ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಸಂಪದ ಆರ್ಕೈವಿನಿಂದ

ಲೇಖಕರು

shobha.koppad's picture

ಪೂರ್ಣ ಹೆಸರು
ಶೋಭಾ ಕೊಪ್ಪದ್

ಪರಿಚಯ

ವೃತ್ತಿಯಿಂದ ವೈದ್ಯೆ. ಹುಟ್ಟೂರು ದಾವಣಗೆರೆ. ಈ ಸದ್ಯಕ್ಕೆ ಬೆಂಗಳೂರಲ್ಲಿ ಒಂದು ಆಸ್ಪತ್ರೆಯಲ್ಲಿ ಕೆಲಸ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗನ ಬಗ್ಗೆ ಕೆಲವು ಕನಸಿವೆ. ಇದೇನು ಕನ್ನಡತಿ ಒಬ್ಬಳಿಗೆ ಇದೆಂತ ಹುಚ್ಚು ಅಂತೀರ? ನನ್ನ ಕನ್ನಡ ಮೇಷ್ಟ್ರಿಂದ ಬಂದಿದ್ದು ಈ ಕನ್ನಡ ಪ್ರೀತಿ. ಕನ್ನಡ ದಲ್ಲಿ ಉತ್ತಮವಾದ ಎಲ್ಲ ಸಾಹಿತ್ಯ ಓದಬೇಕು. ಓದಿರೋದು ತುಂಬ ಕಮ್ಮಿ. ತುಂಬ ಓದೋ ಆಸೆ ಇದೆ. ಜೊತೆಗೆ ಸಮಾನ ಮನಸ್ಕ ಸ್ನೇಹಿತರ ಹುಡುಕಾಟದಲ್ಲಿ ಸಂಪದದ ಸಂಪರ್ಕಕ್ಕೆ ಬಂದೆ.

ಚೀನಾದಿಂದ ಕಲಿಯಬೇಕಾದ ಪಾಠ

ಸ್ನೇಹಿತರೆ,
ನಿನ್ನೆ ನಡೆದ ಒಲಂಪಿಕ್ಸ್ ನ ಉದ್ಘಾಟನಾ ಸಮಾರಂಭ ಟಿ.ವಿಯಲ್ಲಿ ನೋಡ್ತಾ ಇದ್ದೆ.. ಚೀನಿಯರ ಭಾಷಾ ಪ್ರೇಮ ನೋಡಿ ಸಕತ್ ಖುಷಿ ಆಯ್ತು.

  • ಉದ್ಘಾಟನೆ ಮಾಡಿ ಮಾತಾಡಿದ ಚೀನಾದ ಅಧ್ಯಕ್ಷ ಹೂ ಜಿಂಟಾವೋ ಚೈನಿಸ್ ಭಾಷೆಯಲ್ಲಿ ತಮ್ಮ ದೇಶದ ಬಗ್ಗೆ, ಒಲಂಪಿಕ್ಸ್ ಕನಸು ನನಸು ಆಗ್ತಿರೊ ಬಗ್ಗೆ ಮಾತಾಡಿದ್ರು, ನೆನಪಿರಲಿ ಅಲ್ಲಿ ಅಮೇರಿಕದ ಅಧ್ಯಕ್ಷ ಬುಶ್ ಇದ್ರು, ಬೇರೆ ಬೇರೆ ದೇಶದ ಗಣ್ಯರು ಇದ್ರು, ಹಾಗಂತ ಚೀನಾದ ಅಧ್ಯಕ್ಷರು ಅವರಿಗೆಲ್ಲ ಬೇಜಾರು ಆಗಬಾರದು ಅಂತಾ ಇಂಗ್ಲೀಷ್ ಅಲ್ಲೇನು ಮಾತಾಡಲಿಲ್ಲ.
  • ಉದ್ಘಾಟನಾ ಸಮಾರಂಭದಲ್ಲಿ ನಡೆದ ಬೆಳಕಿನ ಚಿತ್ತಾರದಲ್ಲಿ ಕಾಣಿಸಿದ್ದು, ಚೀನಾದ 5000 ವರ್ಷಗಳ ಭವ್ಯ ಇತಿಹಾಸ, ಸಂಸ್ಕೃತಿ ಸಾರೋ ದೃಶ್ಯಾವಳಿ, once again ಅದು ಕೂಡಾ ಅವರ ಭಾಷೆಯಲ್ಲೇ.
  • ಒಲಂಪಿಕ್ಸ್ ನ ವೆಬ್ ಸೈಟ್ ಚೈನಿಸ್ ಅಲ್ಲಿ ಕೂಡ ಇದೆ. ( http://en.beijing200... )ಚೈನಿಸ್ ಅಲ್ಲದೇ ಇಂಗ್ಲೀಷ್, ಅರಾಬಿಕ್ ಅಲ್ಲಿ ಕೂಡಾ ಇತ್ತು. ಜಗತ್ತಿನ ಇತರ ಜನರ ಅನುಕೂಲಕ್ಕೆ ಬೇರೆ ಭಾಷೆಯಲ್ಲಿ ಮಾಡಿರೋದು ಸರಿಯಾಗಿದೆ, ಆದ್ರೆ ಒಂದು ವೆಬ್ ಸೈಟ್ ನ ವಿಷಯದಲ್ಲೂ ತಮ್ಮ ಭಾಷೆನಾ ಯಾವ ಕಾರಣಕ್ಕೂ ಕಡೆಗಣಿಸಿಲ್ಲ ಅನ್ನೋದು ವಿಶೇಷ. ನಮ್ಮ ಮೈಸೂರು ಸಿಲ್ಕ್ಸ್ ನ ವೆಬ್ ಸೈಟ್ ನ ಇದಕ್ಕೆ ಹೋಲಿಸಿ ನೋಡಿ, ನಮ್ಮವರಿಗೆ ಇರೋ ಅಭಿಮಾನ ಶೂನ್ಯತೆ ಕಣ್ಣಿಗೆ ಕಟ್ಟುತ್ತೆ.
  • ಅದು ಹೋಟೆಲ್ ಇರಲಿ, ಮಾಲ್ ಇರಲಿ, ಏರ್ ಪೋರ್ಟ್ ಇರಲಿ, ತಮ್ಮ ಭಾಷೆ, ಸಂಸ್ಕೃತಿನ ಜಗತ್ತಿಗೆ ಸಾರೋ ಯಾವ ಅವಕಾಶವನ್ನು ಚೀನಿಯರು ಹಾಗೆ ಬಿಟ್ಟಿಲ್ಲ. ಇದು ಚೀನಾಕೆ ೧೫ ದಿನಗಳ ಹಿಂದೆ ಅಲ್ಲಿನ ಜಿಯಾ ಮುಸಿ ಚೈನ ಮೆಡಿಕಲ್ ವಿಶ್ವವಿದ್ಯಾಲಯಕ್ಕೆ ಹೋಗಿ ಬಂದ ನನ್ನ ಸ್ನೇಹಿತನ ಅನುಭವ.

ಇದೇ ಸಮಯದಲ್ಲಿ ನಮ್ಮ ದೇಶದಿಂದ ಹೋಗಿರೋ ಲಿಯಾಂಡರ್ ಪೇಸ್ ಟಿ.ವಿ ಚಾನೆಲ್ ಒಂದರ ಜೊತೆ ಮಾತಾಡ್ತಾ, ಬೀಜಿಂಗ್ ಅಲ್ಲಿ ಭಾಷೆಯ ಸಮಸ್ಯೆ ಆಗ್ತಿದೆ, ಆದ್ರೆ ನಮಗಾಗಿ ಅವರು ಬದಲಾಗಲಿ ಎಂದು ನಿರೀಕ್ಷೆ ಮಾಡೋದು ತಪ್ಪು, ಅವರ ಭಾಷೆ, ಸಂಸ್ಕೃತಿನಾ ಅವರು ಹೆಮ್ಮೆಯಿಂದ ಜಗತ್ತಿಗೆ ತೋರಿಸಲು ಸಿಕ್ಕಿರೊ ಈ ಅವಕಾಶಾನಾ ಅವರು ಸರಿಯಾಗೇ ಬಳಸಿಕೊಳ್ಳುತ್ತಿದ್ದಾರೆ ಅಂತ ಮಾತಾಡಿದ್ರು. ಆದ್ರೆ ಇಲ್ಲೂ ಕೂಡಾ, ಆ ಇಂಗ್ಲೀಷ್ ಚಾನಲ್ ನ ವರದಿಗಾರ,, ಈ ಚೈನಿಸ್ ಗಳು ಡಬ್ಬಾ ನನ್ ಮಕ್ಕಳು, ಇಂಗ್ಲೀಷ್ ಬರಲ್ಲ, ಅದೇನ್ ಒಲಂಪಿಕ್ಸ್ ಮಾಡ್ತಾರೆ ಅನ್ನೊ ರೀತಿಲಿ ಮಾತಾಡ್ತಾ ಇದ್ದಿದ್ದು ನೋಡೊಕೆ ಸಕತ್ ತಮಾಷೆ ಆಗಿತ್ತು :)

ಚೀನಿಯರ ಭಾಷಾ ಪ್ರೇಮದಿಂದ ನಾವು ಸಾಕಷ್ಟು ಕಲಿಯೋದು ಇದೆ, ಏನ್ ಅಂತೀರಾ?

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಚೀನಾದಿಂದ ಕಲಿಯಬೇಕಾದ ಪಾಠ

ASHOKKUMAR's picture

ಭಾಷೆಯೊಂದೇ ಯಾಕೆ,ಚೀನಾ ಒಲಿಂಪಿಕ್ಸ್ ಆಯೋಜಿಸಿದ(ರುತ್ತಿರುವ) ರೀತಿಯೇ ನಮಗೆ ಮಾದರಿಯಾಗಬೇಕು.
*ಅಶೋಕ್

ಉ: ಚೀನಾದಿಂದ ಕಲಿಯಬೇಕಾದ ಪಾಠ

lkanil's picture

ಅವರು ಹಾಗೇ, ನಾವು ಹೀಗೆ! ಪಕ್ಕದ ತಮಿಳರ ಭಾಷಾ ಪ್ರೇಮವನ್ನೇ ಕಲಿಯದ ನಾವು ದೂರದ ಚೀನಿಯರಿಂದ ಕಲಿಯುವುದು ಸಾಧ್ಯವೆ?

ಉ: ಚೀನಾದಿಂದ ಕಲಿಯಬೇಕಾದ ಪಾಠ

venkatesh's picture

ಹೌದು. ನೀವು ಹೇಳಿದ್ದು ಅಕ್ಷರಶಃ ನಿಜ. ನಾನು ಸ್ಯಾಫ್ರಾನ್ಸಿಸ್ಕೋನಗರದಲ್ಲಿ ಕಂಡಿದ್ದು, ಒಬ್ಬ ತಮಿಳು ಮಾಮಿ-ಮಾಮ, ಹಾಗೂ ಅವರ ಪುತ್ರ, ಐಟಿ ಇಂಜಿನಿಯರ್ ಪ್ರಮುಖ ಫೆರ್ರಿ-ಸರ್ಕಲ್ ಬಳಿ,ಬರುತ್ತಿದ್ದರು. ಅಮ್ಮಸಂಪ್ರದಾಯದ ಸೀರೆಉಟ್ಟಿದ್ದರು. ಮಗ-ಅಪ್ಪ, ಪಂಚೆಯನ್ನು ಮೇಲಕ್ಕೆಕಟ್ಟಿ, ಲೋಕಾಭಿರೋಮವಾಗಿ ತಮ್ಮ ತಮಿಳುಭಾಷೆಯ ದೇಸೀ ಜೋಕುಗಳನ್ನು ಹೇಳಿಕೊಂಡು ಹೋಗುತ್ತಿದ್ದರು. ನಮ್ಮಕನ್ನಡದವರು, ಕನ್ನಡದಲ್ಲಿ ಜೋರಾಗಿ ಉಸಿರಾಡಲೂ ಇಷ್ಟಪಡುವುದಿಲ್ಲ ! ಆಂಧ್ರದವರು, ಬಹಳಜನ ಇಲ್ಲಿ, ’ ಉಡುಪಿಪ್ಯಾಲೆಸ್,’ ಅನ್ನೋ ಹೆಸರಿನಲ್ಲಿ ಹೋಟೆಲ್ ನಡೆಸ್ತಾಇದಾರೆ. ಇಡ್ಲಿಮಾಡಕ್ಕೂ ಬರದವರು, ಉಡುಪಿಹೆಸರಿನಲ್ಲಿ ಹಣದ ಹೊಳೆಹರಿಸುತ್ತಿದ್ದಾರೆ.

ಉ: ಚೀನಾದಿಂದ ಕಲಿಯಬೇಕಾದ ಪಾಠ

Chamaraj's picture

ಭಾಷಾ ಅಭಿಮಾನ ಆತ್ಮವಿಶ್ವಾಸದಿಂದ ಬರುತ್ತದೆ. ಯಾವುದೇ ಅಭಿಮಾನಕ್ಕೂ ಅದೇ ಮೂಲ ಕಾರಣ. ನಮ್ಮ ಭಾಷೆ, ಸಂಸ್ಕೃತಿ ನಮ್ಮ ನಿತ್ಯದ ಬದುಕನ್ನು ಸಹ್ಯವಾಗುವಂತೆ ರೂಪಿಸದಿದ್ದರೆ ಅಭಿಮಾನ ಹುಟ್ಟುವುದು ಕಷ್ಟ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಮುಂದೆಯೂ ಆಗಬಹುದು. ಆದರೆ, ನಿತ್ಯದ ಜೀವನಕ್ಕೆ ಸಹಕಾರಿಯಾಗದ ಭಾಷೆಯಾಗಲಿ, ಸಂಸ್ಕೃತಿಯಾಗಲಿ ಜನರನ್ನು ಸೆಳೆಯದು. ಇಲ್ಲದಿದ್ದರೆ, ಇಂಗ್ಲಿಷ್‌ ಮಾಧ್ಯಮ ಈ ಪರಿ ಆಕರ್ಷಣೆ ಗಳಿಸಲು ಆಗುತ್ತಿತ್ತೆ?

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ವಾಣಿಜ್ಯ ಮೌಲ್ಯ ದೊರೆಯದೇ ಇದ್ದರೆ ಯಾವತ್ತೂ ಅವುಗಳ ಬಗ್ಗೆ ಅಭಿಮಾನ ಹುಟ್ಟದು.

- ಚಾಮರಾಜ ಸವಡಿ

ಉ: ಚೀನಾದಿಂದ ಕಲಿಯಬೇಕಾದ ಪಾಠ

shobha.koppad's picture

ನಿಮ್ಮ ಮಾತು ನಿಜ ಸರ್,
ಕನ್ನಡ ಒಂದು ಅನ್ನ ಕೊಡೊ ಭಾಷೆ ಆಗದೇ ಇದ್ರೆ ಅದು ಉಳಿದು ಬೆಳೆಯೊದು ನಿಜವಾಗಿಯೂ ಕಷ್ಟ ಅನ್ನಿಸುತ್ತೆ.

ಇಂದಿನ ಜಾಗತೀಕರಣದ ಕಾಲಮಾನದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಜಾಗತೀಕರಣ ನೀಡುವ ಹಲವು ಅವಕಾಶಗಳಿಗೆ ತನ್ನನ್ನು ತಾನು ತೆರೆದುಕೊಳ್ಳುವ ಭಾಷೆ ಉಳಿದು, ಬೆಳೆಯುವುದರಲ್ಲಿ ಯಾವುದೇ ಅನುಮಾನ ಬೇಡ. ಮುಂದುವರಿದ ದೇಶಗಳಾದ ಫ್ರಾನ್ಸ್, ಜರ್ಮನಿ, ಇಸ್ರೇಲ್, ಜಪಾನ್, ಚೀನಾ ಹೀಗೆ ಹಲವು ಪ್ರಮುಖ ದೇಶಗಳು ತಮ್ಮ ಭಾಷೆಯನ್ನೇ ತಮ್ಮ ಪ್ರಗತಿಗೆ ಸಾಧನವಾಗಿರಿಸಿಕೊಂಡಿವೆ. ನೆನಪಿರಲಿ, ಈ ಎಲ್ಲ ದೇಶಗಳು ಜಾಗತೀಕರಣವನ್ನು ಅಪ್ಪಿಕೊಂಡಿವೆ, ಆದರೆ ತಮ್ಮ ಭಾಷೆಯನ್ನು ಕಡೆಗಣಿಸದೆ, ಜಾಗತೀಕರಣದಿಂದ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳು, ಹೊಸ ಹೊಸ ತಂತ್ರಜ್ಞಾನ, ಹೀಗೆ ದೊರಕಿರುವ ಪ್ರತಿ ಅವಕಾಶವನ್ನು ತಮ್ಮ ಭಾಷೆಯಲ್ಲೇ ಅನುಷ್ಟಾನಕ್ಕೆ ತರುವ ಮುಲಕ ತಮ್ಮ ಭಾಷೆಯನ್ನು ಜ್ಞಾನ ಸ್ರಷ್ಟಿಸುವ ಭಾಷೆಯಾಗಿಸಿಕೊಂಡಿದ್ದಾರೆ ಹಾಗೂ ಭಾಷೆಯ ಜೊತೆ ಜೊತೆಗೆ ತಾವು ಅಭಿವ್ರುದ್ಧಿ ಹೊಂದುತ್ತಿದ್ದಾರೆ.

ಇವತ್ತು ಕನ್ನಡದಲ್ಲಿ ಜ್ಞಾನ ಸ್ರಷ್ಟಿಯಾಗದೇ ಇರಲು ಎರಡು ಕಾರಣಗಳಿವೆ. ಒಂದು ರಾಜಕೀಯ, ಇನ್ನೊಂದು ಆರ್ಥಿಕ. ಕನ್ನಡ ವಿದ್ಯಾಭ್ಯಾಸ/ಬರವಣಿಗೆಯಿಂದ ನಾಲ್ಕಂಕಿ ಸಂಬಳ ಸಿಗೋಲ್ಲ ಎನ್ನುವುದು ಆರ್ಥಿಕ ಕಾರಣ. ರಾಜಕೀಯ ಕಾರಣ ಎಂದರೆ ಕನ್ನಡವನ್ನು ಒಂದು ಜ್ಞಾನ ಸ್ರಷ್ಟಿಸುವ ಭಾಷೆಯಾಗಿಸುವ ನಿಟ್ಟಿನಲ್ಲಿ, ಅನ್ನ ಕೊಡುವ ಭಾಷೆಯಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರಕ್ಕೆ ಯಾವುದೇ ಚಿಂತನೆ ಇಲ್ಲದೇ ಇರೋದು. ಈ ಸದ್ಯಕ್ಕೆ "ಕನ್ನಡ ಹೊಟ್ಟೆಯ ಹಿಟ್ಟಿನ ಭಾಷೆಯಾಗದೇ, ಕೇವಲ ಜುಟ್ಟಿನ ಮಲ್ಲಿಗೆ ಭಾಷೆಯಾಗಿದೆ". ಕನ್ನಡ ಅಂದರೆ ಬರಿ ಕಥೆ, ಕವನ, ಸಾಹಿತ್ಯ, ನಾಟಕ, ಸಿನೆಮಾಗಳಿಗೆ ಸೀಮಿತವಾಗಿರಿಸಿದ್ದೇವೆ, ಅಂತಹ ಒಂದು ಸೀಮಿತ ಚಿಂತನೆಯಿಂದ ಹೊರ ಬಂದು ಆಡಳಿತ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹೀಗೆ, ಜೀವನದ ಪ್ರತಿ ಹೆಜ್ಜೆಯಲ್ಲೂ ಕನ್ನಡದ ಬಳಕೆ ಬಂದು ಕನ್ನಡ ಒಂದು ಜ್ಞಾನ ಸ್ರಷ್ಟಿಯ, ಅನ್ನ ಕೊಡುವ ಭಾಷೆಯಾದಾಗ ಅದು ಉಳಿದು ಬೆಳೆದು ಅಭಿವ್ರುದ್ಧಿ ಹೊಂದುವುದರಲ್ಲಿ ಯಾವ ಸಂದೇಹವೂ ಇಲ್ಲ

ಉ: ಚೀನಾದಿಂದ ಕಲಿಯಬೇಕಾದ ಪಾಠ

kalpana's picture

ಶೋಭ ಅವರೆ,
ತುಂಬ ಚೆನ್ನಾಗಿ ಬರೆದಿದ್ದೀರ.

~ಕಲ್ಪನ

ಉ: ಚೀನಾದಿಂದ ಕಲಿಯಬೇಕಾದ ಪಾಠ

kalpana's picture

ಭಾಷಾಭಿಮಾನದ ಬಗ್ಗೆ ನಿಮ್ಮ ಮಾತು ಒಪ್ಪಿದೆ. ಆದ್ರೆ, ಪ್ರಜಾಸ್ವಾತಂತ್ಯವಿಲ್ಲದ ನಾಡಿನಲ್ಲಿ ಬದುಕಿದ್ದೂ ಏನು ಪ್ರಯೋಜನ ಹೇಳಿ? ಭಾರತದಿಂದ ಡೆಮಾಕ್ರಸಿ ಬಗ್ಗೆ, ಚೀನ ಮತ್ತಿತರ ದೇಶಗಳು ಕಲಿಯೋದು ಬಹಳಷ್ಟಿದೆ.

~ಕಲ್ಪನ

ಉ: ಚೀನಾದಿಂದ ಕಲಿಯಬೇಕಾದ ಪಾಠ

shobha.koppad's picture

ನಿಮ್ಮ ಮಾತು ನಿಜ ಕಲ್ಪನ ಅವರೇ,,
ಆದ್ರೂ ಡೆಮೊಕ್ರಸಿ ನಮ್ಮ ದೇಶದಲ್ಲಿ ಸರಿಯಾಗಿ ಅನುಷ್ಟಾನ ಆಗಿಲ್ಲ ಅನ್ನೋದು ನನ್ನ ಅಭಿಮತ. ಭಾಷಾವಾರು ಪ್ರಾಂತ್ಯಗಳೆಲ್ಲ ಒಂದಾಗಿ ದೇಶ ಕಟ್ಟಿಕೊಂಡಿದ್ದು, ಎಲ್ಲಾ ಸೇರಿ ಉದ್ಧಾರ ಆಗೋಣ ಅಂತಾ, ಆದ್ರೆ ಇವತ್ತು ಯಾರಿಗೆ ದಿಲ್ಲಿಯಲ್ಲಿ ಕೇಂದ್ರ ಸರ್ಕಾರವನ್ನು ಹಿಡಿತದಲ್ಲಿ ಇಟಕೊಳ್ಳೊ ಶಕ್ತಿ ಇದೆಯೊ, ಅವರು ತಮ್ಮ ರಾಜ್ಯಕ್ಕೆ ಏನು ಬೇಕಾದ್ರು ಕೆಲಸ ಮಾಡಕೊತಾರೆ, ನಮ್ಮ ಕರ್ನಾಟಕದಂತ ರಾಜ್ಯಗಳು ನಿಜವಾಗಿಯೂ suffer ಆಗ್ತಿವೆ.

ಶೋಭಾ...

ಉ: ಚೀನಾದಿಂದ ಕಲಿಯಬೇಕಾದ ಪಾಠ

ASHOKKUMAR's picture

ಪ್ರತಾಪ ಸಿಂಹ ಅಂಕಣದಲ್ಲಿ ಹೀಗಿದೆ:
ಇದು ಎರಡು ಬೀದಿ ನಾಯಿಗಳ ಕಥೆ.
ಒಂದು ಭಾರತದ್ದು. ಮತ್ತೊಂದು ಚೀನಾದ್ದು. ಭಾರತದ ನಾಯಿ ಚೀನಾಕ್ಕೆ ಹೊರಟಿತ್ತು. ಚೀನಾದ ನಾಯಿ ಭಾರತದತ್ತ ಹೊರಟಿತ್ತು. ಹೀಗೆ ದೇಶ ಬಿಟ್ಟು ಹೊರಟಿದ್ದ ಆ ಎರಡೂ ನಾಯಿಗಳು ಭಾರತ- ಚೀನಾ ಗಡಿಯಲ್ಲಿ ಮುಖಾಮುಖಿಯಾಗುತ್ತವೆ. ಭಾರತದ ನಾಯಿ ಸೊರಗಿ ಬಡಕಲಾಗಿ ಹೋಗಿರುತ್ತದೆ. ಇತ್ತ ಮೈ ಕೈ ತುಂಬಿಕೊಂಡು ದಷ್ಟ-ಪುಷ್ಟವಾಗಿದ್ದ ಚೀನಿ ನಾಯಿ, “ಯಾಕೆ ಚೀನಾಕ್ಕೆ ಹೊರಟಿದ್ದೀಯಾ?” ಅಂತ ಭಾರತದ ನಾಯಿಯನ್ನು ಪ್ರಶ್ನಿಸುತ್ತದೆ. “ಭಾರತದಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಆಹಾರ ಹುಡುಕಿಕೊಂಡು ಹೋದರೆ ಜನ ಕಲ್ಲು ಹೊಡೆಯುತ್ತಾರೆ. ಆದರೆ ನಿಮ್ಮ ದೇಶದಲ್ಲಿ ಸರಕಾರದವರೇ ಹೊಟ್ಟೆ ತುಂಬಾ ಊಟ ಹಾಕುತ್ತಾರಂತಲ್ಲ. ಅದಕ್ಕೇ ಚೀನಾಕ್ಕೆ ಹೊರಟಿದ್ದೀನಿ” ಅನ್ನುತ್ತದೆ ಭಾರತದ ನಾಯಿ. ಅಷ್ಟಕ್ಕೇ ಸುಮ್ಮನಾಗುವುದಿಲ್ಲ, “ಅಲ್ಲಾ, ಹೊಟ್ಟೆ ತುಂಬ ಊಟ ಕೊಡುವ ದೇಶ ಬಿಟ್ಟು ನೀನೇಕೆ ಭಾರತಕ್ಕೆ ಹೊರಟಿದ್ದೀಯಾ?” ಅಂತ ಚೀನಿ ನಾಯಿಯಮ್ನಿ ಕೇಳುತ್ತದೆ. “ಚೀನಾದಲ್ಲಿ ಹೊಟ್ಟೆ-ಬಟ್ಟೆಗೆ ಯಾವ ಕೊರತೆ ಇಲ್ಲದಿದ್ದರೂ ಅಲ್ಲಿ ಬೊಗಳುವ ಸ್ವಾತಂತ್ರ್ಯವೇ ಇಲ್ಲ! ನಮ್ಮ ಹುಟ್ಟು ಗುಣವನ್ನು ಬಿಟ್ಟಿರುವುದಾದರೂ ಹೇಗೆ? ಭಾರತದಲ್ಲಿ ಊಟಕ್ಕೆ ಕೊರತೆಯಿದ್ದರೂ ಬೊಗಳುವ ಸ್ವಾತಂತ್ರ್ಯಕ್ಕೆ ಯಾವ ಅಡ್ಡಿಯೂ ಇಲ್ಲ, ಅಷ್ಟು ಸಾಕು” ಎನ್ನುತ್ತದೆ ಚೀನಾ ನಾಯಿ!!
*ಅಶೋಕ್

ಉ: ಚೀನಾದಿಂದ ಕಲಿಯಬೇಕಾದ ಪಾಠ

ASHOKKUMAR's picture

ಅಂಕಣದ ಕೊಂಡಿ:
http://pratapsimha.c...
*ಅಶೋಕ್

ಉ: ಚೀನಾದಿಂದ ಕಲಿಯಬೇಕಾದ ಪಾಠ

shobha.koppad's picture

ಸ್ವಾತಂತ್ರ್ಯ ಮುಖ್ಯ ಅನ್ನೊ ಬಗ್ಗೆ ಎರಡು ಮಾತಿಲ್ಲ..

ನಮ್ಮ ದೇಶದ ಡೆಮಾಕ್ರಸಿ ಬಗ್ಗೆ ನನಗೆ ಅಭ್ಯಂತರ ಇಲ್ಲ,, ಅಭ್ಯಂತರ ಇರೋದು ಅದರ ಅನುಷ್ಟಾನದ ಬಗ್ಗೆ. ದಿಲ್ಲಿಯಲ್ಲಿ ಯಾವ ರಾಜ್ಯಕ್ಕೆ ಹಿಡಿತ ಇದೆಯೊ, ಅವರಿಗೆ ಎಲ್ಲ ಸವಲತ್ತು ಸಿಗುತ್ತೆ, ಆದ್ರೆ ನಮ್ಮಂತ ರಾಜ್ಯಗಳು ಪ್ರತಿ ವಿಷಯಕ್ಕೂ ಬೀದಿಗೆ ಇಳಿದು ಹೋರಾಟ ಮಾಡಿದ್ರೆನೆ ದಿಲ್ಲಿಲಿರೋ ಧಣಿಗಳು ನಮ್ಮ ಕಡೆ ನೋಡೊದು ಅನ್ನೊ ಹಾಗೆ ಆಗಿದೆ.

latest example ಅಂದ್ರೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡೊಕೆ ಮೀನ ಮೇಷ ಎಣಿಸ್ತಾ ಇರೋ ಕೇಂದ್ರ ಸರ್ಕಾರದ ಧೋರಣೆ. ತಮಿಳರ ಬೆಂಬಲದಿಂದ ನಡಿತಾ ಇರೋ ಕೇಂದ್ರ ಸರ್ಕಾರ, ಅವರಿಗೆ ಬೇಜಾರು ಮಾಡಬಾರದು ಅಂತ ನಮ್ಮ ಬೇಡಿಕೆ ಬಗ್ಗೆ ನಯಾ ಪೈಸೆ ತಲೆ ಕೆಡಸ್ಕೊಳ್ತಾ ಇಲ್ಲ. ಅಲ್ವಾ?

ಸ್ವಾತಂತ್ರ್ಯ ಬಂದಾಗ ಪ್ರತಿ ಭಾಷಾವಾರು ಪ್ರಾಂತ್ಯಗಳು ಭಾರತ ಅನ್ನೊ ದೇಶದ concept ಒಪ್ಪಿಕೊಂಡಿದ್ದು ಏಕೆ? ನಾವು ಉದ್ಧಾರ ಆಗಬೇಕು, ನಮ್ಮ ಯುವಕರಿಗೆ ಕೆಲಸ ಸಿಗಬೇಕು, ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಬೇಕು ಅಂತಾ ತಾನೆ? ಆದ್ರೆ ಇವತ್ತು ಯಾರ ಹತ್ರ ದಿಲ್ಲಿಲೀ ರಾಜಕೀಯ ಮಾಡೊಕೆ ಬೇಕಾಗಿರೊ numbers (ಎಮ್.ಪಿ ಗಳು) ಇದೆಯೊ, ಅವರಿಗೆ ಎಲ್ಲಾ ಬೆಣ್ಣೆ,, ಉಳಿದವರ ಕಣ್ಣಿಗೆ ಸುಣ್ಣಾ ನೇ..

ನನಗೆ ಇದರ ಬಗ್ಗೆ objections ಇರೋದು.

ಶೋಭಾ...

ಉ: ಚೀನಾದಿಂದ ಕಲಿಯಬೇಕಾದ ಪಾಠ

ASHOKKUMAR's picture

ಸ್ವಾತಂತ್ರ್ಯ ಮುಖ್ಯ ಹೌದು.
ಆದರೆ ನಮ್ಮಲ್ಲಿ ಅದು ಹೆಚ್ಚಾಗಿರೋದೆ ಸಮಸ್ಯೆ ಒಡ್ತಿದೆ.
ಏನು ಮಾಡಿದರೂ ಆಕ್ಷೇಪ..ಪ್ರತಿಭಟನೆ.
ಚೀನಾದ ನಿರಂಕುಶ ಪ್ರಭುತ್ವದಿಂದ ಸಾಧಿಸುವ ಅಭಿವೃದ್ಧಿಯನ್ನು ಇಲ್ಲಿಯ ವಾತಾವರಣದಲ್ಲಿ ಸಾಧಿಸಲು ಸಾಧ್ಯವೇ?
*ಅಶೋಕ್

ಉ: ಚೀನಾದಿಂದ ಕಲಿಯಬೇಕಾದ ಪಾಠ

Chamaraj's picture

ನಿಜ ಶೋಭಾ ಅವರೇ, ಕನ್ನಡ ಎಂದರೆ ಕೇವಲ ಸಾಹಿತ್ಯಿಕ ಭಾಷೆಯಾಗಿ ಮಾತ್ರ ಸಮೃದ್ಧವಾಗಿದೆ. ಅದು ತಾಂತ್ರಿಕ ಭಾಷೆಯೂ ಆಗದಿದ್ದರೆ ಪ್ರಗತಿ ಆಗದು.

ಇನ್ನು ಸರ್ಕಾರದ ಚಿಂತನೆ ವಿಷಯ. ಜನರು ಒತ್ತಾಯಿಸದಿದ್ದರೆ ಸರ್ಕಾರಕ್ಕೆ ಹೊಸ ಚಿಂತನೆ ಎಲ್ಲಿಂದ ಬರಬೇಕು? ಇಂಗ್ಲಿಷನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದ ಕಲಿಸಲು ಸರ್ಕಾರ ಮುಂದಾಗಿದ್ದು ಜನಾಗ್ರಹದಿಂದಲೇ ಅಲ್ಲವೆ? ಸರ್ಕಾರದ ಮೂರ್ಖ ಕ್ರಮದಿಂದಾಗಿ ಖಾಸಗಿ ಶಾಲೆಗಳು ಜನರನ್ನು ದಶಕಗಳಗಟ್ಟಲೇ ದೋಚಲು ಅವಕಾಶವಾಯಿತು. ಈಗಲೂ ಆ ಪರಿಸ್ಥಿತಿ ಅಷ್ಟೇನೂ ಬದಲಾಗಿಲ್ಲ. ಇನ್ನಾದರೂ ಪ್ರಾಥಮಿಕ ಹಂತದಿಂದ ಕನ್ನಡದ ಜೊತೆಗೆ ಇಂಗ್ಲಿಷ್‌ ಕೂಡಾ ಕಲಿಸತೊಡಗಿದರೆ, ಖಂಡಿತವಾಗಿ ಕನ್ನಡಕ್ಕೂ ವಾಣಿಜ್ಯ ಅವಕಾಶಗಳು ಲಭ್ಯವಾಗುತ್ತವೆ.

ಇವತ್ತು ಕನ್ನಡದ ಹೆಸರಿನಲ್ಲಿ ಹೋರಾಟ, ಹೊಟ್ಟೆಪಾಡು ಮಾಡುತ್ತಿರುವವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲೇ ಓದಿಸಿದ್ದಾರೆ, ಓದಿಸುತ್ತಿದ್ದಾರೆ. ಇಂಗ್ಲಿಷ್‌ ಬರುವುದಿಲ್ಲ ಎಂಬ ಕಾರಣಕ್ಕೆ ಕನ್ನಡಾಭಿಮಾನಿಯಾಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದು ಕನ್ನಡವನ್ನು ಖಂಡಿತ ಬೆಳೆಸುವುದಿಲ್ಲ. ಇನ್ನೊಂದು ಭಾಷೆಯ ಉತ್ತಮಾಂಶಗಳನ್ನು ಮಾತೃಭಾಷೆಗೆ ತರಬೇಕೆಂದರೂ ಪರಭಾಷೆ ಚೆನ್ನಾಗಿ ಗೊತ್ತಿರಬೇಕಾಗುತ್ತದೆ. ಕೇವಲ ಅನುವಾದದಿಂದ ಉತ್ತಮಾಂಶಗಳು ಬರಲಾರವು.

ಸರ್ಕಾರ ಬದಲಾಗುವುದು ಜನರು ಬದಲಾದಾಗ ಮಾತ್ರ. ಆದರೆ, ಜನರು ಬದಲಾಗುವುದು ಒಂದು ದೀರ್ಘ ಪ್ರಕ್ರಿಯೆ. ಹೀಗಾಗಿ, ಕನ್ನಡ ಕನಿಷ್ಠ ಐವತ್ತು ವರ್ಷ ಹಿಂದಿದೆ.

- ಚಾಮರಾಜ ಸವಡಿ

ಉ: ಚೀನಾದಿಂದ ಕಲಿಯಬೇಕಾದ ಪಾಠ

shobha.koppad's picture

ನಿಜ ಸರ್,

ನನಗೆ ಆಗ ಇಸ್ರೇಲ್ ನೆನಪು ಆಗುತ್ತೆ,, ಹಿಬ್ರೂ ಭಾಷೆಗೆ ಪುನರ್ ಜನ್ಮ ಕೊಟ್ಟು, ಅದು ಇವತ್ತು ಅವರ ಅನ್ನ ಕೊಡೊ ಭಾಷೆಯಾಗಿಸಿಕೊಂಡಿರೊದನ್ನ ನೋಡಿದಾಗ, ನಮಗೂ ಯಾಕೆ ಇದು ಆಗಬಾರದು ಅನ್ಸುತ್ತೆ. ಅವರ ಟೆಕ್ನಿಯಾನ್ ವಿಶ್ವವಿದ್ಯಾಲಯದ ಬಗ್ಗೆ ಇಲ್ಲಿ ನೋಡಿ:
http://en.wikipedia....

ಕನ್ನಡ ಭಾಷಾ ಮಾಧ್ಯಮದ ಬಗ್ಗೆ ಬನವಾಸಿ ಬಳಗದವರು ಬರ್ದಿದ್ದು ಚೆನ್ನಾಗಿತ್ತು.
http://enguru.blogsp...
http://enguru.blogsp...

ಸರ್ಕಾರ ಬೇರೆ ಏನು ಬೇಡ ಸರ್, ಒಂದಿಷ್ಟು ಪರಿಣಿತರನ್ನು ನೇಮಿಸಿ, ಒಂದಿಷ್ಟು ಹಣ ಖರ್ಚು ಮಾಡಿ, ಟೆಕ್ನಿಯಾನ್ ಮಾದರಿಯಲ್ಲಿ ನಮ್ಮ ಹಂಪಿ ಕನ್ನಡ ವಿಶ್ವ ವಿದ್ಯಾಲಯವನ್ನು ಮಾರ್ಪಡಿಸಲಿ,, ಇದನ್ನು ಒಂದು trial or pilot ಮಾದರಿಯಲ್ಲಿ ನಡೆಸಲಿ,, ಕನ್ನಡ ಭಾಷೆಯಲ್ಲೇ ಉನ್ನತ ಶಿಕ್ಷಣದ ವ್ಯವಸ್ಥೆ ಬಂದಲ್ಲಿ ನಮ್ಮ ರಾಜ್ಯದಿಂದ ಇನ್ನಷ್ಟು ಪ್ರತಿಭೆಗಳು ಜಗತ್ತೇ ಮೆಚ್ಚುವಂತ ಸಂಶೋಧನೆ ಮಾಡೋದ್ರಲ್ಲಿ ನನಗಂತೂ ಅನುಮಾನ ಇಲ್ಲ.

ನಾನು ಮೆಡಿಕಲ್ ಓದೋವಾಗ್ಲೂ ಅನುಭವಿಸಿದ್ದೆ,, ಮೆಡಿಕಲ್ ನ ಪ್ರತಿಯೊಂದು ಶಬ್ದವನ್ನು ನಾನು ಕನ್ನಡಕ್ಕೆ ಮನಸ್ಸಲ್ಲೆ ಭಾಷಾಂತರಿಸಿದ ಮೇಲೆನೇ ಅದು ತಲೆಗೆ ಹೋಗ್ತಾ ಇದ್ದಿದ್ದು. ಆದ್ರೆ ಕನ್ನಡದಲ್ಲೇ ಎಲ್ಲವನ್ನೂ ಓದಕೊಳ್ಳೊ ಒಂದು ವ್ಯವಸ್ಥೆ ಬಂದ್ರೆ ನಿಜವಾಗ್ಯೂ ನಮ್ಮ ರಾಜ್ಯದ ಎಲ್ಲ ಪ್ರತಿಭಾವಂತ ಮಕ್ಕಳು ಅಚ್ಚರಿ ಅನ್ನೋ ಹಾಗೆ ತಮ್ಮ ಪ್ರತಿಭೆ ತೋರಿಸುತ್ತಾರೆ ಅನ್ನೋದು ನನ್ನ ಅನಿಸಿಕೆ.

ಶೋಭಾ...

ಉ: ಚೀನಾದಿಂದ ಕಲಿಯಬೇಕಾದ ಪಾಠ

kishoreyc's picture

ವಾಣಿಜ್ಯ ಮೌಲ್ಯ. ಹಾ೦! ಆದರೆ ಯಾವಾಗ ನಾವು ಕನ್ನಡಕ್ಕೆ ವಾಣಿಜ್ಯ ಮೌಲ್ಯ ದೊರಕಿಸಿಕೊಡುವುದು? ಮತ್ತು ಹೇಗೆ? ನಾಳೆ ಶಾಸ್ತ್ರೀಯ ಭಾಷೆ ಸ್ಥಾನ ಸಿಕ್ಕಮೇಲೆ ಕನ್ನಡವನ್ನು ಷೊಕೇಸ್ ನಲ್ಲಿ ಇಟ್ಟು ಪೂಜೆ ಮಾಡ್ತಿನಿ ಅನ್ನೋರು ಪಾಪಿಗಳು.

ಕಥೆ, ಕಾದ೦ಬರಿ ನಲ್ಲಿ ಮಾತ್ರ ಕನ್ನಡ ನ ನೋಡೋದನ್ನು ಬಿಟ್ಟು ಎಲ್ಲೆಡೆ ಕನ್ನಡ ಬಳಿಸುತ್ತೇನೆ ಎ೦ದು ಪಣ ತೊಟ್ಟೋನೇ ಕನ್ನಡಿಗ. ಅಪಾರ್ಟ್ಮ್೦ಟ್ ಸಿಬ್ಬ೦ದಿ ಜೊತೆ, ಅ೦ಗಡಿನಲ್ಲಿ ಮತ್ತು ಬ್ಯಾ೦ಕ್ ಗಳಲ್ಲಿ......

ಉ: ಚೀನಾದಿಂದ ಕಲಿಯಬೇಕಾದ ಪಾಠ

mahesha's picture

ಎಲ್ಲಾ ’ಭಾಷಾಭಿಮಾನಿಗಳು’ ಯಾರೂ ’ನುಡಿಹೆಮ್ಮೆಗಾರ’ರಲ್ಲ :)

ಕನ್ನಡಕ್ಕೆ ’ಶಾಸ್ತ್ರೀಯಸ್ತಾನಮಾನ’ ಬೇಕಾ ಇಲ್ಲಿ ’ಚೆಮ್ಮೋೞಿ’ ಪಟ್ಟಬೇಕಾ ಇಲ್ಲ ಕ್ಲಾಸಿಕಲ್ ಲ್ಯಾಂಗ್ವೇಜ್ ಸ್ಟೇಟಸ್ ಬೇಕಾ?

:) :)

ಅಬ್ಬಬ್ಬ!

ಉ: ಚೀನಾದಿಂದ ಕಲಿಯಬೇಕಾದ ಪಾಠ

srinivasps's picture

ಮಹೇಶರೆ!
ಅಲ್ಲ...ನೀವು ಹೇಳಿದ್ದೇ ಪ್ರತಿ ಎಳೆಯಲ್ಲೂ ಹೇಳ್ತೀರಲ್ಲ...ನಿಮಗೆ ಬೇಜಾರು ಆಗಲ್ವ??

ಇಲ್ಲಿ ಚರ್ಚೆ ನಡೆಯಬೇಕಾದದ್ದು "ಚೀನಾದಿಂದ ಕಲಿಯಬೇಕಾದ ಪಾಠ"
ಇದರ ಬಗ್ಗೆ...
ನೀವು ಹೀಗೆ ಕನ್ನಡ/ಸಕ್ಕದ ಮುಂತಾದವುಗಳ ಬಗ್ಗೆ ಮಾತಾದೊದ್ರಿಂದ
೧. topic dilute ಆಗತ್ತೆ
೨. ಜನ ನಿಮ್ಮ ಮಾತುಗಳನ್ನ ignore ಮಾಡಕ್ಕೆ ಶುರು ಮಾಡ್ತಾರೆ...

ನಿಮಗೆ ಯಾವುದು ಬೇಕು?

--ಶ್ರೀ

ಉ: ಚೀನಾದಿಂದ ಕಲಿಯಬೇಕಾದ ಪಾಠ

vikashegde's picture

:D

**************************
http://vikasavada.bl...
**************************

ಉ: ಚೀನಾದಿಂದ ಕಲಿಯಬೇಕಾದ ಪಾಠ

Sunil Jayaprakash's picture

:) ಅಯ್ಯೋ ಬಿಡಿ ಶ್ರೀನಿವಾಸ್. ಕನ್ನಡವನ್ನು ಕನ್ನಡ ಬಿಟ್ಟು ಬರೀ ತಮಿಳು ಕಣ್ಣಿನಿಂದ ನೋಡ್ತಾ ಇದ್ದರೆ ಹೀಗೇ ಆಗೋದು. ಅವರು ಕನ್ನಡವನ್ನ, ಕನ್ನಡದ ಹಿನ್ನೆಲೆಗಿಂತ ಹೆಚ್ಚಾಗಿ, ತಮಿಳು ಅತ್ವಾ ಇಂಗ್ಲೀಷಿನ ಕಣ್ಣಿನಿಂದಲೇ ನೋಡ್ತಾ ಇರ್ತಾರೆ. ದಯವಿಟ್ಟು ಅವರಿಗೆ ಚೂರು ಹೇಳಿ, "ಚೆಮ್ಮೋೞಿ" ಅಲ್ಲ ಕನ್ನಡದಲ್ಲಿ "ಕನ್ನುಡಿ" ಅಂತಾರೆ ಅಂತ !!!

ಉ: ಚೀನಾದಿಂದ ಕಲಿಯಬೇಕಾದ ಪಾಠ

hamsanandi's picture

"ಚೆನ್ನುಡಿ" ಅಂದ್ರೆ ಇನ್ನೂ ಚೆಂದವಲ್ಲವೇ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಚೀನಾದಿಂದ ಕಲಿಯಬೇಕಾದ ಪಾಠ

Sunil Jayaprakash's picture

ಚೆನ್ನುಡಿ ಎನ್ನಬಹುದು, ಆದರೆ ಶಂ.ಬಾ.ಜೋಶಿಯವರು "ಕನ್ನುಡಿ" ಎಂಬ ಪದಬಳಕೆ ಮಾಡಿದ್ದಾರೆ. ಇಲ್ಲಿ ನೋಡಿ

ಉ: ಚೀನಾದಿಂದ ಕಲಿಯಬೇಕಾದ ಪಾಠ

mahesha's picture

ಚೆಮ್ಮೋೞಿ ಅಂದ್ರೆ ಚೆನ್ನುಡಿ ತಾನೇ! :)

ಹಂಸಾನಂದಿಗಳೇ ಇದು ನಮಗೆ ಹೊಳೆತದೆ.. ಆದ್ರೆ ನಮ್ ಕಂನಡ ಪಂಡಿತರಿಗೆ ಹೊಳೆಯಲ್ವೇ!

ಶಂ.ಜೋಶಿಗಳ ಕನ್ನುಡಿ ಅಂದಿರೋದು ಕನ್ನಡವನ್ನ ಕ್ಯಾಸಿಕಲ್ ನುಡಿ ಅಂತ ಅಲ್ಲ.. ಅವರಂತೆ ಕನ್ನಡ ನುಡಿಯನ್ನ ಕನ್ನುಡಿ ಎಂದು ಅನ್ನಬೇಕು..

ಉ: ಚೀನಾದಿಂದ ಕಲಿಯಬೇಕಾದ ಪಾಠ

Sunil Jayaprakash's picture

ಅಪ್ಪಾ ಮಾಯ್ಸ್, ಸ್ವಲ್ಪ ತಮಿಳು ಪ್ರಬಾವದಿಂದ ಆಚೆ ಬನ್ನಿ. ಇಲ್ಲಿ ಬೇಡ ಆ ಚರ್ಚೆ. ಇಲ್ಲಿ ನಡೀತಾ ಇರೋ ಚರ್ಚೆ ಚೀನಾದಿಂದ ನಾವು ತಿಳ್ಕೋಬೇಕಾಗಿರುವ ಬಗ್ಗೆ. ಕನ್ನುಡಿ-ಚೆನ್ನುಡಿ ಅಲ್ಲ. ಅಲ್ಲಿ ಮಾಡು.

ಉ: ಚೀನಾದಿಂದ ಕಲಿಯಬೇಕಾದ ಪಾಠ

mahesha's picture

:)

ಉ: ಚೀನಾದಿಂದ ಕಲಿಯಬೇಕಾದ ಪಾಠ

Sunil Jayaprakash's picture

ಚೀನಾದಿಂದ ಕನ್ನಡಿಗರು ಕಲಿಯಬೇಕಾದ ಪಾಠ.

೧. ನಾವು ಯಾವುದೇ ಸರ್ಕಾರವಿರಲಿ ನಮ್ಮತನ, ನಮ್ಮ ದೇಶದ ಬಗ್ಗೆ ಹೆಮ್ಮೆಪಡಬೇಕು. ಸರ್ಕಾರವೇ ದೇಶವಲ್ಲ.
೨. ಯಾವುದೇ ವಿಷಯವಿರಲಿ, ಪರಿಣತಿಯನ್ನು ಸಾಧಿಸಬೇಕು. ಚೀನೀಯರು ಬರೀ ಭಾಷೆಯಲ್ಲಷ್ಟೇ ಅಲ್ಲ, ವಿಷಯ ಪರಿಣತಿಯಲ್ಲಿಯೂ ಮುಂದಿದ್ದಾರೆ.
೩. ನಮ್ಮ ನುಡಿಯ ಬಗ್ಗೆ ಯಾವುದೇ ರೀತಿಯ ಮುಜುಗರ, ಕೀಳರಿಮೆ ಇರಬಾರದು. ಕೀಳರಿಮೆ ಬೇರೆ ಬೇರೆ ಹಂತಗಳಲ್ಲಿ ಇರುತ್ತದೆ. ಕನ್ನಡ-ಸಂಸ್ಕೃತ, ಕನ್ನಡ-ಹಿಂದಿ, ಕನ್ನಡ-ಇಂಗ್ಲೀಷ್ ಈ ರೀತಿಯವು ಕೀಳರಿಮೆಯ ಭಾಗವಷ್ಟೇ. ಇವೆಲ್ಲವುಗಳನ್ನೂ ಮೀರಿ ನಿಲ್ಲಬೇಕು.
೪. ಒಗ್ಗಟ್ಟು.

ಉ: ಚೀನಾದಿಂದ ಕಲಿಯಬೇಕಾದ ಪಾಠ

Rajeshwari's picture

ನಿಮ್ಮ ಲೇಖನ ಚೆನ್ನಾಗಿದೆ. ಯಾವುದೇ ದೇಶವಾಗಿರಲಿ ಅಲ್ಲಿರುವ ಒಳ್ಳೆ ಗುಣಗಳನ್ನು ನಾವು ಅನುಷ್ಟಾನ ಮಾಡಿಕೊಳ್ಳುವ ಮನಸ್ಸು ಎಲ್ಲರಲ್ಲು (ಹೆಚ್ಚಾಗಿ ನಮ್ಮ ನಾಯಕರಿಗೆ) ಬರಬೇಕು.
ನಮ್ಮಲ್ಲಿ ಪ್ರತಿಯೊಂದಕ್ಕು ಪ್ರತಿಭಟನೆ , ಟೀಕೆ ಮಾಡುತ್ತಾ ಕಾಲತಳ್ಳುತ್ತಾರೆ.