ತಲೆಹರಟೆ
ಪರದೇಶಿಗೆ ಧಾರವಾಡದ ನೆನಪು ಬನ್ದಾಗ್ಲೆಲ್ಲ ಗೀಚೊ ಕೆಲವು ವಾಕ್ಯಗಳು
ನೆನೆವುದೆನ್ನ ಮನ ಕರ್ನಾಟಕ ದೇಶವಮ್
"ಜನನಿ ಜನ್ಮಭೂಮಿಶ್ಯ ಸ್ವರ್ಗಾದಪಿಗರಿಯಸಿ". ಹಿಂಗ ನನ್ನ ಸಂಸ್ಕ್ರತ ಟೀಚರು ವಾರಕೂಮ್ಮೆಯಾದ್ರೂ ಹೇಳ್ತಿದ್ರು. ೧೦-೧೨ ವರ್ಷದ ಮ್ಯಾಲೆ, ಕೆಲಸದ ಬೆನ್ನ ಹತ್ತಿ ಪರದೇಶ ಸೇರಕೊಂಡ ಮ್ಯಾಲೆ ಆ ವಾಕ್ಯದ ಅರ್ಥ ಪೂರ್ತಿಯಾಗಿ ಮನದಟ್ಟಾಗೆದ. ಥೆಮ್ಸ್ ನದಿ, ನಯಾಗರಾ ಫ಼ಾಲ್ಸ್, ರೊಕಿ ಪರ್ವತ ಶ್ರೇಣಿ ಇವೆಲ್ಲ ಭಾಳ ಛಂದ ಅವ ಆದ್ರ ದಿನದ ಕೊನೆಗೆ ನನ್ನ ಧಾರವಾಡದ ನೆನಪು ಬಂದಬಿಟ್ರ,ಥೇಮ್ಸ್ ನದಿಗಿಂತ ಕೆಲಗೇರಿ ಕೆರಿ ಛಂದ ಅನಸತದ, ರ್‍ಆಕಿ ಪರ್ವತಕ್ಕಿಂತ ವಿದ್ಯಾಗಿರಿ ಗುಡ್ಡ ಅದ್ಭುತವಾಗಿ ಕಾಣತದ.
ಎಂಥಾ ವಿಚಿತ್ರ ಅಲ್ಲಾ, ಕಳಕೊಳ್ಳೋ ತನಕಾ ವಸ್ತುವಿನ ಮೌಲ್ಯಾ ಅರಿವಾಗೊದಿಲ್ಲ!

- shilpaam ರವರ ಬ್ಲಾಗ್
- Login or register to post comments
- 259 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
ಹೌದು ನೀವ್ಹೇಳೊದು ೧೦೦% ಸರಿ, ನಾವು ವಸ್ತುಗಳನ್ನು ಕಳೆದುಕೊಂಡಮೇಲೆನೇ ಅದ್ರ ಬೆಲೆ ಗೊತ್ತಾಗೋದು. ಇಲ್ಲಿರೋದೆಲ್ಲ ಒಂತರ artificial ಅನ್ನಿಸುತ್ತಿರುತ್ತದೆ. ಅಲ್ಲಿ ಬೇಕಾದೆಗೆಲ್ಲಾ ಊರಿಗೆ ಹೋಗಿ, ಹೊರಗಡೆ ಪಾನಿಪುರಿ ತಿಂದು, ರೋಟಿಘರ್ ಅಥವ ಎಮ್.ಟಿ.ಆರ್ ಗೆ ಆರಾಮಾಗಿ ಹೋಗ್ಬೋದು. ಇಲ್ಲಿಗೆ ಬಂದು ನಾನಂತು ಎಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ
ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
ನಮಸ್ಕಾರ. ವಿದೇಶದಲ್ಲಿದ್ರೂ ನಮ್ಮ ನೆಲ, ಜಲದ ಬಗ್ಗೆ ಅಭಿಮಾನ ಸುಳೀಸಿಕೊಂಡಿರೋದಕ್ಕೆ ನಿಮಗೆ ನನ್ನಿ. ನಾವು ಎಲ್ಲೇ ಇದ್ರೂ ಎಲ್ಲವನ್ನೂ "ಅನುಭವಿಸೋ" ಸೂಕ್ಷ್ಮತೆಯನ್ನ ಉಳಿಸಿಕೊಂಡ್ರೆ ಯಾವ ಸಮಸ್ಯೆಯೂ ಬಾರದು ಎನಿಸುತ್ತೆ. ಪರನಾಡಿಗೆ ಹೋದಾಗ ನಮ್ಮ ನೆಲ ಕಾಡೋ ಅಷ್ಟು ಬೇರಾವುದೂ ಕಾಡದು. ಆದರೆ, ಇಲ್ಲಿಯ ಜನ ಇಲ್ಲಿಯದನ್ನ ಗಾಢವಾಗಿ ಅನುಭವಿಸದಿರೋ ಅಷ್ಟು ಜಡವಾಗಿಬಿಟ್ಟಿದ್ದಾರೇನೋ ಅನ್ಸುತ್ತೆ. ನೀವು ಅಲ್ಲಿರುವುದು ಅನಿವಾರ್ಯವಾದ ಮೇಲೆ ಅಲ್ಲಿ ಇರುವಷ್ಟು ಕಾಲ ಅಲ್ಲಿಯದನ್ನ ಗಾಢವಾಗಿ 'ಫೀಲ್' ಮಾಡಿ ಅಂತಹ ಅನುಭವಗಳನ್ನು ನಿಮ್ಮ ಅಂತರಂಗದ ಭಾಷೆಯಲ್ಲಿಯೇ (ಉತ್ತರ ಕರ್ನಾಟಕದ ಭಾಷೆ) ಬರೆದು ನಮಗೆ ಉಣಬಡಿಸಿ.
ಇಂತಹ ಸಂದರ್ಭಗಳಲ್ಲೇ ಅಡಿಗರ "ಯಾವ ಮೋಹನ ಮುರಳಿ ಕರೆಯಿತು" ಗೀತೆ ನೆನಪಾಗುವುದು. ನೆನಪಾಗಿ ಕಣ್ಣೀರು ಉಮ್ಮಳಿಸಿ ಬರುವುದು ಅಲ್ವ?
ಇನ್ನು ನಿಮ್ಮ ಬ್ಲಾಗ್ ಹೆಸರು, ಚಿತ್ರ ಎಲ್ಲವೂ ಸುಂದರ ಹಾಗೂ ಸಾಂದರ್ಭಿಕ.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
ನಮಸ್ಕಾರ. ವಿದೇಶದಲ್ಲಿದ್ರೂ ನಮ್ಮ ನೆಲ, ಜಲದ ಬಗ್ಗೆ ಅಭಿಮಾನ ಉಳಿಸಿಕೊಂಡಿರೋದಕ್ಕೆ ನಿಮಗೆ ನನ್ನಿ. ನಾವು ಎಲ್ಲೇ ಇದ್ರೂ ಎಲ್ಲವನ್ನೂ "ಅನುಭವಿಸೋ" ಸೂಕ್ಷ್ಮತೆಯನ್ನ ಉಳಿಸಿಕೊಂಡ್ರೆ ಯಾವ ಸಮಸ್ಯೆಯೂ ಬಾರದು ಎನಿಸುತ್ತೆ. ಪರನಾಡಿಗೆ ಹೋದಾಗ ನಮ್ಮ ನೆಲ ಕಾಡೋ ಅಷ್ಟು ಬೇರಾವುದೂ ಕಾಡದು. ಆದರೆ, ಇಲ್ಲಿಯ ಜನ ಇಲ್ಲಿಯದನ್ನ ಗಾಢವಾಗಿ ಅನುಭವಿಸದಿರೋ ಅಷ್ಟು ಜಡವಾಗಿಬಿಟ್ಟಿದ್ದಾರೇನೋ ಅನ್ಸುತ್ತೆ. ನೀವು ಅಲ್ಲಿರುವುದು ಅನಿವಾರ್ಯವಾದ ಮೇಲೆ ಅಲ್ಲಿ ಇರುವಷ್ಟು ಕಾಲ ಅಲ್ಲಿಯದನ್ನ ಗಾಢವಾಗಿ 'ಫೀಲ್' ಮಾಡಿ ಅಂತಹ ಅನುಭವಗಳನ್ನು ನಿಮ್ಮ ಅಂತರಂಗದ ಭಾಷೆಯಲ್ಲಿಯೇ (ಉತ್ತರ ಕರ್ನಾಟಕದ ಭಾಷೆ) ಬರೆದು ನಮಗೆ ಉಣಬಡಿಸಿ.
ಇಂತಹ ಸಂದರ್ಭಗಳಲ್ಲೇ ಅಡಿಗರ "ಯಾವ ಮೋಹನ ಮುರಳಿ ಕರೆಯಿತು" ಗೀತೆ ನೆನಪಾಗುವುದು. ನೆನಪಾಗಿ ದುಃಖ ಉಮ್ಮಳಿಸಿ ಬರುವುದು. ಅಲ್ವ?
ಇನ್ನು ನಿಮ್ಮ ಬ್ಲಾಗ್ ಹೆಸರು, ಚಿತ್ರ ಎಲ್ಲವೂ ಸುಂದರ ಹಾಗೂ ಸಾಂದರ್ಭಿಕ.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
ನಮಸ್ಕಾರಿ ಮೆಡಮ್ಮರಾ,
ನಾನು ನಿಮ್ಮೂರ ಹತ್ರ ಲಕ್ಶ್ಮೆಶ್ವರ ಹತ್ರ ಬಾಲೆಹೊಸೂರ ಅನ್ನೊ ಹಲ್ಲಿಯವ.
ನಿವೇನು ಹೇಳೀದಿರಲ್ಲ ಅದ್ ನೂರಕ್ಕ ನೂರ್ ಖರೆ ಅದ.
ಇಂತಿ ನಿಮ್ಮ,
ಅಂಗೂರ
ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
ಹಳ್ಳಿರಿ ಅದು