January 22, 2011 - 5:29pm
ಅಕಸ್ಮಾತ್ತಾಗಿ ಈ ಲಿಂಕ್ ಸಿಕ್ಕಿದ್ವು
ಹಿಂದಿ ಹೇ ಹಮ್?!
http://www.ndtv.com/video/player/we-the-people/national-language-what-039-s-that/113722
http://ibnlive.in.com/videos/105001/diversity-unites-india-but-not-hindi.html
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಹಿಂದಿ ಹೇ ಹಮ್?!
ಸವಿತೃ ರವರೆ, ಈ ಕಾರ್ಯಕ್ರಮವನ್ನು ನಾ ಮೊದಲೇ ನೋಡಿದ್ದೆ. ಹಿಂದಿವಾಲ ಗಳಿಗೆ ಮೇಲಿರಿಮೆಯೆಂಬುದು ಸ್ವಲ್ಪ ಹೆಚ್ಚಾಗಿಯೇ ಇದೆ. ಹಿಂದಿ ಒಂದು ರಾಷ್ಟ್ರ ಭಾಷೆಯೆಂಬ ಭ್ರಮೆ. ವಾಸ್ತವದಲ್ಲಿ ಅದು ಭಾರತದಲ್ಲಿರುವ ೧೪ ಅಫಿಶಿಯಲ್ ಭಾಷೆಗಳಲ್ಲಿ ಒಂದು ಅಷ್ಟೇ. ಬೆಂಗಳೂರಿನಲ್ಲಷ್ಟೇ ಅಲ್ಲ ಎಲ್ಲಿಯೇ ಹೋದರೂ ಹಿಂದಿವಾಲಗಳು ತಮ್ಮ ಭಾಷೆಯಲ್ಲೇ ಶುರುಮಾಡುತ್ತಾರೆ, ನಮ್ಮಲ್ಲಿರುವ ಕನ್ನಡಿಗರು ಹಿಂದಿಯಲ್ಲೇ ಉತ್ತರ ಕೊಟ್ಟು ಅವರಿಗೆ ಅಹಂಕಾರವನ್ನು ಬರಸಿದ್ದಾರೆ. ನನಗೇನಾದರೂ ಹಿಂದಿಯಲ್ಲಿ ಶುರು ಮಾಡಿದರೆ ನಾ ಕನ್ನಡದಲ್ಲೇ ಉತ್ತರ ಕೊಡುತ್ತೇನೆ. ಅವರಾಗಿಯೇ ಅವರೆ ಇಂಗ್ಲೀಷಿಗೆ ಬರಬೇಕು ಹಾಗೆ ಮಾಡುತ್ತೇನೆ. ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡುವುದು ಎಂದು ಕನ್ನಡದಲ್ಲಿ ಪದೇ ಪದೇ ಹೇಳಿ ಅರ್ಥ ಮಾಡಿಸುತ್ತೇನೆ. ಹಿಂದಿ ಇಂಪೀರಿಯಲಿಸಂ ಇರುವುದು ಸತ್ಯವೇ ಆದರೆ ಅದಕ್ಕೆ ನಮ್ಮ ಜನಗಳು ಅವರೊಟ್ಟಿಗೆ ಉತ್ತಮ ಸಂಬಂಧ ಹೊಂದಲು, ಸ್ನೇಹ ಬೆಳೆಸಲು ಅವರಿಗೆ ತಲೆ ಬಾಗುವುದು ಮುಖ್ಯ ಕಾರಣ. 'ಅಯ್ಯೋ ಪಾಪ' ಅವರಿಗೆ ಕನ್ನಡ ಬರುವುದಿಲ್ಲವೆಂದು ಮೂವತ್ತು ವರ್ಷದಿಂದಲೂ ವಾಸಿಸುತ್ತಿರುವ, ಕನ್ನಡದ ಬಗ್ಗೆ ತಾತ್ಸಾರದಿಂದ ವಾಸಿಸುವ ಜನರಿಗೆ ಸಹಕಾರ ಕೊಡುವುದೇ ಕಾರಣ. ......ಆದರೆ ಇನ್ನೊಂದು ವಿಷಯ ನಮ್ಮ ಕಚೇರಿಯ ಬೆಂಗಾಲಿ, ಮರಾಠಿಗರು ನನ್ನ ಕನ್ನಡದ ಅಭಿಮಾನ, ಕನ್ನಡದಲ್ಲಿ ಕವಿತೆ ಬರೆಯುವ ಹುಚ್ಚು ನೋಡಿ ಬೇರೆ ಕನ್ನಡಿಗರಿಗೆ ನನ್ನ ನೋಡಿ ಕಲಿಯಲು ಹೇಳಿದ್ದು ಇದೆ. ಕನ್ನಡಕ್ಕೆ ದುಡಿಯುವ ನಾನು ನಿಜವಾದ ಗಂಡಸು ಎಂದು ಬೇರೆ ಕನ್ನಡಿಗರಿಗೆ ಮೂದಲಿಸಿದ್ದು ಉಂಟು...ಹ್ಹ ಹ್ಹ ಹ್ಹ ಅದು ಬಹುಶಃ ಅವರಿಗೆ ಕನ್ನಡ ಕಳೆಯುತ್ತಿರುವ ನೋವು ಅರ್ಥವಾಗಿದೆ....... ಹ್ಞೂ ....ಸಂಪದದಲ್ಲಿ ನಾವೆಷ್ಟೇ ಚರ್ಚೆ ನಡೆಸಿದರೂ ಅದು ವ್ಯರ್ಥ ಏಕೆಂದರೆ ಬಹಳಷ್ಟು ಕನ್ನಡಿಗರಿಗೆ ತನ್ನ ಭಾಷೆಯೇ ಪ್ರಭುತ್ವವನ್ನು ಸಾಧಿಸಬೇಕೆಂಬ ಹಂಬಲ ಕಡಿಮೆಯೇ ಹಾಗು ನಾವು ಹಿಂದಿಗೆ ತಲೆ ಬಾಗ ಬಾರದೆಂಬ ಸ್ವಾಭಿಮಾನವು ಕಡಿಮೆಯೇ. ನನ್ನ ಕನ್ನಡ ಕವಿತೆಯ ಕೊಂಡಿ http://sampada.net/a... . ಜೈ ಕರ್ನಾಟಕ ಮಾತೆ.