ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾಣಾ..ಕಣಾ..ಕಣ್ಲಾ..ಕಣೆ

ನಿನ್ನೆ ಸಾಯಂಕಾಲ ಟೀ ಕುಡಿಯುವಾಗ ನನ್ನೊಬ್ಬ ತಮಿಳು ಗೆಳೆಯ ನಾವು ಮಾತು ಮಾತಿಗೆ ಬಳಸುವ "ಕಣಾ" ಪದದ ಬಗ್ಗೆ ಕೇಳಿದ. ಹಾಗಾಗಿ..ನೆನೆಪಿಗಾಗಿ!.. ಈ ಬರಹ :)

ನಾವು ಬಳಸುವ ಕೆಲ ಉದಾಹರಣೆಗಳು!...

ಹೂ ಕಣಾ ...ಹೂ ಕಣೋ ..ಹೂ ಕಣಯ್ಯಾ
ಹೂ ಕಣೆ ( ಹುಡುಗಿಯರಿಗೆ)
ಹೌದು ಕಣ್ಲಾ...

ಇತ್ಯಾದಿ.

ನನ್ನ ತಲೆಗೆ ಆ ಕ್ಷಣಕ್ಕೆ ಹೊಳೆದಂತೆ....ಎರಡು ಅರ್ಥಗಳನ್ನು ಅವನಿಗೆ ಕೊಟ್ಟೆ.

>ಕಾಣಾ ... ಕಾಣು .. ನೋಡು ಅನ್ನೋ ಅರ್ಥ ಬರೋ ರೀತಿ ಬಳಸ್ತೀವಿ.... ವಚನಗಳಲ್ಲಿ ಈ ಕಾಣಾ ಪದ ಮತ್ತೆ ಮತ್ತೆ ಬಳಕೆಯಾಗಿದೆ.

>ಕೃಷ್ಣ ಕನ್ನಡಿಗ ಅನ್ನೋ ಒಂದು ವಾದವಿದೆ. ಕೃಷ್ಣನಿಗೆ ಕಣ / ಕಣಯ್ಯ ಅನ್ನೋ ಹೆಸರೂ ಇದೆ.
ಮಾತಾಡುವಾಗ ಜೋತೆಯವರನ್ನು ಕಣಾ (ಕೃಷ್ಣ) / ಕಣಯ್ಯ ಅಂತ ಸಂಬೋಧಿಸಿ ಮಾತಾಡುತ್ತಿದ್ದ ರೂಡಿಯೇ ಈಗ ಕಣಾ ಅನ್ನೋ ಬಳಕೆಯಾಗಿ ಉಳಿದಿದೆ.

ಇವು ನಾನು ಅವನಿಗೆ ಕೊಟ್ಟ ವಿವರಣೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಾಣಾ..ಕಣಾ..ಕಣ್ಲಾ..ಕಣೆ

ASHOKKUMAR's picture

ಹುಂ ಕಣ್ರ್ರೀ..

ಒಳ್ಳೆಯ ವಿವರಣೆ!
*ಅಶೋಕ್

ಉ: ಕಾಣಾ..ಕಣಾ..ಕಣ್ಲಾ..ಕಣೆ

mahesha's picture

ನಲಿವು..

ಸವಿತ್ರು.. ಚನ್ನಾಗಿರೋ ಇಶ್ಯ ಕಾಣೇಳಿ :)

ಉ: ಕಾಣಾ..ಕಣಾ..ಕಣ್ಲಾ..ಕಣೆ

ಶ್ರೀನಿವಾಸ ವೀ. ಬ೦ಗೋಡಿ's picture

savithru wrote:
ಕೃಷ್ಣ ಕನ್ನಡಿಗ ಅನ್ನೋ ಒಂದು ವಾದವಿದೆ

ಸ್ವಲ್ಪ ಇದರ ಬಗ್ಗೆ ಹೆಚ್ಚಿಗೆ ಹೇಳ್ತಿರಾ?

ಉ: ಕಾಣಾ..ಕಣಾ..ಕಣ್ಲಾ..ಕಣೆ

mahesha's picture

ಕ್ರಿಶ್ಣ => ಕರಿಯ..

ಕರ್‍ನಾಡು = ಕಪ್ಪುನಾಡು
ಕರ್‍ನಾಡಿಗ = ಕಪ್ಪುನಾಡಿನವನು

ಕರ್‍ = ಕಪ್ಪು(ಕರ್ಪು)
ಕರ್ಯ = ಕಪ್ಪಿಗೆ ನಂಟಾದವನು....

ಆರ್ಯ ಜನಾಂಗಕ್ಕೆ ಹತ್ತಿರವಾದ ಕರಿಬಣ್ಣದ ಮಂದಿ ನಾವೇ ಕನ್ನಡಿಗರು.

ಉ: ಕಾಣಾ..ಕಣಾ..ಕಣ್ಲಾ..ಕಣೆ

mahesha's picture

ರಾಶ್ಟ್ರಕೂಟದ ಹಲ ಅರಸರ ಹೆಸರೂ ಕೂಡ ಕ್ರಿಶ್ಣ ಎಂದೇ...

ಕಪ್ಪಯ್ಯ => ಕ್ರಿಶ್ಣ!

ಉ: ಕಾಣಾ..ಕಣಾ..ಕಣ್ಲಾ..ಕಣೆ

ಶ್ರೀನಿವಾಸ ವೀ. ಬ೦ಗೋಡಿ's picture

Quote:
ಆರ್ಯ ಜನಾಂಗಕ್ಕೆ ಹತ್ತಿರವಾದ ಕರಿಬಣ್ಣದ ಮಂದಿ ನಾವೇ ಕನ್ನಡಿಗರು

ದ್ರಾವಿಡರೆಲ್ಲರೂ ಕರಿಯರು ತಾನೇ? ಅದು ಹೇಗೆ ಬರಿ ಕನ್ನಡಿಗರಾಗ್ತಾರೆ?

ಉ: ಕಾಣಾ..ಕಣಾ..ಕಣ್ಲಾ..ಕಣೆ

mahesha's picture

ಆರ್ಯ ಜನಾಂಗಕ್ಕೆ ಹತ್ತಿರವಾದ ಕರಿಬಣ್ಣದ ಮಂದಿ ನಾವೇ ಕನ್ನಡಿಗರು

ಉ: ಕಾಣಾ..ಕಣಾ..ಕಣ್ಲಾ..ಕಣೆ

shreekant.mishrikoti's picture

ಶಂ ಬಾ ಜೋಷಿಯವರು
ನಾನೆಲ್ಲ ಕಂ ಅನ್ನೋ ಜನಾಂಗ ,
ನಮ್ಮದು ಕಂನಾಡು
ನಮ್ಮ ನುಡಿ ಕನ್ನುಡಿ
ಅಂತ ಹೇಳ್ತಾರೆ
ಇದಕ್ಕೂ , ಕಣೊ , ಕಣಯ್ಯಾ ಇತ್ಯಾದಿಗೇನಾದ್ರೂ ಸಂಬಂಧ ಇರಬಹುದೋ ಏನೋ ?

ಅಂತೇನೋ ಹೇಳ್ತಾರೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಕಾಣಾ..ಕಣಾ..ಕಣ್ಲಾ..ಕಣೆ

shreekant.mishrikoti's picture

ಮೇಲಿನದನ್ನು

ಶಂ ಬಾ ಜೋಷಿಯವರು
"ನಾನೆಲ್ಲ ಕಂ ಅನ್ನೋ ಜನಾಂಗ ,
ನಮ್ಮದು ಕಂನಾಡು ,
ನಮ್ಮ ನುಡಿ ಕನ್ನುಡಿ"
ಅಂತ ಹೇಳ್ತಾರೆ

ಇದಕ್ಕೂ , ಕಣೊ , ಕಣಯ್ಯಾ ಇತ್ಯಾದಿಗೇನಾದ್ರೂ ಸಂಬಂಧ ಇರಬಹುದೋ ಏನೋ ?

ಅಂತ ಓದಿಕೊಳ್ಳಿ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಉ: ಕಾಣಾ..ಕಣಾ..ಕಣ್ಲಾ..ಕಣೆ

hamsanandi's picture

Quote:
>ಕೃಷ್ಣ ಕನ್ನಡಿಗ ಅನ್ನೋ ಒಂದು ವಾದವಿದೆ. ಕೃಷ್ಣನಿಗೆ ಕಣ / ಕಣಯ್ಯ ಅನ್ನೋ ಹೆಸರೂ ಇದೆ.

ಸವಿತೃ ಅವರೆ,

ಈ ಬಳಕೆ ಎಲ್ಲಿದೆ (ಕರ್ನಾಟಕದ ಯಾವ ಭಾಗದಲ್ಲಿ/ ಅಥವಾ ಯಾವುದಾದರೂ ಪುಸ್ತಕಗಳಲ್ಲಿ ) ಅಂತ ಉದಾಹರಣೆ ಕೊಡ್ತೀರಾ?

ಕೃಷ್ಣನಿಗೆ ತಮಿಳಿನಲ್ಲಿ 'ಕಣ್ಣ' ಅನ್ನುವ ಹೆಸರಿರುವುದಾದರೂ ಕನ್ನಡದಲ್ಲಿ ನಾನಂತೂ ಈ ಬಳಕೆಯನ್ನ ಕೇಳಿಲ್ಲ. ಅದಕ್ಕೇ ಕೇಳುತ್ತಿರುವೆ.

ರಾಷ್ಟ್ರಕೂಟ ರಾಜರುಗಳಲ್ಲಿ ಹಲವರ ಹೆಸರು ಕೃಶ್ಣ ಎಂದಿದ್ದದ್ದು ನಿಜ - ಆದರೆ ಅವರ ಹೆಸರುಗಳೆಲ್ಲ ಕನ್ನಡದಲ್ಲಿ 'ಕನ್ನ' , 'ಕನ್ನರ' ಅನ್ನುವ ಮಾರ್ಪಾಟನ್ನು ಹೊಂದಿವೆಯೇ ಹೊರತು ಕಣ್ಣ ಅನ್ನುವ ರೂಪವನ್ನಲ್ಲ ( ನನಗೆ ತಿಳಿದ ಮಟ್ಟಿಗೆ - ಇದು ತಪ್ಪಾದರೆ ನನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಲು ಅಡ್ಡಿಯೇನಿಲ್ಲ!)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಕಾಣಾ..ಕಣಾ..ಕಣ್ಲಾ..ಕಣೆ

savithru's picture

ಹಂಸಾನಂದಿಯವರೇ..

ನಿಮ್ಮ ಬರಹವನ್ನು ಓದಿದೆ. ತುಂಬ ಆಸಕ್ತಿಕರವಾಗಿದೆ.

>ಬಳಕೆ ಎಲ್ಲಿದೆ (ಕರ್ನಾಟಕದ ಯಾವ ಭಾಗದಲ್ಲಿ/ ಅಥವಾ ಯಾವುದಾದರೂ ಪುಸ್ತಕಗಳಲ್ಲಿ ) ಅಂತ ಉದಾಹರಣೆ ಕೊಡ್ತೀರಾ?

ಬಹುಶ ಶಂ ಬಾ ಜೋಷಿಯವರು ಬರೆದ "ಕನ್ನಡ ನಾಡು ನಡೆದು ಬಂದ ಹಾದಿ" ಟೈಟಲ್ ಸರಿಯಾಗಿ ಗೊತ್ತಿಲ್ಲ. ಮೊನ್ನೆ ಮಿಶ್ರಿಕೋಟಿ ಯವರು ಇದರ ಬಗ್ಗೆ ಬರೆದಿದ್ದರು. ಅದರಲ್ಲಿ ಹೆಚ್ಚಿನ ವಿವರ ಸಿಗಬಹುದು.

ಅಂದ ಹಾಗೆ ನಾನು ಈ ವಿಷಯದಲ್ಲಿ ಕುತೂಹಲಿಗನಾಗಿದ್ದೇನೆ. ಹಾಗಾಗಿ ಈ ವಿಷಯವನ್ನು ಸಂಪದದಲ್ಲಿ ತಂದಿದ್ದು.

ಸವಿತೃ