ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: ಓಶೋ ಕಂಡಂತೆ ಗಾಂಧಿ!

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › savithru ರವರ ಬ್ಲಾಗ್

ಸೃಷ್ಟಿ !

October 14, 2007 - 1:26pm — savithru

ಇವತ್ತು ನಾನು ಬಿಗ್ ಬ್ಯಾಂಗ್ ಸಿದ್ಧಾಂತ ಮತ್ತು ಈ ಸೃಷ್ಟಿ ಯ ಬಗ್ಗೆ ಬರೆಯಲು ಯತ್ನಿಸುತ್ತಿದ್ದೀನಿ.

BigBang ಪದವನ್ನು ಕನ್ನಡಕ್ಕೆ ತರುವಾಗ ಬಹಳಷ್ಟು ಜನರು "ಮಹಾ ಸ್ಪೋಟ" ಎಂದೇ ಅನುವಾದಿಸಿದ್ದಾರೆ. ಅಂದರೆ ಬಿಗ್ ಬ್ಯಾಂಗ್ ಅಂದ್ರೆ "Space-Time" ( ದೇಶ -ಕಾಲ) ನ explosion ಅನ್ನುವ ರೀತಿಯಲ್ಲಿ ಬಳಸಿದ್ದಾರೆ. ಆದರೆ ಇದರ ಸರಿಯಾದ ಅನುವಾದ expansion ಅನ್ನುವ ರೀತಿ ಇರಬೇಕು. "ಮಹಾನ್ ಆರೋಹಣ". ಎನ್ನುವ ಪದ ಹೇಗೆ? ದಯವಿಟ್ಟು ಬರೆಯಿರಿ.

ಈ ಬಿಗ್ ಬಾಂಗ್ ಸಿದ್ಧಾಂತದ ಬಗ್ಗೆ ಬಹಳಷ್ಟು ವಿರೋಧ ಹೇಳಿಕೆಗಳು ಮೂಡಿಬಂದಿವೆ . ( ಅದ್ರ ಬಗ್ಗೆ ಒಮ್ಮೆ ಬರೆಯಲು ಯತ್ನಿಸುತ್ತೀನಿ) . ಆದ್ರೂ ಈ ವಾದವನ್ನು ಪೂರ್ಣ ಬುಡಮೇಲು ಮಾಡುವಂಥ ಗಟ್ಟಿಯಾದಂತಹ ಸಿದ್ದಾಂತಗಳು ಬಂದಿಲ್ಲ ಅಂತಾನೆ ಹೇಳ್ಬೇಕು.

ಒಂದು ಕಾಲದಲ್ಲಿ ಈ ಬ್ರಹ್ಮಾನ್ಡ ಕೇವಲ ಒಂದು ಒಂದು ಬಿಂದಿವಾಗಿತ್ತು. ಶತಕೋಟಿಯ , ಶತಕೋಟಿಯ, ಶತಕೋಟಿಯ, ಶತಕೋಟಿಯ , ಶತಕೋಟಿ ಮೀಟರ್‌ನ ಒಂದಂಶ ವ್ಯಾಸದ ಒಂದು ಯಾಕಶಿತ್ತ್ ಬಿಂದು! ( ಊಹಿಸಿಕೊಳ್ಳಿ!?). ಇಷ್ಟೊಂದು ಚಿಕ್ಕ ಬಿಂದು ನಮ್ಮ ಇವತ್ತಿನ ಜಗತ್ತಿಗೆ ಜನ್ಮ ನೀಡಿದೆ ಎಂದರೆ ನಂಬಲು ಸ್ವಲ್ಪ ಕಷ್ಟವೇ ಸರಿ.
ಸೃಷ್ಟಿಯ ಆದಿಯಿನ್ದ ಈಗಿನವರೆಗೆ "ಕಾಲದ" ಮಾಪನದಲ್ಲಿ ಏನಾಯ್ತು ಅಂತ ತಿಳಿದುಕೊಳ್ಳುವ ಯತ್ನವನ್ನೂ ಮಾಡೋಣ.

1. ಪ್ಲ್ಯಾಂಕ್ ಅವಧಿ. ( The Plank Epoch.)......
ಕಾಲ = ಸೊನ್ನೆಯಿಂದ ಕಾಲ = 10e-43 ಸೆಕೆಂಡುಗಳು ವರೆಗೆ
ತಾಪಮಾನ: 10e32 degree Kelvin ಗಿಂತ ಹೆಚ್ಚು.

ಈ ಸಮಯದಲ್ಲಿ ಏನಾಯಿತು ಅಂತ ಯಾರಿಗೂ ಗೊತ್ತಿಲ್ಲ. ಹೇಳೊದು ಬಹಳಷ್ಟು ಕಷ್ಟ. ಏಕೆಂದರೆ "ದೇಶ- ಕಾಲದ ಸಂಕೋಚನ ( compression) ಅದೆಷ್ಟು ಹೆಚ್ಚಾಗಿರುತ್ತೆ ಅಂದರೆ ಅದನ್ನ ಅರ್ಥ ಮಾಡಿಕೊಳ್ಳಲು Quantaum gravity ಯ ವಿವರಣೆಯೇ ಬೇಕು. Quantum Gravity ಸಿದ್ಧಾಂತಗಳು ನಮಗೆ ಸ್ರುಷ್ಟಿಯ ಆದಿಯಲ್ಲಿ ನ ನಮ್ಮ ವಿಶ್ವದ ರೂಪುರೇಶೆಯನ್ನು ಕೊಡಲು ಯತ್ನಿಸುತ್ತವೆ. ನಮಗೆ ಈ ಕಾಲಕ್ಕೆ ಗೊತ್ತಿರುವ ಕೆಲವೊಂದು ಅತ್ಯುತ್ತಮ ಕ್ವ್ಯಾಂಟಮ್ ಗ್ರಾವಿಟಿ ಸಿದ್ಧಾಂತಗಳು ಸೃಷ್ಟಿಯ ಆದಿಯಲ್ಲಿ ಏನಾಯ್ತು ಅಂತ ಹೇಳಬಹುದು. ಆದರೆ ಇವು ಹೇಳಿದ್ದೇ ಸರಿನಾ... ಅತ್ವಾ ತಪ್ಪಾ.. ಅಂತ ನಾವು ಈಗ್ಲೇ ಒಂದು ತೀರ್ಪು ಕೊಡಲು ಬರುವುದಿಲ್ಲ.

2. ಕಾಲ = 10e-43 ಇಂದ 10e-35 ಸೆಕಂಡುಗಳು.
The Grand Unification Epoch.

ಪ್ಲಾಂಕ್‌ನ ಅವಧಿಯ ನಂತರ .. ಈ Grand Unification ಅವಧಿಯಲ್ಲಿ ನಾವು ಸ್ವಲ್ಪ ಆ ಕಾಲದಲ್ಲಿ ಏನಾಯ್ತು ಎಂದು ಹೇಳುವ ಒಂದು ಗಟ್ಟೀ ನೆಲೆಗೆ ಬಂದು ನಿಲ್ಲುತ್ತೀವಿ!.

ಈ ಜಗತ್ತಿನ ಎಲ್ಲ fundamental Forces (= ಮೂಲಭೂತ ಶಕ್ತಿಗಳು?) .. Gravity ಯನ್ನು ಹೊರತುಪಡಿಸಿ.. ಕೂಡಿಕೊಂಡಿರುತ್ತವೆ. ಅದನ್ನ the Grand Unfied Force ಅಂತ ಕರೆಯುತ್ತಾರೆ. ಈ ಎಲ್ಲ findamental forces ಒಗ್ಗೂಡಿರುತ್ತವೆ ಅಂತ ಯಾಕೆ ಕರೆಯುತ್ತೇವೆ ಅಂದರೆ .. ತಾಪಮಾನ ಹೆಚ್ಚಾದಂತೆ ಎಲ್ಲ forces, ಒಂದೇ ರೀತಿ ವರ್ತಿಸಲು ಶುರು ಮಾಡುತ್ತವೆ. ಸಂಕ್ಷಿಪ್ತವಾಗಿ ಹೇಳ್ಬೇಕು ಅಂದ್ರೆ ಈ ಜಗತ್ತಿನ ಎಲ್ಲ strong forces, Electromagnetic forces ಮತ್ತು weak forces ... ಆ ಅತಿ ಹೆಚ್ಚಿನ ತಾಪಮಾನದಲ್ಲಿ ಒಂದರಿಂದ ಇನ್ನೊಂದಕ್ಕೆ ಯಾವುದೇ ಭೇದವಿರುವುದಿಲ್ಲ.

ಗ್ರಾವಿಟಿಯನ್ನು ಹೊರತುಪಡಿಸಿ ಉಳಿದ ಶಕ್ತಿಗಳನ್ನು ವಿವರಿಸಲು ನಮಗೆ ಕ್ವಾನ್‌ಟಮ್ ಮೆಖಾನಿಕಲ್ ವಿವರಣೆಗಳು ನಮಗೆ ಲಭ್ಯ. ಆದ್ರೆ ಗ್ರಾವಿಟಿ ಯನ್ನು ವಿವರಿಸಲು ನಮಗೆ ಯಾವುದೇ Quantum Mechanical ವಿವರಣೆಗಳು ಲಭ್ಯವಿಲ್ಲ. ಆದ್ದರಿಂದಲೇ ನಮಗೆ ಮೊದಲ ಕಾಲಗಟ್ಟದಲ್ಲಿ ಆದಂತಹ ( ಗ್ರಾವಿಟಿಯೂ ಇತರೆ findamental forces ಜೊತೆ ಕೂಡಿಕೊಂಡಿತ್ತು. 2 ನೇ ಕಾಲಗಟ್ಟದಲ್ಲಿ ಬೇರೆಯಾಯಿತು.) ಪರಿಣಾಮಗಳು ಸರಿಯಾಗಿ ತಿಳಿದಿಲ್ಲ.

3. time= 10e -35 to 10e -32

Inflationary Epoch. ಉಬ್ಬರದ ಅವಧಿ.

ಈ ಸಮಯದಲ್ಲಿ ನಾವು ಏನು ಸ್ಫೊಟ ಅಂತ ಓದಿಕೊಂಡಿದ್ದೇವೆಯೋ ಅದು ಆಯ್ತು. ಸ್ಪೋಟ ಅಂತ ಕರೆಯುವುದು ತಪ್ಪಾಗುತ್ತೆ ಅಂತ ನಾನು ಈಗಾಗ್ಲೇ ಹೇಳಿದ್ದೇನೆ. ಈ ಕಾಲಗಟ್ಟದಲ್ಲಿ ವಿಸ್ತರಣೆ ತುಂಬಾ ಜೋರಾಗಿ ಆಗುತ್ತೆ. ಈ ಅತಿ ವೇಗವಾಗಿ ಆಗುವ ವಿಸ್ತರಣೆಯನ್ನು ಇಂದು ನಾವು "Inflation" (ಉಬ್ಬರ?) ಅಂತ ಕರೆಯುತ್ತೇವೆ.

ಒಂದು ಪ್ರಬಲವಾದ nuclear force ಒಂದು ekectro weak force ನಿಂದ ಬೇರೆಯಾದಾಗ, ಅತ್ವ ಒಂದು ಪ್ರಬಲವಾದ electromagnetic force ದುರ್ಬಲವಾದ nuclear force ಜೊತೆ ಒಂದಾದಾಗ..ಅದು ಇನ್ಫೊಟಾನ್ (field )ಉತ್ಪತ್ತಿಗೆ ಕಾರಣವಾಗುತ್ತೆ.

..................to be continued...

  • Modern Physics
~.~
  • savithru ರವರ ಬ್ಲಾಗ್
  • Login or register to post comments
  • 479 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 9, 2008 - 7:38pm — srinivasps

ಉ: ಸೃಷ್ಟಿ !

srinivasps's picture

> .................to be continued...

ಮುಂದಿನ ಲೇಖನ ಎಲ್ಲಿದೆ?

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 10:11am — savithru

ಉ: ಸೃಷ್ಟಿ !

savithru's picture

srinivasps

ಆಗ ಸಮಯ / ಮೂಡ್ ಇರಲಿಲ್ಲ... ಲೇಖನ ಮುಂದಕ್ಕೆ ಹೋಗಲಿಲ್ಲ.
ಇಲ್ಲಿ ಕೆಲವರಿಗಾದರೂ ಆಸಕ್ತಿ ಇದ್ದರೆ ಲೇಖನ ಮುಂದು ವರೆಸಲು ಯತ್ನಿಸುತ್ತೇನೆ.
ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 10:44am — srinivasps

ಉ: ಸೃಷ್ಟಿ !

srinivasps's picture

ಸವಿತೃ ಅವರೇ,

ನನಗಂತೂ ಆಸಕ್ತಿ ಇದೆ...ಹಲವಾರು ಮಂದಿಗೆ ಕೂಡ ಆಸಕ್ತಿ ಇದೆ ಅನ್ನೋದು gaurantee...

ದಯವಿಟ್ಟು ಮುಂದುವರೆಸಿ..

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 11:44am — ಸಂಗನಗೌಡ

ಉ: ಸೃಷ್ಟಿ !

ಸಂಗನಗೌಡ's picture

ಮುಂದಿನದನ್ನು ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 11:49am — anil.ramesh

ಉ: ಸೃಷ್ಟಿ !

anil.ramesh's picture

ಸವಿತೃ,
ಮಾಡರ್ನ್ ಫಿಸಿಕ್ಸ್ ಪಾಠ ಚೆನ್ನಾಗಿದೆ...
ದಯವಿಟ್ಟು ಮುಂದುವರೆಸಿ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 10, 2008 - 1:02pm — ASHOKKUMAR

ಉ: ಸೃಷ್ಟಿ !

ASHOKKUMAR's picture

ಬರೆಯಲು ಇದು ಸಕಾಲ...ಬಿಗ್ ಬ್ಯಾಂಗ್ ಪರೀಕ್ಷೆ ಶುರು ಆಗಿದೆಯಲ್ಲ ...ಭೂಮಿಯ ಅಂತ್ಯ ಆಗುವುದರೊಳಗೆ ಬರೆದು ಮುಗಿಸಿ Smiling Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸೃಷ್ಟಿ,ದೇವಕಣ ಮತ್ತು LHC
  • ಬೋಸಾನ್ಸ್...ದೈವ ಕಣಗಳು!
  • ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?
  • ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?
  • ಟ್ರಾನ್ಸಿಸ್ಟರ್.
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಲೆ ಬಾಗು
  • ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
  • ಓದಿದ್ದು ಕೇಳಿದ್ದು ನೋಡಿದ್ದು-87 ಚಳಿಯ ನೆನಪು
  • ಮತಾ೦ತರ ಹಾಗೂ ಹಿ೦ದೂ ಧರ್ಮ
  • ಅತ್ಯಾಕರ್ಷಕ ಜಿ-ಮೇಲ್ ಮುಖ ಪುಟ.
  • ನೈನ್-ನೈಂಟಿ(990) ನರ್ವಸ್!
  • ಬಂಗಾಳಿ ವಾಕ್ಯ - ಅರ್ಥ
  • ಬಹಳ ಕಾಡಿದ ನುಡಿಮುತ್ತು...ಅರ್ಥೈಸುವಿರಾ?
  • ಭಾಷಾಂತರಿಸಿದ ಹಾಸ್ಯ ಚಟಾಕಿಗಳು - Kids are quick / ಚುರುಕು ಮರಿಗಳು - ೧
  • ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 22, 2008 - 1:15pm
  • uniquesupri
    ಉ: ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!
    November 22, 2008 - 1:14pm
  • uniquesupri
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 22, 2008 - 1:10pm
  • kannadakanda
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 12:44pm
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:18pm
  • uniquesupri
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 12:02pm
  • mahesha
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 22, 2008 - 11:54am
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 11:51am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 11:48am
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 22, 2008 - 11:37am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator