ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Satyaprakash.H.K. ರವರ ಬ್ಲಾಗ್

ಲೇಖನಗಳು

March 8, 2006 - 2:32pm — Satyaprakash.H.K.

೦೧-೦೮-೨೦೦೫
ಬೆಂಗಳೂರು

ಆರೋಗ್ಯಪೂರ್ಣ ಜೀವನ

ಜೀವನದಲ್ಲಿ ಸಾಧನೆ ಮಾಡಲು ಆರೋಗ್ಯ ಮಹತ್ತರ ಪಾತ್ರ ವಹಿಸುತ್ತದೆ. ಯಾವಾಗಲೂ ನಾನಾ ತರಹ ರೋಗಗಳಿಂದ ನರಳಿಕೊಂಡು, ಆಸ್ಪತ್ರೆಗಳಿಗೆ ಅಲೆದಾಡಿಕೊಂಡು, ಔಷಧಿಗಳಿಗೆ ಸುರಿದುಕೊಂಡು ಈ ಜೀವನದಲ್ಲಿ ಏನು ಸಾಧನೆ ಮಾಡುವುದಕ್ಕೆ ಆಗುತ್ತದೆ? ಮನಸ್ಸೆಲ್ಲಾ ರೋಗದ ನರಳಾಟದ ಕಡೆಗೇ ಇರುತ್ತದೆ. ಪ್ರತಿಯೊಬ್ಬರೂ ಆರೋಗ್ಯಪೂರ್ಣ ಜೀವನ ನಡೆಸಲು ೧೦೦ ಕ್ಕೆ ೧೦೦ ರಷ್ಟು ಅವಕಾಶವಿರುತ್ತದೆ.
ಹೇಗೆಂದರೆ ಫೈಬರ್ ಯುಕ್ತ ಆಹಾರಗಳನ್ನು ಸೇವಿಸುತ್ತಿದ್ದರೆ ಯಾವ ರೋಗಗಳೂ ಹತ್ತಿರ ಸುಳಿಯುವುದಿಲ್ಲ. ಈಗ ಇರುವ ರೋಗಗಳೂ ಸಹ ಕೊಚ್ಚಿಕೊಂಡು ಆಚೆಗೆ ಹೋಗಿಬಿಡುತ್ತವೆ. ದಿನಕ್ಕೆ ಪ್ರತಿಯೊಬ್ಬರೂ ೫೦ ಗ್ರಾಂ ನಿಂದ ೧೦೦ ಗ್ರಾಂ ಗಳವರೆಗೆ ಫೈಬರ್ ಯುಕ್ತ ಆಹಾರ ಸೇವಿಸಿದರೆ ಸಾಕು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಮತ್ತು ರಾತ್ರಿಯ ಊಟ ಫೈಬರ್ ಯುಕ್ತವಾಗಿರಬೇಕು. ಇದನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಆನಂದವಾದ ಜೀವನವನ್ನು ನಡೆಸಬಹುದು. ಯಾವುದೇ ಆತಂಕ ಇಲ್ಲದೇ ಆನಂದದಿಂದ ದಿನನಿತ್ಯದ ಕೆಲಸಗಳನ್ನು ಪರಿಪೂರ್ಣವಾಗಿ ಮಾಡಲು ದೇಹ ಮತ್ತು ಮನಸ್ಸು ಸರ್ವಶಕ್ತವಾಗಿರುತ್ತದೆ. ಎಷ್ಟು ಹೊತ್ತು ಕೆಲಸ ಮಾಡಿದರೂ ದಣಿವೇ ಆಗುವುದಿಲ್ಲ. ಅಕಸ್ಮಾತ್ ಹೊರಗಡೆ ತಿನ್ನಬೇಕಾದ ಪರಿಸ್ಥಿತಿ ಉಂಟಾದಲ್ಲಿ ಅದಕ್ಕೆ ಯೋಚನೆ ಮಾಡಬೇಕಾದ ಅವಶ್ಯಕತೆಯಿಲ್ಲ. ಹೊರಗಡೆ ತಿಂದಿರತಕ್ಕಂಥ ಆಹಾರಗಳಿಂದ ಏನಾದರೂ ತೊಂದರೆ ಬಂದಲ್ಲಿ ಮನೆಯಲ್ಲಿ ಫೈಬರ್ ಯುಕ್ತ ಆಹಾರವನ್ನು ಸೇವಿಸಿದ ನಂತರ ಒಂದೆರಡು ದಿನದಲ್ಲಿ ಸರಿಹೋಗುತ್ತದೆ. ಅದಕ್ಕಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.
ಉತ್ತಮವಾದ ಫೈಬರ್ ಇರುವ ಆಹಾರವೆಂದರೆ ಪಾಲೀಶ್ ಮಾಡಿರದ ಕೆಂಪು ಅಕ್ಕಿ ಅಂದರೆ ಭತ್ತ ಮಾತ್ರ ತೆಗೆದ ಕೆಂಪು ಅಕ್ಕಿ ಮತ್ತು ರಾಗಿ. ಕೆಲವರಿಗೆ ರಾಗಿ ಒಗ್ಗುವುದಿಲ್ಲ. ಅಂದರೆ ಲೂಸ್ ಮೋಶನ್ ಆಗಲು ಶುರುವಾಗುವುದು. ಅಕ್ಕಿಯ ಅಭ್ಯಾಸ ಇರುವವರು ರಾಗಿಯನ್ನು ಉಪಯೋಗಿಸಲು ಇಷ್ಟಪಡುವುದಿಲ್ಲ. ಅಲ್ಲದೆ ತುಂಬಾ ಕಷ್ಟಪಟ್ಟು ಕೆಲಸಮಾಡುವವರಿಗೆ ರಾಗಿ ಸರಿಹೋಗುತ್ತದೆ. ಯಾವಾಗಲೂ ಅಕ್ಕಿಯನ್ನೇ ಉಪಯೋಗಿಸುವವರು ಫೈಬರ್ ಯುಕ್ತ ಅಕ್ಕಿಯನ್ನು ಉಪಯೋಗಿಸಿದರೆ ಕುಳಿತು ಕೆಲಸ ಮಾಡುವವರಿಗೂ ಅನುಕೂಲವಾಗುತ್ತದೆ. ಆದರೆ ಫೈಬರ್ ಯುಕ್ತ ಆಹಾರವನ್ನು ತಿಂದ ನಂತರ ಜಾಸ್ತಿ ನೀರು ಕುಡಿಯಬೇಕು. ನೀವುಗಳು ತಿಂದ ಫೈಬರ್ ಒಳಗಡೆ ಇರುವ ಎಲ್ಲಾ ವಿಷಗಳನ್ನೂ ಮತ್ತು ಆಹಾರದಿಂದ ಉತ್ಪತ್ತಿಯಾದ ಕೆಲವು ವಿಷಕಾರಕ ವಸ್ತುಗಳನ್ನು ಈ ಫೈಬರ್ ಒಂದು ಮುದ್ದೆಯಾಗಿ ಪರಿವರ್ತಿಸಿ ದೊಡ್ಡ ಕರುಳಿನೊಳಗೆ ತಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ಒಂದೇ ಸಲಕ್ಕೇ ನಿಮ್ಮ ದೊಡ್ಡ ಕರುಳಿನಲ್ಲಿ ಸೇರಿರುವ ಮಲಗಳೆಲ್ಲಾ ಎರಡೇ ನಿಮಿಷಗಳಲ್ಲಿ ಖಾಲಿಯಾಗುತ್ತದೆ. ದೇಹದಲ್ಲಿ ಏನೂ ಇಲ್ಲವೇ ಇಲ್ಲವೇನೋ, ಎಲ್ಲಾ ಖಾಲಿಯಾಯ್ತೇನೋ ಎಂಬ ಸಂತೋಷ ಉಂಟಾಗುತ್ತದೆ. ಮೊದಲನೆಯ ದಿನ ಸ್ವಲ್ಪ ಸುಸ್ತಾದಂತೆ ಅನ್ನಿಸಬಹುದು. ಆದರೂ ಏನೂ ತೊಂದರೆಯಿಲ್ಲ. ಆ ಆನಂದವನ್ನು ನೀವುಗಳೇ ಅನುಭವಿಸಿ ಹೇಳಬೇಕು. ಬ್ಲಡ್ ಶುಗರ್ ಅಥವಾ ಡಯಾಬಿಟೀಸ್ ಮೆಲ್ಲಿಟಸ್ ಅಂದರೆ ಸಕ್ಕರೆ ಖಾಯಿಲೆ ಮಾತ್ರ ಇರುವವರು ಅಕ್ಕಿಯನ್ನು ಉಪಯೋಗಿಸಲು ಭಯವಾದಲ್ಲಿ ಕೆಂಪು ಅಕ್ಕಿಯ ಹೊಟ್ಟನ್ನು ಮಾತ್ರ ಗಂಜಿಯ ರೂಪದಲ್ಲಿ ಕುಡಿದರೆ ಯಾವ ತೊಂದರೆಯೂ ಇರುವುದಿಲ್ಲ. ಏಕೆಂದರೆ ಇದು ನಿಮ್ಮ ದೇಹವನ್ನು ಮತ್ತು ಹೊಟ್ಟೆಯನ್ನು ತಂಪಾಗಿ ಇಟ್ಟಿರುತ್ತದೆ.

ಈ ಲೇಖನ ಬರೆಯುತ್ತಿರುವವರ ಹೆಸರು ನಿಮಗೆಲ್ಲಾ ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು. ನನ್ನ ಹೆಸರು ಸತ್ಯಪ್ರಕಾಶ್ ಅಂತ. ಹನಸೋಗೆ ಜವರಾಯ ಮೇಷ್ಟ್ರ ಮೊಮ್ಮಗ ಮತ್ತು ಚನ್ನಪಟ್ಟಣದಲ್ಲಿ ಅಡ್ವೋಕೇಟ್ ಆಗಿದ್ದ ಶ್ರೀನಿವಾಸಯ್ಯನವರ ಮೊಮ್ಮಗ. ನಾನು ಸಹಾ ಜೀವನದಲ್ಲಿ ಸುಮಾರು ೬೦ ವರ್ಷಗಳ ಕಾಲ ರೋಗದಿಂದ ನರಳಿ ನರಳಿ ಸಾಕಾಗಿ ಇದಕ್ಕೆ ಉಪಾಯವನ್ನು ಕಡೆಗೂ ಕಂಡು ಹಿಡಿದೆ. ಲಕ್ಷಾಂತರ ರೂಪಾಯಿಗಳನ್ನು ಡಾಕ್ಟರರಿಗೆ ಸುರಿಯುತ್ತಿದ್ದೆ. ೬೫ ನೇ ದಶಕದಲ್ಲಿ ತಪ್ಪು ಡಯಾಗ್ನೋಸಿಸ್ ಮಾಡಿ ಸುಮಾರು ಹತ್ತು ವರ್ಷಗಳ ಕಾಲ ಮಾತ್ರೆಗಳನ್ನು ನುಂಗಿನುಂಗಿ ಸಾಕಾಗಿ ಕಡೆಗೆ ಸಾಯೋ ಪರಿಸ್ಥಿತಿ ಬಂದುಬಿಟ್ಟಿತ್ತು. ಆಗ ನನಗೆ ಆಸಿಡಿಟಿ, ಆತಂಕ ನ್ಯುರೋಸಿಸ್, ಗ್ಯಾಸ್ಟ್ರಿಕ್, ಅಜೀರ್ಣ ಇತ್ಯಾದಿ ರೋಗಗಳಿಂದ ಬಳಲುತ್ತಿದ್ದೆ. ಯಾವ ಡಾಕ್ಟರುಗಳಿಂದಲೂ ವಾಸಿಮಾಡಲು ಸಾಧ್ಯವಾಗಲಿಲ್ಲ. ಅಲೋಪತಿ, ಹೋಮಿಯೋಪತಿ ಎಲ್ಲಾ ಆಗಿ ಕೊನೆಗೆ ಆಯುರ್ವೇದ ಹಿಡಿದ ಮೇಲೆ ಸ್ವಲ್ಪ ಗುಣ ಕಂಡಿತು. ೬೦% ವಾಸಿಯಾಯಿತು. ಆಗ ನಮ್ಮ ಫ್ಯಾಮಿಲಿ ಡಾಕ್ಟರರು ೮೦ ರ ದಶಕದಲ್ಲೇ ಕೆಂಪು ಅಕ್ಕಿಯ ವಿಷಯವನ್ನು ಹೇಳಿದ್ದರು. ಆದರೆ ನನಗೆ ಈ ಬೆಂಗಳೂರಿನಲ್ಲಿ ಅದು ಸಿಕ್ಕುತ್ತಲೇ ಇರಲಿಲ್ಲ. ಹಾಗೂ ಹೀಗೂ ದಿನ ಕಳೆಯುತ್ತಿದ್ದೆ. ಪ್ರಜಾವಾಣಿ ಪೇಪರ್ ನಲ್ಲಿ ಆರೋಗ್ಯ ದರ್ಶನ ವಿಭಾಗದಲ್ಲಿ ಎಲ್ಲ ರೋಗಗಳಿಂದ ಬಿಡುಗಡೆಯಾಗುವುದು ಹೇಗೆಂದು ಬರೆದಿದ್ದರು. ನನಗೂ ಸಹಾ ಆಗಲೇ ಗೊತ್ತಾಗಿದ್ದು ಫೈಬರ್ ಯುಕ್ತ ಆಹಾರ ತಿಂದರೆ ಎಲ್ಲ ರೋಗಗಳು ಓಡಿಹೋಗುತ್ತವೆ ಎಂದು. ತಕ್ಷಣ ಅಲ್ಲಿ ಇಲ್ಲಿ ಓಡಾಡಿ ಕೆಂಪು ಅಕ್ಕಿಯನ್ನು ತಂದೆ. ಒಂದೇ ರಾತ್ರಿಯ ಊಟದಲ್ಲಿ ನನ್ನ ರೋಗಗಳೆಲ್ಲ ಮಾಯವಾದವು. ನನ್ನನ್ನು ನಾನೇ ನಂಬಲಾಗದ ಪರಿಸ್ಥಿತಿಯಲ್ಲಿ ನಾನಿದ್ದೆ. ಇದೆಲ್ಲಾ ನಿಜಾನ ಅನ್ನೋ ಪರಿಸ್ಥಿತಿಯಲ್ಲಿದ್ದೆ. ಅಂದಿನಿಂದ ಇಂದಿನವರೆಗೂ ೫೦ ಪೈಸ ಕೂಡ ಔಷಧಿಗಳಿಗೆ ಖರ್ಚು ಮಾಡಿಲ್ಲ. ೨೦೦೦ ನೇ ಇಸವಿಯಿಂದ ೨೦೦೪ ರವರೆಗೂ ನನಗೆ ಪಾಲೀಶ್ ಮಾಡಿರದ ಅಕ್ಕಿ ಸಿಕ್ಕುತ್ತಿತ್ತು. ಈಗ ಎಲ್ಲೆಲ್ಲೋ ತರಿಸಲು ಓಡಾಡುತ್ತಿದ್ದೇನೆ. ಈಗ ಮಾರ್ಕೆಟ್ ನಲ್ಲಿ ಸಿಕ್ಕುತ್ತಿರುವ ಕೆಂಪು ಅಕ್ಕಿಯನ್ನೇ ಅಂದರೆ ಸ್ವಲ್ಪ ಪಾಲೀಶ್ ಮಾಡಿದ ಅಕ್ಕಿಯನ್ನೇ ಉಪಯೋಗಿಸುತ್ತಿದ್ದೇನೆ. ಈಗ ನನ್ನ ಆರೋಗ್ಯವು ತುಂಬಾನೇ ಚೆನ್ನಾಗಿದೆ.
ನಾನು ಫೈಬರ್ ತಿಂದು ಆರೋಗ್ಯವಾಗಿರುವಾಗ ನಾನಾ ಖಾಯಿಲೆಯಿಂದ ನರಳುತ್ತಿರುವವರಿಗೆ ಯಾಕೆ ದಾರಿ ತೋರಿಸಬಾರದು ಎಂದು ಈ ಲೇಖನವನ್ನು ಬರೆಯುತ್ತಿದ್ದೇನೆ. ಸರಿಯಾದ ಅಕ್ಕಿ ಸಿಗದೇ ಇರುವವರು ದಯವಿಟ್ಟು ಗೋಧಿ ಹೊಟ್ಟು ಅಥವಾ ಕೆಂಪು ಅಕ್ಕಿಯ ಹೊಟ್ಟು ಸಿಕ್ಕಿದರೆ ನಿಮ್ಮ ಊಟದಲ್ಲಿ ಪ್ರತಿದಿನ ಉಪಯೋಗಿಸಿ ನಿಮ್ಮ ಆರೋಗ್ಯವನ್ನು ೧೦೦ ಕ್ಕೆ ೧೦೦ ರಷ್ಟು ಸರಿಪಡಿಸಿಕೊಳ್ಳಿರಿ. (ಗೋಧಿ ಹೊಟ್ಟು (ವೀಟ್ ಬ್ರಾನ್) ಫುಡ್ ವರ್ಲ್ಡ್, ದೊಡ್ಡ ದೊಡ್ಡ ಡಿಪಾರ್ಟ್ ಮೆಂಟಲ್ ಸ್ಟೋರ್ಸ್, ಮತ್ತು ಬಿಗ್ ಬಜ಼ಾರ್ ನಲ್ಲಿ ಸಿಗುತ್ತದೆ)

ಬರೆದಿರುವವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಇ-ಮೈಲ್ : ಆರೋಗ್ಯಸಥ್ಯ ಅಟ್ ಯಾಹೂ.ಕೊ.ಇನ್ ೨೦-೭-೨೦೦೫

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ.

ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾಗುವುದಿಲ್ಲ. ಬ್ಲೋಟಿಂಗ್ ಅನುಭವ ಇರುವುದಿಲ್ಲ. ಹೊಟ್ಟೆಯಲ್ಲಿ ಸಂಕಟವಾಗುವುದೂ ನಿಂತುಹೋಗುತ್ತದೆ. ಹೊಟ್ಟೆ ಯಾವಾಗಲೂ ತಂಪಾಗಿರುತ್ತದೆ. ಮಲಬದ್ದತೆ ನಿರ್ನಾಮವಾಗಿ ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೋಗುತ್ತದೆ. ಮಲವಿಸರ್ಜನೆಯ ಬಳಿಕ ದೇಹ ಮತ್ತು ಮನಸ್ಸು ಆನಂದಮಯವಾಗುತ್ತದೆ. ಪ್ರತಿದಿನ ಮಲವಿಸರ್ಜನೆಯ ನಂತರ ದೇಹ ಮತ್ತು ಮನಸ್ಸು ಹಗುರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಕೆಂಪು ಅಕ್ಕಿಯಲ್ಲಿರುವ ಅತ್ಯಂತ ಶಕ್ತಿ ಬೇರೆ ಯಾವುದೇ ಇಲ್ಲ ಎಂದು ಕಾಣಿಸುತ್ತದೆ. ಎಲ್ಲ ಧಾನ್ಯಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಎಲ್ಲಾ ಕಾಲಕ್ಕೂ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯೇ ಸರ್ವಶ್ರೇಷ್ಟ ವಾದುದು.

ಬರೆದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭
ಇ-ಮೈಲ್: ಸತ್ಯಪ್ರಕಾಶ್.ಹೆಚ್ಕೆ ಅಟ್ ಜಿಮೈಲ್.ಕಾಮ್
ಬೊಜ್ಜು

ಬೊಜ್ಜು ಯಾವುದರಿಂದ ಬರುತ್ತದೆ?
ಕೊಬ್ಬು, ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಪುರುಸೊತ್ತು ಇಲ್ಲದೆ ಮೇಲೆ ಮೇಲೆ ತಿನ್ನುವುದರಿಂದ ಇದು ಬರುವುದು. ಬೊಜ್ಜು ಇರುವವರಿಗೆ ಬಿ.ಪಿ., ಸಕ್ಕರೆ ಖಾಯಿಲೆ, ಹೃದಯದ ತೊಂದರೆಗಳು, ಕೊಲೆಸ್ಟರಾಲ್, ಮಲಬದ್ದತೆ, ಆತುರ, ಆತಂಕ, ಏನೋ ಭಯ ಭಯ, ಸಿಟ್ಟು, ತಾಳ್ಮೆ ಇಲ್ಲದಿರುವುದು, ಯಾವಾಗಲೂ ಹೊಟ್ಟೆ ಭಾರವಾಗಿರುವುದು, ಒಂದು ಚೂರು ತಿಂದ ತಕ್ಷಣ ಹೊಟ್ಟೆಯಲ್ಲಿ ಹಿಂಸೆಯಾಗುವುದು, ಕೆಲಸ ಮಾಡಲು ಆಸಕ್ತಿ ಇಲ್ಲದಿರುವುದು, ಯಾವಾಗಲೂ ಮಲಗಿರಬೇಕು ಎಂದು ಅನ್ನಿಸುವುದು, ಮಾನಸಿಕ ಖಿನ್ನತೆ, ಇತ್ಯಾಧಿ ತೊಂದರೆಗಳಿಂದ ಅನುಭವಿಸುತ್ತಿರುತ್ತಾರೆ.
ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಿ. ಹೇರಳವಾಗಿ ನಾರು ಇರುವ ಪದಾರ್ಥಗಳನ್ನು ಸೇವಿಸಿ ಈ ಬೊಜ್ಜಿನಿಂದ ಮುಕ್ತರಾಗಿ ಅಥವಾ ಕೆಂಪು ಮುಂಡಗ ಅಕ್ಕಿಯನ್ನು ಪ್ರತಿ ದಿನವೂ ಊಟ ಮಾಡಿ. ಒಂದೇ ಹೊತ್ತಿನ ಊಟದಲ್ಲಿ ಅತ್ಯಾಶ್ಚಕರ ರೀತಿಯಲ್ಲಿ ಆಗುವ ವ್ಯತ್ಯಾಸವನ್ನು ಗಮನಿಸಿರಿ. ಯಾವುದೇ ಔಷಧಿಗಳ ಅವಶ್ಯಕತೆ ಇಲ್ಲದೆ ನಿಮಗೆ ಇರುವ ತೊಂದರೆಗಳನ್ನು ನಿವಾರಿಸಿಕೊಳ್ಳಿರಿ. ಒಂದು ವಾರದ ಹೊತ್ತಿಗೆ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯ ಸೇವನೆಯಿಂದ ನಿಮ್ಮ ಬೊಜ್ಜು ಕರಗಿಹೋಗುತ್ತದೆ. ದೇಹವು ೧೦೦% ಹಗುರವಾಗುತ್ತದೆ.

ಹೆಚ್.ಕೆ. ಸತ್ಯಪ್ರಕಾಶ್
೯೮೮೬೩ ೩೪೬೬೭

~.~
  • Satyaprakash.H.K. ರವರ ಬ್ಲಾಗ್
  • Login or register to post comments
  • 853 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 8, 2006 - 4:52pm — Sunil Jayaprakash

ಬೆಂಡೆಕಾಯಿ ಬಳಸಿ

Sunil Jayaprakash's picture

ಬೆಂಡೆಕಾಯಿಯಲ್ಲಿಯೂ ಕೂಡ ಅಧಿಕ ನಾರಿನಂಶ ಇದೆ. ಅಲ್ಲವೇ.

ಮನೆಯಲ್ಲಿ ಬೆಂಡೆಕಾಯಿ ತಿಂದ್ರೆ ಬುದ್ಧಿ ಚುರುಕಾಗತ್ತೆ ಅಂತ ನಮ್ಮ ಅಜ್ಜಿ ಹೇಳ್ತಾ ಇದ್ದರು/ಇರುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 8, 2006 - 11:02pm — Satyaprakash.H.K.

ಬೆಂಡೇಕಾಯಿ

Satyaprakash.H.K.'s picture

ದಿನವೂ ಬೆಂಡೇಕಾಯಿ ತಿನ್ನಲು ಸಾಧ್ಯವಿಲ್ಲ. ಅದರಲ್ಲೂ ನಾರಿನಂಶ ಇದೆ. ಆದರೆ ಪ್ರತಿಯೊಬ್ಬರಿಗೂ ಒಂದು ದಿನಕ್ಕೆ ಕನಿಷ್ಟ ೪೦ ಗ್ರಾಂ ನಾರು ಬೀಳಲೇಬೇಕು. ಆದ್ದರಿಂದ ಅಕ್ಕಿ ಒಂದನ್ನು ಬದಲಾಯಿಸಿಕೊಂಡರೆ ಸಾಕು. ಪಾಲೀಶ್ ಮಾಡಿರದ ಕೆಂಪು ಅಕ್ಕಿ ಅಥವಾ ಕಜ್ಜಾಯ ಅಕ್ಕಿ ತುಂಬಾ ತುಂಬಾ ಒಳ್ಳೆಯದು. ಹೊಟ್ಟೆ ತುಂಬಾ ತಂಪಾಗಿರುತ್ತೆ. ನನ್ನ ಮುಂದಿನ ಲೇಖನಗಳನ್ನು ನೋಡಿ ಆನಂದಿಸಿರಿ.

ಇಂತೀ ನಮಸ್ಕಾರಗಳು,
ಸತ್ಯಪ್ರಕಾಶ್
೯೮೮೬೩ ೩೪೬೬೭

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 9, 2006 - 3:34am — srivathsajoshi

Re: ಬೆಂಡೆಕಾಯಿ ಬಳಸಿ

srivathsajoshi's picture

Sunil Jayaprakash wrote:
ಮನೆಯಲ್ಲಿ ಬೆಂಡೆಕಾಯಿ ತಿಂದ್ರೆ ಬುದ್ಧಿ ಚುರುಕಾಗತ್ತೆ

ರೆಸ್ಟೊರೆಂಟಲ್ಲಿ ಉತ್ತರ ಭಾರತ ಶೈಲಿಯ 'ಭೆಂಡಿ ಮಸಾಲಾ' ತಿಂದ್ರೆ?

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
  • ಧಾನ್ಯಗಳ ಹೊಟ್ಟು
  • ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು
  • ಕೆಂಪು ಅಕ್ಕಿ ಸಿಗುವ ಜಾಗ
  • ಬೇಸಿಗೆ ಬಂದಿದೆ :
Syndicate content

ಲೇಖಕರು

Satyaprakash.H.K.'s picture

ಪೂರ್ಣ ಹೆಸರು
ಸತ್ಯಪ್ರಕಾಶ್ ಹೆಚ್ ಕೆ

ಪರಿಚಯ

ನಾನು ಹೊಸ ತರಹದ ಅಸ್ಟ್ರಾಲಜರ್. ನಾನು ಜಾತಕಗಳನ್ನು ಎಲ್ಲರೂ ನೋಡುವಂತೆ ನೋದುವುದಿಲ್ಲ. ನನ್ನದೇ ಆದಂತಹ ವಿಶೇಷ ಸಾಫ್ಟ್ ವೇರ್ ಮಾಡಿಕೊಂಡಿದ್ದೇನೆ. ನಾನು ನೋಡುವುದು ಗ್ರಹಗಳ ಕೋನದಲ್ಲಿ. ಅಂದರೆ ಅಂತರಂಗದಲ್ಲಿ ಇರುವುದೆಲ್ಲಾ ನಮ್ಮ ಕಣ್ಣಿನ ಮೂಲಕ ತಾನೇ ಕಾಣಿಸಿಕೊಳ್ಳುವುದು. ಇನ್ಯಾವುದೇ ಅಂಗದಲ್ಲೂ ಕಾಣಲು ಸಾಧ್ಯವಿಲ್ಲ ಅಲ್ಲವೇ? ಈಗ ಮರ ಬೆಳೆಯಲು ನಾವೇನು ಮಾಡುತ್ತೇವೆ? ಒಂದು ಬೀಜ ಬಿತ್ತುತ್ತೇವೆ. ಆ ಬೀಜದಲ್ಲಿ ಏನಿದೆ ಅನ್ನುವುದು ನಮಗೆ ಗೊತ್ತಿಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಬೇರುಗಳು ಕಾಣಿಸಿಕೊಂಡರೂ ಆ ಬೇರಿನಲ್ಲಿ ಏನೇನು ಸತ್ವ ಇದೆ ಅಂತ ಆಗಲೂ ಸಹಾ ನಮಗೆ ಗೊತ್ತಾಗುವುದಿಲ್ಲ. ಅಲ್ಲವೇ? ಅದು ಪೂರ್ತಿಯಾಗಿ ಬೆಳೆದು ಕೊಂಬೆಗಳು ಹುಟ್ಟಿಕೊಂಡಮೇಲೆ ತಾನೆ ಗೊತ್ತಾಗೋದು ಆ ಬೇರುಗಳಲ್ಲಿ ಒಳ್ಳೇ ಸತ್ವ ಇದೆಯೋ ಅಥವಾ ಜೊಳ್ಳೋ ಅಂತ. ಹಾಗೆಯೇ ನಾನೂ ಸಹಾ ನೋಡುವುದು ಜಾತಕಗಳನ್ನು.
ಇದಲ್ಲದೆ ನಾನು ಆಹಾರದಲ್ಲೇ ಸುಮಾರು ರೋಗಗಳನ್ನು ಗುಣಪಡಿಸಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ. ಹಾಗೂ ನಾನೇ ಸ್ವತಃ ಅದನ್ನು ಅಳವಡಿಸಿಕೊಂಡಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator