ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್
http://shivagadag.bl... ನಲ್ಲಿ
ಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..
1) ಇದನ್ನು ಕಳಿಸಿದ್ದು:- ಮಂಜುನಾಥ (ಬೆಂಗಳೂರು/ಚಿಕ್ಕನಾಯಕನಹಳ್ಳಿ)
LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು" /ವಾ..ವಾ//
LOVE ಮಾಡಿ
ಮದ್ವೆ ಆದ್ರೆ "ರೊಮ್ಯಾನ್ಸು"
LOVE ಮಾಡಿ
ಕೈ ಕೊಟ್ರೆ..... "ನಿಮ್ಹಾನ್ಸು" /ವಾ..ವಾ//
2)BREAKING NEWS...!!!
ಸೌತ್ ಆಫ್ರಿಕಾದಲ್ಲಿ ವಿಶ್ವಕಪ್ ನಿಂದ ಸರಿದ ನಂತರ ಭಾರ(ದ)ತೀಯ ಕ್ರಿ-ಕೆಟ್ಟಿಗರು ಅಲ್ಲಿನ ತೆಂಗಿನ ಮರವನ್ನು ಹತ್ತಿದರಂತೆ..
ಯಾಕೆ ಎಂದು ಕೇಳಿದಾಗ ಭಾರ(ತ)ದ ನಾ(ವಿ)ಯಕ ಧೋ(ಣಿ)ನಿ ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೀಡಿದ ಉತ್ತರ
" ಸೌತ್ ಆಫ್ರಿಕಾದಿಂದ ಕಪ್ ನಂತೂ ತರಕೆ ಆಗಲಿಲ್ಲಾ.. ಕನಿಷ್ಟಪಕ್ಕ್ಷ ಚಿಪ್ಪನ್ನಾದ್ರೂ ತಗೊಂಡು ಹೋಗನಾ ಅಂತಾ ಅಷ್ಟೇ.." ಅಂದನಂತೆ ಶಿವಾ...
3) ಮೊನ್ನೆ ಭಾರತಕ್ಕೆ ಮರಳಿದ ನಂತರ, ಕ್ರಿಕೆಟಿಗ ಯುವರಾಜನ ಅಮ್ಮ ಮನೆಗೆ ರೇಷನ್ ತಗೊಂಡು ಬರಲು ಯುವರಾಜನಿಗೆ ಹೇಳಿದರು..
ಕ್ರಿಕೆಟ್ ಅಭಿಮಾನಿಗಳಿಗೆ ಮುಖ ಹೇಗೆ ತೋರಿಸೋದು ಹೇಗೆ ಅಂತಾ ಯಾರಿಗೂ ಗೊತ್ತಾಗದ ಹಾಗೆ ಸೀರೆ ಉಟ್ಟುಕೊಂಡು ಪೇಟೆಗೆ ಹೋಗಿ ಎಲ್ಲಾ ಸಾಮಾನು ತಗೊಂಡ..ಆದರೆ ಅವನನ್ನು ಯಾರೂ ಗುರ್ತು ಹಿಡೀಲಿಲ್ಲ ಅಂತಾ ತುಂಬಾ ಖುಶಿಯಿಂದ ಮನೆಗೆ ಬರಬೇಕಾದ್ರೆ...
ಒಬ್ಬಳು ಹೆಂಗಸು ಬಂದು ನೀನು ಕ್ರಿಕೆಟಿಗ ಯುವರಾಜ್ ಸಿಂಗ್ ಅಲ್ವಾ ಅಂತಾ ಗುರುತು ಹಿಡಿದು ಕೇಳಿದಳು..
ಅವನಿಗೆ ಆಶ್ಚರ್ಯವಾಯಿತು.. ಅಷ್ಟೊಂದು ಜನರು ಗುರ್ತು ಹಿಡೀಲಿಲ್ಲ,. ನೀವು ಹೇಗೆ ಗುರುತು ಹಿಡಿದಿರಿ ಅಕ್ಕಾ ಎಂದು ಕೇಳಿದ..
ಆ ಹೆಂಗಸು ಹೇಳಿದಳು.. "ಲೋ ನಾನ್ ಕಣೋ.. ಧೋನಿ"
4)ಇದನ್ನು ಕಳಿಸಿದ್ದು:- ಯದು (ಢಾಭಾ.. ಚಿಕ್ಕನಾಯಕನಹಳ್ಳಿ)
ಮಗ:- ಅಮ್ಮ ಆ ರೆಡ್ ಕಲರ್ ಪಟಾಕಿ ಸುಟ್ರೆ, ಚನ್ನಾಗಿ ಸೌಂಡ್ ಬರುತ್ತಾ...??
ಅಮ್ಮ:- ಅಯ್ಯೋ ದರಿದ್ರ.. ಅದು Gas cylinder ಕಣೋ..
5)ರೋಗಿ:- ಸಾರ್ ನೆನ್ನೆಯಿಂದ ತುಂಬಾ ಹೊಟ್ಟೆ ನೂವು ಸಾರ್..
ವೈದ್ಯ:- ಗ್ಯಾಸ್ ಇದೆಯಾ...??
ರೋಗಿ:- ಇಲ್ಲಾ ಸಾರ್.. ಬುಕ್ ಮಾಡಿ ಹದಿನೈದು ದಿನ ಆಯ್ತು.. ಇನ್ನೂ ಬಂದಿಲ್ಲಾ.
6)ಇದನ್ನು ಕಳಿಸಿದವರು:- ಸಕ್ಕೂ ಅಕ್ಕ
ತುಟಿಯಿಂದ ಸ್ಪರ್ಶಿಸಿದ ಆ ಅನುಭವ ಇನ್ನೂ ಇದೆ.
ಕಣ್ಣುಗಳಲ್ಲಿ ಬಂದ ನೀರು ಇನ್ನೂ ಇದೆ,
ಉಸಿರಿನಲ್ಲಿ ಬಂದ ಬೆಂಕಿ ಇನ್ನೂ ಇದೆ...
ಯಾಕೆ ಹೇಳಿ..????
ತಿಂದಿದ್ದು ಹಸಿ ಹಸಿ ಮೆಣಸಿನಕಾಯಿ..!!!
7) ಇದನ್ನು ಕಳಿಸಿದವರು:- ರಘು (ಶಿರಾ)
ಮೊನ್ನೆ ಪಂಜಾಬ್ ಪ್ರಾಂತದ ಹಳ್ಳಿಯ ಸ್ಮಶಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದ ವಿಮಾನ ನೆಲಕ್ಕಪ್ಪಳಿಸಿದೆ..
ಇತ್ತೀಚಿಗೆ ಬಂದ ವರದಿಯ ಪ್ರಕಾರ.. ಅಲ್ಲಿನ ಸರ್ದಾರ್ ಗಳು ಇಲ್ಲಿಯವರೆಗೆ 280 ಹೆಣಗಳನ್ನು ಹುಡುಕಿ ತೆಗೆದಿದ್ದಾರೆ...!!!!!
8)ಇದನ್ನು ಕಳಿಸಿದವರು:- ಪ್ರಕಾಶ್ ಕಂಗೂರಿ (ದಾವಣಗೆರೆ)
ಒಂದು ದೊಡ್ಡ ಗಂಡು ಹುಲಿ...
ಒಂದು ದೊಡ್ಡ ಹೆಣ್ಣು ಇಲಿ..
ಅವು
ಅವು..
ನಮ್ಮ
ಪಕ್ಕದ್ಮನೆ ಫ್ಯಾಮಿಲಿ.!!
9)ಇದನ್ನು ಕಳಿಸಿದವರು:- ಸುದರ್ಶನ್ (ಶಿರಾ)
ಕಪ್ಪು ಮೋಡ ಕವಿದಾಗ, ನಿನ್ನ ನೆನಪು ಬರುತ್ತೆ
ಜೋರು ಮಳೆ ಬಂದಾಗ, ನಿನ್ನ ನೆನಪು ಬರುತ್ತೆ
ಗುಡುಗು ಬಂದಾಗ, ನಿನ್ನ ನೆನಪು ಬರುತ್ತೆ..
ಬೇಗ ನನ್ನ ಛತ್ರಿ ವಾಪಸ್ ಕೊಡು...
10) ಇದನ್ನು ಕಳಿಸಿದವರು:- ಸಿ.ಪಿ. ನಾಗು (ಚಿಕ್ಕನಾಯಕನಹಳ್ಳಿ)
ಟೀಚರ್:- ನಿಮ್ಮ ಅಪ್ಪನ ಬಳಿ ಇದ್ದ ಹತ್ತು ಚಾಕಲೇಟಿನಲ್ಲಿ ಒಂದನ್ನು ನಿನಗೆ ಕೊಟ್ಟು,
ಉಳಿದ 09 ಚಾಕಲೇಟನ್ನು ಪಕ್ಕದ್ಮನೆ ಮಗುಗೆ ಕೊಟ್ರೆ ನಿನಗೆ ಏನ್ ಬರುತ್ತೆ..??
ಸ್ಟೂಡೆಂಟ್:- ನನ್ನ ಅಪ್ಪನ ಮೇಲೆ ಡೌಟ್ ಬರುತ್ತೆ...!!
11) ಧರಣಿ ಕುಮಾರ (ಚಿಕ್ಕನಾಯಕನಹಳ್ಳಿ)
ಒಮ್ಮೆ ಸರ್ದಾರ್ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ.. "ಮನೇಲಿ ಇವತ್ತು ಯಾರೂ ಇರಲ್ಲಾ.. ಸರಿಯಾಗಿ ಹತ್ತು ಗಂಟೆಗೆ ಮನೆಗೆ ಬಾ"
ಅವಳು ತನ್ನ ತಂದೆ ತಾಯಿಯ ಕಣ್ಣು ತಪ್ಪಿಸಿ ಕಷ್ಟಪಟ್ಟು ಅವನ ಮನೆಗೆ ಬಂದು ನೋಡಿದಳು.. ಅವನು ಹೇಳಿದ್ದು ನಿಜವಾಗಿತ್ತು..
ಅವರ ಮನೆಯಲ್ಲಿ ಯಾರೂ ಇರಲಿಲ್ಲಾ.. ಮನೆಗೆ ಬೀಗ ಹಾಕಿತ್ತು.
12)ಇದನ್ನು ಕಳಿಸಿದವರು:- ಸಿ.ಪಿ. ನಾಗು (ಚಿಕ್ಕನಾಯಕನಹಳ್ಳಿ)
ಇಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//
ಅಂದು ಒಂದು ಹುಡುಗಿಗೆ
ಹೇಳಿದೆ "ಗುಡ್ ಮಾರ್ನಿಂಗ್" /ವಾ..ವಾ//
ಆದರೆ, ಅವಳಪ್ಪ ಹೇಳಿದ
ಇದೇ ನಿಂಗೆ "ಲಾಸ್ಟ್ ವಾರ್ನಿಂಗ್"
13) ಇದನ್ನು ಕಳಿಸಿದವರು:- ಶ್ರೀನಾಥ್ ಶಿವಮೊಗ್ಗ
ತ್ರಿಕಾಲ ಸತ್ಯ:-
ಒಬ್ಬಳು ಹುಡುಗಿ ರಸ್ತೆ ದಾಟುವಾಗ, ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಹುಶಾರಾಗಿ ಹೋಗಿ"
ಆದರೆ, ಒಬ್ಬ ಹುಡುಗ ರಸ್ತೆ ದಾಟುವಾಗ ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು "ಯಾಕೋ ಲೋಫರ್..!! ಸಾಯೋಕೆ ನನ್ನ ಗಾಡೀನೇ ಬೇಕಾ ನಿಂಗೆ..??
14)ಇದನ್ನು ಕಳಿಸಿದವರು:- ಜಗದೀಶ (ಚಿಕ್ಕನಾಯಕನಹಳ್ಳಿ)
ನೋಡ್ ಮಗಾ.. ನಿಂಗೆ ಪ್ರತಿ ದಿನ ಎಸ್ಸೆಮ್ಮೆಸ್ಸು ಕಳೀಸೋಕೆ ನಂಗೆ ಆಗಲ್ಲಾ..ನಮ್ಗೆ ನಮ್ಮದೇ ಆದ ಡೀಲಿಂಗ್ಸ್ ಇರ್ತವೆ..ಅದಕ್ಕೆ ಒಂದೇ ಸಾರಿ ಕಳಿಸ್ತಿದೀನಿ, "ನೀನ್ ಸಾಯೋವರೆಗೂ ಗುಡ್ ಮಾರ್ನಿಂಗು, ಗುಡ್ ಮಧ್ಯಾನ್ಹ, ಗುಡ್ ಇವನಿಂಗು.. ಗುಡ್ ನೈಟು..."
ಸರೀನಾ..?? ಆಮೇಲೆ ಮೆಸೇಜ್ ಕಳಿಸಿಲ್ಲಾ ಅಂತಾ ಬೈಬೇಡ..
15) ಇದನ್ನು ಕಳಿಸಿದವರು:- ಶ್ರೀನಾಥ್ ಶಿವಮೊಗ್ಗ
ಅವಳು ನನ್ನ ತಿರುಗಿ ನೋಡಿದಳು
ನಾನೂ ಅವಳ ತಿರುಗಿ ನೋಡಿದೆ,
ಅವಳು ಮತ್ತೆ ತಿರುಗಿ ನೋಡಿದಳು
ನಾನೂ ಮತ್ತೆ ತಿರುಗಿ ನೋಡಿದೆ..
ಯಾಕೆಂದರೆ,
ಇಬ್ಬರಿಗೂ INTERNAL EXAM ನಲ್ಲಿ
ಉತ್ತರ ಗೊತ್ತಿರಲಿಲ್ಲಾ...
16) ಇದನ್ನು ಕಳಿಸಿದವರು:- ಅಂಬರೀಶ್ ನಾಡಗೌಡ
ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//
ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//
ಬೆಳಿಗ್ಗೆ ಎದ್ದು ಬ್ಯಾಲೆನ್ಸ್ ನೋಡಿದೆ..
ಹೊಟ್ಟೆ ಎಲ್ಲಾ ಉರುದೋಯ್ತು... /ವಾ..ವಾ//
17)ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ ದೊಡ್ಡನಲ್ಲೂರಹಳ್ಳಿ/ಹೊಸಕೋಟೆ)
ಇವತ್ತು ನೀನು ನಂಗೆ ಮೆಸೇಜ್ ಮಾಡುದ್ರೆ ಮಾತ್ರ ನಾನು ಊಟ ಮಾಡೋದು.. ಇಲ್ಲಾ ಅಂದ್ರೆ,,,..
ಕೋಪದಲ್ಲಿ
ಪಾನಿಪೂರಿ, ಗೋಬಿ ಮಂಚೂರಿ, ಮಸಾಲದೋಸೆ ತಿಂದು ಮಲಗ್ತೀನಿ ಅಷ್ಟೇ,,,,..
(ಅವತ್ತು ನಾನು ಮೆಸೇಜ್ ಕಳಿಸಿದ ಮೇಲೂ, ತಿನ್ನೋಕೆ ಮಸಾಲದೋಸೆಯೇ ಗತಿಯಾಯ್ತು)
18)ಇದನ್ನು ಕಳಿಸಿದವರು :- ಜ್ಞಾನಮೂರ್ತಿ (ಭಕ್ತ)(ಬೆಂಗಳೂರು)
ಆಂಗ್ಲ ಭಾಷೆಯಲ್ಲಿ:- GOOD NIGHT
ಹಿಂದಿ ಭಾಷೆಯಲ್ಲಿ:- SHUBHA RAATHRI
ಉರ್ದು ಭಾಷೆಯಲ್ಲಿ:- SHABBA KHAIR
ಜರ್ಮನ್ ಭಾಷೆಯಲ್ಲಿ:- GUTEN NIGHT
ಸ್ಪ್ಯಾನಿಶ್ ಭಾಷೆಯಲ್ಲಿ:- VILLA VE DURE
ನನ್ನ ಸ್ಟೈಲ್:- " ಬಿದ್ಕ ಹೋಗಲೇ...."
ಇಂತಿ ನಿಮ್ಮ ಪ್ರೀತಿಯ
ಶಿವಶಂಕರ ವಿಷ್ಣು ಯಳವತ್ತಿ
http://shivagadag.bl...
ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
November 12, 2009 - 9:50am
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ಅದೇನು ಷಾಯರಿ ಭಾಗ ೪ ಆದ ಮೇಲೆ ೩ ಬಂತು?
Negative ನಲ್ಲೂ ಇದೆ ನಾ ಭಾಗ ZERO ಆದ ಮೇಲೆ?
ಜೋಕುಗಳು ಮಸ್ತ್ ಇವೆ :-)
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ವಿನಾಯಕ ಸರ್.. ಒಳ್ಳೇ ಐಡಿಯಾನೇ ಕೊಟ್ರಿ... ಹಾಗೇ ಮೊಡುವೆ..
ನಾನು ಭಾಗ 3 ಸರಣೀಯನ್ನು ಸಂಪದದಲ್ಲಿ ಪೋಸ್ಟ್ ಮಾಡಿರಲಿಲ್ಲ.. ಅದಕ್ಕೆ ಮಾಡಿದೆ... ನಿಮ್ಮ ಕಾಮೆಂಟ್ ಗೆ ವಂದನೆಗಳು,,.
ಹೀಗೇ ಭೇಟಿ ನೀಡಿ ಕಾಮೆಂಟ್ ಬರೆಯುತ್ತಿರಿ,.
http://shivagadag.bl...
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
Copy right ಇದೆ.. ಹಾಗೆಲ್ಲಾ ನನ್ idea ನೀವು ಬಳಸೋಹಾಗಿಲ್ಲ [ಸುಮ್ನೆ ತಮಾಶೆಗೆ ಹೇಳಿದೆ]
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ವಾ......ವಾ.....
ಸಕತ್ ಕಣ್ರಿ....
ವಂದನೆಗಳು..........ಶಿವಶಂಕರ ವಿಷ್ಣುರವರಿಗೆ.
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ಶಿವಶಂಕರ್ ರವರೇ,
ಒಂದಕ್ಕಿಂತ ಒಂದು ಚೆನ್ನಾಗಿದೆ.
ಕಮಲ
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ವಿಜಯ್ ಮತ್ತು ಕಲ್ಪನಾ ಮೇಡಮ್ ಗೆ ಧನ್ಯವಾದಗಳು....
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
http://shivagadag.bl...
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ಟೀಚರ್:- ನಿಮ್ಮ ಅಪ್ಪನ ಬಳಿ ಇದ್ದ ಹತ್ತು ಚಾಕಲೇಟಿನಲ್ಲಿ ಒಂದನ್ನು ನಿನಗೆ ಕೊಟ್ಟು,
ಉಳಿದ 09 ಚಾಕಲೇಟನ್ನು ಪಕ್ಕದ್ಮನೆ ಮಗುಗೆ ಕೊಟ್ರೆ ನಿನಗೆ ಏನ್ ಬರುತ್ತೆ..??
ಸ್ಟೂಡೆಂಟ್:- ನನ್ನ ಅಪ್ಪನ ಮೇಲೆ ಡೌಟ್ ಬರುತ್ತೆ...!!
>>>>
ಹ್ಹ ಹ್ಹ ಸೂಪರ್ ಪಂಚ್... ಎಲ್ಲ ಚೆನ್ನಾಗಿವೆ ರೀ, ಒಳ್ಳೆ ಕಲೆಕ್ಷನ್!
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ಥ್ಯಾಂಕ್ಯೂ ಹೇಮಾ ಅವರೇ,..
ಹಾಗಾದ್ರೆ, ಈ ಮೊದಲು ನನ್ನ ಬ್ಲಾಗಲ್ಲಿ ಇವನ್ನೆಲ್ಲಾ ನೀವು ಓದಿಲ್ಲಾ ಅಂತಾಯ್ತು,...
ಇಂತಿ,
ಶಿವಶಂಕರ ವಿಷ್ಣು ಯಳವತ್ತಿ
http://shivagadag.bl...
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ಮೂರು, ಐದು ಮತ್ತು ಏಳು ಸಕತ್ತಾಗಿವೆ, ಆದರೆ ನಾಲ್ಕನೆಯದು.......ಯಪ್ಪಾ.....
ಉ: ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-3
ರೇವಡಿ ಸರ್.. ನಿಮ್ಮ ಕಾಮೆಂಟ್ ಗಳೇ ಬ್ಲಾಗ್ ನ ಜೀವಾಳ..
ಹೀಗೇ ಬರುತ್ತಿರಿ..
http://shivagadag.bl...