ಕನ್ನಡಕ್ಕೆ ಅನುವಾದ-೨
ಈ ಕೆಳಗಿನ ವಾಕ್ಯವನ್ನು ಅಷ್ಟೆ ಸುಂದರವಾಗಿ ಕನ್ನಡಕ್ಕೆ ತರಲು ಸಾದ್ಯವೇ?
It is not the Aptitude but the Attitude that decides your Altitude!

- savithru ರವರ ಬ್ಲಾಗ್
- Login or register to post comments
- 356 hits
- Email this blog



ಈ ಕೆಳಗಿನ ವಾಕ್ಯವನ್ನು ಅಷ್ಟೆ ಸುಂದರವಾಗಿ ಕನ್ನಡಕ್ಕೆ ತರಲು ಸಾದ್ಯವೇ?
It is not the Aptitude but the Attitude that decides your Altitude!




ಪ್ರತಿಕ್ರಿಯೆಗಳು
ಉ: ಕನ್ನಡಕ್ಕೆ ಅನುವಾದ-೨
"ನಿಮ್ಮ ಉನ್ನತಿಯನ್ನು ನಿರ್ಧರಿಸುವುದು ಮನೋಭಾವವೇ ಹೊರತು ಸಾಮರ್ಥ್ಯವಲ್ಲ."
ಎನ್. ಅಂಜನ್ ಕುಮಾರ್
thewiseant@yahoo.co.in
yahoo messenger ನಲ್ಲೂ ಲಭ್ಯ
ಉ: ಕನ್ನಡಕ್ಕೆ ಅನುವಾದ-೨
ಒಲವಲ್ಲ ನಿಲುವಿಂದಲೇ ನಿನ್ನೆತ್ತರದ ನಿರ್ಣಯ
-ಚೆನ್ನಾಗಿಲ್ಲ. ಆದರೂ ಹಾಕ್ತಿದೀನಿ
ಉ: ಕನ್ನಡಕ್ಕೆ ಅನುವಾದ-೨
ಇಷ್ಟು ಚೆನ್ನಾಗಿ ಅನುವಾದಿಸಿ,ಚೆನ್ನಾಗಿಲ್ಲ ಆದರೂ ಹಾಕ್ತೀನಿ ಅಂತೀರಲ್ಲಾ!
*ಅಶೋಕ್
ಉ: ಕನ್ನಡಕ್ಕೆ ಅನುವಾದ-೨
ನಿನ್ನ ಗೆಲುವನ್ನು ತೀರ್ಮಾನಗೈವುದು, ಬಲವಲ್ಲ ಅದು ನಿನ್ನ ನಿಲುವು.
ಉ: ಕನ್ನಡಕ್ಕೆ ಅನುವಾದ-೨
Attitude = A complex mental state involving beliefs and feelings and values and dispositions to act in certain ways
Aptitude = Inherent ability
೧) ಮೆದುಳಪದುಳ = mental state ( ವಸಿ ಪ್ರಾಸನೂ ಅಯ್ತಿ ಕಣ್ರಪ್ಪೊ)
೨) ability (ನಾ) 1) ಸಾಮರ್ಥ್ಯ, ಅಳವು 2) ಜಾಣ್ಮೆ, ಅರಿವು 3) ಬಹುನೈಪುಣ್ಯ, ಕೌಶಲ
ಸದ್ಯಕ್ಕೆ ಇದು ಹೊಳೆಯಿತು.
ನಿನ್ನೆತ್ತರ ಅಳವಲ್ಲ, ನಿನ್ನ ಮೆದುಳಪದುಳ.
ಹಲವು ಸಲ 'ಳ' ಕೇಳ್ಸುತ್ತೆ. (ಇಂಗಲೀಸನಲ್ಲಿ ಓದಿದಾಗ ಹಲವು ಸಲ 'ttitu' ಕೇಳ್ಸುತ್ತೆ . attitude, altitude,aptitude)
ಚೆನ್ನಾಗಿತ್ತು ಕನ್ನಡಯ್ಸುವ ಆಟ. ಹೀಗೆ ಹಾಕ್ತ ಇರಪ್ಪ ಸವಿತ್ರು
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡಕ್ಕೆ ಅನುವಾದ-೨
>>ಚೆನ್ನಾಗಿತ್ತು ಕನ್ನಡಯ್ಸುವ ಆಟ. ಹೀಗೆ ಹಾಕ್ತ ಇರಪ್ಪ ಸವಿತ್ರು
ವೈಭವನ ಪ್ರಯತ್ನ ಮತ್ತು ಹುರುಪು ಹೀಗೆ ಇರಲಿ!
ಎಲ್ಲೋ ಒಂದು ಕಡೆ ನನ್ನ ಮಾತೃ ಭಾಷೆ ಕನ್ನಡದಿಂದ ಇಂಗ್ಲೀಶ್ ಗೆ ಬಸಲಾಗುತ್ತಿದೆ ಅನ್ನೋ ಹೆದರಿಕೆ ನನ್ನಲ್ಲಿದೆ. ಮೊನ್ನೆ ಮೊನ್ನೆ ವರೆಗೂ ನಾನು ಕನ್ನಡದಲ್ಲಿ ಯೋಚಿಸಿ ಇಂಗ್ಲೀಷಿಗೆ ಅನುವಾದ ಮಾಡಿ ಮಾತನಾಡುತ್ತಿದ್ದೆ. ಆದರೆ ಈಗ ಕೇಳುವ, ಯೋಚಿಸುವ ಮತ್ತು ಮಾತನಾಡುವ ಭಾಷೆಗಳು ಪೂರ್ತಿ ಇಂಗ್ಲೀಷೆ ಆಗಿದೆ.
ಈ ಕೃತಕ ಪ್ರಯತ್ನಗಳಿಂದಲಾದರೂ ನನ್ನ ( ಮತ್ತು ಸಂಪದಿಗರ?!) ತಲೆಯಲ್ಲಿ ಕನ್ನಡ ಸುಳಿದಾಡಲಿ ಎನ್ನುವುದೇ ಈ ಅನುವಾದ ಸರಣಿಯ ಪ್ರಯತ್ನ!
ರಿಪ್ಲ್ಯ್ ಮಾಡುವ ಎಲ್ಲ ಸ್ನೇಹಿತರಿಗೂ ನನ್ನೀ!
ಸವಿತೃ
ಉ: ಕನ್ನಡಕ್ಕೆ ಅನುವಾದ-೨
ವೈಭವ್ ಅವರೆ,
ನಿಮ್ಮ ಎಷ್ಟೊಂದು ಪ್ರತಿಕ್ರಿಯೆಗಳನ್ನು ಓದಿದ್ದೀನಿ.. ನೀವು ಕನ್ನಡ ಪದಗಳ ಬಗ್ಗೆ ಮಾಡಿರೋ ರೀಸರ್ಚ್ ನಿಜಕ್ಕೂ ಅಶ್ಚರ್ಯಕರ...
ನಿಮ್ಮ ಬರವಣಿಗೆ ಓದ್ತಾ ಇದ್ರೆ, ನನಗೆ ಕನ್ನಡದ ಬಗ್ಗೆ ಏನೂ ತಿಳಿದೇ ಇಲ್ಲವೇನೋ ಅನ್ನಿಸೋಕೆ ಶುರು ಆಗುತ್ತೆ...
ಈ ಗಾದೆಗೆ ನಂದೂ ಒಂದು ಅನುವಾದ..
"ಹಣಕ್ಕಿಂತ ಗುಣ ಮುಖ್ಯ"
ಇದಕ್ಕೂ ಗಾದೆಗೂ ಏನು ಸಂಬಂಧ ಇಲ್ಲ ಅಂತ ನನಗೇ ಅನ್ನಿಸ್ತಾ ಇದೆ.. ಅದರೂ ಬರೆದಿದ್ದೀನಿ..... ಕ್ಷಮಿಸಿ...
-ವರುಣ ಭಟ್
ಉ: ಕನ್ನಡಕ್ಕೆ ಅನುವಾದ-೨
ವರುಣ್,
ನಿಮ್ಮ ನಲ್ನುಡಿಗಳಿಗೆ ನನ್ನ ತಲೆವಾಗು.
ಇದರಲ್ಲಿ ಅಚ್ಚರಿಯೇನಿಲ್ಲ. ಈ ಪದಗಳ ಬಗ್ಗೆ ಹುಚ್ಚು ಹತ್ತಿದ್ದು ಸುನಿಲ (ಚನ್ನೀಲ), ಮಹೇಶ(ಮಾಯ್ಸ) ರ ಒಡನಾಟದಿಂದ.
ಎಲ್ಲ ಒರೆಗಳು/ಪದಗಳನ್ನು ಹುಡುಕಲು ಕೊಳಂಬೆಯವರ ನುಡಿಗಂಟು ಇದ್ದೇ ಇದೆ.
ಇನ್ನು ಸಿರಿವಿಜಯನ ಕವಿರಾಜಮಾರ್ಗ, ನಯಸೇನನ ದರ್ಮಾಮ್ರುತಂ ಇವೆಲ್ಲ ಓದುತ್ತಿದ್ದರೆ ಎಂತ ದಡ್ಡನು ಅಗ್ಗಳನಾಗುವುದರಲ್ಲಿ ಅಚ್ಚರಿಯೇನಿಲ್ಲ.
ಎನಗಿಂತ ಕಿರಿಯರಿಲ್ಲ.
ಇನ್ನೊಂದು ಕನ್ನಡಯ್ಸು ಹೊಳೆಯಿತು
ಅಗ್ಗಳಿಕೆ ಅಳವಿನಿಂದಲ್ಲ, ಮೆದುಳಪದಳದಿಂದ (ಅಗ್ಗಳಿಕೆ= ಶ್ರೇಶ್ಟತನ)
ಎತ್ತರ =altitude = ಹಿರಿತನ = ಶ್ರೇಶ್ಟ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡಕ್ಕೆ ಅನುವಾದ-೨
ನೋಡಿ
aptitude = ಜಾಣತನ
attitude = ಒಳ್ಳೆತನ
altitude = ಹಿರಿತನ
ಜಾಣತನವೇನೇ ಇರಲಿ, ಒಳ್ಳೆತನವೇ ಹಿರಿತನ
ಜಾಣತನವಲ್ಲ, ಒಳ್ಳೆತನವೇ ಹಿರಿತನ
ಹಿರಿತನವಿರುವುದು ಒಳ್ಳೆತನದಲ್ಲಿ, ಬರೀ ಜಾಣತನದಲ್ಲಲ್ಲ
ಇನ್ನು.. ಈ ಮೂರು ಒರೆಗಳನ್ನು ಆಚೀಚೆ ಮಾಡಿ, ಒಳ್ಳೆಯ ಚೆಲುವಾದ ಸಾಲು ಮಾಡಿಕೊಳ್ಳಿ.
ಉ: ಕನ್ನಡಕ್ಕೆ ಅನುವಾದ-೨
ಅಚ್ಚ ಕನ್ನಡದಲ್ಲಿ ಹೀಗೆನ್ನಬಹುದು:
ಅರಿವಿಗೆ ನಿಲುಕದು ನಿಲುವಿನ ನೆಲವು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಕನ್ನಡಕ್ಕೆ ಅನುವಾದ-೨
ಚನ್ನಾಗಿದೆ!
ಉ: ಕನ್ನಡಕ್ಕೆ ಅನುವಾದ-೨
ಬೆನಕರಿಂದ ಹುರುಪು ಪಡೆದು ಯೋಚಿಸಿದಾಗ ಹೊಳೆದದ್ದು.
ಅರಿವಿಗೆ ಮೀರಿದ ನಿಲುವಿನಲಿ ಗೆಲುವಿನ ನಲಿವು!
ಉ: ಕನ್ನಡಕ್ಕೆ ಅನುವಾದ-೨
ಬೆಳೆಯೋಕ್ಕೆ ಕಡತಕ್ಕಿಂತ ನಡತೆ ಲೇಸು