ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shashikannada ರವರ ಬ್ಲಾಗ್

ವಿಶ್ವಮಾನವ - ಕನ್ನಡದೊಳ್ ಭಾವಿಸಿದ ಜನಪದಂ

'ವಿಶ್ವಮಾನವ' ಎಂದಾಕ್ಷಣ ನಮಗೆ ನೆನಪಾಗುವುದು ನಮ್ಮ ರಾಷ್ಟ್ರಕವಿ ಶ್ರೀಕುವೆಂಪು. 'ಮನೆಯನೆಂದೂ ಕಟ್ಟದಿರು, ನೆಲೆಯನೆಂದೂ ಮುಟ್ಟದಿರು, ನೀ ಅನಂತವಾಗಿರು,' 'ಓ ನನ್ನ ಚೇತನ, ಆಗು ನೀ ಅನಿಕೇತನ', 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು', ಎಂದು ಕರೆ ನೀಡುವ ಮೂಲಕ ಇಡೀ ಕನ್ನಡ ವಿಶ್ವಕ್ಕೆ 'ವಿಶ್ವಮಾನವ' ಸಂದೇಶವನ್ನು ನೀಡಿದ ಈ ಶತಮಾನದ ಸಾಹಿತ್ಯ ಶಿಖರ ಅವರು. ಅವರ 'ವಿಶ್ವಮಾನವ' ಸಂದೇಶವನ್ನು ನಾವೆಲ್ಲರೂ ನಡೆ,ನುಡಿಯಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಹಾಗಾಗಿ, ಜಾತಿ, ಮತ, ಧರ್ಮ ಎಲ್ಲಾ ಜೊಳ್ಳುಗಳ ಹೊಟ್ಟು ತೂರಿ 'ವಿಶ್ವಮಾನವ'ನಾಗುವ ನನ್ನ ಪ್ರಯತ್ನದ ಒಂದು ಅಭಿವ್ಯಕ್ತಿಯೇ ಈ ಜಾಲತಾಣ.

ಹಾಗೆಯೇ, ತಮ್ಮ ಉನ್ನತ ಬದುಕಿನ ಮೂಲಕ ಮಾನವ ಕುಲಕ್ಕೇ ಬೆಳಕು ತೋರಿದ ಬುದ್ಧ, ಮಹಾವೀರ, ಅಲ್ಲಮ, ಬಸವರಾದಿಯಾಗಿ, ನಮ್ಮೆಲ್ಲಾ ವಚನಕಾರರು, ಆಧುನಿಕ ಭಾರತದ ಸಂತರೆಂದೇ ಹೇಳಬಹುದಾದ ಶ್ರೀರಾಮಕೃಷ್ಣ, ಶ್ರೀರಮಣ, ಶ್ರೀ ಅರವಿಂದರು, ಶ್ರೀ ಸ್ವಾಮಿ ವಿವೇಕಾನಂದರು, ಜಿಡ್ಡು ಕೃಷ್ಣಮೂರ್ತಿ, ಗಾಂಧಿ, ಓಶೋ ಮುಂತಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ನನ್ನ ಅನುಭವಕ್ಕೆ ಬರುವುದರಲ್ಲಿ ನಾನು ಅಭಿವ್ಯಕ್ತಗೊಳಿಸಬಹುದಾದವನ್ನು ಸಹೃದಯ ಓದುಗ ಮಿತ್ರರೊಂದಿಗೆ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನವಾಗಿ ರೂಪುಗೊಂಡಿರುವ ಈ ಬ್ಲಾಗನ್ನು ಸಮಸ್ತ ಕನ್ನಡ ಬಾಂಧವರಿಗೆ ಅರ್ಪಿಸುತ್ತಿದ್ದೇನೆ.

ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

July 17, 2008 - 6:30pm — shashikannada

ಗಮನಿಸಿ: ಈ ಸಂಭಾಷಣೆಯಲ್ಲಿ ಬ್ರ್ಯಾಕೆಟ್ ಒಳಗಿರುವುದು ಹುಡುಗ ತನ್ನಂತಾನೇ ಮಾತಾಡಿಕೊಳ್ಳುವುದು
-------------------------------------------------------------------------

ಅವಳು ಅವನಿಗೆ ಎಂದಿನಂತೆ ಮಿಸ್ಡ್ ಕಾಲ್ ಕೊಟ್ಟಳು. ಅವನೂ ಸಹ ಎಂದಿನಂತೆ ಆ ಕಡೆಯಿಂದ ಕಾಲ್ ಮಾಡಿದ.

ಅವಳು: ಹಲೋ..

ಅವನು: (ಅಯ್ಯೋ ದೇವರೇ...ಇವತ್ತೇನು ಗ್ರಹಚಾರ ಕಾದಿದೆಯೋ?) ಹಾಯ್, ಏನೇ ಸಮಾಚಾರ...?

ಅವಳು: ಏನೂ ಇಲ್ಲ...ಹೀಗೇ ಕಾಲ್ ಮಾಡಿದೆ...

ಅವನು: (ನೀನೆಲ್ಲಿ ಕಾಲ್ ಮಾಡ್ತೀಯ? ...ಬರೀ ಮಿಸ್ಡ್ ಕಾಲ್ ತಾನೇ ಕೊಟ್ಟಿದ್ದು...) ಸರೀ..ನೀನೇನ್ ಮಾಡ್ತಿದ್ದೆ ನನ್ನ ರಾಣಿ?

ಅವಳು: ಈಗ ತಾನೇ ಊಟ ಮುಗಿಸ್ದೆ... ನೀನೇನು ಮಾಡ್ತಿದ್ದೀಯಾ?

ಅವನು: ನಂದೂ ಈಗ ತಾನೇ ಊಟ ಮುಗೀತು...ಈಗ..."ಏನ್ ಹುಡ್ಗೀರೋ ...ಯಾಕಿಂಗಾಡ್ತೀರೋ?" ಹಾಡು ಕೇಳ್ತಿದೀನಿ ಎಫ್ಎಂನಲ್ಲಿ.

ಅವಳು: ಸಖತ್ ಹಾಡಲ್ವ?

(ಆಗ ಅವಳು 'ರಣಧೀರ' ಚಿತ್ರದಿಂದ ಹಾಡೊಂದನ್ನ ಗುನುಗ್ತಾಳೆ.)

ಅವನು: (ಒಳ್ಳೆ ಕಾಗೆ ಕಿರುಚ್ದಂಗಾಗ್ತಿದೆ.... ಅಯ್ಯೋ! ದೇವ್ರೇ ನನ್ನ ಕಾಪಾಡಪ್ಪ!)

ನೀನೆಷ್ಟು ಚೆನ್ನಾಗಿ ಹಾಡ್ತೀಯಾ ನಂಗೆ ಗೊತ್ತೇ ಇರಲಿಲ್ಲ...

ಅವಳು: ಮತ್ತೆ ಗುನುಗ್ತಾಳೆ.

ಅವನು: ಒಂದು ಹಾಡು ಹೇಳೆ ಪ್ಲೀಸ್...

ಅವಳು: ಇಲ್ಲಿ ಎಲ್ರೂ ಮಲಗಿದ್ದಾರೆ...ನಾನು ಹಾಡೋಕೆ ಶುರು ಮಾಡಿದ್ರೆ ಎಲ್ರೂ ಎದ್ಬಿಡ್ತಾರೆ...

ಅವನು:(ಅದೇನೋ ನಿಜ..ಯಾವುದೋ ಭೂತ ಬಂದಿದೆ ಅನ್ಕೋತಾರಷ್ಟೆ...) ಪ್ಲೀಸ್

ಅವಳು: ಪೀಡಿಸ್ಬೇಡ್ವೋ...ನಂಗೆ ಅಷ್ಟು ಚೆನ್ನಾಗಿ ಹಾಡು ಹೇಳೋಕೆ ಬರಲ್ಲ..

ಅವನು: (ಅದು ಇಡೀ ಪ್ರಪಂಚಕ್ಕೇ ಗೊತ್ತು ಬಿಡು...Smiling ) ಇಲ್ಲಾ ನೀ ತುಂಬಾ ಚೆನ್ನಾಗಿ ಹೇಳ್ತೀಯ.

ಪ್ಲೀಸ್ ಹೇಳೇ...

ಅವಳು: ಇಲ್ಲಾ ಕಣೋ ನಂಗೆ ಒಂಥರಾ ಆಗುತ್ತೆ

ಅವನು: ಹಾಗೇನಿಲ್ವೆ...ಹೇಳೇ ಪ್ಲೀಸ್

ಅವಳು: ನೀನೇ ಹೇಳ್ಬೋದಲ್ಲ...

ಅವನು: (ನಾನಾ? ನಿಮ್ಮಜ್ಜಿ ನಂಗೇನೋ ಬೇರೇ ದಾರಿ ಇಲ್ಲ ಅದಕ್ಕೆ ಹೇಳ್ದೆ) ಈಗೇನು ನೀನು ಹಾಡ್ತೀಯೋ ಇಲ್ವೋ?

ಅವಳು: ಯಾಕ್ ಹೀಗೆ ತೊಂದ್ರೆ ಕೊಡ್ತೀಯ?

ಅವನು: ಹುಂ....ಓಕೆ

ಅವಳು: ನಂಗೆ ಅಂಥ ಒಳ್ಳೇ ಕಂಠ ಇಲ್ಲ

ಅವನು: (ಅವನಜ್ಜಿ ಕತ್ತೆ ಕೂಡ ನಾಚ್ಕೋಬೇಕು ನಿನ್ ದನಿ ಕೇಳಿ...) ಹುಂ...

ಅವಳು: ನೀನಿಷ್ಟು ಹಟ ಮಾಡ್ತಿದೀಯ...ಬರೀ ಒಂದೇ ಒಂದು ಪ್ಯಾರಾ ಹೇಳ್ತೀನಿ ಸರೀನಾ?

ಅವನು: (ಇನ್ನೇನ್ನೇನು ಸಹಿಸಿಕೋಬೇಕಪ್ಪ ಶಿವನೇ?)

ಅವಳು: ಸರಿ, ಯಾವ ಹಾಡು ಹೇಳಲಿ ಹೇಳು?

ಅವನು: (ನೀನೇನಾದ್ರೂ ಹಾಡ್ಕೋ..ನಂಗಂತೂ ಇವತ್ತು ನಿದ್ದೆ ಹಾಳು..) ಅರಮನೆಯಿಂದ ಪತ್ರ ಬರೆಯಲಾ...ಇಲ್ಲ ಚಿತ್ರ ಬಿಡಿಸಲಾ..

ಅವಳು: ಹಾಡೇನೋ ಚೆನ್ನಾಗಿದೆ..ಆದ್ರೆ ಸಾಹಿತ್ಯ ನೆನಪಿಲ್ವಲ್ಲ...

ಆವಳು: (ನಿನ್ ಟೆಕ್ಸ್ಟ್ ಬುಕ್ ಬಿಟ್ರೆ ಇನ್ನೇನ್ ಗೊತ್ತು ನಿಂಗೆ ಹೇಳು...) ಜಿಂಕೆ ಮರೀನಾ...

ಅವಳು: ಆ ಹಾಡಾ ಅದಾದ್ರೆ ನಾ ಹೇಳೋಲ್ಲ...

ಅವನು: (ನೀ ಯಾವ್ದಾದ್ರೂ ಹಾಡು ಹೇಳು, ಒಟ್ನಲ್ಲಿ ನನ್ ಕಿವಿ ತೂತಾಗೋದಂತು ಗ್ಯಾರಂಟಿ..)

(ಅವಳು ಗಂಟಲು ಸರಿ ಮಾಡ್ಕಂಡು, ಒಂದು ಸಾಲು ಗುನುಗ್ತಾಳೆ)

ಅವಳು: ಇಲ್ಲಾ ಕಣೋ. ನಂಗೆ ನಾಚ್ಕೆಯಾಗುತ್ತೆ.

ಅವನು: ಹೇಳೇ ಪರ್ವಾಗಿಲ್ಲ...ನಿನ್ನ ದನಿಯ ಕಡಲಲ್ಲಿ ಮುಳುಗ್ಬೇಕು ಅಂತಿದ್ದೀನಿ...

ಅವಳು: ನೀನು ನಂಗೆ ಸಿಟ್ಟು ತರಿಸ್ತಿದೀಯ

ಅವನು: (ಗೊತ್ತಾಯ್ತಲ್ವ...ಮತ್ತೆ..)) ಇಲ್ಲ. ನೀನು ನಾಚ್ಜೋತೀಯಲ್ವ ಅದಕ್ಕೆ ನಿನ್ನ ತಣ್ಣಗೆ ಮಾಡ್ತಾ ಇದೀನಿ..

ಅವಳು: ಹುಂ...

ಅವನು: ಪ್ಲೀಸ್ ಹೇಳೇ...

ಅವಳು: ನಾನು ನಾಳೆ ಹೇಳಲಾ?

ಅವನು: (ಸಧ್ಯ...ಬದುಕಿದೆಯಾ ಬಡ ಜೀವವೇ?) ಸರೀನಮ್ಮ ನಿಂಗೆ ಹೇಗನ್ಸುತ್ತೋ ಹಾಗೇ ಮಾಡು.

ಅವಳು: ಹುಂ..

ಅವನು: ಗುಡ್ ನೈಟ್

ಅವಳು: ಗುಡ್ ನೈಟ್

ಅವಳು: ಸ್ವೀಟ್ ಡ್ರೀಮ್ಸ್...

ಅವನು: ನಿಂಗೂ ಸ್ವೀಟ್ ಡ್ರೀಮ್ಸ್...

ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಮತ್ತೆ ಕಾಲ್ ಮಾಡ್ತಾಳೆ(ಸಾರಿ...ಅವಳು ಯಾವತ್ತೂ ಕಾಲ್ ಮಾಡಲ್ಲ. ಅವಳೇನಿದ್ರೂ ಮಿಸ್ ಕಾಲಷ್ಟೇ ಕೊಡೋದು),,,,

ಅವಳು: ಹಾಯ್.. ಮಲಕ್ಕೋಬಿಟ್ಯಾ?

ಅವನು: ಇಲ್ಲಾ ನನ್ ತಾಯಿ..ವಿದ್ಯುಚ್ಚಕ್ತಿ ಆವಿಷ್ಕಾರ ಮಾಡ್ತಿದೀನಿ...) ಇಲ್ಲಾ ಕಣೇ..

ಅವಳು: ಮತ್ತೇನ್ ಮಾಡ್ತಿದೀಯಾ?

ಅವನು: (ರಾತ್ರಿ ಹೊತ್ತಲ್ಲಿ ಇನ್ನೇನು ಗಿಲ್ಲಿ ದಾಂಡೂನಾ ಆಡ್ತಾರೆ...)ಮ್ಯಾಚ್ ನೋಡ್ತಿದ್ದೆ

ಅವಳು: ಸರಿ...ನೀನು ಮ್ಯಾಚ್ ನೋಡು..

ಅವನು: (ಇಷ್ಟೊತ್ತು ನಿಮ್ಮಜ್ಜಿ ನಾನೇನು ಬಜ್ಜಿನಾ ಸುಡ್ತಿದ್ದೆ...) ಹೇ..ಪರ್ವಾಗಿಲ್ಲ...ಹಳೇ ಮ್ಯಾಚು...

ಅವಳು: ನಾನ್ ಹಾಡ್ಲಿಲ್ಲಾ ಅಂತ ನಿಂಗೆ ಬೇಜಾರಾಯ್ತ?

(ಇದು ಯಾಕೋ ಟ್ರಿಕಿ ಪ್ರಶ್ನೆ ಅನ್ನಿಸಿದ್ರಿಂದ ಸ್ವಲ್ಪ ಹೊತ್ತು ಯೋಚಿಸ್ದ)

ಅವನು: (ಬೇಜಾರ್ ಮಾಡ್ಕೊಳ್ಳೋದಾ? ನೀನು ಹಾಡ್ದೇ ಇರೋದ್ರಿಂದ ಇದು ನನ್ ಜೀವಮಾನದಲ್ಲೇ ಅತ್ಯಂತ ಅದೃಷ್ಟದ ದಿನ..:- ) ಹಾಗೇನೂ ಇಲ್ಲ..ನೀನು ಹಾಡಲಿಲ್ವಲ್ಲ...ಅದಕ್ಕೆ ನಿನ್ನ ಆರಾಮಾಗಿಸೋಣ ಅಂತ...ನೀನೇ ಹೇಳ್ದೆ ನಾನು ನಾಳೆ ಹಾಡ್ತೀನಂತ...ಅದಕ್ಕೆ, ನಾನು ಕಾಯ್ತಿದ್ದೀನಿ...(ನಾನು ಬಚಾವಾದೆ ಅಂತ ಅನ್ಕೊಂಡಿದ್ನಲ್ಲಪ್ಪ...ಥತ್ ತೇರಿಕಿ:-()

ಅವಳು ಹಾಡೋಕೆ ಶುರು ಮಾಡ್ತಾಳೆ

'ಮಳೆ ನಿಂತು ಹೋದ ಮೇಲೆ...'

ಅವನು: ವ್ಹಾ ವ್ಹಾ..ಸಖತ್ತಾಗಿದೆ

ಅವಳು: ಸುಳ್ಳ...ನಂಗೊತ್ತು ನನ್ ಧ್ವನಿ ಅಷ್ಟು ಚೆನ್ನಾಗಿಲ್ಲ ಅಂತ

ಅವನು:(ಸಧ್ಯ...ಈಗ್ಲಾದ್ರೂ self realization ಆಯ್ತಲ್ಲ... Smiling... ) ಇಲ್ಲ ಡಾರ್ಲಿಂಗ್ ನೀನು ನಿಜಕ್ಕೂ ಚೆನ್ನಾಗಿ ಆಡ್ತೀಯ!

ಅವಳು: ಇಲ್ಲ, ನಂಗೊತ್ತು ನೀನು ಹೀಗೇ ಹೇಳ್ತಿದಿಯಾ ಅಂತ

ಅವನು: (ವೆರಿ ಗುಡ್..ಕಡೆಗೂ ನಿಂಗೆ ಗೊತ್ತಾಯ್ತಲ್ಲ...)ನಿನ್ ಧ್ವನಿ ಅಷ್ಟು ಕೆಟ್ದಾಗಿದ್ದಿದ್ರೆ ನಾನು ಇಷ್ಟೊತ್ತು ಕೇಳ್ತಾನೆ ಇರ್ಲಿಲ್ಲ.

ಅವಳು: ಸರಿ..ನೀನು ಮಲಕ್ಕೋ..ಗುಡ್ ನೈಟ್

ಅವನು:(ನಿನ್ ಹಾಡು ಕೇಳಿದ್ಮೇಲೂ ನಂಗೆ ನಿದ್ದೆ ಎಲ್ಲಿಂದ ಬರುತ್ತೆ...) ಗುಡ್ ನೈಟ್

ಅವಳು: Take care

ಅವನು: ನೀನುನೂ...

ಅವಳು: ಹೇ...

ಅವನು: (ಅಯ್ಯೋ! ದೇವ್ರೆ..ಯಾಕೋ ಇವತ್ತು ಇವಳು ಬಿಡೋ ಹಾಗೆ ಕಾಣಿಸ್ತಿಲ್ವಲ್ಲಪ್ಪ)..ಏನ್ ಸ್ವೀಟಿ?

ಅವಳು: ನಿಜ ಹೇಳೋ..ನನ್ ದನಿ ನಿಜಕ್ಕೂ ಚೆನ್ನಾಗಿದೀಯಾ...

ಅವನು: (ನಿನ್ ಧ್ವನೀನಾ ರೆಕಾರ್ಡ್ ಮಾಡ್ಕೊಂಡು ನೀನೇ ಯಾಕೆ ಒಂದ್ಸಲ ಕೇಳ್ಬಾರ್ದು)Of course....ನಿಜವಾಗ್ಲೂ..

ಅವಳು: ಎಲ್ಲಾ ಬರೀ ಸುಳ್ಳೂ...

ಅವನು: (ಇವಳಜ್ಜಿ...ಈಗೇನಾದ್ರೂ ನಂಗೆ ಮಲಗೋಕೆ ಬಿಡ್ಲಿಲ್ಲಾ ಅಂದ್ರೆ....) Not at all.

ನೀನು ನಿಜಕ್ಕೂ ಚೆನ್ನಾಗಿ ಹೇಳ್ತೀಯ

ಅವಳು: ನೀನ್ ಹೇಳ್ತಿದೀಯಾ ಅಂದ್ಮೇಲೆ ಅದು ನಿಜಾನೇ ಇರ್ಬೇಕು.. ಸರಿ..ಗುಡ್ ನೈಟ್

ಅವನು: ಗುಡ್ ನೈಟ್...

  • ಪ್ರೇಮ
  • ಮಳೆ ನಿಂತು ಹೋದ ಮೇಲೆ
  • ಸಂಭಾಷಣೆ
~.~
  • shashikannada ರವರ ಬ್ಲಾಗ್
  • Login or register to post comments
  • 241 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 17, 2008 - 7:38pm — yuvapremi

ಉ: ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

yuvapremi's picture

ಕೃಷ್ಣ ಕೃಷ್ಣ,

ಅದಕ್ಕೆ ಪ್ರೀತಿ ಮಾಡುವಾಗ ಎರಡು ಮನಸು ಇರಬಾರದು. ಇದ್ದರೆ ಅದು ನಮ್ಮ ನೆಮ್ಮದಿ ಹಾಳು ಮಾಡುತ್ತದೆ. Sad
ನಿಮ್ಮ ಈ ಪ್ರೇಮ ಸಂಭಾಷಣೆ ಬಹಳ ಅದ್ಭುತವಾಗಿ ಮೂಡಿಬಂದಿದೆ ಶಶಿ ಕನ್ನಡ ರವರೆ. Smiling

-ಯುವಪ್ರೇಮಿ

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 10:26am — shashikannada

ಉ: ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

shashikannada's picture

ನಮಸ್ಕಾರ ಯುವಪ್ರೇಮಿಗಳೇ,

ನಿಮ್ಮ ಪ್ರತಿಕ್ರಿಯೆಗೆ ನನ್ನಿ. ನೀವು ವಿಷಯಕ್ಕೆ ಬರುವ ಮುನ್ನ ನಾವೆಲ್ಲರೂ ಸಾಮಾನ್ಯವಾಗಿ ಉದ್ಗರಿಸುವಂತೆ, ರಾಮ, ರಾಮ ಎನ್ನದೆ ಕೃಷ್ಣ, ಕೃಷ್ಣ ಎಂದಿರುವುದು ಸಮಂಜಸವಾಗಿಯೇ ಇದೆ. ಯಾಕೆಂದರೆ, ಕೃಷ್ಣನಿಗೆ ಇರುವ ಸ್ತ್ರೀ ಲೋಲ ಎನ್ನುವ "ಅಪಕೀರ್ತಿ" ನನಗೇನೋ ಸರಿಯೆನಿಸುವುದಿಲ್ಲ. ಯಾಕೆಂದರೆ, ಕೃಷ್ಣ ತಾನು ಎಷ್ಟೇ ಸ್ತ್ರೀಯರನ್ನು ಪ್ರೇಮಿಸಿದರೂ, ಅವರೆಲ್ಲರನ್ನೂ ಸಮಾನವಾಗಿ ಪ್ರೀತಿಸಿದ್ದಾನೆ. ಆದರೆ, ರಾಮ ಸೀತೆಗೆ ಏನು ಮಾಡಿದ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದ್ದರಿಂದ, ನನ್ನ ಪ್ರಕಾರ ಕೃಷ್ಣನೇ ಪ್ರೀತಿಗೆ ನಿಜವಾದ ಮಾದರಿ ಎನ್ನಬಹುದು. ನನ್ನ ಮಾತನ್ನ ತಪ್ಪಾಗಿ ಅರ್ಥೈಸಬೇಡಿ.

ಇನ್ನು ಪ್ರೀತಿಯಲ್ಲಿ "ಎರಡು" ಮನಸ್ಸಿದ್ದಲ್ಲಿ ಅದು ಖಂಡಿತ ಒಡೆಯುತ್ತದೆ ಎನ್ನುವುದು ಅಕ್ಷರಶಃ ಸತ್ಯವಾದ ಮಾತು. ಅದಕ್ಕೆ ನಿದರ್ಶನದಂತೆ ಒಂದು ಚಿಕ್ಕ ಕತೆ ಕೂಡ ಇದೆ. ಅದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಈಗಿನವರು ಪ್ರೀತಿಯನ್ನ ಸರಿಯಾಗೆ ಗ್ರಹಿಸದೆ ಅದು ಅನರ್ಥಕ್ಕೆ ಈಡು ಮಾಡುತ್ತಿರುವುದು ನಿಜಕ್ಕೂ ದುಃಖದ ಸಂಗತಿ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 11:08am — girish.rajanal

ಉ: ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

girish.rajanal's picture

ಶಶಿಯವರೆ,
ನೀವು ಬರೆದ ಪ್ರೇಮ ಸಂಭಾಷಣೆ ಈ ಮೊದಲು ವಿಕಾಸ ಹೆಗಡೆ ಅವರು ಬರೆದಿದ್ದಾರೆ.. ಆದರೆ ಅದರಲ್ಲಿರೋ ಹಾಡುಗಳು ಮಾತ್ರ ಬೇರೆ ಅಷ್ಟೆ...

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 11:14am — shashikannada

ಉ: ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

shashikannada's picture

ಪ್ರಿಯ ಗಿರೀಶ್,

ನಮಸ್ಕಾರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಾನು ಅದನ್ನ ಓದಿಲ್ಲ. ಓದಿದ್ದರೆ ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲ. ಇತ್ತೀಚೆಗೆ ಕೆಲವೊಂದು ಒಳ್ಳೆಯ ಇಂಗ್ಲೀಶ್ ಮೇಲ್ ಗಳು ಬರ್ತಿವೆ. ಅದು ಎಲ್ಲಾ ಕನ್ನಡ ಜನರನ್ನ ತಲುಪೋದಿಲ್ಲ. ಅದಲ್ದೆ, ನಮ್ಮ ಭಾಶೇಲಿ ಓದಿದಾಗ ಸಿಗೋ ಆನಂದಾನೇ ಬೇರೆಯಲ್ವ ಅದಕ್ಕೆ ಅವನ್ನೆಲ್ಲ ಕನ್ನಡೀಕರಣಗೊಳಿಸ್ತೇನೆ ಅಷ್ಟೆ! ಅದಲ್ದೆ "ಭಾಷಾಂತರ" ನನ್ನ ಪ್ರಮುಖ ಆಸಕ್ತಿಯಾದ್ದರಿಂದ ಇಂಥದ್ದನ್ನ ಇಷ್ಟಪಟ್ಟು ಮಾಡ್ತೇನೆ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 11:37am — girish.rajanal

ಉ: ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

girish.rajanal's picture

ಬಹುಶಃ ಅವ್ರುಗೆ, ನಿಮಗೆ ಬಂದ ಮೇಲ್ ಲೇ ಬಂದಿರಬೇಕು ಅನ್ನಿಸುತ್ತೆ. ಅವರಿಗೆ ಮುಂಚೆ ಬಂತು ನಿಮಗೆ ತಡವಾಗಿ ಬಂತು ಇಷ್ಟೆ ವ್ಯತ್ಯಾಸ.
ಏನೇ ಇರಲಿ ಪ್ರೇಮಿಗಳ ಮಾತುಕತೆ...ಚೆನ್ನಾಗಿದೆ...
ಸವಿನನ್ನಿ..

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 11:20am — girish.rajanal

ಉ: ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!

girish.rajanal's picture

ಶಶಿಯವರೆ,
ನೀವು ಬರೆದ ಪ್ರೇಮ ಸಂಭಾಷಣೆ ಈ ಮೊದಲು ವಿಕಾಸ ಹೆಗಡೆ ಅವರು ಬರೆದಿದ್ದಾರೆ.. ಆದರೆ ಅದರಲ್ಲಿರೋ ಹಾಡುಗಳು ಮಾತ್ರ ಬೇರೆ ಅಷ್ಟೆ...
http://vikasavada.blogspot.com/2007/06/e-mail.html ಈ ಲಿಂಕನ್ನು ನೋಡಿ.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮಿಗಳ ಸಂಭಾಷಣೆ
  • ಅವಳು ಮಾತುಗಾರ್ತಿ....
  • ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
  • ಬೊಗಸೆ ಕಣ್ಣುಗಳಲ್ಲಿ ಆಸೆ
  • ಪ್ರಶ್ನೆ 250308.....?
Syndicate content

ಲೇಖಕರು

shashikannada's picture

ಪೂರ್ಣ ಹೆಸರು
ಶಶಿಕುಮಾರ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator