shivaram_shastri ರವರ ಬ್ಲಾಗ್
ಗೊಂದಲ ...
ಇವತ್ತು ತುಂಬಾ ಗೊಂದಲದಲ್ಲಿದ್ದೇನೆ. ಸರಿಯಾದ ಪುರಾವೆ ಇಲ್ಲದ ಹೊರತು ಯಾರ ಕುರಿತೂ ಅನುಮಾನ ಪಡಬಾರದು ಎಂಬ ನನ್ನ ನಂಬಿಕೆಯನ್ನು ಎಲ್ಲರ ಮೇಲೆ ಹೇರುತ್ತ ಬಂದಿರುವ ನಾನು ಇಂದು ಒಬ್ಬ ವ್ಯಕ್ತಿಯನ್ನು ಬಹಳ ಅನುಮಾನದಿಂದ ನೋಡುತ್ತಿದ್ದೇನೆ. ವಿಷಯ ವೈಯುಕ್ತಿಕ ಅಲ್ಲವಾದ್ದರಿಂದ ಸಂಬಂಧ ಪಟ್ಟವರಿಗೆ ಈ ವಿಷಯವನ್ನು ತಿಳಿಸುವುದು ಅನಿವಾರ್ಯವಾಗಿತ್ತು. ತಿಳಿಸಿದ್ದೇನೆ ... ಆದರೂ, ಒಂದು ಬದಿಯಲ್ಲಿ ಒಂದು ವೇಳೆ ನನ್ನ ಅನುಮಾನ ಸುಳ್ಳಾಗಿದ್ದರೆ ಎಂಬ ಅಪರಾಧಿ ಪ್ರಜ್ಞೆ ... ಇನ್ನೊಂದು ಬದಿಯಲ್ಲಿ ನನ್ನ ಅನುಮಾನ ನಿಜವೇ ಆಗಿದ್ದರೆ ಅದರ ಪರಿಣಾಮಗಳ ಕುರಿತು ಯೋಚನೆ...
ಈ ರಾತ್ರಿ ನಿದ್ದೆ ಬರುವುದೇ?
ಉತ್ತರಿಸಿ - ೩
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ೧೮ನೇ ವರ್ಣತಂತು, ಎರಡರ ಬದಲು ಮೂರಿದ್ದರೆ ಏನಾಗುತ್ತದೆ?
2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಬಿಳಿ ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ."
3) ಮನುಷ್ಯನ ವರ್ಣತಂತುಗಳಲ್ಲಿ ಅತಿ ಕಡಿಮೆ ಜೀನ್ ಗಳು ಯಾವ ವರ್ಣತಂತುವಿನಲ್ಲಿವೆ?
೧) ವರ್ಣತಂತು ೧
೨) ವರ್ಣತಂತು ೨೨
೩) ವರ್ಣತಂತು X
೪) ವರ್ಣತಂತು Y
4) ಸರಿಯೋ ತಪ್ಪೋ ಹೇಳಿ: "ಎಲ್ಲ ಆನುವಂಶಿಕ ರೋಗಗಳ ಲಕ್ಷಣಗಳು ಹುಟ್ಟಿನಿಂದಲೇ ಕಾಣಿಸಿಕೊಳ್ಳುತ್ತವೆ." Read more about ಉತ್ತರಿಸಿ - ೩
ಉತ್ತರಿಸಿ - ೨
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ಸಾಮಾನ್ಯವಾಗಿ ೨೨ ಜೊತೆ ಆಟೋಸೋಮ್ ಗಳು ಇರುತ್ತವೆ. ಒಂದು ವೇಳೆ ೨೧ ನೇ ವರ್ಣತಂತು (ಆಟೋಸೋಮ್), ಎರಡರ ಬದಲು ಮೂರಿದ್ದರೆ ಏನಾಗುತ್ತದೆ?
2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಕೆಂಪು ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ."
3) ಬೀಟಾ ಥಾಲಿಸೀಮಿಯಾ ಮೇಜರ್ ಒಂದು ಆನುವಂಶಿಕ ಕಾಯಿಲೆ. ಹಾಗಾದರೆ ಮಗುವಿಗೆ ಈ ಕಾಯಿಲೆ ಬರಲು ೧) ತಂದೆಗೆ ಈ ಕಾಯಿಲೆ ಇರಲೇಬೇಕು ೨) ತಾಯಿಗೆ ಈ ಕಾಯಿಲೆ ಇರಲೇಬೇಕು ೩) ತಂದೆ ಅಥವಾ ತಾಯಿಗೆ ಈ ಕಾಯಿಲೆ ಇರಲೇಬೇಕು ಎಂದೇನಿಲ್ಲ
4) ಸರಿಯೋ ತಪ್ಪೋ ಹೇಳಿ: ಮನುಷ್ಯನಲ್ಲಿ ಇರುವ ಒಟ್ಟೂ ಜೀನ್ ಗಳ ಕುರಿತು ಇನ್ನೂ ನಿಖರವಾಗಿ ಹೇಳಲಾಗದು. ಆದಾಗ್ಯೂ ಮನುಷ್ಯನಲ್ಲಿರುವಷ್ಟು ಜೀನ್ ಗಳು ಬೇರೆ ಯಾವ ಜೀವಿಯಲ್ಲೂ ಇಲ್ಲ. Read more about ಉತ್ತರಿಸಿ - ೨




