ಚುನಾವಣಾ ಭವಿಷ್ಯ
೨ನೆ ತರಗತಿ ಓದುತ್ತಿರೋ ನನ್ನ ಅಳಿಯನಿಗೂ ಈ ರಾಜಕೀಯದ ಅರಿವಿದೆ
. ಒಮ್ಮೆ ಅವ್ನೆ 'ನನಗೆ ಬಿ ಜೆ ಪಿ, ಕಾಂಗ್ರೆಸ್ , ಜೆ ಡಿ ಎಸ್ .. ಮೂರು ಪಕ್ಷಗಳು ಗೊತ್ತು , ಬೇರೆ ಯಾವಿದವೆ?" ಅಂತ ಕೇಳಿದ. ನಂಗೆ ಗೊತ್ತಿರೋ ಉತ್ತರ ಕೆಲವು ಪಕ್ಷಗಳ ಹೆಸರು ಸೇರಿಸಿ ಹೇಳಿದೆ.
ನಿನಗೆ ಯಾವ ಪಕ್ಷ ಇಷ್ಟ ಅಂತ ಕೇಳಿದೆ.. ಅದಕ್ಕೆ ಅವನು ಕಾಂಗ್ರೆಸ್ ಅಂದ!
ಸರಿ, ಈ ಸಾರಿ ಯಾರು ಎಷ್ಟು ಎಷ್ಟು ಸೀಟ್ ಗೆಲ್ತಾರೆ ಅಂದೇ. ಅದಕ್ಕೆ ಅವನು ಬಿ ಜೆ ಪಿ ಗೆ 113 ಸೀಟ್ , ಕಾಂಗ್ರೆಸ್ ಗೆ ೫೩ ಸೀಟ್ ಅಂತ ಖದಕ್ಕಾಗಿ ಹೇಳಿದ. ಉಳಿದವು ಯಾರಿಗೆ ,
ಜೆ ಡಿ ಎಸ್ ಗೆ ಉಳಿದವಾ? ಅಂದೇ .. ಅದಕ್ಕೆ ಅವನು ಊ.. ಅಂದ!.
ಇದು ನನ್ನ ವೈಯಕ್ತಿಕ ಬ್ಲಾಗು. ಇಲ್ಲಿ ಎಲ್ಲದಕ್ಕೂ ಸ್ಥಳವಿದೆ ಅಂದುಕೊಂಡು ಬರ್ದಿದೀನಿ.
'ಲೆಕ್ಕ ಸರಿಯಾಗಿ ಕಲಿಯದ' ಈ ಜ್ಯೋತಿಷಿಗಳ ಭವಿಷ್ಯವಾಣಿ ಗಿಂತ ಚಿಕ್ಕ ಮಕ್ಕಳ ಮಾತುಗಳು ಹೆಚ್ಚು ನಂಬಲು ( ಭವಿಷ್ಯವಾಗಿ) ಅರ್ಹ ಅಂತ ನನ್ನ ನಂಬಿಕೆ.

- savithru ರವರ ಬ್ಲಾಗ್
- Login or register to post comments
- 200 hits
- Email this blog





RSS:
ಪ್ರತಿಕ್ರಿಯೆಗಳು
ಉ: ಚುನಾವಣಾ ಭವಿಷ್ಯ
ಅಂತಹ ಚಿಕ್ಕ ಮಕ್ಕಳ ಮಾತು, ಕನಸುಗಳೇ ಈ ದೇಶದ ಭವಿಷ್ಯ ಅಲ್ಲವೇ...
ಇದೆನಾದ್ರು ನಿಜ ಆಗ್ಬಿಟ್ರೆ ರಾಜಕಾರಣಿಗಳು ನಿಮ್ಮನೆ ಮುಂದೆ ಸಾಲಾಗಿ (???) ನಿಂತುಬಿಡ್ತಾರೆ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಚುನಾವಣಾ ಭವಿಷ್ಯ
>>ನಿಮ್ಮನೆ ಮುಂದೆ ಸಾಲಾಗಿ (???) ನಿಂತುಬಿಡ್ತಾರೆ
ಅಲ್ಲ .. ಎಲ್ರೂ ಜ್ಯೋತಿಶಿಗಳನ್ನು ಬಿಟ್ಟು ಕಂಡ ಕಂಡ ಚಿಕ್ಕಮಕ್ಕಳ ಮುಂದೆ ನಿಲ್ತಾರೆ!
.. ಹಂಗೆ ಆದ್ರೆ ಎಷ್ಟೋ ಚೆನ್ನ ಅಲ್ವ?!
ಸವಿತೃ
ಉ: ಚುನಾವಣಾ ಭವಿಷ್ಯ
ಚಿಕ್ಕ ಮಕ್ಕಳು ಜೋತಿಷಿಗಳಾಗುತ್ತಾರಾ? ಇದರಲ್ಲಿ ಮಕ್ಕಳ ಮುಗ್ಧತೆ ಏನು ಬಂತು? ಎಲ್ಲಕ್ಕೂ ನಮ್ಮ ಮಾಧ್ಯಮಗಳಿಗೆ ಕ್ರೆಡಿಟ್ ಕೊಡಬೇಕು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com