ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shekarsss ರವರ ಬ್ಲಾಗ್

ಕೂಗು... ಎನ್ನ ಮನುಕುಲಕೆ!!!

ಚಂದಿನ

ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com

ಕೊಸರಿನ ಕಮಲ

January 10, 2008 - 4:17pm — shekarsss

ಕೊಸರಿನಲ್ಲಿ ಹೊಳೆವ ಕಮಲ
ಕೊಸರಿಗಂಜಿ ಅಳುವುದೇ
ಕೊಸರಿನಿಂದ ಬರುವುದೆಂದು
ಯಾರು ಅದನು ಬಗೆವರು

ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು

ಹಾಲು, ಮೊಸರು, ಬೆಣ್ಣೆ, ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು

ಒಂದು, ಎರಡು, ಮೂರು, ನಾಕು
ಮಗುವಿಗಿಷ್ಟು ಹೆಸರು ಸಾಕೆ
ಒಂದು, ಎರಡು ಮಾಡಿತೆಂದು
ಯಾರು ಅದಕೆ ಸಿಡಿವರು
****

( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

  • ಕವನ
~.~
  • shekarsss ರವರ ಬ್ಲಾಗ್
  • Login or register to post comments
  • 450 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 10, 2008 - 5:19pm — ASHMYA

ಉ: ಕೊಸರಿನ ಕಮಲ

ASHMYA's picture

ಕೊಸರಿನ ಕಮಲ, ಕೆಸರಿನ ಕಮಲ ಎಂದು ಇರಬೇಕಿತ್ತಾ ಅಥವ ಕೊಸರಿನ ಕಮಲಕ್ಕೇನಾದರು ಬೇರೆ ಅರ್ಥವಿದೆಯೆ?ಹಾಗೆ 'ನನ್ನಿ' ಎಂದರೆನೆಂದೂ ತಿಳಿಸಿ...ನಾನು ಸಂಪದಕ್ಕೆ ಹೊಸಬಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 7:27pm — Sunil Jayaprakash

ಉ: ಕೊಸರಿನ ಕಮಲ

Sunil Jayaprakash's picture

ನನ್ನಿ ಪದದ ಬಗ್ಗೆ ತಿಳಿಯಲು ಈ ಎರಡು ಕೊಂಡಿಯನ್ನು ಚಿಟುಕಿ.
೧. ನನ್ನಿಯ ಮೂಲ ೨. ಸುನಿಲಮಾವ ನನ್ನಿಮಾವನಾದದ್ದು ಹೇಗೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 11, 2008 - 10:45am — shekarsss

ಉ: ಕೊಸರಿನ ಕಮಲ

shekarsss's picture

ನಲ್ವಗಲು,

ಸುನಿಲ್ ಜಯಪ್ರಕಾಶ್ ಅವರೇ,

ನಲ್ವೆ ನನ್ನಿ.

ಚಂದಿನ

ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2008 - 11:17am — ASHMYA

ಉ: ಕೊಸರಿನ ಕಮಲ

ASHMYA's picture

ಬದುಕು ಬರಡಾಗದಿರಲಿ..........

ಈ contextನಲ್ಲಿ ಕೆಸರು ಇರಬೇಕಿತ್ತೆಂದು ನನ್ನ ಅನಿಸಿಕೆ..Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 13, 2008 - 1:36pm — mahesha

ಉ: ಕೊಸರಿನ ಕಮಲ

mahesha's picture

ಕೊಸರು

kosaru to demand an article gratis or into the bargain; be greedy, desire, hanker; n. anything asked for and given to boot; eagerness, cupidity;

kosarike hankering after, desire.

kosaru to ask for a little extra quantity after purchasing any article,

"( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )"

ಇದನ್ನು "ವಕ್ರ ವ್ಯಾಕರಣಗಳನ್ನು ತಿಳಿಸಿ ಸಹಕರಿಸುವವರಿಗೆ ನನ್ನಿ" ಎಂದು ತಿದ್ದಿ.

"ಅದರ ತಿಳಿಸು" ಅಲ್ಲ "ಅದನ್ನು ತಿಳಿಸು".
"ವಿಷಯದ ತಿಳಿಸು" ಅಲ್ಲ "ವಿಷಯವನ್ನು ತಿಳಿಸು"

===============
ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ

ದರಿಸಿ ಅಂದ್ರೆ ದರ ಮಾಡು, ಬೆಲೆಕಟ್ಟು ಅಂತ ಅರಿತ ತೆಗೆಬೋದೇನೋ..
ಇಲ್ಲಿ
ನೀವು ಹೇಳಿರುವುದು ಧರಿಸಿ.ತೊಟ್ಟು ಎಂದು ಅಂತ ನನ್ನ ಗ್ರಹಣ

========================.

ನಿಮ್ಮ ಪದ್ಯದ ಗುಟ್ಟು ನನಗೆ ತಿಳಿಯಲ್ಲಿ.. "ಕೊಸರಿನ ಕಮಲ" ಅಂದ್ರೆ ಬಲು ಆಸೆಪಟ್ಟ ತಾವರೆ ಅಂತ ತಿಳಿಯಬೋದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 13, 2008 - 1:39pm — mahesha

ಉ: ಕೊಸರಿನ ಕಮಲ

mahesha's picture

ತಿಳಿಯಲ್ಲಿ ಅಲ್ಲ ತಿಳಿಯಲಿಲ್ಲ( ಒಂದು ಲಿ ಮಾಯ ಆಗಿದೆ )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2008 - 9:50am — ವೈಭವ

ಉ: ಕೊಸರಿನ ಕಮಲ

ವೈಭವ's picture

"...ತೊಟ್ಟು ಎಂದು ಅಂತ ನನ್ನ ಗ್ರಹಣ..."

Smiling :) ತುಂಬ ನಗು ಬಂತು... ಏನಿದು ಗ್ರಹಣ...ಸೂರ್ಯ ಗ್ರಹಣ, ಚಂದ್ರ ಗ್ರಹಣದ ತರ 'ನನ್ನ'(ನಿನ್ನ) ಗ್ರಹಣವೇ?
-----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2008 - 1:25pm — mahesha

ಉ: ಕೊಸರಿನ ಕಮಲ

mahesha's picture

Smiling

ಗ್ರಹಣ = ಹಿಡಿತ..

ಗ್ರಹಿಸು ಅಂದ್ರೆ ಗ್ರಹವನ್ನು ಮಾಡು ಅಲ್ಲ.. ಹಿಡಿ Smiling

ಗ್ರಾಹ = ಮೊಸಳೆ( ಗಜೇಂದ್ರನನ್ನು ಹಿಡಿಸ ಮೊಸಳೆ)

ಗ್ರಹ = ಹಿಡಿಸಿಕೊಳ್ಳಲ್ಪಡುವುದು

ಗೃಹಸ್ಥ = ಹಿಡಿದುಕೊಂಡಿರುವವನು

ಗೃಹ್ Smiling = ಹಿಡಿ
ಗ್ರಹ್ = ಹಿಡಿಸಿಕೊಳ್ಳು?

Smiling

ಗ್ರಹಣ = ಹಿಡಿಸಿಕೊಳ್ಳವಿಕೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2008 - 6:13pm — shreekant.mishrikoti

ಉ: ಕೊಸರಿನ ಕಮಲ

shreekant.mishrikoti's picture

ಕವನದಲ್ಲಿ ಕೊಸರು ಸರಿ ಅಲ್ಲ - ಕೆಸರು ಎಂದೇ ಇರಬೇಕು .
ಮಹೇಶರು ’ನನ್ನ ಗ್ರಹಣ’ ಅನ್ನುವಲ್ಲಿ ’ನನ್ನ ಗ್ರಹಿಕೆ’ ಅನ್ನಬೇಕಿತ್ತು

"ಕನ್ನಡದ
ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2008 - 7:14pm — mahesha

ಉ: ಕೊಸರಿನ ಕಮಲ

mahesha's picture

ಗ್ರಹಣ ಮತ್ತು ಗ್ರಹಿಕೆಗೆ ಏನು ವ್ಯತ್ಯಾಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2008 - 7:26pm — mahesha

ಉ: ಕೊಸರಿನ ಕಮಲ

mahesha's picture

ದರ್ಶನ ಮತ್ತು ದರ್ಶಿಕೆ

ದರ್ಶನ = ತೋರಿಕೆ/ತೋರಿಸುವಿಕೆ
ದರ್ಶಿಕೆ = ತೋರಿಸುವಂತಹದ್ದು

ದೂರದರ್ಶನ = ತೂಱದ ತೋರಿಸುವಿಕೆ
ದೂರದರ್ಶಿಕೆ = ತೂಱದನ್ನು ತೋರಿಸುವ ಸರಕು.

( ಹೀಗೇ ದಿನದರ್ಶಿಕೆ ಅಂತ )
ಹಾಗೆ
ಗ್ರಹಣ = ಹಿಡಿಯುವಿಕ್‌ಎ
ಗ್ರಹಿಕಾ/ಕೆ = ಹಿಡಿಯುವಂತಹದ್ದ. ಅಲ್ವ?

ಕಾರಣ = ಮಾಡುವಿಕೆ
ಕಾರಿಕಾ = ಮಾಡುವುದು

ಹಾರಣ = ಎಗರಿಸುವಿಕೆ
ಹಾರಿಕಾ = ಎಗರಿಸುವಂಹದ್ದು

ಮನೋಹಾರಕ/ರಿಕಾ = ಮನವನ್ನು ಎಗರಿಸುವಂಹದ್ದು
ಮನೋಹಾರಣ = ಮನವನ್ನು ಎಗರಿಸುವಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 28, 2008 - 9:58am — shekarsss

ಉ: ಕೊಸರಿನ ಕಮಲ

shekarsss's picture

ಈ ಕವನಕ್ಕೆ ಪ್ರತಿಕ್ರಯಿಸಿದ ಸಂಪದ ಮಿತ್ರರಿಗೆ,

ನಿಮ್ಮ ಸಲಹೆಯಂತೆ ಸರಿಪಡಿಸಿದ್ದೇನೆ.

ಇದನ್ನು ನನ್ನ ಬ್ಲಾಗಲ್ಲಿ ಕಾಣ ಬಹುದು.

www.koogu.blogspot.com

ಧನ್ಯವಾದಗಳೊಂದಿಗೆ,

ಚಂದಿನ

ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಡೆಸು ಪಯಣವನು
  • ಮಾಯವಾದರು ಎಲ್ಲಿಗೆ
  • ಹೆಸರು ಬೇಕು?
  • ಹೆಸರು ಬೇಕು?
  • ಹೊಸ ಅರಿವು
Syndicate content

ಲೇಖಕರು

shekarsss's picture

ಪೂರ್ಣ ಹೆಸರು
ಚ೦ದಿನ

ಪರಿಚಯ

ಕಲಿ, ನಲಿ, ಓದು, ಬರಹದೊ೦ದಿಗೆ ಉದ್ಯೋಗ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator