ಕೂಗು... ಎನ್ನ ಮನುಕುಲಕೆ!!!
ಚಂದಿನ
ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com
ಅಂಬರದೆತ್ತರ
ಎತ್ತರ ಎತ್ತರ ಅಂಬರದೆತ್ತರ
ನಿಲ್ಲದೆ ಏರಿದೆ ನೆಲದ ಬೆಲೆ
ಏನಿದೆ, ಎಲ್ಲಿದೆ, ಎಸ್ಟಿದೆ ಚದರ
ಲೆಕ್ಕವ ಹಾಕಲು ಜನರ ಕಾತುರ
ಹಗಲು ವೇಷ, ಹಲವು ಮುಖದವರು
ಆದಷ್ಟು ಬೇಗ, ಅಧಿಕ ಲಾಭಕೆ ಇವರು
ಬೆವರು ಸುರಿಸದೆ ಮಾಡುವರು ಜೋರು
ತಳಮಳಿಸುತಿಹರು ಮಂಕು ಬಡಿದವರು
ವೇಗದಲಿ ಏರಿದವರು ಮೇಲಿನಂತಸ್ತು
ಪ್ರದರ್ಶನಕ್ಕಿಟ್ಟು ಹಲವಾರು ವಸ್ತು
ಮೋಜು ಮಾಡುವರು ಮಸ್ತು ಮಸ್ತು
ಇವರ ಕಂಡವರಿಗೆಲ್ಲಾ ಸುಸ್ತು ಸುಸ್ತು
ಕಂಗಾಲಾಗಿ ಕೂಡುವ ಬಡವರು
ಎಟುಕದ ದ್ರಾಕ್ಷಿ ಹುಳಿ ಎನ್ನುತಾ
ಬೇಸರದಿ ಮನವನ್ನು ಸಂತೈಸುತಾ
ಬಿಡುವರು ಸಮಾಧಾನದ ನಿಟ್ಟುಸಿರು
****
( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

- shekarsss ರವರ ಬ್ಲಾಗ್
- Login or register to post comments
- 278 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅಂಬರದೆತ್ತರ
ಏರದೆ ಏನನು ಮಾಡುವುದಣ್ಣ
ಅಷ್ಟೇವೇಗವು ಜನಗಣತಿ
ದುಡ್ಡಿನ ಭರಾಟೆ ಅಷ್ಟೇ ಜೋರು
ಎಲ್ಲೆಂದರುಕಾರು
ಹಳ್ಳಿಯ ರೈತನ ಕೇಳುವರಾರು
ಲಕ್ಷಗಟ್ಟಲೆ ಸಂಬಳದವರು
ಕೋಟಿಗಟ್ಟಲೆ ಗಿಂಬಳದವರು
ಈ ದೇಶದ ಬಡಜನ ನಲುಗಿದರು