ಕೂಗು... ಎನ್ನ ಮನುಕುಲಕೆ!!!
ಚಂದಿನ
ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com
ಸದಾ ನನಗಿರಲಿ
ದಿನವು ಹೊಸತು ಹೊಸತು ಬರಲಿ
ಹಳೆಯ ನೆನಪುಗಳ ಸುಳಿವಿರದಿರಲಿ
ಉಲ್ಲಾಸ, ಉತ್ಸಾಹ ಕುಂದದಿರಲಿ
ಹುಡುಕಾಟ ಕೊನೆವರೆಗು ನಿಲ್ಲದಿರಲಿ
ಕಲ್ಪನಾ ಲಹರಿ ಕೊನೆಯಾಗದಿರಲಿ
ಸೃಜನಶೀಲ ಮನ ಮಟುಕಾಗದಿರಲಿ
ಕಂಡ ಕನಸುಗಳು ಕಾಣದಾಗದಿರಲಿ
ಅವತರಿಪ ಆಸೆಗಳಿಗೆ ಕಡಿವಾಣವಿರಲಿ
ಅರಿವಿನ ಹಸಿವು ಹುಚ್ಚೆದ್ದು ಕುಣಿಯಲಿ
ಒಲ್ಲದ ವಿಷಯಗಳು ತಲೆ ಕೆಡಸದಿರಲಿ
ಬಲ್ಲವರ ಬಳಿಗೆ ಬಾಗಿಲು ತೆರೆದಿರಲಿ
ಕೇಡುಗರ ಕಣ್ಣೋಟ ಇತ್ತ ಬೀರದಿರಲಿ
ಅಧಿಕ ಐಶ್ವರ್ಯ ಎನಗೆ ಸಿಗದಿರಲಿ
ಮಾನವೀಯತೆ ಎಂದೂ ಬೆಳಗುತಿರಲಿ
ಸರಳತೆಯ ಬೇರುಗಳು ಸಡಿಲವಾಗದಿರಲಿ
ಆರೋಗ್ಯದೈಶ್ವರ್ಯ ಸದಾ ನನಗಿರಲಿ
****
( ವಕ್ರ ವ್ಯಾಕರಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

- shekarsss ರವರ ಬ್ಲಾಗ್
- Login or register to post comments
- 211 hits
- Email this blog





RSS:
ಪ್ರತಿಕ್ರಿಯೆಗಳು
ಉ: ಸದಾ ನನಗಿರಲಿ
ಚೆನ್ನಾಗಿದೆ.
>>ಹಳೆಯ ನೆನಪುಗಳ ಸುಳಿವಿರದಿರಲಿ
-ಮಧುರ ನೆನಪುಗಳ ಸುಳಿವಿರಲಿ.
>>ಅಧಿಕ ಐಶ್ವರ್ಯ ಎನಗೆ ಸಿಗದಿರಲಿ
-ಐಶ್ವರ್ಯ ಬಗ್ಗೆ ಯಾಕೆ ದ್ವೇಷ?
ಆಯುರಾರೋಗ್ಯ ಸದಾ ನಿಮಗಿರಲಿ
ಗಣೇಶ.