Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › savithru ರವರ ಬ್ಲಾಗ್

ಪ್ರಸವ ವೇದನೆ?!

October 27, 2007 - 1:20pm — savithru

ಈ ಲೇಖನ ಒಂದು ರೀತಿಯ ಸ್ವಗತ! ಈ ಸಂದರ್ಭವನ್ನು ಒಂದು ಕಡೆ "ದಾಖಲಿಸುವ".. ಅದರಿಂದ ಮುಂದೆ ಯಾವಗಲೋಮ್ಮೆ ಈ struggle ನ ನೆನೆಯುವ ಒಂದು ಪ್ರಯತ್ನ.

ಈ ಒಂದು ತಿಂಗಳು ಪೂರ್ತಿ tensions , pressures...ಹೀಗೆ. ಇವತ್ತು ಸಲ್ಪ ಆರಾಮು ಅನ್ನಿಸುತ್ತ ಇದೆ.
ಕೊನೆಗೂ ನನ್ನ ವೃತ್ತಿ ಜೀವನದ ಮೊದಲ Tapeout ನನ್ನಿಂದ ಸಾಧ್ಯವಾಯಿತು. ಒಂದು ರೀತಿಯಲ್ಲಿ ಖುಷಿ ಅನ್ನಿಸುತ್ತಾ ಇದೆ. ಈ ಕೊನೆಯ ಒಂದು ತಿಂಗಳು ಬೆಳಿಗ್ಗೆ ಸುಮಾರು ಹತ್ತು -ಹತ್ತೂವರೆಯಿಂದ ರಾತ್ರಿ ಹನ್ನೊಂದೂವರೆ.. ಹನ್ನೆರೆಡುವರೆ .. ಹೀಗೆ ಅದೆಷ್ಟು ಗಂಟೆ ಕೆಲಸ ಮಾಡಿದೇನೋ .. ಗೊತ್ತಿಲ್ಲ. ಕೊನೆಯ ತಿಂಗಳು ನಿಜವಾಗಿಯೂ ಪ್ರಸವ ವೇದನೆ!.

ಇದಕ್ಕಿಂತಲೂ ಮುಂಚೆ ನಾನು ಮಾಡಿದ Analog Circuit ಗಳ Layout ಗಳು fabrication ಗೆ ಹೋಗಿವೆ. ಆದರೆ ಅಲ್ಲಿ ನಾನು ಬೇರೆಯವರಿಗಾಗಿ ಕೆಲಸ ಮಾಡುತ್ತಿದ್ದೆ. ನನ್ನದೇ ಆದಂತಹ ಸ್ವಂತಹ ಜವಬ್ದಾರಿ ಇರಲ್ಲಿಲ್ಲ. ಯಾವುದೇ Tapeout ನನ್ನ ಹೆಸರಲ್ಲಿ ಆಗಿರಲಿಲ್ಲ. ಅಲ್ಲದೆ ಮುಂಚೆ ನಾನು ಕೇವಲ Layout ಗಳನ್ನು ಮಾಡುತ್ತಿದ್ದೆ. Circuit Design ಮಾಡಲು ಅವಕಾಶ ಸಿಕ್ಕಿರಲಿಲ್ಲ.

ಒಂದು ಪೂರ್ತಿ block ನ ಜವಬ್ದಾರಿ ನನ್ನ ಹೆಗಲ ಮೇಲೆ ಇತ್ತು. Circuit design ಮತ್ತು ಅದರ layout design . Semiconductors ಕ್ಷೆತ್ರದಲ್ಲಿಯೇ ನಿಜವಾಗಿಯೂ challnging ಆದಂತಹ PLL ( Phase Locked Loop) Design. ಆಗಂತ ಈ Tapeout ನಲ್ಲಿ ನನ್ನದು ಶೇಕಡ ನೂರರಷ್ಟೇನೂ ಇಲ್ಲ. ನನಗೆ ಒಂದು reference ಡಿಸೈನ್ ಕೊಡಲಾಗಿತ್ತು. ಅಲ್ಲದೇ ನನ್ನ PLL ನ Digital ಭಾಗವನ್ನು ನನ್ನ ಇಂಡಿಯಾ ಟೀಂ ನ ಸ್ನೇಹಿತ ಮಾಡಿಕೊಟ್ಟ. ಡಿಜಿಟಲ್ ಪಾರ್ಟ್ ನ Layout ಅನ್ನು ಇಲ್ಲಿಯ ಮಿತ್ಸುಭಿಷಿ ಯವರೇ ಮಾಡಿಕೊಟ್ಟರು. ನನ್ನದು ಏನಿದ್ದರೂ ನನ್ನ PLL ನ Analog ಭಾಗದ circuit ಮತ್ತು ಅದರ Layout ವಿನ್ಯಾಸ. Tapeout ನನ್ನ ಹೆಸರಲ್ಲೇ .. ಏಕೆಂದರೆ ಒಂದು ಪೇಸ್ ಲಾಕೆಡ್ ಲೂಪ್ ನಲ್ಲಿ ಈ ಅನಲಾಗ್ ಭಾಗ (charge-pump, Phase Frequency detector, Voltage Controlled Oscillator , Current Bias, ಮತ್ತು Loop Filter. )ತುಂಬಾ ಸೂಕ್ಷ್ಮ ಭಾಗ. ಸಮಯ ಮತ್ತು skill ಬೇಡುವನ್ತವು. ಡಿಜಿಟಲ್ ಭಾಗದಲ್ಲಿ Reference Divider ಮತ್ತು feedback ( Frequency) divider ಗಳು ಸಹಾ ತುಂಬ PLL ನ ಅತಿ ಮುಖ್ಯ ಭಾಗವಾದರೂ ಅಂತಹ ಅತಿ ಹೆಚ್ಚಿನ ಪ್ರಯತ್ನವನ್ನೇನೂ ( ಅನಲಾಗ್ ಭಾಗಗಳಿಗೆ ಹೋಲಿಸಿದರೆ) ಬೇಡುವುದಿಲ್ಲ.

PLL ಅಂದ್ರೆ ಏನು, ನನ್ನ PLL ನ ವಿಶೇಷ ಏನು, ಅಲ್ಲದೇ ಈ PLL ಕೆಲಸ ಮಾಡುವ ರೀತಿಯಲ್ಲಿ ನಮ್ಮ ಜೀವನದ ಬಗ್ಗೆ ಅತಿ ದೊಡ್ಡ ಪಾಠ ಇದೆ. ಮುಂದೆ ಯಾವಾಗಲಾದರೊಮ್ಮೆ ಆಸಕ್ತಿ ಬಂದಾಗ ಈ ಬಗ್ಗೆ ಬರೆಯುವೆ.

Ornamental seperator
  • savithru ರವರ ಬ್ಲಾಗ್
  • Login or register to post comments
  • 457 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 27, 2007 - 1:39pm — mahesha

ಉ: ಪ್ರಸವ ವೇದನೆ?! (Tapeout)

mahesha's picture

ನಿಮ್ಮ ಹೆರಿಗೆ ನೋವು ಇಳಿದುದಕ್ಕೆ ಸವಿಹಾರಯ್ಕೆಗಳು.. Smiling

ನಮ್ಮದು ಎಂದೂ ಮುಗಿಯದ ಬಸಿರು.. Smiling..

ಈ ಕಮೆಂಟು ಹಾಕಿದ್ದು ಆಪೀಸಿಂದಲೇ...., ಈಗೀಗ ಆಪೀಸ್ಯಾವುದು, ಮನೆಯಾವುದು ಅನ್ನೋ ಬೇರೆತನವೇ ಇಲ್ಲ.. ವೀಕೆಂಡು ನೀಟಾಗಿ ಹವಾಯ್ ಎಕ್ಕಡ ಮೆಟ್ಟಿಕೊಂಡು ಬಂದು ಕೆಲಸ ಮಾಡೋದು.. ವೀಕ್‌ದಿನ ವಸಿ ನೀಟಾಗಿರೋ ಬೂಟ್ ಹಾಕ್ಕೊಂಡು ಕೆಲಸ ಮಾಡೋದು..

ಇದೇ ಆಯ್ತು ಕಳೆದ ಮೂರೇಡುಗಳಿಂದ

  • Login or register to post comments
  • link
  • Email this ಪ್ರತಿಕ್ರಿಯೆ
October 27, 2007 - 6:43pm — savithru

ಉ: ಪ್ರಸವ ವೇದನೆ?! (Tapeout)

savithru's picture

>>ನಿಮ್ಮ ಹೆರಿಗೆ ನೋವು ಇಳಿದುದಕ್ಕೆ ಸವಿಹಾರಯ್ಕೆಗಳು.
ಹ ..ಹಾ.... ನಂನಿ!

>>ನಮ್ಮದು ಎಂದೂ ಮುಗಿಯದ ಬಸಿರು..
ಚೆನ್ನಾಗಿದೆ ಪದ ಬಳಕೆ.

>>ಈಗೀಗ ಆಪೀಸ್ಯಾವುದು, ಮನೆಯಾವುದು ಅನ್ನೋ ಬೇರೆತನವೇ ಇಲ್ಲ.
Tepeout date ನಿರ್ಧಾರ ಆದ್ಮೇಲೆ , ಕೊನೆ ಕೆಲವು ದಿನಗಳಲ್ಲಿ ನಮಗೆ ತುಂಬ ಒತ್ತಡ ಇರುತ್ತೆ. ಇಲ್ಲ ಅಂದ್ರೆ ನಾವು ಸ್ವಲ್ಪ relax ಆಗಿರ್ತೇವೆ!.

ಆದರೂ ಆದಷ್ಟು ಜಲ್ದಿ ರಿಟೈರ್ ಆಗಬೇಕು ಅಂದುಕೊಂಡಿದ್ದೇನೆ!

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
October 28, 2007 - 1:47pm — mahesha

ಉ: ಪ್ರಸವ ವೇದನೆ?! (Tapeout)

mahesha's picture

ನಾನು ರಿಲಾಕ್ಸ ಮಾಡಲು ಯಾವುದಾದ್ರು ಹೊತ್ಗೆ ಓದ್ತೀನಿ.. ಆದ್ರೆ.. ಹಲವು ಸರತಿ.. ಆ ಹೊತ್ಗೆಗಳೂ ತಲೆ ತಿಂದು ನೆಮ್ಮದಿ ಕಸಿಕೊಳ್ತವೆ.

ಹಾಗೇ ಸಿನಿಮಗಳು.. ಕೂಡ..

ಅದಕ್ಕೆ ನಾನು ರಿಲಾಕ್ಸ್ ಅನ್ನೋದೇ ಇಲ್ಲ.....! ಇಲ್ವೇ ಯಾವಾಗ್ಲೂ ರಿಲಾಕ್ಸ್ ಅನ್ನೋ ಪಾಡು ತಲುಪಿದ್ದೀನಿ.

ಸಕ್ಕತ್ ಡೊಂಗಿ ಅನ್ನಿಸ್ತದೆ ಅಲ್ವ?

  • Login or register to post comments
  • link
  • Email this ಪ್ರತಿಕ್ರಿಯೆ
October 27, 2007 - 9:44pm — ವೈಭವ

ಉ: ಪ್ರಸವ ವೇದನೆ?! (Tapeout)

ವೈಭವ's picture

ನಿಮ್ಮ ಪಿಎಲ್ಲೆಲ್ ಪಳಗು/ಅನುಬವ ನನ್ನ ಪಳಗನ್ನು ತಾಜಾ ಮಾಡಿತು.
ಹಿಂದೊಮ್ಮೆ ಒಂದು ಪಿ ಎಲ್ ಎಲ್ ನ ಸರಿಯಾಗಿ ಕೆಲಸ ಮಾಡಿಸಲು ಒಂದು ತಿಂಗಳು ತೆಗೆದುಕೊಂಡಿದ್ದೆ. Smiling
ಈ ಜಿಟ್ಟರ್ ಸಿಕ್ಕಾಪಟ್ಟೆ ಕೆಟ್ಟದ್ದು. ಎಲ್ಲಿಂದಲಾದರೂ ಬಂದು ತೂರ್ಕಂಡಬಿಡುತ್ತೆ.

----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಟ್ರಾನ್ಸಿಸ್ಟರ್.
  • mac osx keyboard layout
  • ನನ್ನಮ್ಮ
  • ಗೂಗ್ಲ್ ತರಲೆ
  • ತಂದೆಯ ದಿನ
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator