ಈ ವಚನ ಬಿಡಿಸ್ತೀರಾ?
ಬಯಲ ರೂಪ ಮಾಡಬಲ್ಲಾತನೆ ಶರಣನು,
ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟೆ ಕೂಡಲಸಂಗಮದೇವ !
ಇದು ಬಸವಣ್ಣ ನ ವಚನ ಎಂದು ಅಂಕಿತವನ್ನು ನೋಡಿದರೆ ಸಾಕು ಎಲ್ಲರಿಗೂ ಗೊತ್ತಾಗುತ್ತೆ. ಅದ್ರೆ ವಚನ ಮಾತ್ರ ನಂಗೆ ಅರ್ಥ ಆಗ್ಲಿಲ್ಲ.
ಇಲ್ಲಿ "ರೂಪ", "ಬಯಲು" , "ಶರಣ" , "ಲಿಂಗಾನುಭಾವಿ" ಪದಗಳ ಬಗ್ಗೆ ತಿಳಿದವರು ದಯವಿಟ್ಟು ಬೆಳಕು ಚೆಲ್ಲಿ.
ಬಯಲ ರೂಪ ಮಾಡುವುದು ಅಂದ್ರೆ ಏನು? ಹೇಗೆ?!
ರೂಪ ಬಯಲು ಮಾಡುವುದು ಅಂದ್ರೆ ಏನು?

- savithru ರವರ ಬ್ಲಾಗ್
- Login or register to post comments
- 401 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಈ ವಚನ ಬಿಡಿಸ್ತೀರಾ?
ನನಗೆ ತಿಳಿದ ಹಾಗೆ ಹೇಳ್ತೀನಿ. ಇಲ್ಲಿ ಬಯಲು ಮತ್ತು ರೂಪ ಎರಡು ಸೂಚ್ಯಾರ್ಥ ಪ್ರತಿಮೆಗಳು.
ಬಯಲು = ನಿರಾಕಾರ
ರೂಪ = ಸಾಕಾರ
ಉಳಿದದ್ದು ನೀವು ಊಹಿಸಬಹುದು.
ಉ: ಈ ವಚನ ಬಿಡಿಸ್ತೀರಾ?
ಕೇವಂ ರವರು ಹೇಳಿದ್ದು ಸರಿ. ಬಯಲು ಎಂದರೆ ನಿರಾಕಾರ, ಶೂನ್ಯ ಮತ್ತು ಸರ್ವವ್ಯಾಪಿಯಾದ ಶಿವತತ್ತ್ವ. ರೂಪ ಎಂದರೆ ಆಕಾರವುಳ್ಳದ್ದು, ಮಾಯೆಗೆ ಒಳಪಟ್ಟದ್ದು, ಇವೆರೆಡರ ಭೇದ ತಿಳಿದುಕೊಂಡವರು ಶರಣರು. ರೂಪಕ್ಕೆ ಮರುಳಾಗದೇ, ಮಾಯೆಯನ್ನು ಗೆದ್ದು ಬಯಲಿನತ್ತ ಹೋಗುವವರು. ಅಂದರೆ ಶಿವನತ್ತ ಹೋಗುವವರು. ಶಿವನನ್ನ ತಿಳಿದುಕೊಂಡ ಶರಣರು ಎಂದೂ ರೂಪಕ್ಕೆ ಮರಳು ಆಗುವುದಿಲ್ಲ. ಆ ರೂಪದಲ್ಲಿಯೇ ಶಿವನನ್ನು ಕಾಣುತ್ತಾರೆ. ಅಂಗ ಮತ್ತು ಲಿಂಗದ ಸಾಮರಸ್ಯವನ್ನು ತಿಳಿದ ಅನುಭಾವಿಗಳು ಅವರು, ಲಿಂಗಾನುಭವಿಗಳು ಅವರು. ಇದನ್ನು ತಿಳಿಯದೇ ಇದ್ದರೆ ಅವರು ಹೇಗೆ ಶರಣರೆಂದೆನಿಸಿಕೊಳ್ಳುತ್ತಾರೆ? ಮತ್ತು ಮಾಯೆಯ ಬಲ ತಿಳಿದು ಅದರಿಂದ ದೂರವಿರುವ ಅನುಭಾವಿ ಮೋಹಕ್ಕೆ ಒಳಗಾಗದೇ ಇರುವುದರಿಂದ ಅವರು ಲಿಂಗಾನುಭವಿಗಳಾಗಿರುತ್ತಾರೆ. ಇಲ್ಲದಿದ್ದರೆ ಅವರನ್ನು ಹಾಗೆಂದು ಕರೆಯಬಹುದೇ? ಇದನ್ನು ತಿಳಿದ ಶರಣರು ಸಹಜವಾಗಿ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾರೆ. ಎಂದು ಬಸವಣ್ಣನವರು ಇಲ್ಲಿ ಹೇಳಿದ್ದಾರೆ (ನನಗೆ ಹೊಳೆದ ಅರ್ಥವಿದು. ಇನ್ನೂ ವಿವರಣೆ ಬೇಕಾದರೆ ನಾನು ಹೆಚ್ಚಿನ ಪುಸ್ತಕಗಳನ್ನು ನೋಡಿ ಹೇಳುತ್ತೇನೆ.)
ಇನ್ನು ಅರ್ಥಗಳೂ: ರೂಪ : ಕಣ್ಣಿಗೆ ಕಾಣಿಸಿಕೊಳ್ಳುವ ಎಲ್ಲವು. ಆದರೆ ಕಣ್ಣಿಗೆ ಮೋಹವನ್ನುಂಟುಮಾಡುವ, ಸಾಧಕನಿಗೆ ಅಡ್ಡಿಯನ್ನುಂಟುಮಾಡುವ ರೂಪಗಳಿವು.
ಶರಣ: ಭಕ್ತ, ಶಿವ ಭಕ್ತ.
ಲಿಂಗಾನುಭವಿ: ಅಂಗ ಮತ್ತು ಲಿಂಗಗಳ(ಶಿವ) ಸಾಮರಸ್ಯವನ್ನು ತಿಳಿದುಕೊಂಡಿರುವ ಭಕ್ತ. ಗುರುಕೃಪೆಯಿಂದ ಜ್ಞಾನವನ್ನು ಪಡೆದು ದೇಹವೇ ದೇಗುಲವೆಂದು ತಿಳಿದು ಶಿವಾನುಭವಿಯಾದವನು.
(ಈ ವಿವರಣೆ ಪರಿಪೂರ್ಣವೆಂದು ನಾನು ತಿಳಿದುಕೊಂಡಿಲ್ಲ)
ಉ: ಈ ವಚನ ಬಿಡಿಸ್ತೀರಾ?
ಈ ವಚನಗಳನ್ನು ಇಷ್ಟು ಸರಳಗೊಳಿಸಿದ್ದಾಕ್ಕಗಿ ತುಂಬಾ ವಂದನೆಗಳು.
ಮುಂದೆಯೂ ನಿಮ್ಮ ಉತ್ತರಗಳಿಗಾಗಿ / ವಿವರಣೆಗಳಿಗಾಗಿ ವಚನಗಳೊಂದಿಗೆ ಕಾಯುತ್ತಿರುತ್ತೇನೆ! ದಯವಿಟ್ಟು ಬರೆಯುತ್ತಾ ಇರಿ.
ಸವಿತೃ