ಭಾರತ ಎಂದರೆ ಏನು?
ಭಾರತ ಎಂದರೆ ಏನು?
ನಮ್ಮ ದೇಶದ ಅಧಿಕೃತ ಹೆಸರು ಇಂಡಿಯ. ಆದರೆ ನಮ್ಮಲ್ಲಿ ಕೆಲವು ಜನ ಇದನ್ನ ಹಿಂದೂಸ್ತಾನ, ಭಾರತ ಅಂತ ಕರೆಯುತ್ತೇವೆ.
ನನಗೆ ಇಂಡಿಯಾ ಅಂದ ತಕ್ಷಣ ನಮ್ಮ ಬೆಂಗಳೂರಿಂತ ಪಟ್ಟಣಗಳು, ಅಲ್ಲಿನ ಮೋಸ , ಧಗ, ವಂಚನೆಗಳೆಲ್ಲವೂ ಕಣ್ಮುಂದೆ ಬರುತ್ತವೇ. IT. BT, ವಿಜ್ಞಾನ-ತಂತ್ರಜ್ಞಾನ ಕ್ಶೇತ್ರದಲ್ಲಿ ಸಾಧನೆ ಮಾಡಿದನ್ತ ದೇಶ ಕಣ್ಣ ಮುಂದೆ ಬರುತ್ತೆ!
ಭಾರತ ಎಂದರೆ ನನಗೆ ನೆನಪಾಗುವುದು, ನಮ್ಮೂರು, ಅಲ್ಲಿಯ ಬೇಸಾಯ. ಅಲ್ಲಿಯ ಮುಗ್ದ ಮನಸುಗಳು ( ಈಗ ಅದೂ ಇಂಡಿಯ ಆಗ್ತಾ ಇದೆ ಬಿಡಿ!) , ಅಲ್ಲಿನ ಜಾನಪದ, ಸಂಸ್ಕೃತಿ! ಇತ್ಯಾದಿ.
ನನಗೆ ನಮ್ಮ ದೇಶದ ಹೆಸರು "ಭಾರತ" ಅಂತ ಕರೆದರೇನೇ ಚೆಂದ.
ಅಲ್ಲಿ ಇಲ್ಲಿ ಕೇಳಿದ , ಓದಿದ ಮೂಲದಿಂದ ಭಾರತ ಎಂಬ ಪದದ ಅರ್ಥ ಏನು ಅಂತ ನಾನು ಇಲ್ಲಿ ಬರೆಯುತ್ತಾ ಇದೀನಿ. ತಪ್ಪಿದ್ದರೆ ಅತ್ವ ನಿಮ್ಮ ಅನಿಸಿಕೆ ಏನಾದರೂ ಸೇರಿಸಬೇಕಿದ್ದರೆ ದಯವಿಟ್ಟು ಬರೆಯಿರಿ.
ಒಂದನೆಯದು....................
ನನ್ನ ಗಮನಕ್ಕೆ ಬಂದಂತೆ ನಮ್ಮ ಇತಿಹಾಸದಲ್ಲಿ ನಾಲಕ್ಕು ಜನ ಭರತರು ಬರುತ್ತಾರೆ.
1. ರಾಮನ ತಮ್ಮ,
2.ಕಾಳಿದಾಸನ "ಅಭಿಜ್ನಾನ ಶಾಕುಂತಲ " ದಲ್ಲಿ ಬರುವ ( ದುಶ್ಯನ್ತನ ಮಗ) ಭಾರತ.
3. ಜಡಭರತ
4. ನಾಟ್ಯ ಶಾಸ್ತ್ರದನ್ತ ( ಭರತ ನಾಟ್ಯ ದ ಮೂಲ) ಅತ್ಯಮೋಘ ಕೃತಿಯನ್ನ ನಮಗಿತ್ತ ಭರತ.
ಭರತ ತನ್ನ ನಾಟ್ಯಶಾಸ್ತ್ರ ದಲ್ಲಿ ಆರಂಬದಲ್ಲೇ ಹೀಗೆ ಹೇಳ್ತಾನಂತೆ..
ಭರತ ನಾಟ್ಯ ದಲ್ಲಿ ಭರತ ಎನ್ನುವುದು ನನ್ನ ಹೆಸರಲ್ಲ. ಬದಲಿಗೆ ಅದು "ಭಾವ" , ರಾಗ", "ತಾಳ" ಗಳಿಂದ ಒಡ ಮೂಡಿ ಬಂದ ಪದ ಎಂದು. ಈ ಮೂರು, ನಾಟ್ಯ ಶಾಸ್ತ್ರ ದ ಮೂಲ ಪದಗಳು, fundamental concepts ಎಂಬುದು ನಿಮಗೆ ತಿಳೀದೇ ಇದೆ. ನಮ್ಮ ದೇಶಕ್ಕೂ ಈ ಪದ ( ಭಾರತ) ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತೆ ನೊಡಿ! ಹಲವು ಭಾಷೆಗಳು, ಹಲವು ಸಂಸ್ಕೃತಿಗಳು, ಹಲವು ಮತ ಪಂತಗಳು.. ಆದರೆ ಆಳಕ್ಕಿಳಿದು ನೊಡಿದರೆ ನಮ್ಮೆಲ್ಲರ ಭಾವ ಒಂದೇ! ನಮ್ಮೆಲ್ಲರ ರಾಗ ಒಂದೇ!!, ನಾಮೆಲ್ಲರ ತಾಳ ಒಂದೇ!!!.
ಎರಡನೆಯದು..............
ಭಾರತ ಎಂಬುದು ಕೆಳಗಿನ ಮೂರು ಪದಗಳಿಂದ ಹಾಗಿದೆಯಂತೆ.
>ಭಾಸತೆ ( ಜ್ಞಾನದ ಬೆಳಕಿಂದ ಹೊಳೆಯಿತ್ತಿದೆ, ಬೆಳಗುತ್ತಿದೆ!)
>ರಮನ್ತೆ ( ಗೌರವಿಸಲ್ಪಡುತ್ತಿದೆ)
>ತತ್ವತೆ ( ಸರಿಯಾದ ಪದವನ್ನು / ಅರ್ಥವನ್ನು ನೀವೇ ಹುಡುಕಿಕೊಳ್ಳಿ.. ಬಹುಶ ಇದು ಎಲ್ಲ ತತ್ವ ಸಿಧಾಂತ ಗಳ ಮನೆ ಯಾಗಿದೆ ಎಂಬ ಅರ್ಥ ಇರಬಹುದೇನೋ?!
ಮೂರನೆಯದು.
"ಭಾಸಿ ರತಃ ಇತಿ ಭಾರತ!" ( ಈ ಪದದ ಮೂಲ ಪುಸ್ತಕ ತಿಳಿದಿಲ್ಲ.. ತಿಳಿದವರು ದಯವಿಟ್ಟು ಬರೆಯಿರಿ.)
ಇಲ್ಲಿ ಭಾ: ( ಅತ್ವಾ ಭಾಸಿ ) ಅಂದರೆ ಜ್ಞಾನ, ಬೆಳಕು ಅಂತ. ಯಾರು ಸದಾ ಕಾಲ ಬೆಳಕಿನಲ್ಲಿ/ ಬೆಳಕಿನೆಡೆಗೆ ನಡೆಯುತ್ತನೋ, ಸದಾ ಜ್ಞಾನದಲ್ಲಿ ನಡೆಯುತ್ತಾನೋ/ ಇರುತ್ತಾನೋ ಅವ್ನೇ ಭರತ/ ಭಾರತ!. ಅಂತವರ ನಾಡು ಭಾರತ!
ನೊಡಿ .. ನಮ್ಮ ನಾಡು ಮುಂಚೆ ಇಂದನೂ ಜ್ಞಾನಕ್ಕೆ / ಅರಿವಿಗೆ ಪ್ರಾಮುಖ್ಯತೆ ಕೊಟ್ಟಂತಹ ನಾಡು. ಇಂತಹ ನಾಡಿಗೆ ಭಾರತ ಕ್ಕಿಂತ ಸೂಕ್ತ ಬೇರೆ ಪದವುಂಟೆ?
ಇನ್ನೊಂದು ಸ್ವಲ್ಪ.............
>"ಭಾರತರು" ಎಂಬುದು ನಮ್ಮ ದೇಶವನ್ನಾಳಿದ ( ಬಹುಶ ಆಗಿನ ಸರಸ್ವತಿ ತೀರದ ಜಾಗವಿರಬೇಕು!) ಒಂದು ರಾಜ ಕುಲವಂತೆ.
>"ಭಾರತಿ" ವೇದಗಳಲ್ಲಿ ಬರುವ ದೇವತೆ. ಬರು ಬರುತ್ತ ಜನಸಾಮನ್ಯರ ಸಂಸ್ಕೃತಿಯಿಂದ ಕಣ್ಮರೆಯಾದಳು!

- savithru ರವರ ಬ್ಲಾಗ್
- Login or register to post comments
- 817 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಭಾರತ ಎಂದರೆ ಏನು?
ಪ್ರಿಯ ಸವಿತೃ,
ಋಗ್ವೇದ ಸಂಹಿತೆಯ ಮೂರನೆಯ ಮಂಡಲದಲ್ಲಿ ಈ ಕೆಳಗಿನ ಋಚೆಯಿದೆ:
ಯ ಇಮೇ ರೋದಸೀ ಉಭೇ ಅಹಮಿಂದ್ರಮತುಷ್ಟವಮ್\
ವಿಶ್ವಾಮಿತ್ರಸ್ಯ ರಕ್ಷತಿ ಬ್ರಹ್ಮೇದಂ ಭಾರತಂ ಜನಮ್\\ಋ.೩-೫೩-೧೨\\
ತಾ||ಈ ಭೂಮಿ-ಸ್ವರ್ಗಗಳೆರಡನ್ನೂ ರಕ್ಷಿಸುವ ಇಂದ್ರನನ್ನು (ಸ್ತುತಿಯಿಂದ) ಸಂತೋಷಗೊಳಿಸಿದ್ದೇನೆ. ವಿಶ್ವಾಮಿತ್ರನಾದ ನನ್ನ ಈ ಮಂತ್ರ(ಮಾತು,ಸ್ತುತಿ) "ಭಾರತ"ದ ಜನರನ್ನು ರಕ್ಷಿಸುತ್ತದೆ.
ಈ ಮೂರನೆಯ ಮಂಡಲದ ದ್ರಷ್ಟಾರನಾದ ಋಷಿ - ಗಾಧಿನ ವಿಶ್ವಾಮಿತ್ರ. ಬಹುಶಃ ತ್ರೇತಾಯುಗದ ವಿಶ್ವಾಮಿತ್ರನಲ್ಲವೋ ಏನೋ ತಿಳಿಯದು. ಆತನೇ ಆಗಿದ್ದರೂ, ಅವನ ಮೊಮ್ಮಗನಾದ ಭರತನ ದೇಶದ ಬಗ್ಗೆ ಬರೆದಿರಲಾರನೆನಿಸುತ್ತದೆ. ಆದ್ದರಿಂದ ತ್ರೇತಾ-ದ್ವಾಪರದ ಭರತನಿಗೆ ಹಿಂದೆಯೂ ಋಗ್ವೇದಕಾಲದಲ್ಲೇ "ಭಾರತ"ವಿತ್ತೆಂಬುದು ಬಹುತೇಕ ಸ್ಪಷ್ಟವೆನಿಸುತ್ತದೆ. ಇಲ್ಲಿ ಭಾರತವೆಂದರೆ -ಭಾ(ಬೆಳಕು) ರತ(ಮಗ್ನ,ನಿರತ) =ಜ್ಞಾನವೆಂಬ ಬೆಳಕಿನ ಉಪಾಸನೆಯಲ್ಲಿ ತೊಡಗಿದ-ಎಂದರ್ಥವಿರಬಹುದು.
ಈ ಋಚೆ ಸುದಾಸನ ಸಂಪತ್ತು, ಇಂದ್ರೋಪಾಸನೆ, ಮೈತ್ರಿಗಳನ್ನು ಹೇಳುವ ಪ್ರಸಂಗದಲ್ಲಿ ಬರುತ್ತದೆ. ಆಸಕ್ತರು ಓದಿ ನೋಡಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಭಾರತ ಎಂದರೆ ಏನು?
ಬೆನಕರೆ..
ಈ ಒಂದು ಗುಕ್ಕು ..ಋಕ್ಕು ಗೆ ನನ್ನ ವಂದನೆಗಳು. ನಿಮ್ಮ ಅನಿಸಿಕೆಯೇ ನನ್ನ ಅನಿಸಿಕೆ. "ಭಾಸಿ ರತಹ್ ಇತಿ ಭಾರತ " .. ಈ ನಿರುಕ್ತದ ವಿವರಣೆಯೇ ಭಾರತ ಪದದ ಮೂಲ ಅರ್ಥದ ವಿವರಣೆ ಅನ್ನಿಸುತ್ತದೆ.
ನಾನು ಭರತರನ್ನು ಇಲ್ಲಿ ಲಿಸ್ಟ್ ಮಾಡಿದ ಕಾರಣ .. ಇಂದಿಗೂ ಜನಸಾಮಾನ್ಯರಲ್ಲಿ "ಭರತ" ( ಅದೂ ರಾಮನ ತಮ್ಮ ಅತ್ವ ಶಕುಂತಲೆಯ ಮಗ / ವಿಶ್ವಾಮಿತ್ರನ ಮೊಮ್ಮೊಗ) ನಿಂದ ನಮ್ಮ ದೇಶದ ಹೆಸರು ಭಾರತವಾಗಿದೆ ಅನ್ನುವ ನಂಬಿಕೆ ಇದೆ.
ಉ: ಭಾರತ ಎಂದರೆ ಏನು?
ನನಗೆ ಬಾರತಕ್ಕಿಂತ 'ಇಂಡಿಯ' ಹೆಸರೇ ಹತ್ತಿರ.
ನಾನು ಕಲಿತದ್ದು 'Indian History, Geography, civics' ಹಾಗೆ ನನ್ನ ಪಾಸ್‌ಪೋರ್ಟಲ್ಲಿ ನನಗೆ ತಿಳಿಯುವ ನುಡಿಯಲ್ಲಿ "Indian Union" ಅಂತ ಇದೆ. ಇನ್ನೊಂದು ಲಿಪಿಯ ಬರಹ ನನಗೆ ಸರಿಯಾಗಿ ಅರಿತವಾಗಲ್ಲ.
ಆದುದರಿಂದ ನಾನು ಇಂಡಿಯದವನು ಅದಕ್ಕೆ 'ಇಂಡಿಯನ್'
ಗಮನಿಸಿರಿ; ಕನ್ನಡನ್ ಅಂದ್ರೆ ಕನ್ನಡದವನು. ತಮಿಳನ್.. ಹೀಗೆ.. ಇಂಡಿಯನ್, ಇಂಡಿಯಳ್ ಇವು ತಮಿಳಲ್ಲಿ ಬಳಕೆಯಲ್ಲಿವೆ.
ಉ: ಭಾರತ ಎಂದರೆ ಏನು?
ನಾನು ಕಲಿತದ್ದು 'Indian History, Geography, civics' ...
ನಿಜ .. ಆಂಗ್ಲ ಮಾಧ್ಯಮದಲ್ಲಿ ಓದಿದವರು 'Indian History, Geography, civics' ಯನ್ನೇ ಕಲಿಯಿವುದು. ನನ್ನಂತ ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳು ಕಲಿಯುವುದು ಭಾರತದ ಇತಿಹಾಸ, ಭೂಗೋಳ , ಪೌರನೀತಿ!!
ನಮ್ಮ ಆಡು ಭಾಷೆ ಯಲ್ಲಿ ನಾವು ಹೆಚ್ಚಾಗಿ ಬಳಸುವುದು ( ಅಂದ್ರೆ ಕನ್ನಡದಲ್ಲಿ ಮಾತಾಡುವಾಗ ) ಭಾರತ ಎಂದೆ. ಕನ್ನಡದಲ್ಲಿ ಮಾತಾಡುವಾಗ ಇಂಡಿಯಾ ಪದ ಬಳಕೆ ಗೆ ನನ್ನ ಮನಸ್ಸು ಏಕೋ ಒಗ್ಗಿಲ್ಲ. ಒಂದು ರೀತಿಯ ಆಭಾಸ ಎನಿಸುತ್ತದೆ
ಒಂದು ಪದ ತಮಿಳಲ್ಲಿ ಇದೆ ಎಂದರೆ ಅದು ಕನ್ನಡದಲ್ಲಿ ಇರಲೇಬೇಕು ಎಂದೇನೂ ಇಲ್ಲ. ( ಭಾಷೆಗಳು ಎಷ್ಟೇ ಹತ್ತಿರವಿದ್ದರೂ) . ನಾನು ಕಂಡಂತೆ ನನ್ನ ಸುತ್ತ ಮುತ್ತಿನ ಜನಗಳಲ್ಲಿ ಇಂಡಿಯ ಪದ ಬಳಕೆ ಇಲ್ಲ ಭಾರತ ಪದ ಏಕೆ ಇಷ್ಟ ಆಗುತ್ತೆ ಅಂದ್ರೆ ಆ ಪದದ ಜೊತೆ ನಮ್ಮ ಸಂಸ್ಕೃತಿ ತಳಕು ಹಾಕಿಕೊಂಡಿದೆ. ಇಂಡಿಯ ಪದ ನಮ್ಮ ಭಾಷೆ ಬಾರದ / ಉಚ್ಚರಿಸಲಾಗದ ಪರದೇಶಿಗಳ ಕೊಡುಗೆ. ಅದು ನಮ್ಮ ಸಂಸ್ಕೃತಿ ಯನ್ನು ಬಿಂಬಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಸ್ವಲ್ಪ ಆಂಗ್ಲ ಪದಗಳನ್ನು ಕಲಿತು ನುಲಿಯಿತ್ಟಿರುವವರು .. ಪ್ರಖ್ಯಾತಿಗೆ ತಂದ ಪದ ಅನ್ನುವುದು ನನ್ನ ಅನಿಸಿಕೆ
ಉ: ಭಾರತ ಎಂದರೆ ಏನು?
"ಇಂಡಿಯ ಪದ ನಮ್ಮ ಭಾಷೆ ಬಾರದ / ಉಚ್ಚರಿಸಲಾಗದ ಪರದೇಶಿಗಳ ಕೊಡುಗೆ. ಅದು ನಮ್ಮ ಸಂಸ್ಕೃತಿ ಯನ್ನು ಬಿಂಬಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಸ್ವಲ್ಪ ಆಂಗ್ಲ ಪದಗಳನ್ನು ಕಲಿತು ನುಲಿಯಿತ್ಟಿರುವವರು .. ಪ್ರಖ್ಯಾತಿಗೆ ತಂದ ಪದ ಅನ್ನುವುದು ನನ್ನ ಅನಿಸಿಕೆ"
ನನ್ನ ಅನುಬವ ಇದಕ್ಕೆ ಉಲುಟಾ ಆಗಿದೆ!!
ನನ್ನೊಡ ಮಾತಾಡೊರೆಲ್ಲ ಇಂಡಿಯ ಎಂದೇ ಹೇಳ್ತಾರಲ್ಲ!!
ನೋಡಿ, ಇದನ್ನೇ cultural-difference/ ನಡಾವಳಿವೇರ್ಪು ಅನ್ನೋದೇನೋ!!
ಒಂದೇ ಸಂಗತಿಯನ್ನು ಎರಡು ಬಗೆಯಲ್ಲಿ ಕಾಣೋದು.
ಆದರೆ ನೀವು ಕೊಟ್ಟ ಉಚ್ಚರಿಸಲಾದ, ಸಂಸ್ಕೃತಿ ಬಿಂಬಿಸಸಲಾಗುವ, ಇತ್ತೀಚಿನ ಇವೆಲ್ಲ ನಂಗೆ ಏನೋ ವಿಚಿತಿರ ಅನ್ನಿಸ್ತು.!
ಉ: ಭಾರತ ಎಂದರೆ ಏನು?
ಸಿಂಧೂ==> ಹಿಂದೂ==> ಇಂದು==>ಇಂಡಿಯ.... ನಾನ್ ಈ ಕತೆಯ / ವಾದದ ಬಗ್ಗೆ ಹೇಳಿದ್ದು.
ಸಿಂಧೂ ನಾಡಿನವರು ಹಿಂದುನಾಡಿನವರಾಗಿದ್ದು ಪರ್ಶಿಯನ್ನರ ನಮ್ಮ "ಸಿಂಧೂ " ಪದವನ್ನು ಸರಿಯಾಗಿ ಉಚ್ಚರಿಸಲಾಗದ ಕಾರಣದಿಂದಲೇ ಅಲ್ಲವೇ?
"ಸಿಂಧೂ ನದಿಯಾಚೆಯವರು " ಪದ ಕಟ್ಟಿಕೊಡುವ ಅರ್ಥಕ್ಕಿನ್ತ "ಬೆಳಕು/ಜ್ಞಾನ ದಲ್ಲಿ ಇರುವವರು/ ನಿರತವಾಗಿರುವವರು " ಎಂಬುದು ಉತ್ತಮ ಅರ್ಥವಲ್ಲವೇ?!.
"ಇಂಡಿಯ" ಪದ ಹೊರದೇಶದವರು ನಮ್ಮನ್ನು ನೊಡುವ ದೃಷ್ಟಿ ಕೋನ! ಅದು ಹೊರಗಿನವರು ಹುಟ್ಟಿಸಿದಂತಹ ಪದ. ಇತ್ತೀಚೆಗೆ ಬಹುಶ ಆಂಗ್ಲ ಭಾಷೆ ಮತ್ತು ಯೂರೋಪಿಯನರ ಪ್ರಭಾವಳಿಯಿಂದ ನಾವು ಭಾರತೀಯರು "ಇಂಡಿಯ" ಪದ ಬಳಕೆಗೆ ತಂದೆವಲ್ಲವೇ? .. ನನ್ನ ಮಾತಿನ ಅರ್ಥ ಇದು.
ಉ: ಭಾರತ ಎಂದರೆ ಏನು?
ಇಂಡಿಯದ ಮೂಲ ಇರಲಿ..
ಭಾರತದ ಮೂಲ ನೋಡ್ರಿ. ಭರತ ಆಳಿದ್ದು ಬಾರತ. ಬರತ ಏನು ನಮ್ಮ ಎಮ್ಮೆನಾಡು/ಕನ್ನಡನಾಡನ್ನು ಆಳಿದ್ನಾ? ಆರ್ಯಾವರ್ತ ನರ್ಮದೆ/ಗೋದಾವರಿ ದಾಟಿದ್ದೇ ಇಲ್ಲ. ಅದಕ್ಕೆ ಗೌಡ-ದಕ್ಷಿಣಾಪಥದ ಬಗ್ಗೆ ಯಾವಾಗಲೂ ನಿಬ್ಬರ! ( ಸಗೌಡದಕ್ಷಿಣಾಪಥಂ ಅಂತ ವಿಸೇಸವಾಗಿ ಹೇಳ್ತಾರೆ. )
ಯಾವ ಕನ್ನಡದ ೧೮-೧೯ ಹಿಂದನ ಹೊತ್ತಗೆಯಲ್ಲಿ ಕನ್ನಡನಾಡು ಬಾರತ ಎಂದ ದೇಸದ ಹೋಳು ಎಂದವ್ರೆ? ನಾವೆಂದು ನಮ್ಮದೇ ’ಕನ್ನಡ ದೇಶ’ ನಾವೇ independent ಎಂದು ಕೊಂಡು ಬಂದಿರೊದು. ಹೀಗೆ ಸಾವಿರಾರು ಏಡುಗಳು ನಮ್ಮ ಜಿನ-ಲಿಂಗಾಯತ( ಒಟ್ಟಿನಲ್ಲಿ ಆರ್ಯಾವರ್ತದ ಕತೆಗಳು ಮರೆಸುವ, ಅಂದ್ರೆ ರಾಮಾಯಣ, ಮಹಾಭಾರತ, ಪುರಾಣಗಳನ್ನೇ ಮೂಲವಾಗಿ ಹೇಳುವ ಸಂಸ್ಕೃತಿಯಕ್ಕಿಂತ ಬೇರೆಯಾದವು) ಇವರೇ ಹೆಚ್ಚು ಕನ್ನಡದ ಬಗ್ಗೆ ಕಾಳಜಿ ಮಾಡಿದವರು. ಇವರು ಎಂದು ನಾವು ರಾಮನಿಂದ, ಕೃಷ್ಣನಿಂದ, ಇಲ್ವೇ ಯಾವ ಆರ್ಯಾವರ್ತದ ದೊರೆಯಿಂದ ಆಳಿಸಿಕೊಂಡಿದ್ದೀವಿ ಎಂದಿದ್ದಾರೆ?
ನಮ್ಮ ದಕ್ಷಿಣಕ್ಕೆ ದಂಡೆತ್ತಿ ಬಂದ ಹರ್ಷವರ್ದನನು ಸೋಲುಂಡು ಹೋಗಿ, ಪುಲಿಕೇಶಿ ಒಬ್ಬ ರಾಕ್ಷಸಜನಾಂಗದವನು ಎಂದು ಬರೆದಿದ್ದಾನಂತೆ.!! ಇದೇ ನೋಟದಲ್ಲಿ ನೋಡಿ, ಯಾವಾಗಲೂ ರಾಕ್ಷಸರೂ ತೆಂಕಣದವರೇ, ಹಾಗೇ ನಾಗರು ಮೂಡಣಕ್ಕೆ, ( ಪರ್ವದಲ್ಲಿ ಇದಕ್ಕೆ ಅರಿಮೆ ಇವೆ).
ಇಲ್ಲಿ ಜನಾಂಗ ಅಂದ್ರೆ ಹೇಗೆ ತಗೋಬೇಕು ಅಂದ್ರೆ ಇಂಗ್ಲೀಸ ಜನಾಂಗ ಮತ್ತು ಪ್ರೆಂಚ್ ಜನಾಂಗ ಎಂಬಂತೆ. ಇಂಗ್ಲೀಸರು ಮತ್ತು ಪ್ರೆಂಚರು biologicallly ಒಂದೇ race, ಆದ್ರೆ ನುಡಿ-ನಡೆಯಲ್ಲಿ ಬೇರೆ ಬೇರೆ cultural-enthic groups.
ನಾವು ಸೇರಿದ್ದು ಇಂಡಿಯದೇಸಕ್ಕೆ, ಆಮೇಲೆ north indian domination ಇಂದ ಅದಕ್ಕೆ ಭಾರತ ಎಂಬ ಹೆಸರು ಸೇರಿಸಲಾಯ್ತು. ಮೂಲವಾಗಿ ಬಾರತ ಎಂಬ ಹೆಸರು ಸೊತಂತ್ರ ಹೋರಾಟಗಾರರ ಮನಸ್ಸಲ್ಲಿ ಇರಲಿಲ್ಲ ಎಂದು ಆರಾಮಾಗಿ ಹೇಳಬೋದು.
ಇಲ್ಲಿ ನೋಡಿ..
"quit india movement", Indian national congress, ಮುಂತಾದ ಒರೆಗಳೇ ನಾವು ಸೊತಂತ್ರ ಪಡೆದ ದೇಸದ ಹೆಸರು ಇಂಡಿಯ ಅಂತಿದೆ.
ಅದೂ ಅಲ್ದೇ, ನೆಹರು ಮಾಡಿ ಆಗಸ್ಟ ೧೫ ನಡುಇರುಳ ಇಂಗ್ಲೀಸ ಮಾತುಗಾರಿಕೆಯಲ್ಲಿ ’India' ಅಂತವೇ ಹೇಳಿದ್ದು. ನಮ್ಮ ದೇಸದಲ್ಲಿ ’ಬಾರತ’ ಎಂದು ಹೇಳು ಪಾರ್ಟಿ ಇದ್ರೆ ಅದು ’ಬಾರತೀಯ ಜನತಾ ಪಾರ್ಟಿ’ ಒಂದೇ ಇರಬೇಕು.
ಅದೆಲ್ಲ ಇರಲಿ.. ಇಲ್ಲಿ
ಸವಿತೃ ನೀವು ’ಬಾರತ’ ಅನ್ನೋದೇ ನಮ್ಮ ದೇಸಕ್ಕೆ ಸರಿಯಾದ ಒರೆ ಎಂದು ಯಾಕೆ ಪಟ್ಟು? ಅತ್ವಾ ಅದೇ ಹೆಚ್ಚು, ಅದೇ ಮೇಲು ಅಂತ ನಿಮ್ಮ ಒಳಬಾವ ಸರಿಯೇ?
ನಮ್ಮ ದೇಸವನ್ನು ನಾವು ನಮ್ಮ ಇಂಡಿಯ ಅಂದ್ರೂ ಬಾರತ ಅಂದ್ರೂ ಎರಡು ಸಮ ತಾನೆ? ನೀವು ಸಂಸ್ಕೃತದ ಕೊಂಡಿ ಹಾಕಿ, ಅದಕ್ಕೆ ಮೇಲು ಅಂತಿದ್ದೀರಲ್ಲ.
ನಿಮಗೆ ಸಂಸ್ಕೃತ ಏನೋ ಸಿಕ್ಕಾಪಟ್ಟೆ ದೊಡ್ಡದ್ದು ಅಂದ್ರೆ ಎಲ್ಲರಿಗೂ ಅದು ಹಾಗೆ ಇರಬೇಕಾ?
ನನ್ನ concern ಇಸ್ಟೇ, ಇಂದು ನಮ್ಮ ಕನ್ನಡಕ್ಕೆ ಬೆಂಗಳೂರಿಗೆ ನೆನ್ನೆ ಮೊನ್ನೆ ಬಂದ ಹಿಂದಿಗರು( ನಾರ್ತಿಗಳು ) "ಹಿಂದಿ ಬರದವರು ಹಿಂದುಸ್ತಾನಿಗಳಲ್ಲ" ಅನ್ನೋ ಹಾಗೆ ನಿಮ್ಮಂತೆ ಯೋಚಿಸುವ ಮಂದಿ ನಾಳೆ "ಬಾರತ ಅಂನದೇ ಇರೋರು ಬಾರತೀಯರೇ ಅಲ್ಲ" ಅಂತ ಎರಗಿ ಬಿಡಬೋದು.!!( ಅದರ ಮೊದಲ ಹೆಚ್ಚೆಯ ಗುರುತು ಇಂತ ಮಾತು ಎಂದು ನಮ್ಮಂತಹ ಬೇರೆ ಅನಿಸಿಕೆ-ನಂಬಿಕೆಯವರಿಗೆ ಅಂಜಿಕೆ ಹತ್ತಿದೆ. )
ನಾನು ನನ್ನ Visa form ಅಲ್ಲಿ nationality Indian ಅಂತಲೇ ತುಂಬಿರೋದು, ನಾನು Indian ಅಸ್ಟೇ. ಬಾರತೀಯನೋ ಅಲ್ವೋ ಅದು ಬೇಕಾಗಿಲ್ಲ.!!
ಉ: ಭಾರತ ಎಂದರೆ ಏನು?
"೧೮-೧೯ ಶತಮಾನ ಹಿಂದಿನ ಹೊತ್ತಗೆಯಲ್ಲಿ" ಎಂದು ತಿದ್ದು.
ಉ: ಭಾರತ ಎಂದರೆ ಏನು?
>>ಸವಿತೃ ನೀವು ’ಬಾರತ’ ಅನ್ನೋದೇ ನಮ್ಮ ದೇಸಕ್ಕೆ ಸರಿಯಾದ ಒರೆ ಎಂದು ಯಾಕೆ ಪಟ್ಟು? ಅತ್ವಾ ಅದೇ ಹೆಚ್ಚು, ಅದೇ ಮೇಲು ಅಂತ ನಿಮ್ಮ ಒಳಬಾವ ಸರಿಯೇ?..
ನನಗೆ ಈ ರೀತಿಯಾದ ಯಾವ ಪಟ್ಟೂ ಇಲ್ಲ. "ಸಾಂಸ್ಕೃತಿಕ ಆಕ್ರಮಣ" ದಂತಹ ವಿಷಯವನ್ನು ಹೊರಗಿಟ್ಟು, ಕೇವಲ ಅರ್ಥವನ್ನು ಮುಖ್ಯವಾಗಿಟ್ಟುಕೊಂಡು ನಾನು ನನ್ನ ವಾದವನ್ನು ಮಂಡಿಸಿದ್ದೆ.
>ನಮ್ಮ ದೇಸವನ್ನು ನಾವು ನಮ್ಮ ಇಂಡಿಯ ಅಂದ್ರೂ ಬಾರತ ಅಂದ್ರೂ ಎರಡು ಸಮ ತಾನೆ? ನೀವು ಸಂಸ್ಕೃತದ ಕೊಂಡಿ ಹಾಕಿ, ಅದಕ್ಕೆ ಮೇಲು ಅಂತಿದ್ದೀರಲ್ಲ.
ನಿಮಗೆ ಸಂಸ್ಕೃತ ಏನೋ ಸಿಕ್ಕಾಪಟ್ಟೆ ದೊಡ್ಡದ್ದು ಅಂದ್ರೆ ಎಲ್ಲರಿಗೂ ಅದು ಹಾಗೆ ಇರಬೇಕಾ?
ಎರಡೂ ಸಮ.. ಆದರಲ್ಲಿ ಏನೂ ಸಂಶಯವಿಲ್ಲ. ಇಲ್ಲಿ ಸಂಸ್ಕೃತದ ವ್ಯಾಮೋಹವಲ್ಲ .. ಬದಲಿಗೆ ನನ್ನಲ್ಲಿರುವುದು.. ಈ ಪದಗಳ ಮೂಲದ ಬಗ್ಗೆ ಕುತೂಹಲ.
ನಾನು ಮೊದಲು ಕನ್ನಡಿಗ!. "ಸಂಸ್ಕೃತವನ್ನು ಮೆರೆಸುವ " ಮತ್ತು "ಇಂಗ್ಲೀಷನ್ನು ಮೆರೆಸುವ" ಸ್ನೇಹಿತರೆದುರೂ ( ಅವರೇ ಬಹು ಸಂಖ್ಯಾತರಾದರೂ) ನಾನು ಕನ್ನಡವನ್ನು ಮೆರೆಸಿದವ/ ಮೆರೆಸುವವ!. ಆದರೆ ಸಂಸ್ಕೃತದ ಮತ್ತು ಇಂಗ್ಲೀಷಿನ ಅಸ್ತಿತ್ವವನ್ನು ನಾನು ತಿರಸ್ಕರಿಸಲಾಗದಷ್ಟು ಅವು ಬೆಳೆದಿವೆ.
>ನನ್ನ concern ಇಸ್ಟೇ, ಇಂದು ನಮ್ಮ ಕನ್ನಡಕ್ಕೆ ಬೆಂಗಳೂರಿಗೆ ನೆನ್ನೆ ಮೊನ್ನೆ ಬಂದ ಹಿಂದಿಗರು ನಾರ್ತಿಗಳು ) "ಹಿಂದಿ ಬರದವರು ಹಿಂದುಸ್ತಾನಿಗಳಲ್ಲ" ಅನ್ನೋ ಹಾಗೆ ನಿಮ್ಮಂತೆ ಯೋಚಿಸುವ ಮಂದಿ ನಾಳೆ "ಬಾರತ ಅಂನದೇ ಇರೋರು ಬಾರತೀಯರೇ ಅಲ್ಲ" ಅಂತ ಎರಗಿ ಬಿಡಬೋದು.!!( ಅದರ ಮೊದಲ ಹೆಚ್ಚೆಯ ಗುರುತು ಇಂತ ಮಾತು ಎಂದು ನಮ್ಮಂತಹ ಬೇರೆ ಅನಿಸಿಕೆ-ನಂಬಿಕೆಯವರಿಗೆ ಅಂಜಿಕೆ ಹತ್ತಿದೆ. )
ಕನ್ನಡಿಗರಲ್ಲಿ ಆ ರೀತಿಯ "xenophobism" ಬರುವುದು ತುಂಬಾ ಕಡಿಮೆ. ನಾನು ಕನ್ನಡಿಗ!!
>ಬರತ ಏನು ನಮ್ಮ ಎಮ್ಮೆನಾಡು/ಕನ್ನಡನಾಡನ್ನು ಆಳಿದ್ನಾ?
ಆಗಿನವರಿಗೆ ದಕ್ಶಿಣದ ರಾಜ್ಯಗಳು ಹೊರ ರಾಜ್ಯಗಳು ( ಹೊರದೇಶಗಳು ). ಹಾಗಾಗಿ ಅವರು ( ಈ ಸಾಹಿತ್ಯ ಹುಟ್ಟಿಕೊಂಡಂತಹ ನಾಡಿನವರು) ಕನ್ನಡ ನಾಡನ್ನು ಅಳಿರಲು ಸಾಧ್ಯವಿಲ್ಲ ಅನ್ನಿಸುತ್ತದೆ.
>ನಮ್ಮ ದಕ್ಷಿಣಕ್ಕೆ ದಂಡೆತ್ತಿ ಬಂದ ಹರ್ಷವರ್ದನನು ಸೋಲುಂಡು ಹೋಗಿ, ಪುಲಿಕೇಶಿ ಒಬ್ಬ ರಾಕ್ಷಸಜನಾಂಗದವನು ಎಂದು ಬರೆದಿದ್ದಾನಂತೆ.!! ಇದೇ ನೋಟದಲ್ಲಿ ನೋಡಿ, ಯಾವಾಗಲೂ ರಾಕ್ಷಸರೂ ತೆಂಕಣದವರೇ, ಹಾಗೇ ನಾಗರು ಮೂಡಣಕ್ಕೆ, ( ಪರ್ವದಲ್ಲಿ ಇದಕ್ಕೆ ಅರಿಮೆ ಇವೆ).
ತುಂಬಾ ಆಸಕ್ತಿಕರ ವಿಷಯ!.. ಇದಕ್ಕೂ ಬಹಳ ಮುಂಚೆ.. ವೇದಗಳ ಕಾಲದಲ್ಲಿಯೂ ಆರ್ಯೇತರರನ್ನು "ದಸ್ಯು" ಗಳೆಂದು ಸಂಬೋಧಿಸಿದ್ದಾರೆ. ದಕ್ಷಿನ ಬಾರತದ ಜನವೇ ದಸ್ಯುಗಳು ಎಂದು ಅನೇಕರ ಅಂಬೋಣ. ಈ ದಸ್ಯುಗಲ ಸಂಸ್ಕೃತಿಯನ್ನ ಅಲ್ಲಿ ಕೆಟ್ಟದಾಗಿ ಚಿತ್ರಿಸಿದ್ದಾರೆ. ತಮ್ಮನ್ನು ತಾವ್ ಆರ್ಯರು ಎಂದು ಗುರುತಿಸಿಕೊಳ್ಳಲು ಇಚ್ಛಿಸುವ ಮಂದಿ ( ಹೆಚ್ಚಾಗಿ ಉತ್ತರದವರು) ದಕ್ಶಿಣದವರನ್ನು ರಾಕ್ಷಸರು , ವಾನರರು ( ವಾ ..ನರ = ನರ ರೇ?! = ಇವರೇನು ಮನುಶ್ಯರೇ?! ) ಎಂದು ಕರೆದಿರಬಹುದು.
> "quit india movement", Indian national congress, ಮುಂತಾದ ಒರೆಗಳೇ ನಾವು ಸೊತಂತ್ರ ಪಡೆದ ದೇಸದ ಹೆಸರು ಇಂಡಿಯ ಅಂತಿದೆ.
ಅದೂ ಅಲ್ದೇ, ನೆಹರು ಮಾಡಿ ಆಗಸ್ಟ ೧೫ ನಡುಇರುಳ ಇಂಗ್ಲೀಸ ಮಾತುಗಾರಿಕೆಯಲ್ಲಿ ’India' ಅಂತವೇ ಹೇಳಿದ್ದು. ನಮ್ಮ ದೇಸದಲ್ಲಿ ’ಬಾರತ’ ಎಂದು ಹೇಳು ಪಾರ್ಟಿ ಇದ್ರೆ ಅದು ’ಬಾರತೀಯ ಜನತಾ ಪಾರ್ಟಿ’ ಒಂದೇ ಇರಬೇಕು.
ಇವೆಲ್ಲ ಇತ್ತೀಚಿನ ಬೆಳವಣಿಗೆಗಳು! ಅಂದರೆ ಪಾಶ್ಚತ್ಯರ ಪ್ರಭಾವ ನಮ್ಮ ಮೇಲೆ ಆದ ನಂತರದ ಬೆಳವಣಿಗೆಗಳು.!!! ಹಾಗಾಗಿ ಇಂಡಿಯ ಪದ ಬಳಕೆ ಸ್ವಾಭಾವಿಕ!
> ನಾವು ಸೇರಿದ್ದು ಇಂಡಿಯದೇಸಕ್ಕೆ, ಆಮೇಲೆ north indian domination ಇಂದ ಅದಕ್ಕೆ ಭಾರತ ಎಂಬ ಹೆಸರು ಸೇರಿಸಲಾಯ್ತು. ಮೂಲವಾಗಿ ಬಾರತ ಎಂಬ ಹೆಸರು ಸೊತಂತ್ರ ಹೋರಾಟಗಾರರ ಮನಸ್ಸಲ್ಲಿ ಇರಲಿಲ್ಲ ಎಂದು ಆರಾಮಾಗಿ ಹೇಳಬೋದು.
ನನ್ನ ಅನಿಸಿಕೆ ಇದ್ವರ್ಗೂ ಇದಕ್ಕೆ ವಿರುದ್ದವಾಗಿತ್ತು. ಇದರ ಬಗ್ಗೆ ನನಗೆ ಕೆಲವು ಅನುಮಾನಗಳಿವೆ. ನನಗೆ ಹೆಚ್ಚಿನ ಓದು ಅವಶ್ಯಕತೆಯಿದೆ ಅನ್ನುಸುತ್ತದೆ. ನಿಮಗೆ ಯಾವುದಾದ್ರೂ ಈ ಸಂಬಂಧಪಟ್ಟಂತಹ ಕೊಂಡಿಗಳಿದ್ದರೆ ದಯವಿಟ್ಟು ಬರೆಯಿರೆ.
ಇಲ್ಲಿ ನಮ್ಮ ದೇಶದ ಹೆಸರು ಭಾರತವೆಂದೇ ಆಗಬೇಕು ಎಂದೇನೂ ಪಟ್ಟು ಇಲ್ಲ. ಪದಗಳ ಅರ್ಥವನ್ನೂ , ಮೂಲವನ್ನೂ ಹುಡುಕುವ ಕುತೂಹಲ. ಈ ರೀತಿಯ ವಾದಗಳಿಂದ ನಮ್ಮ ಇತಿಹಾಸದ ನೈಜ ಚಿತ್ರಣ ಸಿಕ್ಕರೇ ಅದೇ ನಮಗಾಗುವ ಲಾಭ!
ಉ: ಭಾರತ ಎಂದರೆ ಏನು?
"ನನಗೆ ನಮ್ಮ ದೇಶದ ಹೆಸರು "ಭಾರತ" ಅಂತ ಕರೆದರೇನೇ ಚೆಂದ."
ಸವಿತೃ, ಈಗೀಗ ನಮ್ಮ ಮೇಲೇ ಆಗ್ತಾ ಇರೋ ಹೇರಿಕೆಯ ಅಂಜಿಕೆಯಲ್ಲಿ , ನಾನು ನಿಮ್ಮ ಈ ಸಾಲನ್ನು ತುಂಬ ಜಾಸ್ತಿ ತಗೊಂಡಿದ್ರೆ ಮನ್ನಿಸಿರಿ.....
ಉ: ಭಾರತ ಎಂದರೆ ಏನು?
"ಸವಿತೃ, ಈಗೀಗ ನಮ್ಮ ಮೇಲೇ ಆಗ್ತಾ ಇರೋ ಹೇರಿಕೆಯ ಅಂಜಿಕೆಯಲ್ಲಿ , ನಾನು ನಿಮ್ಮ ಈ ಸಾಲನ್ನು ತುಂಬ ಜಾಸ್ತಿ ತಗೊಂಡಿದ್ರೆ ಮನ್ನಿಸಿರಿ....."
ಇಂತಹ ಚರ್ಚೆಗಳು ನಮ್ಮ ಅರಿವಿನ ಮಟ್ಟವನ್ನು ಎತ್ತರಕ್ಕೇರಿಸುತ್ತವ. ಮುಂದೆಯೂ ನಿಮ್ಮ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇನೆ.
ನಿಮ್ಮಲ್ಲಿರುವ ಅಭಿಮಾನಕ್ಕೆ ನಂದೊಂದು ಜೈ!!!
ಉ: ಭಾರತ ಎಂದರೆ ಏನು?
ಕಡವಳ!!
’ಅಭಿಮಾನ’ ಅನ್ನೋದಲ್ಲ, ನಮ್ಮ, ನಮ್ಮತನ ಉಳಿಯದೇ, ಅಳಿಯುವ ಹೆದರಿಕೆ. ನನ್ನ ಮನೆತನ, ತಲೆಮಾರಲ್ಲಿ, ಕನ್ನಡವಾಡುವ ಕೊನೆಯ ತಲೆಯಾಗುವ ಅಂಜಿಕೆ.
ಕನ್ನಡಿಗರು ಅಂದ್ರೆ pushoverಗಳು, softtargetಗಳಾಗಿ, ಎಲ್ಲ ಬಗೆಯ ಹೇರಿಕೆಗಳನ್ನು, ದಬ್ಬಾಳಿಕೆಗಳನ್ನು ತಾಳಿಕೊಂಡಿದ್ದೀವಿ. ನಾವು ತುಸುವೇನು, ಸಿಕ್ಕಾಪಟ್ಟೆ ಗಟ್ಟಿ ಮತ್ತು ಒರಟಾಗಬೇಕು. ಆಗಲೇ ನಾವು ಉಳಿಯೋದು.
ಉ: ಭಾರತ ಎಂದರೆ ಏನು?
ಮಂಡ್ಯದ ಮೂಲೆಯಲ್ಲಿರುವ ನಮ್ಮ ಹಳ್ಳೀಲೂ ಮಂದಿ "ಇಂಡಿಯಾ" ಅಂತಾರೆ ಹೊರತು ಬಾರತ ಅಂತ ಹೇಳಲ್ಲ.
ಇಂಡಿಯಾ ಕನ್ನಡ ನಡಾವಳಿಗೆ ಒಪ್ಪುತ್ತೆ. ಈಗಾಗಲೆ ಇದರ ಬಗ್ಗೆ ಬರೆದಿದ್ದೆ. ಆದರೆ ' ಭಾರತ' ದಲ್ಲಿ 'ಭ' 'ಮಹಾಪ್ರಾಣ'ವಿದೆ.
ಮಹಾಪ್ರಾಣ ಕನ್ನಡ ಸೊಗಡಿಗೆ ಹೊಂದುವುದಿಲ್ಲ.
ನನಗೆ ಈ ಹಾಡು ನೆನಪಿಗೆ ಬಂತು.
....ಇಂಡಿಯ ಮಂಡಿಯ ಬೆಡಗಿಯ... ಸೊಬಗನು ನಾಚಿಸು ಹುಡುಗಿಯ..."
'ಭಾರತ' ಅನ್ನುವುದು ಈ 'ಶಿಶ್ಟರು' ಹೇರಿದ್ದು. ಅಲ್ಲಿ ಯಾವ ಜನಪದವೂ ಇಲ್ಲ. ನನಗೆ 'ಭಾರತ' ಅಂದಾಗ ಯಾವ ಜನಪದವೂ ನೆನಪಿಗೆ ಬರೊಲ್ಲ.
ಹಾಗಂತ ಇಂಡಿಯದ ಬದಲು 'ಭಾರತ' ಅನ್ನುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಭಾರತ ಎಂದರೆ ಏನು?
भरत (p. 202) [ bhar-atá ] m. [to be maintained], N. of a certain Agni who is kept alive by the care of men (V.); a certain Agni with a son of the same name (E.); actor; N. of various princes and men; N. of a tribe, the descend ants of Bharata (pl.); N. of a manual of the histrionic art composed by a certain Bharata: -rishabha, m. ep. of Visvâmitra; -khanda, n. N. of a division of Bhârata-varsha; -putra, m. son of Bharata, actor; -pura, n. N. of a city; -roha, m. N.: -ka, m. id.; -½rishabha, m. noblest among the Bharatas, ep. of various men; -vâkya, n. actor's speech = epilogue of a play; -sârdûla, m. tiger among --, -sreshtha, -sattama, spv. best of the Bharatas, id.; -sena, m. N. of a commentator on the Meghadûta, Raghuvamsa, Sisupâlavadha, and Bhattikâvya.
"N. of a certain Agni who is kept alive by the care of men (V.); a certain Agni with a son of the same name (E.);"
ಇಲ್ಲಿ "ಭರತ" ಹೆಸರಿನ ಅರ್ಥ ಹುಡುಕುವಾಗ ನನಗೆ ಸಿಕ್ಕಿದ್ದು ಮೇಲಿನ ಅರ್ಥ. ಅಗ್ನಿ ಗೆ ಸಮಾನಾರ್ಥಕವಾಗಿಯೂ ಭರತ ಪದವನ್ನು ಬಳಸುತ್ತಾರೆ ಅನ್ನಿಸುತ್ತದೆ. ಈ ಅಗ್ನಿಯ ಬಗ್ಗೆ ಅದಕ್ಕೆ ಸಂಬಂಧಪಟ್ಟಂತಹ ritual ಬಗ್ಗೆ ದಯವಿಟ್ಟು ತಿಳುದವರು ಬೆಳಕು ಚೆಲ್ಲುವಿರಾ?
ಉ: ಭಾರತ ಎಂದರೆ ಏನು?
hagadre kuvempu avaru yaake
JAYA BHAYAT JANANIYA TANUJAATE ANTA BAREDARU????
ನಿಮ್ಮವ,
ಗಿರೀಶ ರಾಜನಾಳ
ಉ: ಭಾರತ ಎಂದರೆ ಏನು?
"India" ಪದದ ಮೂಲ ಎಲ್ಲಿದೆ? ಮೊದಲ ಬಳಕೆ ಬಗ್ಗೆ ತಿಳಿದಿದೆಯೇ???
--ಶ್ರೀ
ಉ: ಭಾರತ ಎಂದರೆ ಏನು?
ಭಾಸತೇ=ಅನಿಸುತ್ತದೆ (ಅಱಿವಾಗುತ್ತದೆ)
ರಮನ್ತೇ=ಆನಂದ ಪಡುತ್ತಾರೆ
ತತ್ತ್ವತಾ=ಸತ್ಯತನ, ಹುರುಳು