20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತಂದೆಯವರ ನೆನಪುಗಳು - ಭಾಗ ೨

April 2, 2009 - 1:33pm
Shamala
http://www.sampada.n... - ಭಾಗ - ೧ ಅಪ್ಪನಿಗೆ ಸೊಗಸಾಗಿ ಅಡುಗೆ ಮಾಡಲು ಕೂಡ ಬರುತ್ತಿತ್ತು. ತಿಂಗಳಿಗೆ ಮೂರು ದಿನ ಅಪ್ಪ ನನಗೆ ಸ್ನಾನ ಮಾಡಿಸಿ, ಲಕ್ಷಣವಾಗಿ ಎರಡು ಜಡೆ ಹೆಣೆದು, ಶಾಲೆಗೆ ಕಳುಹಿಸುತ್ತಿದ್ದರು. ೧೨ ಘಂಟೆಗೆ ಶಾಲೆಯಿಂದ ಮರಳುವ ವೇಳೆಗೆ ಸೊಗಸಾದ ಅನ್ನ, ಹುಳಿ / ಸಾರು ಎಲ್ಲಾ ತಯಾರಾಗಿರುತ್ತಿತ್ತು. ಅಪ್ಪ ಸಾರು ಕುದಿಸುತ್ತಿದ್ದರೆ, ಅದರ ಘಮ ರಸ್ತೆಯವರೆಗೂ (ನಮ್ಮನೆ ಉದ್ದಕ್ಕೆ, ಅಡಿಗೆ ಮನೆ ರಸ್ತೆಯಿಂದ ದೂರದಲ್ಲಿತ್ತು) ಬರುತ್ತಿತ್ತು. ಮನೆಯಲ್ಲಿ ಅಮ್ಮ ಬೆಳಗಿನ ತಿಂಡಿಗೆ ಉಪ್ಪಿಟ್ಟು ಮಾಡಿದಾಗಲ್ಲೆಲ್ಲಾ, ಅಪ್ಪನಿಗೆ ತಕ್ಷಣ ಯಾವುದಾದರೂ ತುರ್ತು ಸಭೆಯ ಕರೆ ಬಂದು, ಅವಸರದಲ್ಲಿ ನಂಗೆ ತಿಂಡಿ ಬೇಡ ಕಣೆ ಎಂದು ಹೊರಟುಬಿಡುತ್ತಿದ್ದರು ! ಪ್ರತಿ ಹಬ್ಬದ ದಿನವೂ, ಊಟ ಜಾಸ್ತಿಯಾಗಿರತ್ತೆ ಅಂತ, ನಮಗೆಲ್ಲಾ "ಬೀಡಾ" ತರಿಸಿಕೊಡುವುದನ್ನು ಮರೆಯುತ್ತಿರಲಿಲ್ಲ. ಮಧ್ಯಾನ್ಹದ ಊಟವಾದ ನಂತರ, ನಾವೆಲ್ಲಾ ಸೇರಿ ಕೇರಂ ಆಡುತ್ತಿದ್ದೆವು. ಅಪ್ಪ ಆಟ ಶುರುಮಾಡಿದರೆ ಸಾಕು, ನಾಲಕ್ಕೂ ಕಡೆ ಕಾಯಿ ಹೋಗುತ್ತಿತ್ತು. ಆದ್ದರಿಂದ ನಾನ್ಯಾವಾಗಲೂ ಅಪ್ಪನ ಜೊತೆ. ನೇರವಾಗಿ ಹೇಗೆ ಗುರಿ ಇಡಬೇಕೆಂದು ನನಗೆ ಅಪ್ಪನೇ ಹೇಳಿಕೊಟ್ಟಿದ್ದು. ಕೇರಂ ಬೇಜಾರಾದರೆ, ೧೩ ಎಲೆ ಹಾಕಿಕೊಂಡು ರಮ್ಮಿ ಆಡುತ್ತಿದ್ದೆವು. ಹೆಣ್ಣು ಮಕ್ಕಳಿಗೆ ಇಸ್ಪೀಟು ಕಲಿಸುತ್ತೀರ ಎಂದು ನಮಗಾಗಿ ಅಪ್ಪ ಅದೆಷ್ಟು ಸಲ ಬೈಗುಳ ತಿಂದಿದ್ದರೋ.... ಸಿನಿಮಾ ಟಾಕೀಸಿನ ಮ್ಯಾನೇಜರ್ ಅಪ್ಪನ ಸ್ನೇಹಿತರೇ.. ಸರಿ ಅಪ್ಪ ಬಂದು ಸಿನೆಮಾ ಚೆನ್ನಾಗಿದ್ಯಂತೆ, ಆನಂದ್ ಹೇಳಿದ್ರು, ಹೋಗ್ರೇ ಎಂದು ದುಡ್ಡು ಕೊಟ್ಟು ನನ್ನನ್ನೂ ನನ್ನ ಎರಡನೆಯ ಅಕ್ಕನನ್ನೂ ಕಳುಹಿಸುತ್ತಿದ್ದರು... ವಾಪಸ್ಸು ಬಂದಮೇಲೆ ಕೋಪದಿಂದ ಅಮ್ಮ ಕಾಫಿ ಕೊಡದಿದ್ದಾಗ, ಅಪ್ಪ ನಾವು ಸಿನೆಮಾ ನೋಡಿ ಬರುವವರೆಗೂ ಕಾಯುತ್ತಿದ್ದು, ಕಾಫಿ ಮಾಡಿಸಿ, ನಮಗೂ ಕೊಡಿಸಿ, ತಾವೂ ಕುಡಿಯುತ್ತಿದ್ದರು! ಇಂತಹ ಚಿಕ್ಕ ಚಿಕ್ಕ ನೆನಪುಗಳು ನೂರಾರು.. ಅದೆಷ್ಟೊಂದು ಹಿತವಾಗಿವೆ ಅಲ್ವಾ ? ಧ್ವನಿ ಏರಿಸಿ ಯಾವತ್ತಿಗೂ ಅಪ್ಪ ನಮ್ಮನ್ನು ಖಂಡಿಸಿದ ನೆನಪೇ ನನಗಿಲ್ಲ. ಬೇಸಿಗೆ ರಜದಲ್ಲಿ, ಮಧ್ಯಾನ್ಹದ ಬಿಸಿಲಲ್ಲಿ, ನಮಗಾಗಿ ಐಸ್ ಕ್ಯಾಂಡಿ ಫ್ಯಾಕ್ಟರಿಗೆ ಹೋಗಿ ಸ್ಟೀಲ್ ಕ್ಯಾರಿಯರ್ ನಲ್ಲಿ ಐಸ್ ಕ್ಯಾಂಡಿ ತಂದು ಕೊಟ್ಟಿದ್ದನ್ನು ನಾ ಹೇಗೆ ತಾನೇ ಮರೆಯಲಿ ? ಬಿ ಹೆಚ್ ರಸ್ತೆಯಲ್ಲಿ ಹೋಗುವಾಗ, ಸೀರೆ ಅಂಗಡಿ ಬೊಂಬೆಗೆ ಉಡಿಸಿದ್ದ ಸೀರೆ ಚೆನ್ನಾಗಿತ್ತೆಂದು, ನಮ್ಮನ್ನು ಅಂಗಡಿಗೆ ಸೀರೆ ಕೊಳ್ಳಲು ಕಳುಹಿಸಿದ್ದರು ಅಪ್ಪ... ಅಮ್ಮ ಊರಿಗೆ ಹೋದಾಗ ಮನೆ ಖರ್ಚಿಗೆ ಕೊಟ್ಟು ಹೋಗುತ್ತಿದ್ದ ದುಡ್ದಿಗೆ ನಾವು ಸರಿಯಾಗಿ ಲೆಖ್ಕ ಬರೆದಿಡಬೇಕಿತ್ತು, ಆದರೆ ನಾವು ಸಿನಿಮಾ ನೋಡಲು ಖರ್ಚು ಮಾಡಿದರೆ ಅಮ್ಮನಿಗೆ ಸಿಟ್ಟು ಬರುತ್ತಿತ್ತು. ನಾವು ಅದೆಲ್ಲವನ್ನೂ "ಮಿಸೆಲೇನಿಯಸ್" ಎಂದು ಬರೆಯುತ್ತಿದ್ದೆವು (ಅಮ್ಮ, ಅಪ್ಪ ಇಬ್ಬರೂ ಇಲ್ಲದಿದ್ದರೆ, ನಾನೂ ನನ್ನ ಅಕ್ಕ ಇಬ್ಬರೂ ಬೆಳಗಿನ ಆಟ, ಮ್ಯಾಟಿನಿ, ಅಂತ ನಮ್ಮೂರಲ್ಲಿ ಇದ್ದ ೪ ಸಿನೆಮಾ ಟಾಕೀಸಿನಲ್ಲೂ ಸಿನೆಮಾ ನೋಡುತ್ತಿದ್ದೆವು :-) ) ಅಮ್ಮ ಕೋಪಿಸಿಕೊಂಡರೆ, ಅಪ್ಪ ಬಿಡೇ ಪಾಪ ಮಕ್ಕಳು ಸಿನೆಮಾ ನೋಡಿರ್ತಾವೆ ಅಷ್ಟೇ ತಾನೆ ಎಂದು ನಮ್ಮನ್ನು ವಹಿಸಿಕೊಳ್ಳುತ್ತಿದ್ದರು.. ಇಂಥಾ ಸಹ್ರುದಯರು ನನ್ನ ಅಪ್ಪ ....... ಮುಂದುವರೆಯುವುದು... http://www.sampada.n... ಭಾಗ - ೩
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on
>>ಅಮ್ಮ ಕೋಪಿಸಿಕೊಂಡರೆ, ಅಪ್ಪ ಬಿಡೇ ಪಾಪ ಮಕ್ಕಳು ಸಿನೆಮಾ ನೋಡಿರ್ತಾವೆ ಅಷ್ಟೇ ತಾನೆ ಎಂದು ನಮ್ಮನ್ನು ವಹಿಸಿಕೊಳ್ಳುತ್ತಿದ್ದರು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on
ನಮಸ್ಕಾರ ಆಸು ಸಾರ್ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹೌದು ಸಾರ್ , ಅಮ್ಮನ ಕಾಳಜಿ ಸರಿಯಾಗೇ ಇತ್ತು, ಆದ್ದರಿಂದಲೇ ಈಗಲೂ ದುಂದುವೆಚ್ಚ ಮಾಡುವುದು ನನ್ನಿಂದಾಗದು. ಅದರಿಂದಲೇ ಈಗ ಅಪ್ಪನ ಪ್ರೀತಿ ಮತ್ತು ಅಮ್ಮನ ಕಾಳಜಿಯನ್ನು, ದಿನವೂ ನೆನಪಿಸಿಕೊಳ್ಳುತ್ತಿರುತ್ತೇನೆ. ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sm.sathyacharana on
ಶ್ಯಾಮಲಾರವರೇ.. ಯಾವೂರು ನಿಮ್ದು? ಬಿ.ಎಚ್. ರಸ್ತೆ ಎಲ್ಲಿಯದ್ದು? ತುಂಬಾ ಖಶಿ ಆಗುತ್ತೆ ಓದ್ತಾ ಓದ್ತಾ.. ದಯವಿಟ್ಟು.. ಹೀಗೇ ಮುಂದುವರಿಸಿ.. ನಿಮ್ಮೊಲವಿನ, ಸತ್ಯ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on
ಸತ್ಯ ಚರಣರೇ, ನೀವು ಓದಿದ ಸಹ್ಯಾದ್ರಿ ಕಾಲೇಜಿನ ಪಕ್ಕದೂರಿನವಳೇ ನಾನು....... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinutha.mv on
ಎಲ್ಲ ಅಪ್ಪ೦ದಿರೂ ಹೀಗೆನಾ ಅನಿಸ್ತಿದೆ. ನಮ್ತ೦ದೆನೂ, ಅಮ್ಮ ಊರಿಗೆ ಹೋದಾಗ ಸೊಪ್ಪಿನ ಸಾರು ಮಾಡೋರು. ಪರಿಮಳ ಪಕ್ಕದ ಮನೆಗೆಲ್ಲ ಹೋಗಿ, ಅವರಿಗೂ ಪಾರ್ಸೆಲ್ ಹೋಗ್ತಾ ಇತ್ತು :) ಕೇರ೦ ಅಡಿಸ್ತಾ ಆಡಿಸ್ತಾನೆ ರೇಖಾಗಣಿತ, ಭೌತಶಾಸ್ತ್ರ ಹೇಳಿಕೊಟ್ಟಿದ್ದು. ರಮ್ಮಿ ಆಡಬೇಕಾದ್ರೆ ಮೋಸ ಹೇಗೆ ಮಾಡೋದು ಅನ್ನೋದನ್ನು ಅವ್ರಿ೦ದಾನೆ ಕಲ್ತಿದ್ದು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ವಿನುತರವರೆ, ಅಪ್ಪಂದಿರಿಗೆ ಹೆಣ್ಣು ಮಕ್ಕಳ ಮೇಲೆ ಕೊಂಚ ಅಧಿಕ ಅನ್ನಿಸುವಂತಹ ಪ್ರೀತಿ ಇರತ್ತೆ. ಅಪ್ಪ ಎಂದರೇ.... ನಡೆದಾಡುವ ವಿಶ್ವಕೋಶ ಎಂಬರ್ಥ ಎಲ್ಲಾ ಮಕ್ಕಳಿಗೂ ಇರತ್ತೆ ಅಲ್ವೇ ? ಪಕ್ಕದಲ್ಲಿ ಕುಳಿತವರ ಕೈಯಲ್ಲಿ ಯಾವ ಯಾವ ಎಲೆ ಇದೆಯೆಂದು ಹೇಗೆ ನೋಡುವುದೆಂದೂ ಅಪ್ಪ ನನಗೂ ಹೇಳಿಕೊಟ್ಟಿದ್ದರು !!!! :-) ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.