25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹಾಸ್ಯ

May 14, 2009 - 11:09am
sb1966
ಇನ್ಸೆಪೆಕ್ಟರ್: "ಏನ್ರೀ ಕರಿಯಪ್ಪ ಸೌತ್ ಆಫ್ರಿಕಾಗೆ ಟ್ರಾನ್ಸ್ಫರ್ ಕೇಳಿದೀರಾ!"
ಕಾ.ಕ: "ಅಲ್ಲ ಸಾ, ಲಾಸ್ಟ್ ಇಯರ್ರು ಚೀರ್ ಲೀಡರ್ಸ್ ಪಕ್ಕದಾಗೇ ಡ್ಯೂಟಿ ಹಾಕಿದ್ರಿ. ಈ ವರ್ಸ ಬುಟ್ಬುಟ್ರಲ್ಲಾ ಸಾ. ಅದಕ್ಕೆ!"

ಇನ್ಸೆಪೆಕ್ಟರ್: "ಏಲ್ರೀ ನಿನ್ನೆ ಹಿಡಿದಿದ್ದ ಕೈದಿ ಕಾಣ್ತಾ ಇಲ್ವಲ್ಲಾ?"
ಕಾ.ಕ: "ಮೇಲಿಂದ ಆರ್ಡರ್ ಮಾಡಿದ್ರು, ಅದಕ್ಕೇ ಬುಟ್ಬುಟ್ಟೆ!"
ಇನ್ಸೆಪೆಕ್ಟರ್: "ಏನ್ ಆರ್ಡರ್ ಮಾಡಿದ್ರು?"
ಕಾ.ಕ: "ಕೈದಿಯ ಅಣ್ಣನ ಬಾರ್ ನಿಂದ ಎರ್ಡು ಕ್ವಾರ್ಟರ್ ಮತ್ತೆ ಕೋಳಿ ಬಿರ್ಯಾನಿ ಆರ್ಡರ್ ಬಂತು"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on
ಕಾನ್ಸ್ಟೇಬಲ್ ಕರಿಯಪ್ಪಾ...ಆಫ್ರಿಕಾಕ್ಕೆ ಹೋದ್ರಾ ಇಲ್ವಾ? ಟೀವೀನಾಗೆ ಕ್ರಿಕೆಟ್ ನೋಡೋವಾಗ ಕರ್ರಗಿನ ಕಾನ್ಸ್ಟೇಬಲ್ ಒಬ್ರನ್ನ ನೋಡ್ದಂಗಾಗಿತ್ತು... ಹಾಸ್ಯ ಸಖತ್ ಆಗಿದೆರೀ, ಸದ್ಯದ ಮದ್ರಾಸಿ ಕನ್ನಡಿಗರೇ... :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಅಲ್ಲ, 'ಸಧ್ಯದ मद्रासी ಕನ್ನಡಿಗ!' :P
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ನಿಮ್ಮ "ಸಂಪದದಲ್ಲಿ ಕನ್ನಡದಲ್ಲೇ ಬರೆಯಬೇಕು" ಎಂಬ ನಿಯಮ ಮೀರುವ ಧೈರ್ಯ ಬರಲಿಲ್ಲವೇನೋ ನನಗೆ... ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಉತ್ತರ ಭಾರತಕ್ಕೆ ಹೋದರೆ... ಅಲ್ಲಿ ನಾವೆಲ್ಲರೂ ಅಂದ್ರೆ, ಕರ್ನಾಟಕ, ಆಂಧ್ರ, ಮಲಯಾಳಿ, ತಮಿಳ, ಎಲ್ಲರೂ ಮದ್ರಾಸಿಗಳೇ!!. ಹಾಗಾಗಿ ಇವರು ಸಧ್ಯಕ್ಕಂತೂ ಅಲ್ಲ ಮುಂಚೆ , ನಂತರವೂ ಮದ್ರಾಸಿನೆ ! ;) (ಹೀಗೀಗ ಸ್ವಲ್ಪ awareness ಬರ್ತಾ ಇದೆ.)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shashikanth. Birge on
>>>ಉತ್ತರ ಭಾರತಕ್ಕೆ ಹೋದರೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sb1966 on
:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಶಶಿಕಾಂತ ಅವರೇ ಇದರಲ್ಲಿ ಸಿಟ್ಟು ಮಾಡಿಕೊಳ್ಳುವ ವಿಷಯವೇನೂ ಇಲ್ಲ. ಉತ್ತರದವರಿಗೆ ದಕ್ಷಿಣದ ಕನ್ನಡ ತಮಿಳು, ತೆಲುಗು ಮಲಯಾಳೀ ಇತ್ಯಾದಿ ಭಾಷೆ/ಜನಗಳ ಬಗ್ಗೆ ಪರಿಚಯವಿಲ್ಲ. ದಕ್ಷಿಣದವರೆಲ್ಲಾ ಮದ್ರಾಸಿಗಳೇ/ ತಮಿಳರೇ ಅಂತ ಹೆಚ್ಚಿನವರು ಅನ್ಕೊಂಡಿದಾರೆ. ನಾವು ನಿಧಾನವಾಗಿ ಪರಿಚಯ ಮಾಡಿಕೊಡಬೇಕು ಅಷ್ಟೇ.! ನಂದು ಬೆಂಗಳೂರು ಅಂದಾಗ... ಒಬ್ಬ ಸಿಖ್ಖ್, ನನ್ನ ಜೊತೆ ತಮಿಳು ಬಗ್ಗೆ ಮಾತಾಡೋಕೆ ಶುರು ಮಾಡಿದ! ಆಗ ನಾನು ತಾಳ್ಮೆಯಿಂದಾನೆ ಬೆಂಗಳೂರು ಕರ್ನಾಟಕದಲ್ಲಿ ಇರೋದು.. ಅಲ್ಲಿ ಕನ್ನಡ ಮಾತಡೋದು ಅಂತ ಪರಿಚಯ ಮಾಡಿಕೊಟ್ಟ ಮೇಲೆ ಅವನಿಗೆ ಅರ್ಥ ಆಯ್ತು! :) ಕೊಸರು:: ಅವರು ಮದ್ರಾಸಿ ಅನ್ನೋದನ್ನು ಬೈಯ್ಯುವ ರೀತಿಯಲ್ಲೂ ಬಳಸುತ್ತಾರೆ. ( ಇಲ್ಲಿ ಕೆಲವರು ಶೂದ್ರ / ಶೂದ್ರ ಮುಂಡೇದೂ ಅಂತಾರಲ್ಲ ಹಾಗೆ! )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shashikanth. Birge on
ಯಾವ ಡಿಪಾರ್ಟ್ಮೆಂಟ್ ನಲ್ಲಿ ಕೆಲ್ಸಕಿದ್ದಿರಾ?? ಪೋಲಿಸ್ನೋರ ಹಿಂದೆ ಬಿದ್ದಿದ್ದಿರಾ? -- ಶಶಿ ಬಿರ್ಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sb1966 on
ನಾನು ಎಲ್ಲಾ ಟ್ರಾಫಿಕ್ ರೂಲ್ಸ್ ಅನುಸರಿಸ್ಕೊಂಡು ಗಾಡಿ ಓಡಿಸ್ತಾ ಇರೋದ್ರಿಂದ ಅವ್ರೇ ನನ್ನ ಹಿಂದೆ ಬಿದ್ದಿದ್ದಾರೆ ಸ್ವಾಮೀ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.