ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › savithru ರವರ ಬ್ಲಾಗ್

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

July 1, 2008 - 5:33pm — savithru

ಇತ್ತೀಚಿಗೆ ಸುನೀಲ್ ಒಂದು ಪ್ರಶ್ನೆ ಎತ್ತ್ದ್ರು. http://sampada.net/forum/9598
ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಅಂತ.

ಈ ಪ್ರಶ್ನೆ ನಾನು PLL ದೃಷ್ಟಿ ಕೋನದಲ್ಲಿ ಯೋಚಿಸಿ ಬರೀತಾ ಇದ್ದೀನಿ.

ನೆನಪಿಟ್ಟುಕೊಳ್ಳಿ ಇದು PLL ಕಡೆಯಿಂದ ಮನಸ್ಸಿನ ನೋಟ. ಮನಸ್ಸಿನ ಕಡೆಯಿಂದ ಆರಂಬಿಸಿ ನೋಡಿದರೆ ಸ್ವಲ್ಪ ಬೇರೆ / ತಪ್ಪು ಅನಿಸಬಹುದು.

ನಾನು PLL ಡಿಸೈನ್ ಮಾಡೋ ಕಾಯಕದಲ್ಲಿರುವುದರಿಂದ ನಾನು ಈ ರೀತಿ ಯೋಚಿಸ್ತೀನಿ.

ಟ್ರಾಕಿಂಗ್ ಅನ್ನೋದು PLL ನಲ್ಲಿ ತುಂಬ ಮುಖ್ಯ ವಿಷಯ.
PLL ನಲ್ಲಿ frequency ಅನ್ನು ಟ್ರ್ಯಾಕ್ ಮಾಡ್ತೀವಿ.
ಇಲ್ಲಿ (ಜೀವನದಲ್ಲಿ!) ನಮ್ಮ ಗುರಿ ಮನಸ್ಸನ್ನು ಟ್ರ್ಯಾಕ್ ಮಾಡೋದು.

PLL ನಲ್ಲಿ frequency ಟ್ರ್ಯಾಕ್ ಮಾಡೋದು "ಮುಖ್ಯವಾಗಿ" ಎರಡು ವಿಷಯಗಳ ಮೇಲೆ ಡಿಪೆಂಡ್ ಆಗುತ್ತೆ.
೧. refernce frequency
೨. loop bandwidth

ಹೆಚ್ಚ್ frequency ಯನ್ನು refernce ಆಗಿ ಇಟ್ಟುಕೊಂಡರೆ ನಮ್ಮ PLL ಬೇಗ ನಮಗೆ ಬೇಕಾದ frequency ಗೆ ಲಾಕ್ ಆಗುತ್ತೆ. ಹೆಚ್ಚು frequency ಅಂದ್ರೆ ಅದರ ಅರ್ಥ ಕಡಿಮೆ time period ಅಂತ . ಅಂದರೆ PLL ತನ್ನ output frequency ನಲ್ಲಿ ಬದಲಾವಣೆಯಾದರೆ ಆ ಕಡಿಮೆ ಅವಧಿಯಲ್ಲೇ ತನ್ನ ನಿಜವಾದ frequency ಗೆ ಬದಲಾಯಿಸುತ್ತೆ. ಈ ಕೆಲಸವನ್ನು PLL ನ PFD ( phase frequency detector) ಭಾಗ ಮಾಡುತ್ತೆ.

ಹಾಗೇನೇ ನಮ್ಮ reference ಯಾವಾಗಲೂ ಸ್ವಲ್ಪ ದೊಡ್ಡದಿರಬೇಕು. ನಮ್ಮ ಮೇಲ್ಮಟ್ಟದ ಆದರ್ಶಗಳು ನಮಗೆ reference ಆಗಿರಬೇಕು. ಈ ಸಾಲನ್ನು ನೀವೇ ಸರಿಯಾಗಿ ಯೋಚಿಸಿದರೆ ತಿಳಿಯಾಗುತ್ತೆ.

ಎರಡನೇ ಅತಿ ಮುಖ್ಯ ವಿಷಯ PLL ಜಲ್ದಿ ಟ್ರ್ಯಾಕ್ ಮಾಡ್ಬೇಕು ಅಂದ್ರೆ ಅದರ loop bandwidth ಹೆಚ್ಚು ಇರಬೇಕು. ಇದರ ಅರ್ಥ ನಮ್ಮ ಮನಸ್ಸಿಗೆ ಅತಿಯಾಗಿ ಕಡಿವಾಣ ಹಾಕಲು ಹೋಗಬಾರದು. ಅದನ್ನು ಅದರ ಪಾಡಿಗೆ ಸ್ವಲ್ಪ ಮಟ್ಟಿಗೆ ಫ್ರೀ ಆಗಿ ಬಿಡಬೇಕು.

ಆದರೆ PLL ನ loop bandwidth ಅತಿ ಹೆಚ್ಚು ಇದ್ದರೆ jitter ಹೆಚ್ಚಾಗುತ್ತೆ!. ಹಾಗೇನೇ ಮನಸ್ಸಿನ ಮೇಲೆ ಸ್ವಲ್ಪ ಗಮನವೂ ಇರಬೇಕು. ಇಲ್ದೆ ಇದ್ರೆ ಸ್ಥಿತ ಪ್ರಜ್ಞತೆ ( ಇದು ಸ್ವಲ್ಪ ದೊಡ್ಡ ಪದ, ಇಲ್ಲಿಗೆ ಅಪ್ಲೈ ಆಗಲ್ಲ..ಬೇರೆ ಪದ ಸಿಗದ ಕಾರಣ ಇದನ್ನ ಇಲ್ಲಿ ಬಳಸಿದ್ದೇನೆ!) ಸಾಧಿಸಕ್ಕೆ ಆಗಲ್ಲ.

ಈ ವರ್ಶನ್ ಗೆ ಬೇರೆಯದೇ ಆದ , PLL ಮೇಲೆ ವಿವರವಾಗಿ ಬರೀಬೇಕು ಅಂತ ಇದ್ದೆ. ಮಿಂದೆ ಬರಿಯೋ ತಾಳ್ಮೆ ಬರಬಹುದು.

PLL ಅಂದ್ರೆ ಏನು ಅಂತ ತಿಳ್ಕೊಳ್ಳಕ್ಕೆ ಇಲ್ಲಿ ಚಿಟುಕಿಸಿ!
http://en.wikipedia.org/wiki/PLL

  • PLL
  • ಮನಸ್ಸು
~.~
  • savithru ರವರ ಬ್ಲಾಗ್
  • Login or register to post comments
  • 388 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 1, 2008 - 9:34pm — kalpana

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

kalpana's picture

ಸವಿತೃ ಅವರೆ,
ಡಿಸೈನ್ ಯಾವಾಗ್ಲೂ ಚೆನ್ನಾಗಿರುತ್ತೆ. ಇಂಪ್ಲಿಮೆಂಟೇಶನ್ನಲ್ಲೇ ತೊಡಕುಂಟಾಗುವುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 9:53am — savithru

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

savithru's picture

ಇಂಪ್ಲಿಮೆನ್ಟೇಶನ್ನು ಅಂದ್ರೆ ಏನು? Smiling

ನಮ್ಮ ಫೀಲ್ಡ್ ನಲ್ಲಿ design ಆಮೇಲೆ verification ಆಮೇಲೆ manufacturing! ಇಲ್ಲೀವರೆಗೆ ಅಷ್ಟೆ ನಮ್ಮ ಕ್ಷೇತ್ರ!

ನಂತರದ್ದು (ಎಂತ ) ಇಂಪ್ಲಿಮೆನ್ಟೇಶನ್ನು ... ಬೇರೆಯವರು ಮಾಡ್ತಾರೆ Smiling

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 9:57am — savithru

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

savithru's picture

ಕಲ್ಪನಾ ಅವ್ರೆ ನಿಮ್ಮ ಮಾತು ತಪಾಗಿ ಅರ್ಥ ಮಾಡ್ಕೊಂಡಿದ್ದೆ...

ನಿಜ.. ನಿಮ್ಮ ಮಾತು ಮನಸ್ಸಿನ ಬಗ್ಗೆ... ಇಂಪ್ಲಿಮೆನ್ಟೇಶನ್ನು ಬಾಳ ಕಷ್ಟ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಸವ ವೇದನೆ?!
  • ಕೆಪಸಿಟರ್
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 125 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator