ಕನ್ನಡಕ್ಕೆ ಅನುವಾದ?!
We hear but we don’t listen.
We see but we don’t observe
We touch but we don’t feel
We talk but we don’t communicate
ಇವು ನಮ್ಮಲ್ಲಿ ಕಾಣುವ ಕೆಲವು ವಿಪರ್ಯಾಸಗಳು.
ಇವುಗಳನ್ನು ಹೇಗೆ ಕನ್ನಡ ಕ್ಕೆ ಅನುವಾದಿಸಬೇಕು? ... any try?!

- savithru ರವರ ಬ್ಲಾಗ್
- Login or register to post comments
- 407 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕನ್ನಡಕ್ಕೆ ಅನುವಾದ?!
ನಾವು ಕೇಳಿಸಿಕೊಳ್ಳುತ್ತೇವೆಯೇ ಹೊರತು ಆಲಿಸುವುದಿಲ್ಲ.
ಉ: ಕನ್ನಡಕ್ಕೆ ಅನುವಾದ?!
"ನಾವು ಕೇಳುತ್ತೇವೆಯೇ ಹೊರತು ಆಲಿಸುವುದಿಲ್ಲ"
ಉ: ಕನ್ನಡಕ್ಕೆ ಅನುವಾದ?!
We see but we don’t observe
ನಾವು ನೋಡುತ್ತೇವೆಯೇ ಹೊರತು ಕಾಣುವುದಿಲ್ಲ.
ಮನಗಾಣು, ಮನಗಂಡು - ಎಂಬ ಬಳಕೆ ನೆನಪಿಸಿಕೊಳ್ಳಿ,
ಉ: ಕನ್ನಡಕ್ಕೆ ಅನುವಾದ?!
We touch but we don’t feel
ನಾವು ನೇವರಿಸದೆ ಬರೀ ಮುಟ್ಟುತ್ತೇವೆ (ತಟ್ಟುತ್ತೇವೆ
ಅಂತಲೂ ಹೇಳಬಹುದು)
ಉ: ಕನ್ನಡಕ್ಕೆ ಅನುವಾದ?!
We talk but we don’t communicate = ನಾವು ಮಾತಾಡುತ್ತೇವೆಯೇ ಹೊರತು ಅರುಹುವುದಿಲ್ಲ.
ಉ: ಕನ್ನಡಕ್ಕೆ ಅನುವಾದ?!
ಕೇಳಿಸಿಕೊಳ್ಳುವೆವು, ಆದರೆ ಆಲಿಸೆವು.
ನೋಡುವುವು, ಆದರೆ ಕಾಣೆವು
ಸೋಕುವೆವು ಆದರೆ ....(?)
ಉಲಿಯುವೆವು ಆದರೆ ಮಾತಾಡೆವು
ಗಮನಿಸಿ
ಕೇಳಿಸಿಕೊಳ್ಳುವೆವು = ನಾವು ಕೇಳಿಸಿಕೊಳ್ಳುವೆವು.. ( ಇಲ್ಲಿ ’ನಾವು’ ಅಂತ ಬೇರೆಯಾಗಿ ಹೇಳಬೇಕಿಲ್ಲ )
ಹಾಗೆ
ಆಲಿಸೆವು = ನಾವು ಆಲಿಸುವುದಿಲ್ಲ...
ಉ: ಕನ್ನಡಕ್ಕೆ ಅನುವಾದ?!
ಸೋಕುವೆವು (ಮುಟ್ಟುವೆವು) ಆದರೆ ನೇವರಿಸೆವು.
ಉ: ಕನ್ನಡಕ್ಕೆ ಅನುವಾದ?!
ಮಾಯ್ಸ,
ಕೇಳಿಸಿಕೊಳ್ಳುವೆವು, ಆದರೆ ಆಲಿಸಿಕೊಳ್ಳುವುದಿಲ್ಲ
ನೋಡುವೆವು, ಆದರೆ ಕಾಣಿಸುವುದಿಲ್ಲ.
ಸೋಕುವೆವು ಆದರೆ ಅನಿಸುವುದಿಲ್ಲ
ಉಲಿಯುವೆವು ಆದರೆ ಅರುಹಲ್ಲ
ಅರುಪು=ಅರುಹು= communicate
ಕನ್ನಡದೊಳ್ ಅಲ್ಲದೇ ಬೇರ್ಯಾವ ನುಡಿಯೊಳ್ ಅರುಪಲ್ ಬಾರದೆನಗುಂ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡಕ್ಕೆ ಅನುವಾದ?!
ಶ್ರೀಕಾಂತ ಮಿಶ್ರಿಕೋಟಿಗಳು ಹೇಳಿದ್ದು.
೧. ಕೇಳ್ತೀವಿ ಆದರೆ ಕವಿಗೊಡುವುದಿಲ್ಲ.
೨. ನೋಡ್ತೀವಿ, ಗಮನಿಸುವುದಿಲ್ಲ.
೩. ಮುಟ್ತೀವಿ ನಲ್ಮೆಯಿಂದ ನೇವರಿಸುವುದಿಲ್ಲ
೪. ಮಾತಾಡ್ತೀವಿ ಆದರೆ ತಿಳಿಸುವುದಿಲ್ಲ.
ಉ: ಕನ್ನಡಕ್ಕೆ ಅನುವಾದ?!
೩. ಮುಟ್ತೀವಿ (ನಲ್ಮೆಯಿಂದ) ನೇವರಿಸುವುದಿಲ್ಲ.
ಉ: ಕನ್ನಡಕ್ಕೆ ಅನುವಾದ?!
ಕೇಳುತ್ತೇವೆ ಆದರೆ ಆಲಿಸುವುದಿಲ್ಲ
ನೋಡುತ್ಥೇವೆ ಆದರೆ ಗಮನಿಸುವುದಿಲ್ಲ
ಸ್ಪರ್ಷಿಸುತ್ತೇವೆ ಆದರೆ ಅನುಭವಿಸುವುದಿಲ್ಲ(ಅನಂದವನು?)
ಮಾತನಾಡುತ್ಥೇವೆ ಆದರೆ ಸಂವಹಿಸುವುದಿಲ್ಲ
ಸರಿಯಾ?
ಉ: ಕನ್ನಡಕ್ಕೆ ಅನುವಾದ?!
ಕೇಳಿದೆನಾದರೂ ಆಲಿಸಲಿಲ್ಲ
ನೋಡಿದೆನಾದರೂ ಕಾಣಲಿಲ್ಲ
ಮುಟ್ಟಿದೆನಾದರೂ ಸ್ಪರ್ಶಿಸಲಿಲ್ಲ
ಹೇಳಿದೆನಾದರೂ ಮನಮುಟ್ಟಲಿಲ್ಲ
“ಮನಮುಟ್ಟಲಿಲ್ಲ” ಬದಲಾಗಿ “ಮನತಲುಪಲಿಲ್ಲ” ಕೂಡ ಉಪಯೋಗಿಸಬಹುದೇನೋ?
-ನವರತ್ನ ಸುಧೀರ್
ಉ: ಕನ್ನಡಕ್ಕೆ ಅನುವಾದ?!
ಇನ್ನೊಂದು ಆವೃತ್ತಿ:
ಕೇಳಿದೆವಾದರೂ ಆಲಿಸಲಿಲ್ಲ
ನೋಡಿದೆವಾದರೂ ಕಾಣಲಿಲ್ಲ
ಮುಟ್ಟಿದೆವಾದರೂ ಸ್ಪರ್ಶಿಸಲಿಲ್ಲ
ಹೇಳಿದೆವಾದರೂ ಮನಮುಟ್ಟಲಿಲ್ಲ
“ಮನಮುಟ್ಟಲಿಲ್ಲ” ಬದಲಾಗಿ “ಮನತಲುಪಲಿಲ್ಲ” ಅಥವಾ ’ಮನತಟ್ಟಲಿಲ್ಲ” ಕೂಡ ಉಪಯೋಗಿಸಬಹುದೇನೋ?
-ನವರತ್ನ ಸುಧೀರ್
ಉ: ಕನ್ನಡಕ್ಕೆ ಅನುವಾದ?!
ನವರತ್ನ ಸುದೀರರೆ,
communicate ಮಾಡಿದಾಗಲೆಲ್ಲ ಮನಮುಟ್ತಲೇ ಬೇಕಂತ ಏನೂ ಇಲ್ಲ
communicate = ಅರುಹು ಇದು ಕನ್ನಡದಲ್ಲಿ ಸರಿಯಾದ ಪದ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡಕ್ಕೆ ಅನುವಾದ?!
ಕೇಳುವೆವು, ಕಿವಿಗೊಡಲೊಲ್ಲೆವು,
ನೋಡುವೆವು, ಕಾಣಲೊಲ್ಲೆವು,
ಮುಟ್ಟುವೆವು, ಅರಿಯಲೊಲ್ಲೆವು,
ಮಾತಾಡುವೆವು, ಒಬ್ಬರನ್ನೊಬ್ಬರು ತಿಳಿಯಲೊಲ್ಲೆವು.
(feel = ಅರಿವು.
feel ಆಗು = ಅರಿವಾಗು.)
ಉ: ಕನ್ನಡಕ್ಕೆ ಅನುವಾದ?!
ಒಲ್ಲೆವು = we dont agree
ಒಲ್ಲುವೆವು = we agree
we don't do = ಮಾಡೆವು
ಉ: ಕನ್ನಡಕ್ಕೆ ಅನುವಾದ?!
http://dsal.uchicago.edu/cgi-bin/philologic/getobject.pl?c.0:1:1011.burr...
ಉ: ಕನ್ನಡಕ್ಕೆ ಅನುವಾದ?!
ಒಪ್ಪಿದೆ.. ಆದರೆ.. ಮೇಲಿನ ಸಾಲುಗಳಲ್ಲಿ, we dont listen ಅಂಬುವದು we dont agree to listen ಎಂಬ ಬಗೆಯಲ್ಲೇ ಬಳಕೆಯಾಗಿದೆ...
ಇರಲಿ, ಅದನ್ನು ಹೀಗೂ ಹೇಳಿದರಾದೀತು...
ಕೇಳುವೆವು, ಕಿವಿಗೊಡೆವು,
ನೋಡುವೆವು, ಕಾಣೆವು,
ಮುಟ್ಟುವೆವು, ಅರಿಯೆವು,
ಮಾತಾಡುವೆವು, ಒಬ್ಬರನ್ನೊಬ್ಬರು ತಿಳಿಯೆವು.
ಉ: ಕನ್ನಡಕ್ಕೆ ಅನುವಾದ?!
ಕಿವಿಗೊಡು ಅನ್ನೋದು ಕೇಳು ಅನ್ನೋದಕ್ಕಿಂತ ಕಡ್ಮೆ ಕೇಳೋದು...
’ನೋಡು, ಏಸ್ಟ್ ಕೂಗಿದ್ರೂ ಕಿವಿಗೊಡ್ತಾನ ಅವ್ನು’..
listenಗೆ ಆಲಿಸು ಅನ್ನೋದು ಸರಿ. ಅಂತ ನನ್ನ ಅನ್ವು( ಅನ್ನುವಿಕೆ )
ಉ: ಕನ್ನಡಕ್ಕೆ ಅನುವಾದ?!
ನಂಗೆ ಈ ಪ್ರತಿಕ್ರಿಯೆ-ಪ್ರಯತ್ನ ಗಳನ್ನೂ ನೋಡಿ ಒಂದ್ ತರಾ ಖುಷಿ ಆಗ್ತಾ ಇದೆ .. ಇಷ್ಟೊಂದು ಜನರಲ್ಲಿ ಉತ್ಸಾಹ ಇರೋದು ಕಂಡು!...
ಎಲ್ಲರಿಗೂ ನನ್ನೀ.
ಸವಿತೃ
ಉ: ಕನ್ನಡಕ್ಕೆ ಅನುವಾದ?!
ಏನೋ ಒಂಥರಾ, ಏನೋ ಒನ್-ಥರಾ,
ಈ ಪ್ರೀತಿಯು, ಈ ರೀತಿಯು,
ಶುರುವಾದ ಆನಂತರ.
ಉ: ಕನ್ನಡಕ್ಕೆ ಅನುವಾದ?!
ಚನ್ನೀಲ,
'ತರ'ದ ಮ್ಯಾಲೆ ಹೊಸ ಹಾಡು ಕೇಳಿದ್ದೀಯ...
ತರ ತರ ತರ ತರ ಒಂತರ
ಯಾರು ಇಲ್ಲ ಕಣೆ ನಂತರ(ನನ್ನ ತರ)
ಎ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನು .....
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡಕ್ಕೆ ಅನುವಾದ?!
ತರ ತರ ನಮ್ ತರ
ಬೇರೆ ಯಾರು ಇಲ್ಲ ಕಣ್ರೀ ನಮ್ ತರ !!
( ನಮ್ ತರ = ಸಂಪದಿಗರ
ತರ )
ಸವಿತೃ