ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › Satyaprakash.H.K. ರವರ ಬ್ಲಾಗ್

ಧಾನ್ಯಗಳ ಹೊಟ್ಟು

April 19, 2006 - 12:47am — Satyaprakash.H.K.

ಹೊಟ್ಟು(ಫೈಬರ್)

ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ ಹಾಲಿ ಸಿಕ್ಕುತ್ತಿರುವುದೆಲ್ಲಾ ಆ ಕವಚ ತೆಗೆದಿರುವ ಅಕ್ಕಿಯೇ. ಆ ಕವಚಕ್ಕೆ ಇಂಗ್ಲೀಷಿನಲ್ಲಿ ಕರ್ನಲ್ ಎಂದೂ ಕರೆಯುತ್ತಾರೆ. ಹೊಟ್ಟು ತಿನ್ನುವವರು ೧೦೦ ರಿಂದ ೧೨೦ ವರ್ಷಗಳವರೆಗೂ ಯಾವುದೇ ರೋಗ ರುಜಿನಗಳಿಲ್ಲದೆ ಸಂತೋಷವಾಗಿ ಬಾಳಬಹುದು. ಎಲ್ಲಾ ಧಾನ್ಯಗಳಲ್ಲೂ ಹೊಟ್ಟು ಇರುತ್ತದೆ. ಹೊಟ್ಟು ದೇಹಕ್ಕೆ ಬಹಳ ಅತ್ಯಗತ್ಯ ವಸ್ತುವಾಗಿರುತ್ತದೆ. ಈ ಹೊಟ್ಟಿನಲ್ಲಿ ಬೇಕಾದಷ್ಟು ಪೌಷ್ಟಿಕಾಂಶ ಇರುತ್ತದೆ. ಹೊರಗಡೆ ಯಾವುದೇ ಔಷಧಿಗಳಲ್ಲಿ ಅಥವಾ ಲೇಹಗಳಲ್ಲಿ ಸಿಗದೇಇರುವ ಪೌಷ್ಟಿಕಾಂಶಗಳು ಈ ಹೊಟ್ಟಿನಲ್ಲಿ ಇರುತ್ತವೆ. ಕೆಂಪು ಅಕ್ಕಿಯ ಹೊಟ್ಟೇ ಅತ್ಯಂತ ಶಕ್ತಿದಾಯಕ ಮತು ತಂಪುಕಾರಕ ಗುಣವನ್ನು ಹೊಂದಿರುವಂಥಾದ್ದು. ಕೆಂಪು ಅಕ್ಕಿಯ ಹೊಟ್ಟಿನಲ್ಲಿ ರೈಸ್ ಬ್ರಾನ್ ಆಯಿಲ್ ತಯಾರುಮಾಡುತ್ತಾರೆ. ಇದಕ್ಕೆ ಹಾರ್ಟ್ ಆಯಿಲ್ ಎಂದೂ ಕರೆಯುತ್ತಾರೆ. ಇದನ್ನು ದೇಶವಿದೇಶಗಳಲ್ಲಿ ಹಾರ್ಟ್ ಅಟ್ಯಾಕ್ ಆಗದಿರಲಿ ಎಂದು ಡಾಕ್ಟರರು ಶಿಫಾರಸು ಮಾಡುತ್ತಾರೆ. ಗೋಧಿಯ ಹೊಟ್ಟು ಉಷ್ಣವನ್ನುಂಟು ಮಾಡುತ್ತದೆ. ಕೆಂಪು ಅಕ್ಕಿ ಮತ್ತು ರಾಗಿ ಮಾತ್ರ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ ಮತ್ತು ಇಡೀ ದಿನ ದೇಹ ಮತ್ತು ಮನಸ್ಸನ್ನು ಚುರುಕಾಗಿಟ್ಟಿರುತ್ತದೆ. ಕೆಂಪು ಅಕ್ಕಿ, ಗೋಧಿ, ರಾಗಿ ಮತ್ತು ಎಲ್ಲ ಧಾನ್ಯಗಳಲ್ಲಿ ಈ ಹೊಟ್ಟು ಬೇಕಾದಷ್ಟು ಇರುತ್ತದೆ. ನೀವು ಎಷ್ಟು ಸಲ ತಿಂಡಿ, ಊಟ ಮಾಡುತ್ತೀರೋ ಅಷ್ಟು ಸಲವೂ ಹೊಟ್ಟಿನಿಂದ ಕೂಡಿದ ಆಹಾರವನ್ನೇ ತಿನ್ನಿ. ಇದು ನಿಮ್ಮನ್ನು ೧೦೦ ಕ್ಕೆ ೧೦೦ ರಷ್ಟು ಆರೋಗ್ಯವನ್ನು ಕೊಡುತ್ತದೆ. ಇಡೀ ದಿನ ದೇಹ ಮತ್ತು ಮನಸ್ಸು ಉಲ್ಲಾಸಮಯವಾಗಿರುತ್ತದೆ. ಸ್ವಲ್ಪವೂ ಸಂಕಟವಾಗುವುದಿಲ್ಲ, ಗ್ಯಾಸ್ ಆಗುವುದಿಲ್ಲ, ಗ್ಯಾಸ್ಟ್ರ್‍ಐಟಿಸ್ ಆಗುವುದಿಲ್ಲ, ಹೊಟ್ಟೆ ಭಾರವಾಗುವುದಿಲ್ಲ, ಹೊಟ್ಟೆಯು ಮಲ್ಲಿಗೆ ಹೂವಿನಂತಿರುತ್ತದೆ, ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ, ಮಲಬದ್ಧತೆಯ ಸುಳಿವೇ ಇರುವುದಿಲ್ಲ, ಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೊರಟುಹೋಗುತ್ತದೆ. ಮಲವಿಸರ್ಜನೆಯ ನಂತರ ಮನಸ್ಸು ಆನಂದಮಯವಾಗುತ್ತದೆ. ಹೊಟ್ಟು (ಬ್ರಾನ್ ಅಥವ ಕರ್ನಲ್) ಇರುವ ಕೆಂಪು ಅಕ್ಕಿ ಸಿಗದೇಇದ್ದಲ್ಲಿ ಫುಡ್ ವರ್ಲ್ಡ್ ಅಥವಾ ದೊಡ್ಡ ಡಿಪಾರ್ಟ್ ಮೆಂಟ್ ಸ್ಟೋರ್ಸ್ ಗಳಲ್ಲಿ ಸಿಗುವ ಸೀರಿಯಲ್(ಧಾನ್ಯಗಳ) ಮತ್ತು ಗೋಧಿಯ ಹೊಟ್ಟು ಸಿಗುತ್ತದೆ. ಇದನ್ನು ಪ್ರತಿದಿನದ ತಿಂಡಿ, ಊಟಗಳ ಜೊತೆಗೆ ಅಥವಾ ಊಟದ ನಂತರ ೩ ರಿಂದ ೬ ಟೀ ಚಮಚದವರೆಗೆ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದು ಮೇಲೆ ಒಂದು ದೊಡ್ಡ ಗ್ಲಾಸ್ ನೀರು ಕುಡಿಯಿರಿ. ಅದರ ಆನಂದವನ್ನು ಸ್ವಲ್ಪ ಹೊತ್ತಿನಮೇಲೆ ಅನುಭವಿಸಿರಿ. ಇದಲ್ಲದೆ ಜ್ಯೂಸ್, ಕುದಿಸಿದ ನೀರು, ಹಾಲು, ಮೊಸರು, ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಚಿತ್ರಾನ್ನ, ಪಾಯಸ, ಯಾವುದೇ ರೀತಿಯ ಭಾತ್ ಗಳು, ರಾಯತ ಇತ್ಯಾದಿಗಳಿಗೆ ಮಿಕ್ಸ್ ಮಾಡಿ ಉಪಯೋಗಿಸಿ. ಹೊಟ್ಟಿಲ್ಲದೆ ಒಂದು ತುತ್ತನ್ನೂ ತಿನ್ನಬೇಡಿ. ಹೊಟ್ಟು ಜೀವರಕ್ಷಕ ಔಷಧಿಯಾಗಿರುತ್ತದೆ, ಮಲಬದ್ಧತೆಗೆ ಒಳ್ಳೇ ಪ್ರಾಕೃತಿಕ ಆಹಾರ. ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷಪದಾರ್ಥಗಳನ್ನು ಹೊಡೆದೋಡಿಸುತ್ತದೆ. ನಿಮ್ಮ ದೇಹಕ್ಕೆ ಅತ್ಯಧಿಕ ಶಕ್ತಿಯನ್ನೂ ಸಹಾ ಕೊಡುತ್ತದೆ. ಹೊಟ್ಟುಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಯಾವುದೇ ರೋಗವಿಲ್ಲದೇ ೧೦೦ ರಿಂದ ೧೨೦ ವರ್ಷ ಬಾಳಬಹುದು. ಈಗ ನಾನಾ ರೀತಿಯ ರೋಗ ರುಜಿನಗಳಿಂದ ನರಳುತ್ತಿರುವವರೂ ಸಹಾ ಇದರ ಉಪಯೋಗ ಪಡೆದು ಆರೋಗ್ಯವನ್ನು ಸಂಪಾದಿಸಬಹುದು. ಹೊಟ್ಟು "ಅತ್ಯಾಶ್ಚರ್ಯಕರ ಆಹಾರ", ಅತ್ಯಾಶ್ಚರ್ಯಕರ ಶಕ್ತಿವರ್ಧಕ", "ಅತ್ಯಾಶ್ಚರ್ಯಕರ ಔಷಧಿ", "ಅತ್ಯಾಶ್ಚರ್ಯಕರ ಮಲವಿಸರ್ಜಕ".
ಇಂಥ ಅಮೂಲ್ಯವಾದ ಹೊಟ್ಟನ್ನು ಪ್ರಾಕೃತಿಕವಾಗಿ 'ದೇವರು' ಸಮಸ್ತ ಜನಕೋಟಿಗೆಲ್ಲಾ ಅರ್ಪಿಸಿದ್ದಾನೆ. ಇಂಥ ಹೊಟ್ಟನ್ನು ಸೇವಿಸಿ ಅತ್ಯಾನಂದವಾದ ಆರೋಗ್ಯವನ್ನು ಪಡೆಯಿರಿ. ದೇವರು ನಿಮಗೆಲ್ಲಾ ಬೇಗ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ.
ಬರೆದವರು : ಹೆಚ್.ಕೆ.ಸತ್ಯಪ್ರಕಾಶ್
ಮೊಬೈಲ್: ೯೮೮೬೩ ೩೪೬೬೭

~.~
  • Satyaprakash.H.K. ರವರ ಬ್ಲಾಗ್
  • Login or register to post comments
  • 616 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲೇಖನಗಳು
  • ಬೇಸಿಗೆ ಬಂದಿದೆ :
  • ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು
  • ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
  • ಆರೋಗ್ಯದ ಲೇಖನಗಳು
Syndicate content

ಲೇಖಕರು

Satyaprakash.H.K.'s picture

ಪೂರ್ಣ ಹೆಸರು
ಸತ್ಯಪ್ರಕಾಶ್ ಹೆಚ್ ಕೆ

ಪರಿಚಯ

ನಾನು ಹೊಸ ತರಹದ ಅಸ್ಟ್ರಾಲಜರ್. ನಾನು ಜಾತಕಗಳನ್ನು ಎಲ್ಲರೂ ನೋಡುವಂತೆ ನೋದುವುದಿಲ್ಲ. ನನ್ನದೇ ಆದಂತಹ ವಿಶೇಷ ಸಾಫ್ಟ್ ವೇರ್ ಮಾಡಿಕೊಂಡಿದ್ದೇನೆ. ನಾನು ನೋಡುವುದು ಗ್ರಹಗಳ ಕೋನದಲ್ಲಿ. ಅಂದರೆ ಅಂತರಂಗದಲ್ಲಿ ಇರುವುದೆಲ್ಲಾ ನಮ್ಮ ಕಣ್ಣಿನ ಮೂಲಕ ತಾನೇ ಕಾಣಿಸಿಕೊಳ್ಳುವುದು. ಇನ್ಯಾವುದೇ ಅಂಗದಲ್ಲೂ ಕಾಣಲು ಸಾಧ್ಯವಿಲ್ಲ ಅಲ್ಲವೇ? ಈಗ ಮರ ಬೆಳೆಯಲು ನಾವೇನು ಮಾಡುತ್ತೇವೆ? ಒಂದು ಬೀಜ ಬಿತ್ತುತ್ತೇವೆ. ಆ ಬೀಜದಲ್ಲಿ ಏನಿದೆ ಅನ್ನುವುದು ನಮಗೆ ಗೊತ್ತಿಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಬೇರುಗಳು ಕಾಣಿಸಿಕೊಂಡರೂ ಆ ಬೇರಿನಲ್ಲಿ ಏನೇನು ಸತ್ವ ಇದೆ ಅಂತ ಆಗಲೂ ಸಹಾ ನಮಗೆ ಗೊತ್ತಾಗುವುದಿಲ್ಲ. ಅಲ್ಲವೇ? ಅದು ಪೂರ್ತಿಯಾಗಿ ಬೆಳೆದು ಕೊಂಬೆಗಳು ಹುಟ್ಟಿಕೊಂಡಮೇಲೆ ತಾನೆ ಗೊತ್ತಾಗೋದು ಆ ಬೇರುಗಳಲ್ಲಿ ಒಳ್ಳೇ ಸತ್ವ ಇದೆಯೋ ಅಥವಾ ಜೊಳ್ಳೋ ಅಂತ. ಹಾಗೆಯೇ ನಾನೂ ಸಹಾ ನೋಡುವುದು ಜಾತಕಗಳನ್ನು.
ಇದಲ್ಲದೆ ನಾನು ಆಹಾರದಲ್ಲೇ ಸುಮಾರು ರೋಗಗಳನ್ನು ಗುಣಪಡಿಸಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ. ಹಾಗೂ ನಾನೇ ಸ್ವತಃ ಅದನ್ನು ಅಳವಡಿಸಿಕೊಂಡಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 59 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator