ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಡಿ.ಎನ್.ಎ. - ಪ್ರೊಟೀನ್ ಇತ್ಯಾದಿ ಗಾದೆಗಳು, ತಪ್ಪಿದ್ದಲ್ಲಿ ತಿದ್ದಿ :-)

ಡಿ.ಎನ್.ಎ. ಯಂತೆ ಪ್ರೊಟೀನ್.
ಡಿ.ಎನ್.ಎ. ಇಟ್ಟುಕೊಂಡು ಪ್ರೊಟೀನ್ಗೆ ಅತ್ತರಂತೆ.
ಡಿ.ಎನ್.ಎ. ಗೆ ಬಂದಿದ್ದು ಪ್ರೊಟೀನ್ಗೆ ಬರದೆ ಇದ್ದೀತೆ.
ಡಿ.ಎನ್.ಎ. ಕೊಟ್ಟರೂ ಎಮ್.ಆರ್.ಎನ್.ಎ.ಕೊಡದು.
ಒಂದು ಮ್ಯುಟೇಶನ್ ಪೂರ್ತಿ ಜೀನ್ ಅನ್ನೇ ಕೆಡಿಸಿತಂತೆ.
ಪಾಲಿಮೆರೇಸ್ಗೆ ಒಂದು ವರುಷ, ಸ್ಟಾಪ್ ಕೊಡೋನ್ಗೆ ಒಂದು ನಿಮಿಷ.
ಡಿ.ಎನ್.ಎ.ಗೆ ಬೇಸ್ ಏಯಾ, ಪ್ರೊಟೀನ್ಗೆ ಅಮಿನೋ ಆಸಿಡ್ ಏಯಾ.
ಡಿ.ಎನ್.ಎ.ಗೆ ಹೇಳಿದರೆ, ಡಿ.ಎನ್.ಎ.ಯು ಎಮ್.ಆರ್.ಎನ್.ಎಗೆ ಹೇಳಿತಂತೆ.
ಬೇಸ್, ಬೇಸ್ ಸೇರಿದರೆ ಡಿ.ಎನ್.ಎ., ಅಮಿನೋ ಆಸಿಡ್, ಅಮಿನೋ ಆಸಿಡ್ ಸೇರಿದರೆ ಪ್ರೊಟೀನ್.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಡಿ.ಎನ್.ಎ. - ಪ್ರೊಟೀನ್ ಇತ್ಯಾದಿ ಗಾದೆಗಳು, ತಪ್ಪಿದ್ದಲ್ಲಿ ತಿದ್ದಿ :-)

summer_glau's picture

ಚನ್ನಾಗಿ ಇವೆ!
ನನ್ನ ಕಡೆಯಿಂದ ಒಂದಿಷ್ಟು ಸಲಹೆಗಳು/ಪ್ರಯತ್ನಗಳು:

Quote:
ಡಿ.ಎನ್.ಎ. ಯಂತೆ ಪ್ರೊಟೀನ್.

ಅಮೈನೋ ಆಸಿಡ್ ನಂತೆ ಪ್ರೋಟೀನ್, ಡಿಎನ್ಎ ನಂತೆ ಎಂ ಆರ್ ಎನ್ ಎ.
Quote:
ಡಿ.ಎನ್.ಎ. ಇಟ್ಟುಕೊಂಡು ಪ್ರೊಟೀನ್ಗೆ ಅತ್ತರಂತೆ.

ಅಮೈನೋ ಆಸಿಡ್ ಕೈಯಲ್ಲಿ ಇಟ್ಟುಕೊಂಡು ಊರಲ್ಲೆಲ್ಲಾ ಪ್ರೊಟೀನ್ ಗೆ ಹುಡುಕಿದರಂತೆ.
Quote:
ಒಂದು ಮ್ಯುಟೇಶನ್ ಪೂರ್ತಿ ಜೀನ್ ಅನ್ನೇ ಕೆಡಿಸಿತಂತೆ.

ಮ್ಯುಟೇಶನ್ ತಾನು ಕೆಡೊದಲ್ಲದೆ ಕ್ರೋಮೋಸೊಮನ್ನೇ ಕೆಡಿಸಿತ್ತಂತೆ.

ಟೆಲೊಮೆರ್ ಗಳ ಜಗಳದಲ್ಲಿ ಸೆಂಟ್ರೋಮೆರ್ ಬಡವಾಯಿತು
ಸೆಲ್ಲಿಗೆಲ್ಲಾ ಒಂದು ದಾರಿ ಆದರೆ ಲೈಸೋಸೋಮಿಗೇ ಒಂದು ದಾರಿ