ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreedevikalasad ರವರ ಬ್ಲಾಗ್

ಆಲಾಪ

ಮನದ ನಾದಕ್ಕೆ ಶ್ರುತಿಯ ಸಾಥ್‌

ಮನಸ್ಸಿಗೂ ಅಂಗಿ. . ?

August 7, 2008 - 12:57pm — shreedevikalasad

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೂವಿನಂಗಿ ಗೆರೆಯಂಗಿ
ಚುಕ್ಕಿಯಂಗಿ ಚಮಕಿಯಂಗಿ
ಚಳಿ ಅಂಗಿ, ಮಳೆ ಅಂಗಿ
ಎಲ್ಲದಕ್ಕೂ ಒಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಬಣ್ಣದ ಬಣ್ಣದ ಅಂಗಿ
ಒಗೆದು, ಒಣಗಿಸಿ, ತಿರುಚಿ
ಹಾಕಿಕೊಳ್ಳುವ ಅಂಗಿ
ಇದಿಲ್ಲದಿದ್ದರೆ ಇನ್ನೊಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೊತ್ತೊತ್ತಿಗೊಂದು ಅಂಗಿ
ಅವರಂಗಿ ಇವರಿಗೆ
ಇವರಂಗಿ ಅವರಿಗೆ
ತೊಡಿಸುತ್ತ ತೊಡುತ್ತ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಉಸಿರ ಪರಿಮಳವ ಕಟ್ಟಿಟ್ಟ ಅಂಗಿ
ಒತ್ತಾದ ಕಣ್ಣೀರ ಮುತ್ತಾಗಿಸಿದ ಅಂಗಿ
ನೀರ್‍ಮುತ್ತು ಸುರಿದು
ಕರಗಿದರೂ ಕಲ್ಲು
ಮೈಗಂಟಲೇಬೇಕು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

-ಶ್ರೀದೇವಿ ಕಳಸದ

  • ಅಂಗಿ
  • ಕವಿತೆ
  • ಬೆತ್ತಲು
  • ಮನಸ್ಸು
  • ಮುಖವಾಡ
~.~
  • shreedevikalasad ರವರ ಬ್ಲಾಗ್
  • Login or register to post comments
  • 195 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 7, 2008 - 8:47pm — Chamaraj

ಉ: ಮನಸ್ಸಿಗೂ ಅಂಗಿ. . ?

Chamaraj's picture

ಅಂಗಿ ನಾಗರಿಕತೆ. ಆದರೆ, ಪ್ರತಿ ಅಂಗಿಯ ಒಳಗೆ ಸತ್ಯ ಬೆತ್ತಲೆಯಾಗಿರುತ್ತದೆ. ಪ್ರಾಣಿಗಳು ಬಟ್ಟೆ ಹಾಕುವುದಿಲ್ಲ. ನಗ್ನತೆಯೇ ಅವುಗಳ ಸೊಗಸು. ಹೀಗಾಗಿ ಅವು ನೇರ. ಪ್ರಾಮಾಣಿಕ. ಅವೇನೂ ಇಲ್ಲದ ಮನುಷ್ಯ ಬಟ್ಟೆಯನ್ನು ನಾಗರಿಕತೆ ಎಂದುಕೊಂಡು ಮೋಸ ಹೋಗಿದ್ದಾನೆ.

ಆಗಾಗ, ಈ ಡಾಂಭಿಕತೆ ಬಿಟ್ಟಾಗ, ನೇರವಂತಿಕೆ, ಪ್ರಾಮಾಣಿಕತೆ, ಸರಳತೆ ಹಾಗೂ ಇಂತಹ ಹಲವಾರು ....ತೆಗಳು ಬೆಳೆಯುತ್ತವೆ. ಬದುಕು ಕೊಂಚ ಸಹ್ಯವಾಗುತ್ತದೆ.

ನಿಮ್ಮ ಕವನ ಇವೆಲ್ಲದರ ಪ್ರಾತಿನಿಧಿಕ ರೂಪದಂತಿದೆ. ಹೀಗಾಗಿ ಇಷ್ಟವಾಗುತ್ತದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2008 - 9:09pm — shreedevikalasad

ಉ: ಮನಸ್ಸಿಗೂ ಅಂಗಿ. . ?

shreedevikalasad's picture

ಸರ್‍,
ನನಗನಿಸಿದ್ದನ್ನು ಬರೆದೆ. ಅದಕೆಷ್ಟೊಂದು ವಿಸ್ತೃತ ರೂಪವಿದೆ ಅಂತ ಗೊತ್ತಾದದ್ದು ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆಯೇ. . . ಧನ್ಯವಾದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 2:15am — anivaasi

ಉ: ಮನಸ್ಸಿಗೂ ಅಂಗಿ. . ?

anivaasi's picture

ಶ್ರೀದೇವಿಯವರೆ,
ಪದ್ಯ ಇಷ್ಟವಾಯಿತು.
ಅಂಗಿ ಮೈಗಂಟಿಸಕೊಳ್ಳದಂತಿರುವುದರ ಬಗ್ಗೆ ಯೋಚಿಸುವಂತೆ ಮಾಡಿತು.
ಥ್ಯಾಂಕ್ಸ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2008 - 10:42am — shreedevikalasad

ಉ: ಮನಸ್ಸಿಗೂ ಅಂಗಿ. . ?

shreedevikalasad's picture

thanks anivaaseyavare,
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಳಿಯ Vs ಬಿಳಿಯದು
  • ಅಂತಿಮವಾಗಿ ಕಾಡುಕೋಣ ಅರಣ್ಯ ಇಲಾಖೆಯ ಲಾರಿ ಏರಿದ್ದು ಹೀಗೆ.ಪ್ರೊ.ಗಂಗಾಧರ ಕಲ್ಲೂರ (ಬಿಳಿ ಅಂಗಿ ತೊಟ್ಟವರು). ಚಿತ್ರ:ಬಿ.ಎಂ.ಕೇದಾರನಾಥೇಶ್ವರಸ್ವಾಮಿ.
  • ತಂಗಿಗಾಗಿ
  • ಲಾಲಿ
  • ಗಣಪ ಶಾಲೆಗೆ ಸೇರಿದ್ದು
Syndicate content

ಲೇಖಕರು

shreedevikalasad's picture

ಪೂರ್ಣ ಹೆಸರು
ಶ್ರೀದೇವಿ ಕಳಸದ

ಪರಿಚಯ

ಸಂತೆಯಾಗುತ್ತಿರುವ ಪತ್ರಿಕೋದ್ಯಮದಲ್ಲಿ ಸೂಕ್ಷ್ಮತೆಯ ನಾದದ ಎಳೆ ಹಿಡಿಯಲು ಯತ್ನಿಸುತ್ತಿರುವವಳು. ಓದಿದ್ದು ಧಾರವಾಡ ಹಾಗೂ ಬೆಂಗಳೂರು. ಸದ್ಯ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಕೆಲಸ. ಈ ನಾದದ ಎಳೆ ಎಲ್ಲಿಗೆ ತಲುಪಿಸುತ್ತದೋ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 108 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator