಳಿತು ಚಿಮಣಿಯಂತೆ ಹೊಗೆ ಬಿಡುತ್ತಿರುವ ಬಗೆ ನಮ್ಮ ಹೊಸೂರು ರಸ್ತೆಯಲ್ಲಿ ಓಡಾಡುವ ಖಾಸಗಿ ಬಸ್ಸುಗಳು ಉಗುಳುವ ಹೊಗೆಯನ್ನು ಮೀರಿಸುವಂತಿದ್ದವು.ಇದು ನಮ್ಮ ಉಪನ್ಯಾಸಕರ ಪ್ರವಚನಗಳಂತೆ ಒಂದಾದ ಮೇಲೊಂದು ಸಾಗುತ್ತಿತ್ತು. ಅಬ್ಬಾ ಮಹಾತಾಯಿಯೇ ಅಂತ ಅಲ್ಲೆ ಕೈ ಮುಗಿದೆ.

ಇನ್ನೋಂದು ನಾನು ಗಮನಿಸಿದ ಅಂಶ ಫೋರಂ ಮಳಿಗೆಯಲ್ಲಿ ಇನ್ನೂ ಮೀಸೆ ಬರದ ಮಧ್ಯಮ ಶಾಲೆಯಲ್ಲಿ ಓದುತ್ತಿರಬಹುದಾದ ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಮುದ್ದಿಸುವದು. ನಮ್ಮ ಬೆಂಗಳೂರಲ್ಲಿ ಪಬ್ ಸಂಸ್ಕೃತಿ ಹೆಚ್ತಾ ಇದೆ ಹುಡುಗಿಯರು ತಾವು ಹುಡುಗರಿಗೇನು ಕಡಿಮೆ ಎಂದು ಸಡ್ಡು ಹೊಡೆದು ನಿಂತಿರುವಂತೆ ಕಾಣ್ತಾ ಇದೆ.

ಇದನ್ನ ಪಾಶ್ಚಾತ್ಯ ಸಂಸ್ಕೃತಿ ಅಂತ ಅಂದ್ರೆ, ನಮಗೆ ಪೂರ್ಣವಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಧೈರ್ಯ ಇದೆಯ. ಇಲ್ಲ ಇದು ಅರೆ ಬೆಂದ ಪಾಶ್ಚಾತ್ಯ ಸಂಸ್ಕೃತಿಯೋ????

ಇಲ್ಲಿ ನನ್ನಲ್ಲೇ ಕೆಲವು ಪ್ರಶ್ನೆಗಳು ಹುಟ್ಕೊಳ್ತ್ವೆ ಬೆಂಗಳೂರಿನ ಇಷ್ಟೊಂದು ಬದಲಾವಣೆಗೆ ಕಾರಣ?????? ಇಲ್ಲಾ ಮೊದಲಿಂದಲೇ ಹೀಗಿತ್ತಾ???? ನನಗೆ ತಡವಾಗಿ ಅರಿವಾಯಿತಾ????ಗ್ಲೋಬಲೈಸೇಶನ್ ನಾ ಇದರ ಕಾರಣ ಅಂತ ಹೇಳ್ಬಹುದೇ??? ಹೌದಾದರೆ ನಾವು ಯಾವುದು ತಪ್ಪು ಯಾವುದು ಸರಿ ಎಂದು ಪರಿವಿಕ್ಶಿಸದಷ್ಟು ಮಂದಮತಿಗಳಾಗಿರುವವೇ????

~.~
  • santoshbhatta ರವರ ಬ್ಲಾಗ್
  • Login or register to post comments
  • 427 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 18, 2007 - 5:06pm — girish.rajanal

ಉ: ನಾನು ಬೆಂಗಳೂರಲ್ಲೇ ಇದ್ದೇನಾ??????

girish.rajanal's picture

ಭಟ್ಟರೆ,
ಇಂಥ ಸನ್ನಿವೇಶಗಳು ನನ್ನ ಗಮನಕ್ಕೂ ಬಂದಾವು..ಇದಕ್ಕ ಮುಖ್ಯ ಕಾರಣ
೧.ಜಾಗತೀಕರಣ
೨.ವಿದೇಶಿ ಕಂಪನಿಗಳ ಸಾಂಸ್ಕೃತಿಕ ಹಲ್ಲೆ (cultural attack through TV or any other media)
೩.ಹುಡುಗಿರೇನೂ ಕಮ್ಮಿ ದುಡೀತಾರಾ, ದುಡ್ಡು ಬರುತ್ತೆ ಮತ್ತೆ
ಎಲ್ಲದಕ್ಕೂ ಹೆಚ್ಚಾಗಿ..
ಇವರಿಗೆ ಸಿಕ್ಕ ಹಠಾತ್ ಸ್ವಾತಂತ್ಯ್ರ.

ಹವದು ಅಂತಾದರೆ ಎಲ್ಲರಿಗೂ ಹೇಳಿ...
ಇಲ್ಲಾಂತ ಆದರೆ ನನಗೊಬ್ಬನಿಗೇ ಹೇಳಿ..

ಗಿರೀಶ ರಾಜನಾಳ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
  • ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
  • ಬರೀ ನೆನಪು
  • ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
  • ಬೆಂಗಳೂರಿನ ಮಾಹಿತಿತಂತ್ರಜ್ಞಾನಕ್ಕೆ ಮೀಸಲಾಗಿರುವ "ಟೆಕ್ನಾಲಜಿ ಪಾರ್ಕಿ "ನ ಒಂದು ಭವ್ಯ ನೋಟ
Syndicate content

ಲೇಖಕರು

santoshbhatta's picture

ಪರಿಚಯ

ನಾನು ಯೆಲ್ಲರಂತೆ ಸಾಧಾರಣ ಮನುಷ್ಯ ಅಂದ್ರೂ ಯಾರು ನಂಬೊಲ್ಲಾ Smiling

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 516 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator