ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಕಬ್ಬಿಣ ನಮ್ಮ , ಮರಗಿಡಗಳ ಜೀವನಾಧಾರವಾದ ಧಾತು ( vital element) ಎಂದು ನಮಗೆಲ್ಲ ತಿಳಿದೇ ಇದೆ. ನಮ್ಮ ರಕ್ತದಲ್ಲಿನ Hemoglobinನ ಮುಖ್ಯ ಅಂಶ ಇದು. ಆಮ್ಲಜನಕ-ವಾಹಕ ವಾಗಿ ಕೆಲಸ ಮಾಡುತ್ತೆ. ನಾವು ಬಳಸುವ ಬಹುಪಾಲು ಸಲಕರಣೆಗಳಲ್ಲಿ ಕಬ್ಬಿಣ ಇದೆ. ಆದಿಮಾನವ ಕಾಲದಿಂದಲೂ ಕಬ್ಬಿಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
ಇಂತಹ ಕಬ್ಬಿಣ ನಕ್ಶತ್ರಗಳನ್ನ ಕೊಲ್ಲುತ್ತೆ ಅಂದ್ರೆ ನಂಬ್ತೀರಾ ......ಆದರೆ .........ಇದು ನಿಜ.
ಕಬ್ಬಿಣ "periodic table" ನ ಅತಿ ಮುಖ್ಯ ಧಾತು.
Atomic Number: 26
Symbol: Fe
Atomic Weight: 55.847
ಇದು neclear fusion ದೃಷ್ಟಿ ಇಂದ ಅತ್ಯಂತ ಸ್ಥಿರವಾದ ( stable element) ಧಾತು.
ಈಗ ಸ್ವಲ್ಪ ವಿವರವಾಗಿ ನೋಡೋಣ .
ಈಗ ಎರಡು ಪ್ರೊಟಾನ್ ಗಳನ್ನ ತಗೊನ್ಡು ಒಂದಕ್ಕೊಂದು ಡಿಕ್ಕಿ ಹೊಡಿಸಿದರೆ , ನಾನು dutorium (2 H ಒಂದು ಅನಿಲ) ಪಡೆಯಬಹುದು. (ಸೂರ್ಯನ ಓಡಲಾಳದಲ್ಲೂ (core) ಹೆಚ್ಚಿನ ಭಾಗ ಇದೆ ನಡೆಯುವುದು). ಮತ್ತೆ ನಾನು ಈ ಡ್ಯುಟೊರಿಯಮ್ ಅನ್ನು ಹೆಚ್ಚು ಪ್ರೊಟಾನ್ ಗಳೊನ್ದಿಗೆ ಒಂದಕ್ಕೊಂದು ಡಿಕ್ಕಿ ಹೊಡಿಸಿದರೆ helium ( He) ಪಡೆಯಬಹುದು. ಹೀಗೇನೆ ಮಾಡ್ತಾ ಮುಂದುವರೆದರೆ..ಇಂಗಾಲ (corbon) , Megnesium, ಆಮ್ಲಜನಕ ( Oxygen) ... ಹೀಗೆ ಪೀರಿಯಾಡಿಕ್ ಟೇಬಲ್ ನ ಕಬ್ಬಿಣದವರೆಗೆ Atomic Weight ಇರುವ ಎಲ್ಲ ಧಾತುಗಳನ್ನ ಪಡೆಯುತ್ತಾ ಬರಬಹುದು. ಆದರೆ ನಾವು ಇಲ್ಲಿ ಇಂದು ಸನ್ಗತಿಯನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಅದೇನೆಂದರೇ ನಾವು ಪಡೆಯಬಹುದಾದ ಧಾತುಗಳು ಕಬ್ಬಿಣದ ( ಒಮ್ಮೆ ಪೀರಿಯಾಡಿಕ್ ಟೇಬಲ್ ನಲ್ಲಿರುವ ಧಾತುಗಳನ್ನ ನನಪಿಸಿಕೊಳ್ಳೀ) ವರೆಗೆ ಮಾತ್ರ!.
ಪ್ರತಿ ಸರಿನೂ ನಾನು ಮೇಲಿನ ಧಾತುಗಳನ್ನ ಮತ್ತೆ ಪ್ರೋಟಾನ್ ಗಳನ್ನ ಡಿಕ್ಕಿ ಹೊಡೆಸಿದಾಗ ನನಗೆ ಅದು ಶಕ್ತಿ ( Energy) ಯನ್ನ ಬಿಡುಗಡೆ ಮಾಡುತ್ತೆ . ಈ reactions ಗಳು exo-thermic ( In thermodynamics, the word exothermic describes a process or reaction that releases energy in the form of heat ) . ಅಂದ್ರೆ ಹೆಚ್ಚೆಚ್ಚು ರಿಯಾಕ್ಷನ್ ಗಳು ನಡದಷ್ಟೂ ಹೆಚ್ಚು ಶಕ್ತಿ ಹೊರಬರುತ್ತೆ. ಸೂರ್ಯ ತನ್ನಲ್ಲಿನ ಶಕ್ತಿಯನ್ನ ಪಡೆಯುವುದು ಈ ಮಾರ್ಗವಾಗಿಯೇ!.
ಆದ್ರೆ ಕಬ್ಬಿಣ ಇಲ್ಲಿ ಒಂದು ದೊಡ್ಡ ಪ್ರಾಬ್ಲಮ್!.
ಉದಾಹರಣೆಗೆ ಮೇಲೆ ಹೇಳಿದನ್ತ ರಿಯಾಕ್ಷನ್ನು ಗಳಿಂದ ಕಬ್ಬಿಯ ಬಂದಿದೆ ಎಂದುಕೊಳ್ಳಿ. ನಕ್ಷತ್ರ ಈ ಕಬ್ಬಿಣ ವನ್ನೂ fusion ಪ್ರಕ್ರಿಯೆಗೆ ಒಳಪಡಿಸುತ್ತೆ. ಯಾವಾಗ ಕಬ್ಬಿಣದ fusion ಶುರುವಾಯ್ತೋ ಆಗ ಶುರುವಾಗುತ್ತೆ ನೋಡಿ ನಕ್ಷತ್ರ ದ ಸಂಕಟ!. ಈ ಕಬ್ಬಿಣ ಫ್ಯೂಷನ್ ಸಮಯದಲ್ಲಿ ಶಕ್ತಿಯನ್ನು ಒಳಗೆ ತೆಗೆದು ಕೊಳ್ಳುತ್ತೆ. ಅಂದ್ರೆ ನೀವು ಕಬ್ಬಿಣ ವನ್ನು ಫ್ಯೂಷನ್ ಪ್ರಕ್ರಿಯೆಗೆ ಒಳಪಡಿಸಿದರೆ ನೀವು ಶಕ್ತಿಯನ್ನ ಹೊರಗೆಡವುದರ ಬದಲು ಹೊರಗಿನ ಎನರ್ಜೀ ಯನ್ನ ಸೆಳೆದುಕೊಳ್ಳುತ್ತೀದೇರೆಂದೇ ಅರ್ಥ!. ಇದು ನಕ್ಷತ್ರ ಡ ಆರೊಗ್ಯಕ್ಕೇ ಹಾನಿಕರ... ಕಬ್ಬಿಣ ತಯಾರು ಮಾಡಲು ಶುರು ಮಾಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಆ ನಕ್ಷತ್ರ ಸಾಯುತ್ತೆ! ...ಏಕೆಂದರೆ ಮುಂಚೆ ಹೊರಬರುತ್ತಿದ್ದ ಶಕ್ತಿ ಆ ನಕ್ಷತ್ರ , ಅದರ ಗ್ರಾವಿಟಿ ಗೆ ಆಧಾರವಾಗಿತ್ತು. ಈ ಕಬ್ಬಿಣ ಅಂತ ನಕ್ಷತ್ರದ ಶಕ್ತಿಯೆನ್ನಲ್ಲಾ ಒಳಗೆಳುದುಕೊಳ್ಳಿತ್ತಿದೆ!, ಅಂದ್ರೆ ಜೀವಾಧಾರವಾದ ಗ್ರಾವಿಟಿಯನ್ನೆ ತಿಂದು ನೀರು ಕುಡಿತಾ ಇದೆ!!. .. ಹೀಗಾಗಿ ನಕ್ಷತ್ರ ಪತನ ಗೊಳ್ಳುತ್ತದೆ.
ಈ ಪತನ "super nova explosion" ಗೆ ಪೂರ್ವ ಭಾವಿ ಸಿದ್ದತೆ!
ಈ ಪತನ ಎಷ್ಟು ರಭಸವಾಗಿ/ ಭಯಾನಕವಾಗಿ ಇರುತ್ತೆ ಅಂದ್ರೆ ನಕ್ಷತ್ರ ದ core ( ಇಲ್ಲೇನೆ ಎಲ್ಲ ಫ್ಯೂಸನ್ಸ್ , ರಿಯಾಕ್ಷನ್ಸ್ ನಡೆಯೋದು) ( ಓಟೆ ಅಂತ ಕರೀಬಹುದಾ?!) ಕೂಡ ಪತನವಾಗುತ್ತೆ. ಅದರ ಸುತ್ತ ಮುತ್ತಲಿನ ಎಲ್ಲ ಅಂಗ ವಸ್ತುಗಳೂ ಆ ಕೋರ್ ನ ಸುತ್ತಮುತ್ತಲೇ ಪತನ ಗೊಳ್ಲುತ್ತವೆ. ಈಗ ಈ ಓಟೆ ಯ ತಾಪ ಅದೆಷ್ಟು ಹೆಚ್ಚಾಗುತ್ತಪ್ಪ ಅಂದ್ರೆ .. ಆ ನಕ್ಷತ್ರ ಈ ಜಗತ್ತಿನ / ನಮಗೆ ಗೊತ್ತಿರುವ/ಗೊತ್ತಿಲ್ಲದದಿರುವ ಪ್ರತಿಯೊಂದು ಧಾತುಗಳನ್ನ, ರಾಸಾಯನಿಕಗಳನ್ನ, ವಸ್ತುಗಳನ್ನ ಫ್ಯೂಸ್ ಮಾಡುತ್ತೆ ( ಉತ್ಪತ್ತಿ ಮಾಡುತ್ತೆ). ಅದೂ ಕೆಲವೇ ಕ್ಷಣಗಳಲ್ಲಿ.. in no seconds ಅಂತಾ ಹೇಳ್ಬಹುದು!.
ಮುಂದುವರೆಯುತ್ತೆ...

- savithru ರವರ ಬ್ಲಾಗ್
- Login or register to post comments
- 590 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಇನ್ನೊಂದ್ ಸ್ವಲ್ಪ .....
ನಾವು ಭಾರತೀಯರು ಚಿನ್ನ ಪ್ರಿಯರು! ಆದ್ರೆ ಚಿನ್ನದ ಬಗ್ಗೆ ಒಂದು ಸೋಜಿಗದ ವಿಷ್ಯ ಏನಪ್ಪಾ ಅಂದ್ರೆ....
ಇಡೀ ಜಗತ್ತಿನಲ್ಲಿ ಚಿನ್ನವನ್ನು ಉಂಟುಮಾಡುವ ಏಕೈಕ ಕ್ರಿಯೆ ಅಂದರೆ " super Nova Explosion" ಅಂತೆ! ಈ ಚಿನ್ನ ಇರಬಹುದು, ಬೆಳ್ಳಿ ಇರಬಹುದು, ಅತ್ವಾ ನಮ್ಮ ರಕ್ತದ ಕಣಗಳಲ್ಲಿರುವ ಕಬ್ಬಿಣ ಇರಬಹುದು.. ಇವೆಲ್ಲ ಸೂಪರ್ ನೋವ ಸ್ಫೋಟ ದ ಸಮಯದಲ್ಲಿ ಹುಟ್ಟಿದ್ದಂತೆ!
ಹಾಗೆನೇ .. ನಮ್ಮ ನಾಡಿನಲ್ಲಿ ಅಲ್ಲಲ್ಲಿ ನಡೆದ ಪಾದರಸದಿಂದ ಚಿನ್ನ ಉತ್ಪತ್ತಿ ಮಾಡುವ ಪ್ರಯತ್ನಗಳು, ಮತ್ಟೇನಿಂದನೋ ಚಿನ್ನ ಮಾಡುವ ಪ್ರಯತ್ನಗಳು ನೆನಪಿಗೆ ಬಂದವು!
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ನಿಮ್ಮ ಬರಹ ಚನ್ನಾಗಿ ಮೂಡಿ ಬಂದಿದೆ. ಚಿನ್ನದ ಬಗ್ಗೆ ಮಾತಾಡುವಾಗ ನೆನಪಾದದ್ದು ಭೂಮಿಯ ಮೇಲೆ ಹೇರಳವಾಗಿ ಸಿಗುವ ನೀರು. ಶೇ.೭೦ರಷ್ಟು ಭೂಮಿಯನ್ನು ಆವರಿಸುವ ಮತ್ತು ನಮಗೆ ಜೀವ ನೀಡುವ ನೀರೂ ಸಹ outer spaceನಿಂದ ಬಂದದ್ದೆಂದು ಹೇಳುತ್ತಾರೆ. ಧೂಮಕೇತುಗಳಿಂದ ಮತ್ತು asteroid ಗಳಿಂದ (ಇದಕ್ಕೆ ಕನ್ನಡದ ಸರಿಯಾದ ಪದವೇನು?) ನಮ್ಮ ಜಗತ್ತಿಗೆ ನೀರು ಬಂತು ಎನ್ನುವ ಊಹೆಯಿದೆ.
ಕಾರ್ಲ ಸೇಗನ್ ಹೇಳಿದ್ದನ್ನ ನೋಡಿ: "we are, all of us, made of star-stuff". ನಮ್ಮ ದೇಹದಲ್ಲಿರೋ ಕಣ ಕಣವೂ ಕೋಟ್ಯಾಂತರ ವರ್ಷಗಳ ಹಿಂದೆ ಬ್ುಹ್ಮಾಂಡದ ನಕ್ಷತ್ರಗಳ ಬೆಂಕಿಯಲ್ಲಿ ಹುಟ್ಟಿದ್ದು!!
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಪ್ರತಿಕ್ರಿಯೆಗೆ ವಂದನೆಗಳು.
ನೀರು ಬೆಂಕಿಯಲ್ಲಿ ಹುಟ್ಟಿದ್ದು.. ನಿಮ್ಮ ಈ ವಾಕ್ಯ ಮೊದಲ ಕ್ಷಣಕ್ಕೆ ವಿಚಿತ್ರವಾಗಿ ಕಂಡರೂ ಅದು ನಿಜವಾಗಿರಬಹುದು ಎಂದು ಅನಿಸುತ್ತದೆ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ನೀರು ಬೆಂಕಿಯಲ್ಲಿ ಹುಟ್ಟಿದ್ದು ಎಂದು ಹೇಳ್ತಾ ಇಲ್ಲ. ನಮ್ಮ ದೇಹದಲ್ಲಿರೋ ಅಣುಗಳು (ಪ್ರತ್ಯೇಕವಾಗಿ ನೋಡಿದಾಗ) ನಕ್ಷತ್ರದ ಬೆಂಕಿಯಲ್ಲಿ ಹುಟ್ಟಿದ್ದು ಅಂತಾ ಇದ್ದೆ. ವಿಶ್ವದ ಯಾವ ಭಾಗದಲ್ಲಿ? ಯಾವ ತಾರಾಗಣದಲ್ಲಿ? ಎಂದು ಯೋಚಿಸುವುದೇ ಒಂದು ದಿವ್ಯವಾದ ವಿಷಯವೆನಿಸುತ್ತದೆ. organic compounds ಮತ್ತು ನೀರು ಬೇರೆ ರೀತಿ/ಸಮಯದಲ್ಲಿ ಹುಟ್ಟಿರಬಹುದು. ಭೂಮಿಗೆ ಧೂಮಕೇತುಗಳಿಂದ ನೀರು ಬಂತು ಅನ್ನುವುದು ಸ್ವಲ್ಪ ಹೊಸ ವಾದ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಭೂಗರ್ಭ ಶಾಸ್ತ್ರಜ್ಞರು ( GeoChemists ಗಳನ್ನು ಹೀಗೆ ಕರೆಯಬಹುದೇ?) ಈ ಧಾತುಗಳನ್ನು ನಾಲಕ್ಕೂ ಮುಖ್ಯ ವಿಧಗಳನ್ನಾಗಿ ವಿಂಗಡಿಸಿದ್ದಾರೆ.
1. "Lithophile" (Greek for "rock-loving") ...
2. "Siderophile" (Greek: "iron-loving") ..
3."Chalcophile" (Greek: "sulfur-loving") ..
4."Volatile" elements, or "volatiles"
1. ಶಿಲೆಯೊಲುಮೆಯ ಧಾತುಗಳು
2. ಕಬ್ಬಿಣದೊಲುಮೆಯ ಧಾತುಗಳು.
3.ಗಂಧಕ ದೊಲುಮೆಯ ಧಾತುಗಳು.
4.ಚಂಚಲ ಧಾತುಗಳು!
ನಾನು ಹೀಗೆ ಅನುವಾದ ಮಾಡಿದ್ದೇನೆ. ದಯವಿಟ್ಟು ತಪ್ಪಿದ್ದರೆ ಪ್ರತಿಕ್ರಿಯಿಸಿ.
ವಿಜ್ಞಾನಿಗಳ ಪ್ರಕಾರ ಈ ಕಬ್ಬಿಣದೊಲುಮೆಯ ಧಾತುಗಳು ( ಕಬ್ಬಿಣ, ಚಿನ್ನ, ತಾಮ್ರ, ನಿಕ್ಕಲ್, ಕೋಬಾಲ್ಟ್, ಪ್ಲಾಟಿನಮ್ ಇತ್ಯಾದಿ ಭಾರವಾದ ಧಾತುಗಳು) ಮಾರ್ಪಾಡಾಗುವಂತಹ ವಾತಾವರಣ "ನಕ್ಷತ್ರ ದ ಕುಸಿತ" ದಂತ ಸಮಯ ಅಷ್ಟೇ.. ಬೇರೆ ಕಡೆ ಅಂತಹ ವಾತವರಣ ಸೃಷ್ಟಿ ಸಾಧ್ಯವಿಲ್ಲ. ನೀರು Volatile" element ವಿಭಾಗದಲ್ಲಿ ಬರುತ್ತದೆ. ಇದರ ಉತ್ಪತ್ತಿ ಭೂಮಿಯ ಆಚೆ ಹಾಗಿರಬಹುದಾದ್ರೂ "ನಕ್ಷತ್ರ ದ ಪತನ" ದ ಸಮಯದಲ್ಲೂ ಹಾಗಿದೆ ಎಂದು ಖಡಾ ಕಂಡಿತವಾಗಿ ಹೇಳಲು ಸಾಧ್ಯವಿಲ್ಲ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಸವಿತೃರವರೆ,
ಕಷ್ಟವಾದ ವಿಷಯವನ್ನು ಹೇಳಲು ನೀವು ಆರಿಸಿಕೊಂಡ ಮಾತಿನ ಧಾಟಿ ತುಂಬಾ ಇಷ್ಟವಾಯಿತು.
ನಿಮ್ಮ ಮುಂದಿನ ಬರಹಕ್ಕೆ ಎದುರುನೋಡುತ್ತಿದ್ದೇನೆ.
ವಂದನೆಗಳು.
ಕೊಂಚ ಪದಗಳಲ್ಲಾಗಿರುವ ತಪ್ಪುಗಳನ್ನು ತಿದ್ದಲಾಗುತ್ತದೆಯೇ ನೋಡಿ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ತಲೆಯಲ್ಲಿರುವ ವಿಷಯಗಳನ್ನು ಬರವಣಿಗೆಗೆ ತರುವುದು ಸ್ವಲ್ಪ ಕಷ್ಟದ ಕೆಲಸ. ಬರವಣಿಗೆಯ ವೇಗ , ಚಿಂತನೆ/ ಯೋಚನೆಗಳ ವೇಗಕ್ಕಿಂತ ತುಂಬಾ ಕಡಿಮೆ. "synchronization" ನಲ್ಲಿ ಸ್ವಲ್ಪ ತೊಂದರೆ.
ಹೆಚ್ಚಿನ ಓದುಗಳು, ಪ್ರತಿಕ್ರಿಯೆಗಳು modern physics / metaphysics ವಿಷಯಗಳನ್ನು ಕನ್ನಡಕ್ಕೆ ತರಲು ಉತ್ತೇಜಿಸುತ್ತವೆ!. ಬರೆಯಲು ಪ್ರಯತ್ನಿಸುವೆ
ಪದಗಳಲ್ಲಾಗಿರುವ ತಪ್ಪುಗಳನ್ನು ಸಧ್ಯದಲ್ಲೇ ತಿದ್ದುತ್ತೇನೆ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಸವಿತೃ ಅವರೆ,
ಬರಹ ಚೆನ್ನಾಗಿ ಬಂದಿದೆ
-ಹಂಸಾನಂದಿ
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಪ್ರಿಯ ಸವಿತೃ,
"ಹಿರಣ್ಯಗರ್ಭ" ಎಂಬುದು ವೇದಗಳಲ್ಲಿ ಕಂಡುಬರುವ ಸೂರ್ಯನ ಹೆಸರು. ಒಂದು ರೀತಿಯಲ್ಲಿ ನಮ್ಮ ಪೂರ್ವಿಕರು ನಕ್ಷತ್ರಗರ್ಭದಲ್ಲಡಗಿದ ಧಾತುಗಳನ್ನು ಕಂಡುಕೊಂಡು ಈ ರೀತಿಗಳಲ್ಲಿ ಹೇಳಲೆತ್ನಿಸಿರಬಹುದೇ?ಸೋಜಿಗ! ಅದೇ ಸಕ್ಕದದ "ಹಿರಣ್ಯಂ" ಗ್ರೀಕರ "ಹೀಲಿಯಂ" ಎನ್ನುವವರಿದ್ದಾರೆ. ಇಂದಿಗೂ ಗ್ರೀಕರ ರವಿಗೆ "ಹೀಲಿಯಸ್" ಎಂದೇ ಹೆಸರಲ್ಲವೇ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಹಿರಣ್ಯಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ | ತತ್ತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ || ಅಂತ ಈಶಾವಾಸ್ಯೋಪನಿಷತ್ತಿನಲ್ಲಿ ಬರತ್ತೆ ಅನ್ಸತ್ತೆ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಬೆನಕರೇ,
ಹಿರಣ್ಯಗರ್ಭದ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ನಿಮಗೆ ಮತ್ತು ಸುನೀಲರಿಗೆ ವಂದನೆಗಳು.
ಉದಯಕಾಲದ ಮತ್ತು ಅಸ್ತಕಾಲದ ಸೂರ್ಯನಿಗೆ ಆವ್ರು ಹಿರಣ್ಯ ಗರ್ಭ ಎಂದು ಕರೆದಿರಬಹುದು. ಏಕೆಂದರೆ ಈ ಸೂರ್ಯರ ಬಣ್ಣ ಚಿನ್ನದ ಬಣ್ಣ.
ನನಗೆ ತಿಳಿದ ಮಟ್ಟಿಗೆ ಸೂರ್ಯನ ನನ್ನು ದಿನದ 24 ಗಂಟೆಗಳಲ್ಲಿ ಬೇರೆ ಬೇರೆ ಹೆಸರಿಂದ ಕರೆಯುತ್ತಾರೆ.
ಮಿತ್ರ ರವಿ ಸೂರ್ಯ ಭಾನು ಖಗ ಪೂಷ್ಣೆ
ಹಿರಣ್ಯಗರ್ಭ ಮರೀಚ ಆದಿತ್ಯ ಸವಿತೃ ಅರ್ಕ ಭಾಸ್ಕರ ಇವು ಸೂರ್ಯನ 12 ಹೆಸರುಗಳು.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಅರೆರೆ ಸವಿತೃ, ಈ ಬರಹ ಅದ್ಹೇಗೋ ತಪ್ಪಿಸಿಕೊಂಡುಬಿಟ್ಟಿತ್ತು. ಓದಿಯೇ ಇರಲಿಲ್ಲ. ಚೆನ್ನಾಗಿದೆ ಚೆನ್ನಾಗಿದೆ, ತುಂಬಾ ಚೆನ್ನಾಗಿದೆ.
ಉ: ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
ಸ್ವಲ್ಪ ತರ್ಲೆ:
ಈ ಪೀರಿಯೋಡಿಕ್ ಟೇಬಲ್ (ಆವರ್ತ ಕೋಷ್ಟಕ) ನಲ್ಲಿ ಇರುವ ಒಂದು ಮೂಲವಸ್ತು, ಅದರ ವೈಶಿಷ್ಟ್ಯ ಏನೆಂದರೆ, .... ಬೇಡ. ನಾನು ಇಲ್ಲ ಪುನ ವಿವರಿಸುವುದಿಲ್ಲ. ನೀವೇ ಇಲ್ಲಿ ಕ್ಲಿಕ್ಕಿಸಿ ಓದಿ.
ಸಿಗೋಣ,
ಪವನಜ
-----------
Vishva Kannada
Think globally, Act locally