ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬಯಲಾಟವೋ ಹುಡುಗಾಟವೋ...!!!

ನಮ್ಮ ಚಿಕ್ಕಮ್ಮನ ಬಲವಂತಕ್ಕಾಗಿ ಕಳೆದವರ್ಷ ಅವರ ಊರ ಜಾತ್ರೆಗೆ ಹೋಗಿದ್ದೆ. ಜಾತ್ರೆ ಅಂದ್ರೆ ಎಲ್ಲೆಲ್ಲು ಸಡಗರ ಸಂಭ್ರಮ. ನನ್ನ ಹಾಗೆಯೇ ನನ್ನ ಅಜ್ಜಿಯ ಮನೆಯವರು ಜಾತ್ರೆಗೆ ಬಂದಿದ್ದರು. ಜಾತ್ರೆ ತುಂಬಾ ಚನ್ನಾಗಿ ನಡಿತು. ಜಾತ್ರೆ ನಡೆದ ದಿನದ ರಾತ್ರಿ, ಬಯಲಾಟ (ರಾತ್ರಿ ಆಡುವ ನಾಟಕ) ಇತ್ತು. ನನಗೆ ಬಯಲಾಟ ನೋಡೋದು ಇಷ್ಟ, ಆದ್ರೆ ಏನ್ ಮಾಡೋದು ರಾತ್ರಿಯೆಲ್ಲಾ ಅದನ್ನು ನೋಡ್ತಾ ಕೂತರೆ ಮುರಿದಿನ ಏನು ಕೆಲಸ ಮಾಡೋಕೆ ಆಗೋಲ್ಲ. ಹಾಗಾಗಿ ನೋಡೋ ಧೈರ್ಯ ಮಾಡಲಿಲ್ಲ.

ಬೇಸಿಗೆಗಾಲ ಆದುದರಿಂದ, ಮನೆಯಲ್ಲಿ ಮಲಗೋಕೆ ಬಹಳ ಕಷ್ಟ.
ಹಾಗಾಗಿ ಮನೆಯ ಮೇಲೆ ಮಲಗೋದು ರೂಡಿ. ಬಯಲಾಟ ಅಂದ್ರೆ ಕೇಳಬೇಕೆ, ಜೋರಾಗಿ ಕೇಳಿಸುವ ಶಬ್ದ. ಅದು ಅಲ್ಲದೆ ಆ ಬಯಲಾಟ ನಡೀತಾ ಇದ್ದುದು ನನ್ನ ಚಿಕ್ಕಮ್ಮನ ಮನೆಯ ತುಂಬಾ ಹತ್ತಿರದಲ್ಲಿ. ಹಾಗಾಗಿ ಆ ಶಬ್ದಕ್ಕೆ ನಿದ್ದೆ ಬರುವುದು ದೊಡ್ಡ ವಿಷಯವೇ.

ನಮ್ಮ ಅಜ್ಜಿ ಮನೆಯ ಕಾರು ಚಾಲಕ ಶಿವು ಕಾರಿನಲ್ಲಿ ಮಲುಗುತ್ತಿದ್ದುದನ್ನು ಕಂಡು, ಕಾರಿನಲ್ಲಿ ಏಕೆ ಮಲುಗುತಿ, ಮನೆಯ ಮೇಲೆ ಗಾಳಿ ಚನ್ನಾಗಿ ಬರುತ್ತೆ. ಅಲ್ಲೇ ಮಲಗು ಬಾ ಎಂದೆ. ಅವನು ಸರಿ ಅಂತ ನನ್ನ ಜೊತೆ ಬಂದು, ಮಹಡಿಯ ಮೇಲೆ ಮಲಗಿದ. ನಾನು ಸ್ವಲ್ಪ ಪ್ರಯಾಣ ಮಾಡಿ ದಣಿದಿದ್ದರಿಂದಲೋ ಏನೋ, ನನಗೆ ಬಯಲಾಟದ ಶಬ್ದ ಹೆಚ್ಚಾಗಿ ನಿದ್ದೆಗೆ ಅಡ್ಡಿಯಾಗಲಿಲ್ಲ. ಚನ್ನಾಗಿ ಕುಂಬಕರ್ಣ ನಿದ್ದೆ ಮಾಡಿದೆ.

ನಾನು ಬೆಳಿಗ್ಗೆ ಎದ್ದಾಗ ಸೂರ್ಯ ನನ್ನನ್ನು ಕುಕ್ಕಿ ಕುಕ್ಕಿ ನೋಡುತ್ತಿದ್ದ. ಬಹುಶ ನಾನು ಇನ್ನು ಮಲಗಿರುವುದನ್ನು ಕಂಡು ಅವನಿಗೆ ಹೊಟ್ಟೆಕಿಚ್ಚೋ ಏನೋ ?.
ಸರಿ ನಾನು ಎದ್ದಾಗ, ನನ್ನ ಕಣ್ಣ ಮುಂದೆ ಶಿವು ಬಂದು ಕೇಳಿದ, " ನಿಮಗೆ ರಾತ್ರಿ ನಿದ್ದೆ ಬಂತಾ ? "
ನನಗೆ ಚನ್ನಾಗಿ ಬಂತು ಕಣೋ, ಅದು ಸರಿ ಯಾಕೆ ಹಾಗೇ ಕೇಳಿದೆ ?
ಆಗ ಅವನು: " ರಾತ್ರಿ ಬಯಲಾಟದ ಶಬ್ದಕ್ಕೆ ಸರಿಯಾಗಿ ನಿದ್ದೆ ಬರಲಿಲ್ಲ, ಮದ್ಯ ಮದ್ಯ ಎಚ್ಚರವಾಗುತ್ತಿತ್ತು."
ನಾನು ಅಯ್ಯೋ ಪಾಪ ಅಂದೆ.
ಆಗ ಅವನು: ನಿಮಗೊಂದು ಮಜಾ ಗೊತ್ತೇ ?
ನಾನು: ಏನು ?
ಅವನು: "ರಾತ್ರಿ ಬಯಲಾಟ ನಡೆಯುವಾಗ, ನನಗೆ ಮದ್ಯ ಎಚ್ಚರವಾದಾಗ ಏನು ಕೂಗಿದರು ಗೊತ್ತೇ?, ದ್ರೋಪದಿಯ ಪಾತ್ರದಾರಿ ಎಲ್ಲೋ ಹೋಗಿರಬೇಕು ಅಂತ ಕಾಣಿಸುತ್ತೆ, ಅದಕ್ಕೆ ಅವಳನ್ನು ಪರದೆಯ ಹಿಂದೆ ಬರಹೇಳಲು ಮೈಕ್ ನಲ್ಲಿ ಕೊಗಿದ್ದು : ಅಮ್ಮ ದ್ರೋಪದಿ, ಯಾರ ಮನೆಯಲ್ಲಿ ಟೀ ಕುಡಿತಾ ಕೂತಿದಿಯಾ ? , ಬೇಗಾ ಬಾ, ಇಲ್ಲಿ ಕೌರವರು ವೇಟಿಂಗೂ (waiting) "

ಬಹುಶ ಕೌರವರು, ದ್ರೌಪದಿಯ ವಸ್ತ್ರಾಪಹರಣದ ದೃಶ್ಯಕ್ಕಾಗಿ ಕಾದಿದ್ದರೇನು ?....
ನಾನು ಅದನ್ನು ಕೇಳಿ ನಕ್ಕಿದ್ದೋ ನಕ್ಕಿದ್ದು...
No votes yet

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ