24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತ್ಯಾಗ ರಾಗ ಸಂಯೋಗ

March 23, 2009 - 1:55pm
Shamala
ಹೋದ ವರ್ಷ ಒಂದು ಅತ್ಯಂತ ಅಪರೂಪದ ಹಾಗು ನನಗೆ ತಿಳಿದಿರುವಂತೆ ನಡೆದ ಪ್ರಥಮ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಇದರ ಬಗ್ಗೆ ಯಾರದರೂ ಸಂಪದದಲ್ಲಿ ಬರೆದಿದ್ದಾರೇನೋ ನನಗೆ ಗೊತ್ತಿಲ್ಲ. ಸಂಗೀತ ರೋಗಗಳನ್ನು ಗುಣಪಡಿಸುತ್ತದೆಯೆಂಬ ಸಿದ್ಧಾಂತ ವೈಗ್ನಾನಿಕವಾಗಿ, ಈಗ ಎಲ್ಲರೂ ಒಪ್ಪಿಕೊಂಡಿರುವ ವಿಷಯವೇ ಆದರು, ಈ ಥರಹದ ಪ್ರಯೋಗಳು ಹೆಚ್ಚು ಹೆಚ್ಚು ನಡೆದಷ್ಟೂ, ನಮ್ಮ ಸಂಗೀತ ಪ್ರಚಾರ ಹಾಗೂ ಪ್ರಚಲಿತವಾಗತ್ತೆ ಎಂಬುದು ನನ್ನ ಅನಿಸಿಕೆ. ಈ ತ್ಯಾಗ ರಾಗ ಸಂಯೋಗ ಕಾರ್ಯಕ್ರಮ ಶ್ರೀ ನಿಮಿಷಾನಂದ ಗುರೂಜಿಯವರ ವಿಷಯ ವಿವರಣೆಯೊಂದಿಗೆ, ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಮತ್ತು ತಂಡದವರಿಂದ ಧ್ಯಾನಕ್ಕೆ ಸಮಂಜಸವಾದ ಸಂಗೀತದ ಜೊತೆ ನಡೆಯಿತು. ಪೂರ್ಣಕುಂಭದ ಸ್ವಾಗತದೊಂದಿಗೆ ಸ್ವಾಮೀಜಿಯವರ ಆಗಮನವಾಯಿತು. ಗುರುಗಳ ಶಿಷ್ಯರ ಭಜನೆಯ ನಂತರ ಗುರೂಜಿಯವರು ಪ್ರವಚನ ಆರಂಭಿಸಿದರು. ಮೊದಲು "ತ್ಯಾಗ" ಎಂದರೇನು ಮತ್ತು ಮನುಷ್ಯ ಏನನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು. ಶ್ರೀ RKP ಯವರು ಪಹಾಡಿ ರಾಗದಲ್ಲಿ ಶ್ರೀ ಗುರುನಾಪಾಲಿತೋ ಶ್ರೀ ಸಚ್ಛಿದಾನಂದನಾಥೇನ ಹಾಡಿದರು. ಜೊತೆಗೆ ಶ್ರುಂಗಪುರಾಧೀಶ್ವರಿ ಶಾರದೆ - ಪದ್ಮ ಚರಣ ರಚನೆ, ಪಂಚಾಷಟ್ಪೀಟ ರೂಪಿಣಿ - ದೇವಗಾಂಧಾರಿ or ಅಭೇರಿ or ಭೀಮಪಲಾಸ್ ಕೂಡ ಹಾಡಿದರು. ಮಧ್ಯೆ ಮಧ್ಯೆ ಗುಗುಗಳ ಪ್ರವಚನ ನಡೆಯುತ್ತಿತ್ತು. ಬಾಕಿ ವಿಷಯಗಳ ಬಗ್ಗೆ ನಾನಿಲ್ಲಿ ವಿವರವಾಗಿ ಏನನ್ನೂ ಬರೆಯುತ್ತಿಲ್ಲ ಏಕೆಂದರೆ ನಾನು ಬರೀ ಸಂಗೀತ ಅದಕ್ಕೆ ಸಂಬಂಧ ಪಟ್ಟ ಮಾತುಗಳನ್ನು ಮಾತ್ರ ಹೇಳುತ್ತಿದ್ದೇನೆ. ಗುರೂಜಿಯವರು ಸಂಗೀತದ ಸಪ್ತ ಸ್ವರಗಳು ನಮ್ಮ ದೇಹದಲ್ಲಿನ ಚಕ್ರಗಳಿಗೆ ನೇರವಾಗಿ ಸಂಬಂಧಿಸಲ್ಪಟ್ಟವು - ಉದಾ. ಸ - ಮೂಲಧಾರ ಚಕ್ರ, ರ - ಸ್ವಾದಿಷ್ಟಾನ ಮತ್ತು ಗ ಮಣಿಪುರ....... ಕೇವಲ ಈ ಮೂರೇ ಮೂರು ಸ್ವರಗಳನ್ನು ನಾವು ಆಲಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ, ನಮ್ಮಲ್ಲಿರುವ "ಅಹಂ" ಅನ್ನು ಕಳೆದುಕೊಂಡು ಬಿಡಬಹುದು ಎಂದರು. "ತ್ಯಾಗ" ಇಲ್ಲಿ ಅಹಂ ತ್ಯಜಿಸುವುದು ಎಂಬರ್ಥದಲ್ಲಿದೆ. ಅಹಂ ಬಿಡುವುದು or ತ್ಯಜಿಸುವುದು ಎಂದರೆ loosing our name identity and recognising HIM as supreme ಎಂದು ತಿಳಿಸಿದರು. ಈ ಹಂತದಲ್ಲಿ ಶ್ರೀ RKP ಯವರು ಬಿಂದುಮಾಲಿನಿ ರಾಗದಲ್ಲಿ - ಎಂಥಮುದ್ದೋ ಎಂಥ ಸೊಗಸೋ, ಪ್ರಾರ್ಥಿಪೆ ವಾದಿರಾಜರ - ನಠಭೈರವಿಯಲ್ಲಿ (ಸ್ವಂತ ರಚನೆ), ವರಲಕ್ಶ್ಮೀ ನಮೋಸ್ತುತೆ - ಗೌರಿಮನೋಹರಿಯಲ್ಲಿ, ತಮಿಳು ಚಿತ್ರದ ಅತ್ಯಂತ ಜನಪ್ರಿಯ ಹಾಡು ಪಾಟ್ಟುಂ ನಾನೆ... ಪಾಡವುಂ ನಾನೆ... ಹಾಡಿದರು. ಗುರೂಜಿಗಳು ಮುಂದುವರಿದು ನಾನು, ನನ್ನಿಂದ, ನನ್ನದು ಎಂಬುದು ನಾಶವಾದಾಗಲೇ ನಮಗೆ ಪರಮಾನಂದ ಸಿಗೋದು. ಯಾರಿಗೆ ಸಂಪೂರ್ಣ ಅಹಂ ಹೋಗಿರತ್ತೋ ಅವನೇ ’ಸತ್ಯಂ’, ಯಾವಾಗ ಅಹಂ ತ್ಯಾಗ ಆಗತ್ತೋ, ಆಗ "ರಾಗ" ಶುರುವಾಗತ್ತೆ. If a humanbeing cannot inspire himself, he cannt inspire others. what is that inspires life? - ಅದು "ಶಿವಂ" ಮತ್ತೇನೂ ಅಲ್ಲ. ಪ್ರತಿಯೊಬ್ಬನೂ ತನ್ನ ಶ್ವಾಸವನ್ನು ಸ್ವರಗಳ ಜೊತೆಗೆ ಸೇರಿಸಿಕೊಂಡಾಗ ಸತ್ಯಂ, ಶಿವಂ ಎಲ್ಲಾ ಪ್ರಾಪ್ತ್ಗವಾಗಿ ಜೀವನ ಸುಂದರವಾಗತ್ತೆಂದು ಹೇಳಿದರು. ಸಂಗೀತ ಎಲ್ಲಾ ತರಹದ ರೋಗಗಳನ್ನೂ ಮನಸ್ಸಿನ ವಿಕಾರಗಳನ್ನೂ ವಾಸಿ ಮಾಡತ್ತೆ ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ. Infact we are more interested in the beat of the music rather than melody. DISEASE means what - DIS = mind and the mind which is not at ease is called Disease. ದೇಹ ಇರೋದೇ ಆತ್ಮ ಸಾಧನೆಗಾಗಿ. ಅಂತರಂಗ ಎಷ್ಟು ವಿಸ್ತಾರ ಮಾಡುತ್ತೇವೋ, ಅಷ್ಟೂ ಆರೋಗ್ಯ ಮತ್ತು ಪರಮಾನಂದ ನಮ್ಮದಾಗುತ್ತದೆ. ಸಪ್ತ ಸ್ವರಗಳಿಂದ ನಮ್ಮ ಶ್ವಾಸ ಸಂಪೂರ್ಣ ನಿಯಂತ್ರಣವಾಗತ್ತೆ. ತಾಳ ಮೇಳಗಳು ಬರೀ ಯೌವನಕ್ಕೆ ಉಪಯೋಗವೇ ಹೊರತು ಮುದಿತನಕ್ಕಲ್ಲ. "ರಾಗ" ಬುದ್ಢಿಗೆ ಚೇತಕ - ಎಲ್ಲಾ ವಯಸ್ಸಿಗೂ, ಜೀವನದುದ್ದಕ್ಕೂ ಸಂಗೀತ ಎಲ್ಲರಿಗೂ ಬೇಕೇ ಬೇಕು. ದೇವಿ ಸರಸ್ವತಿ ನಮ್ಮ ಆತ್ಮವನ್ನು ಶ್ರುತಿ ಸೇರಿಸುವವಳು. ನಮ್ಮಲ್ಲಿ creativity ಹುಟ್ಟಿಸುವವಳು. ಸರಸ್ವತಿ ಎಂದರೆ ಐಂ - AIM ಬೀಜಾಕ್ಷರ. when you are in tune with your breath, you will achieve your AIM - ಐಂ. ಸ್ಥೂಲ + ಸೂಕ್ಷ್ಮ ಸ್ಥಿತಿ ಸೇರಿಸುವುದೇ ಸಂಗೀತ ಅಥವಾ ಸರಸ್ವತಿ. ಸಂಗೀತ ಮನೋರಂಜನೆ ಅಲ್ಲ - ಆತ್ಮ ವಂದನೆ. Music is not entertainment but enlightenement. ತೆಲುಗಿನಲ್ಲಿ "ಸ ರೀ ಗೆ ಮಾ.... ಪಾಡೆ ನೀ... ಸಾಧಿಸಬಹುದು ಸಾಕ್ಷಾತ್ಕಾರ. ’ಸ’ ನಾವು ’ನಿ’ ಒಡೆಯ ಅರ್ಥಾತ್ ಪರಮಾತ್ಮ. ಎಲ್ಲವೂ ನೀ, ನೀನು, ನೀನೇ, ನಿನಗೇ, ನಿನ್ನಿಂದಲೇ - ನಾ ಅಲ್ಲ (ನಾ ಅಹಂ ಇಲ್ಲ) ಎಂದಾಗ ಪರಮಾನಂದ ಹಾಗೂ ಪರಮಾತ್ಮನ ಸಾಕ್ಷಾತ್ಕಾರ. ಶ್ರೀ RKP ಯವರು, ಹಿಂದೋಳ, ತೋಡಿ, ಷಣ್ಮುಖಪ್ರಿಯ, ಶುಭ ಪಂತುವರಾಳಿ ರಾಗಗಳ ಆಲಾಪನೆ ಮಾಡಿದರು. ಅಂಬಾ ಜಗದಂಬಾ ಕ್ರುತಿ ತಾಯಿ ನಿಮಿಷಾಂಬ ಮೇಲೆ ಶುಭ ಪಂತುವರಾಳಿರಲ್ಲಿ ಹಾಡಿದರು. ತೋಡಿ ರಾಗ ಹಾಡಿದರೆ ಆತ್ಮ ವಂದನೆ ಆಗುತ್ತದೆಂದು ಹೇಳಿದರು. "ತ್ಯಾಗ - ರಾಗ - ಸಂಯೋಗ" ಎಂದರೆ ಅಹಂ ತ್ಯಾಗ ಮಾಡಿದ ಮೇಲೆ ರಾಗ ಸಂಯೋಗ ಆಗತ್ತೆ. ಸಂಯೋಗ ಎಂದರೆ ಸಂಪೂರ್ಣ ಶುತಿ ಸೇರುವುದು ಎಂದರ್ಥ. ಕೊನೆಗೆ ರೇವತಿ ರಾಗದ ಭೋ ಶಂಭೋ.....ಹಾಡಿ, ಸಿಂಧು ಭೈರವಿಯ ತಿಲ್ಲಾನದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು. ತುಂಬಾ ಪ್ರಗ್ನಾಪೂರಕ, ವಿಚಾರವಂತ, ಕಾರ್ಯಕ್ರಮ, ಯಾವುದೋ ಬೇರೆಯದೇ ಲೋಕದಲ್ಲಿದ್ದಂತಹ ಅನುಭವವಾಗಿತ್ತು.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by nkumar on
ಬಹಳ ಚೆನ್ನಾಗಿದೆ ಮೇಡಂ ನೀವು ಬರೆದ ಸಂಗೀತದ ಪ್ರಯೋಗ. ನಾವು ಸಣ್ಣವರಿರುವಾಗ, ತಂದೆ ನೀಲಾಂಬರಿ ರಾಗದಲ್ಲಿ ಹಾಡಿ ಮಲಗಿಸುತ್ತಿದ್ದರು :). >>ಪಂಚಾಷಟ್ಪೀಟ ರೂಪಿಣಿ ಇದು ಕರ್ನಾಟಕ ದೇವಗಾಂಧಾರಿ ರಾಗದಲ್ಲಿದೆಯಲ್ಲವೇ? ಅಭೇರಿಗೂ ಇದಕ್ಕೂ ಸ್ವಲ್ಪ ವ್ಯತ್ಯಾಸ ಇದೆ ಎಂದು ಕೇಳಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಮಾಹಿತಿಗೆ ಧನ್ಯವಾದಗಳು. >>ಶ್ರೀ RKP ಯವರು ಪಹಾಡಿ ರಾಗದಲ್ಲಿ ಶ್ರೀ ಗುರುನಾಪಾಲಿತೋ ಶ್ರೀ ಸಚ್ಛಿದಾನಂದನಾಥೇನ ಹಾಡಿದರು. ಇದು ’ಪಾಡಿ’ ರಾಗವಾಗಬೇಕು. ಪಾಡಿ ಅನ್ನುವುದು ಹಿಂದೆ ಹೆಚ್ಚಾಗಿ ಪ್ರಚಾರದಲ್ಲಿದ್ದು, ಈಗ ಅಷ್ಟು ಪರಿಚಿತವಲ್ಲದ ಕರ್ನಾಟಕ ಸಂಗೀತದ ರಾಗ. ಪಹಾಡಿ ಅನ್ನುವುದು ಹಿಂದೂಸ್ತಾನಿ ಪದ್ಧತಿಯಲ್ಲಿನ ಒಂದು ರಾಗ. ಹೆಚ್ಚಾಗಿ ಚಿಕ್ಕ ರಚನೆಗಳನ್ನು ಹಾಡುವಂತಹದು. ಶ್ರೀಗುರುನಾ ಕೃತಿಯ ಪಲ್ಲವಿಯಲ್ಲೇ ಪಾಡಿ ರಾಗದ ಸೂಚಿತ ಮುದ್ರೆ ಯನ್ನು ’ಪಾಲಿ’ ಎಂದು ಸೂಚಿಸಿರುವುದನ್ನು ಗಮನಿಸಬಹುದು ( ಪಾಡಿ ಪಾಳಿ ಪಾಲಿ) -ಹಂಸಾನಂದಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಪಾಡಿ ರಾಗದ ಕೆಲವು ಉದಾಹರಣೆಗಳಿದ್ದರೆ ತಿಳಿಸುವಿರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಪಾಡಿ ರಾಗವು ೧೪-೧೫-೧೬ನೇ ಶತಮಾನಗಳಲ್ಲಿ ಪ್ರಸಿದ್ಧವಾಗಿದ್ದು, ನಂತರ ಹಿಂದೆ ಸರಿಯಿತು ಎನ್ನುವ ಊಹೆ ಮಾಡಬಹುದು. ಅನ್ನಮಯ್ಯ ಅವರ ಹಲವು ರಚನೆಗಳು ಪಾಡಿ ರಾಗದಲ್ಲಿದ್ದವು ಎನ್ನುವುದಕ್ಕೆ ತಿರುಪತಿಯ ತಾಮ್ರಪತ್ರಗಳ ಆಧಾರವಿದೆ. ತೊಲ್ಲಿ ಕಲವೇ ಇವಿಯು, ಮತ್ತು ಗುಮ್ಮನಿ ಗುಡಿಶ್ರುತಿಗೂಡಿಗನು ಎನ್ನುವ ಎರಡು ರಚನೆಗಳನ್ನು ಕೇಳಿದ್ದೇನೆ. ಕೊಂಡಿ ಸಿಕ್ಕರೆ ಹಾಕುವೆ - ಇಲ್ಲದಿದ್ದರೆ ಈ ಹಾಡಿನ ಸಾಲುಗಳಿಗೆ ಹುಡುಕಿ ನೋಡಿ. ಮತ್ತೆ ಪುರಂದರ ದಾಸರ ಕಾಲಕ್ಕೂ ಈ ರಾಗ ಪ್ರಸಿದ್ಧವಾಗಿತ್ತು ಎನ್ನುವುದಕ್ಕೆ ಅವರ ಹಾಡುಗಳಿಂದಲೇ ಆಧಾರ ತೋರಿಸಬಹುದು. ಇದರ ಬಗ್ಗೆ ಮೊದಲೇ ಇಲ್ಲಿ ಬರೆದಿದ್ದೇನೆ: http://tinyurl.com/3... ಇವರ ನಂತರ, ಪಾಡಿ ರಾಗವು ಈ ರಾಗಕ್ಕೆ ಹೋಲಿಕೆ ಇರುವ, ಆದರೆ ಇನ್ನೂ ರಂಜನೀಯವಾದ ಸಾವೇರಿ, ಗೌಳ, ಮಲಹರಿ ಮೊದಲಾದ ರಾಗಗಳ ಹಿಂದೆ ಬಿತ್ತೆಂದು ಅಭಿಪ್ರಾಯವಿದೆ. ಅದಕ್ಕೆಂದೇ ಮುತ್ತುಸ್ವಾಮಿ ದೀಕ್ಷಿತರು ಹಳೆಯ ಪರಂಪರೆಯ ರಾಗಗಳನ್ನು ಮುಂದಕ್ಕೆ ತರಲೆಂದೇ ಇದರಲ್ಲಿ ಕೃತಿಯನ್ನು ರಚಿಸಿದ್ದಾರೆ ಎಂದೂ ಹೇಳಬಹುದು. ಸಂಗೀತಪ್ರಿಯದಲ್ಲಿ ನಿಮಗೆ ಆ ರಚನೆಗಳು ದೊರೆಯುತ್ತವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಧನ್ಯವಾದಗಳು ಸರ್. ಹೊರಗಡೆ ಓದಬೇಕು ಇಲ್ಲಿ ನೀವು ಕೊಟ್ಟಿರುವ ಲಿಂಕ್ ನಿಷಿದ್ಧ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಮರೆತಿದ್ದೆ - ಅದೇ ಬರಹದ ಕಿರು ರೂಪವನ್ನು ಹರಿದಾಸ ಸಂಪದದಲ್ಲೇ ಹಾಕಿದ್ದೇನೆ: http://www.haridasa....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shamala on
ಧನ್ಯವಾದಗಳು ಸಾರ್ ಶ್ರೀ ಗುರುಪಾಲಿತೋ.... ಕ್ರುತಿ ನಾನು ಮೊದಲ ಬಾರಿಗೆ ಕೇಳಿದ್ದು... ಶ್ರೀ ಅನ್ನಮಾಚಾರ್ಯರ ಸಂಕೀರ್ತನೆಗಳ ಒಂದು ಕೊಂಡಿ http://annamaacaarya... ಅಕ್ಷರಮಾಲೆಯ ಅಕ್ಷರಗಳನ್ನು ಅನುಸರಿಸಿ ಇದೆ. ಆದರೆ ಇಲ್ಲಿ ಕ್ರುತಿಗಳ ರಾಗ ಕೊಟ್ಟಿಲ್ಲ ಬರೀ ಸಾಹಿತ್ಯ ಇದೆ ಮತ್ತು ಕೇಳಬಹುದು ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.