ಕೂಗು... ಎನ್ನ ಮನುಕುಲಕೆ!!!
ಚಂದಿನ
ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com
ಕೊಡುವ ಕಾಣಿಕೆ
ರವಿಯ ಕಿರಣ ಸೋಲುತಿದೆ
ಪೂರ್ಣ ಚಂದ್ರ ಕರಗುತಿದೆ
ಸ್ಥಬ್ಧ ನಿತ್ಯ ಹಸಿರು ವನ
ಸುಪ್ತ ಸೋನೆ ಮಳೆಯ ಜನನ
ಹರಿಯುವ ನದಿ ಮಾಯವಾಗಿ
ಬೀಸುವ ತಂಗಾಳಿ ಬಿಸಿಯಾಗಿ
ಕಲ್ಲಾಗಿ ಕೊರೆವ ಕುಡಿವ ಜಲ
ದಿಗ್ಗನೆ ಬಾಯ್ತೆರೆದು ಕುಸಿದ ನೆಲ
ಆದಿ ಅಂತ್ಯ ಯಾವುದಿಲ್ಲಿ
ಸಕಲ ಶೂನ್ಯವೆಲ್ಲ ಇಲ್ಲಿ
ನಶ್ವರವಾಗುತಿರಲು ಬದುಕು
ಬೆಳಗಳಿದೆಯೇ ಬಾಳ ಬೆಳಕು
ಹಸಿರು ಅಳಿಸಿ ಹಸಿವು ಬೆಳೆಸಿ
ರಸ ರಹಿತ ಜಗವ ಉಳಿಸಿ
ಇದುವೆ ನಾವು ಕೊಡುವ ಕಾಣಿಕೆ
ಮುಂದೆ ಜನ್ಮ ಪಡೆವ ಕೂಸಿಗೆ
( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

- shekarsss ರವರ ಬ್ಲಾಗ್
- Login or register to post comments
- 268 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕೊಡುವ ಕಾಣಿಕೆ
ಗಾಳಿ ಬಿಸಿಯಾಗಿದ್ದರೆ ಅದು ತಂಗಾಳಿಯಾಗದು...
ಉ: ಕೊಡುವ ಕಾಣಿಕೆ
ತಂಗಾಳಿಯನ್ನು ಬಿಸಿ ಮಾಡಿದೆವು ಎಂದು ಅದರ ಅರ್ಥ
ಉ: ಕೊಡುವ ಕಾಣಿಕೆ
ಅಷ್ಮ್ಯ ಅವರೇ,
ಸರಿಯಾಗಿ ಅರ್ಥೈಸಿದ್ದಕ್ಕಾಗಿ ನನ್ನಿ.
ಧನ್ಯವಾದಗಳೊಂದಿಗೆ,
ಚಂದಿನ
ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com