ಯಾವುದು ಮುಖ್ಯ ಮನುಷ್ಯನಿಗೆ?
ನನ್ನ ಚಿಕ್ಕಮ್ಮ ನ ಮಗ ನನಗಿಂತ ಒಂದು ವರ್ಷಕ್ಕೆ ಕಿರಿಯವ. ಅವನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ. ನಾನು ಇನ್ನು ನನ್ನ ವಿದ್ಯಾಭ್ಯಾಸ ಮುಗಿಸಿರಲಿಲ್ಲ. ಆಗ ನಮ್ಮ ಸಂಬಂಧಿಗಳು ನಮ್ಮನ್ನು ನೋಡುವ ರೀತಿಯೇ ಬದಲಾಯ್ತು. ಅವನಿಗೆ ಎಲ್ಲ ಕಡೆ ಅಗ್ರ ತಾಂಬೂಲ. ನಾನು ಮಾಸ್ಟರ್ ಡಿಗ್ರಿ ಮುಗಿಸಿದ ನಂತರವೂ ಇದು ಬದಲಾಗಲಿಲ್ಲ. ನನಗೂ ಕೆಲಸ ಸಿಕ್ಕಿ ಮೊದಲ ಸಂಬಳ ೨,೫೦೦ ಅಮ್ಮನ ಕೈಗಿಡುವಾಗ ಆತ ೨೫, ೦೦೦ ದುಡಿಯುತ್ತಿದ್ದ. ಆದರೂ ಅಪ್ಪ ಬೆನ್ನು ತಟ್ಟಿದರೂ ಅಮ್ಮನ ಕಣ್ಣಂಚಿನಲ್ಲಿ ನೀರ ಗಮನಿಸಿದ್ದೆ. ನಾನು ನಿಸ್ಸಹಾಯಕನಾಗಿದ್ದೆ. ನಮ್ಮ ವ್ಯವಸ್ಥೆಯೇ ಹಾಗಿರುವಾಗ ನಾನು ಏನು ಮಾಡಲು ಸಾಧ್ಯವಿರಲಿಲ್ಲ. ರಾಜಕೀಯ ಮಾಡಲು ನಮಗೆ ಗೊತ್ತಿಲ್ಲ. ನನ್ನ ಓದು ನನ್ನ ಕೈ ಹಿಡಿದು ನಡೆಸಲು ಸೋತಿತ್ತು. ಅಥವಾ ನನಗೆ ದುಡಿಸಿಕೊಳ್ಳಲು ಬರುತ್ತಿರಲಿಲ್ಲವೇನೋ? ಅವನು ಡಿಗ್ರಿ ಮಾಡಿ ಗಳಿಸುವಷ್ಟು ಹಣವನ್ನು ನಾನು ಮಾಸ್ಟರ್ ಡಿಗ್ರಿ ಮಾಡಿಯು ಯಾಕೆ ಸಿಗುತ್ತಿಲ್ಲ ಎಂಬ ಸಂಗತಿಯನ್ನು ಅಮ್ಮನಿಗೆ ಹೇಳಿದರೂ ಅರ್ಥವಾಗುತ್ತಿರಲಿಲ್ಲ.
ಇದು ಆಗಿ ಒಂದೆರಡು ವರ್ಷ ಆಗಿರಬೇಕಷ್ಟೆ. ಆರ್ಥಿಕ ಹಿಂಜರಿತದ ಕಾರಣಕ್ಕೆ ಚಿಕ್ಕಮ್ಮನ ಮಗ ಕೆಲಸ ಕಳೆದುಕೊಂಡ. ಅವನಿಗೆ ಭೂಮಿಯೇ ಬಾಯ್ದೆರೆದಂತಾಯಿತು.ಮುಂದಿನ ಭವಿಷ್ಯ ಕತ್ತಲೆಯೇ ಅಂದು ಕೊಂಡ. ಅವನಿಗೆ ನಮ್ಮಂತೆ ಸರಳವಾಗಿ ಬದುಕಲು ಬಾರದು. ನಾನು ಅವನಿಗೆ ಮತ್ತೆ ವಿದ್ಯಾಭ್ಯಾಸ ಮುಂದುವರೆಸಲು ಹೇಳಿದೆ. ಈಗ ಮತ್ತೆ ಓದುತ್ತಿದ್ದಾನೆ.
ಈಗ ನನ್ನನ್ನು ಕಾಡುವ ಪ್ರಶ್ನೆಯೆಂದರೆ ಸಮಾಜ ಯಾವ ಅಂಶವನ್ನು ನೋಡಿ ವ್ಯಕ್ತಿಯನ್ನು ಪುರಸ್ಕ್ರರಿಸುತ್ತದೆ ಅನ್ನೋದು? ದುಡ್ದೋ, ವಿದ್ಯಾಭ್ಯಾಸವೋ, ಗುಣವೋ, ಶಿಫಾರಸ್ಸೋ,,,,,,,,
ಇದನ್ನು ನನ್ನ ತಂದೆಯಲ್ಲಿ ಕೇಳಿದರೆ ಅವರು ಹೇಳಿದ್ದು- ನಿನ್ನ ಮಂಕು ತಲೆಗೆ ಅದು ಹೊಳದಿದ್ದರೆ ನೀನು ಯಾವುದೋ ಸ್ಥಾನದಲ್ಲಿ ಇರುತ್ತಿದ್ದೆ ... ಅಂತ.. ಅದು ಹೌದು ಅನಿಸುತ್ತಿದೆ.. ನಿಮಗೆ????
- sathvik N V's blog
- Login or register to post comments
- 417 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಯಾವುದು ಮುಖ್ಯ ಮನುಷ್ಯನಿಗೆ?
ಸಾತ್ವಿಕ್
ನನ್ನ ಮಂಕು ತಲೆಗೆ ಅದು ಹೊಳದಿದ್ದರೆ ನಾನು ಯಾವುದೋ ಸ್ಥಾನದಲ್ಲಿ ಇರುತ್ತಿದ್ದೆ ... ಅಂತ.. ಅದು ಹೌದು ಅನಿಸುತ್ತಿದೆ.. ನಿಮಗೆ????
:)
:)
:)
ಅರವಿಂದ್
ಉ: ಯಾವುದು ಮುಖ್ಯ ಮನುಷ್ಯನಿಗೆ?
ಚೆನ್ನಾಗಿದೆ ಚೆನ್ನಾಗಿದೆ..
(ಗುರು ಶಿಷ್ಯರು ಸಿನಿಮಾ ಡೈಲಾಗ್)
ಸಾತ್ವಿಕ್ ಎನ್ ವಿ
ಉ: ಯಾವುದು ಮುಖ್ಯ ಮನುಷ್ಯನಿಗೆ?
ಸಾತ್ವಿಕ್
ಚೆನ್ನಾಗಿದೆ,....................... ಚೆನ್ನಾಗಿದೆ..........................
(ಸಿಂಹದ ಮರಿ ಸ್ಯೆನ್ಯಲೂ ಇದೇರಿ)
ಅರವಿಂದ್
:)
:)
ಉ: ಯಾವುದು ಮುಖ್ಯ ಮನುಷ್ಯನಿಗೆ?
ಸಾತ್ವಿಕ್,
ನಾನು ಚಿಕ್ಕವನಿದ್ದಾಗ, ನಮ್ಮ ಅಕ್ಕ ಪಕ್ಕದವರು ಸದಾ ಇದೆ ಅನ್ನೋರು(ನನ್ ಸೋದರ ಮಾವ, ಅತ್ತೆಯಂದಿರು), "ನಿಮ್ ಮಾವನ ಮಗಾ ೭ ನೇ ತರಗತಿಯಿಂದಾನೆ ಅಂಗಡಿಲಿ ಕುತ್ಕೊಂಡು ಕಮಾಯಿಸ್ತಿದ್ದಾನೆ, ನಿಮಗೇನು ಧಾಡಿ, ಸುಮ್ನೆ ನಿಮ್ಮಪ್ಪ ನಿಮ್ಮನ್ನು ಓಡಿಸ್ತ ಇದ್ದಾರೆ" ಅಂತ ಬಯ್ಯೋರು,
ಅಮ್ಮ ಒಂದೊಂದು ಸಲಾ ಅಪ್ಪಾಜಿಗೆ ಈ ಮಾತು ಹೇಳಿದ್ದಾಗ ಬಯ್ಯೋರು, ದುಡ್ದೆನ್ ಮಾಡ್ತಿಯೇ, ಮಕ್ಕಳೇ ನಮ್ಮ ಆಸ್ತಿ ಅನ್ನೋರು,
ಈಗ ಅವ್ನು ಇನ್ನು ಅದೇ ಅಂಗಡಿಲಿ ಕುತ್ಕೊಂಡಿರ್ತಾನೆ,
ಎಲ್ಲದ್ದಕ್ಕೂ ಒಂದು ಕಾಲ ಬಂದೇ ಬರುತ್ತೆ ಆಲ್ವಾ??
ಶಶಿ ಬಿರ್ಗೆ
ಉ: ಯಾವುದು ಮುಖ್ಯ ಮನುಷ್ಯನಿಗೆ?
ಹೌದು ಶಶಿಕಾಂತ್,
ಈಗ ನಾನು ಹಣದಲ್ಲಿ ಹೇರಳ ಅಲ್ಲದಿದ್ದರೂ ತಕ್ಕಮಟ್ಟೀಗೆ ಇದ್ದೇನೆ. ಏಕೆಂದರೆ ನಮಗೆ ಸೋತು ಗೊತ್ತು..
ಸಾತ್ವಿಕ್ ಎನ್ ವಿ
ಉ: ಯಾವುದು ಮುಖ್ಯ ಮನುಷ್ಯನಿಗೆ?
>>ಈಗ ನನ್ನನ್ನು ಕಾಡುವ ಪ್ರಶ್ನೆಯೆಂದರೆ ಸಮಾಜ ಯಾವ ಅಂಶವನ್ನು ನೋಡಿ ವ್ಯಕ್ತಿಯನ್ನು ಪುರಸ್ಕ್ರರಿಸುತ್ತದೆ ಅನ್ನೋದು? ದುಡ್ದೋ, ವಿದ್ಯಾಭ್ಯಾಸವೋ, ಗುಣವೋ, ಶಿಫಾರಸ್ಸೋ,,,,,,,,<<
ಕಲಿಯುಗದಲ್ಲಿ ಮೆರೆಯುವುದು ಮೆರೆಸುವುದು ದುಡ್ಡು, ಅನಾಚಾರ, ಅತ್ಯಾಚಾರ, ಅಧರ್ಮ, ಭ್ರಷ್ಟಾಚಾರ......ಇತ್ಯಾದಿ ಇತ್ಯಾದಿ.
ಆದರೆ ಮನಸ್ಸಿಗೆ ನೆಮ್ಮದಿ ನೀಡುವ ವಿಚಾರ ಆಚಾರಗಳೇ ಬೇರೆ...
ಅವುಗಳನ್ನು ಗುರುತಿಸಿಕೊಂಡವರು ಧನ್ಯರು.
ಎದೆಗುಂದದಿರಿ.
ಉ: ಯಾವುದು ಮುಖ್ಯ ಮನುಷ್ಯನಿಗೆ?
ಸರ್ ನಿಮ್ಮ ಧೈರ್ಯ ತುಂಬುವ ಮಾತುಗಳಿಗೆ ಚಿರಋಣಿ.
ಇವಾಗ ಚಕ್ರ ಮುಂದೆ ಸಾಗಿದೆ. ಇದು ಸ್ವಲ್ಪ ಹಳೆಯ ಮತ್ತು ನಾನು ಓದುತ್ತಿದ್ದಾಗ ನಡೆದ ಘಟನೆ.ಮನುಷ್ಯನನ್ನು ಹಣದಿಂದ ಅಳೆಯುವ ಪರಿಪಾಠ ನಮ್ಮಲ್ಲಿ ಹೋಗದ ಹೊರತು ವ್ಯಕ್ತಿಯ ನಿಜ ಗುಣ ತಿಳಿಯದು ಸರ್..
ಸಾತ್ವಿಕ್ ಎನ್ ವಿ.
ಉ: ಯಾವುದು ಮುಖ್ಯ ಮನುಷ್ಯನಿಗೆ?
>>ಅಳೆಯುವ ಪರಿಪಾಠ ನಮ್ಮಲ್ಲಿ ಹೋಗದ ಹೊರತು ವ್ಯಕ್ತಿಯ ನಿಜ ಗುಣ ತಿಳಿಯದು ಸರ್..<<
ನಿಜವಾದ ಮಾತು ಸಾತ್ವಿಕ್,
"ಅಳೆಯುವ ಪರಿಪಾಠ ನನ್ನಲ್ಲಿ ಇರುವ ತನಕ ವ್ಯಕ್ತಿಯ ನಿಜ ಗುಣ ತಿಳಿಯದು ..." ಅಂತ ಬದಲಾಯಿಸಿಕೊಂಡು ಓದಿದೆ ನಾನು.
:-)
ಉ: ಯಾವುದು ಮುಖ್ಯ ಮನುಷ್ಯನಿಗೆ?
ನಿಮ್ಮ್ ಮಾತು ನನಗೆ ಅರ್ಥವಾಗಲಿಲ್ಲ ಸರ್.... ಈಗ ನನ್ನ ತಂದೆ ಹೇಳಿದ ಮಂಕ ತಲೆಯ ವಿಷಯ ಮತ್ತೊಮ್ಮೆ ಪ್ರೂವ್ ಆಯ್ತು..ಹಹಾಹ್ಹಾ...\
ಸಾತ್ವಿಕ್
ಉ: ಯಾವುದು ಮುಖ್ಯ ಮನುಷ್ಯನಿಗೆ?
ಕೆಟ್ಟದ್ದು ಯಾವುದೇ ಆಗಲಿ ಅದು "ನನ್ನಲ್ಲಿ" ಇರಬಾರದು ಎನ್ನುವುದು ನನ್ನ ಮೊದಲ ನಿರ್ಧಾರ.
ನಮ್ಮಲ್ಲಿ ಅನ್ನುವ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟೆ ನನ್ನ ಶಬ್ದಗಳ ಭಾವಾರ್ಥ.
ಉ: ಯಾವುದು ಮುಖ್ಯ ಮನುಷ್ಯನಿಗೆ?
ಹಣದಿಂದ ಎಂಬ ಪದ ಬಿಟ್ಟು ಹೋಗಿತ್ತು ಸರ್. ಆದರಿಂದ ವಾಕ್ಯ ಸರಿಯಾಗಿರಲಿಲ್ಲ. ಈಗ ತಿದ್ದಿದ್ದೇನೆ. ನಿಮ್ಮ ಮಾತು ಅಕ್ಷರಶ: ಸತ್ಯ. ಲೋಕದ ಆಗು ಹೋಗುಗಳಿಗೆ ನಾವು ಕೂಡ (ನಾನು ಕೂಡ) ಬಾಧ್ಯಸ್ಥರು.
ಸಾತ್ವಿಕ್
ಉ: ಯಾವುದು ಮುಖ್ಯ ಮನುಷ್ಯನಿಗೆ?
ಹೌದು, ನಮಗೆ ಯಾವುದು ಮುಖ್ಯ ಎನ್ನುವುದು ನಾವು ಪ್ರತಿ ಸಂದರ್ಭದಲ್ಲೂ ಕೇಳಿಕೊಳ್ಳಬೇಕಾದ ಪ್ರಶ್ನೆಯೇ.
ನಮಗೆ ವ್ಯಕ್ತಿಗಿಂತ ಆತ ತೊಟ್ಟ ಬಟ್ಟೆ ಮುಖ್ಯವಾಗುತ್ತೆ, ವ್ಯಕ್ತಿಯ ಗುಣಕ್ಕಿಂತ ಆತನ ನುಲಿಯುವಿಕೆ, ಬಕೆಟ್ ಹಿಡಿಯುವ ಸಾಮರ್ಥ್ಯ ಮೋಡಿ ಮಾಡುತ್ತದೆ. ಇದು ಎಂದಿಗೂ ಬದಲಾಗುವುದಲ್ಲ. ಇವನ್ನೆಲ್ಲ ಗಮನಿಸದಿರುವ ಮೆಚ್ಯುರಿಟಿಯನ್ನು ತಲುಪಬೇಕಷ್ಟೆ.
ಇದಕ್ಕೆ ಕೀಳರಿಮೆ, ಮೇಲರಿಮೆಗಳ ಕಾಂಪ್ಲೆಕ್ಸ್ ಬಹುಮುಖ್ಯವಾಗಿ ಕಾರಣವಾಗುತ್ತದೆ.
ಉ: ಯಾವುದು ಮುಖ್ಯ ಮನುಷ್ಯನಿಗೆ?
ಸುಪ್ರೀತ್,
ಈಗ ಎಲ್ಲರೂ ಬುದ್ಧಿವಂತರಾಗಿದ್ದಾರೆ. ಬಕೆಟ್ ಹಿಡಿಯಲು ಹೊರಟರೆ ಹಿಡಿದುಕೊಂಡೆ ಇರಬೇಕು. ನಮ್ಮ ವಿದ್ಯಾಭ್ಯಾಸದ ವ್ಯವಸ್ಥೆಯು ಇದೇ ರೀತಿ ಇದೆ.ಮುಂದೆಯು ಇದೇ ಮುಂದುವರೆಯುತ್ತದೆ ಅಷ್ಟೆ. ವಿ ವಿ ಗಳಲ್ಲಿ ಅಂತೂ ಇದು ತೀವ್ರವಾಗಿರುತ್ತದೆ.
ಉ: ಯಾವುದು ಮುಖ್ಯ ಮನುಷ್ಯನಿಗೆ?
ಬ್ರಹ್ಮ ಸತ್ಯಂ. ಜಗನ್ಮಿಥ್ಯಾ. ನಮಗೆ ನಾವೇ ಒಂದು ಮಾನದಂಡವಿಟ್ಟುಕೊಂಡು ಅದೇ ಮಾನದಂಡದಿಂದ ಜನ ಅಳೆಯಬೇಕೆಂದಾಗ ಈ ತಾಕಲಾಟ ಸಹಜ. ಸರಿಯಾಗಿ ಯೋಚಿಸಿದಾಗ ನನಗೂ ಒಂದು ಸಗಣಿ ಮುದ್ದೆಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲವೂ ನಗಣ್ಯ. ಆಗ ಬದುಕು ನಿರಾಳವಾಗುತ್ತದೆ. ಹೊಱಗಡೆಯಿಂದ ನಮ್ಮಳತೆಯನ್ನು ಬೇಱೆಯವರಿಂದ ನಿರೀಕ್ಷಿಸುವುದು ತಪ್ಪುತ್ತದೆ.