ಪ್ರಯೋಗ
Night Photography- ಯಲ್ಲಿ ನನ್ನ ಮೊತ್ತ ಮೊದಲ ಪ್ರಯೋಗ ಇಲ್ಲಿದೆ ...
PENTAX OPTIO M20 ಡಿಜಿಟಲ್ ಕ್ಯಾಮರಾ ಉಪಯೋಗಿಸಿದ್ದೇನೆ, soft flash ಬಳಸಿದ್ದೇನೆ, ಟ್ರೈಪಾಡ್ ಬಳಸಿಲ್ಲ...
ನಿಮ್ಮ ಅಭಿಪ್ರಾಯಗಳಿಗೆ, ಸಲಹೆಗಳಿಗೆ, ಟೀಕೆಗಳಿಗೆ ಸ್ವಾಗತ ...

- ರವರ ಬ್ಲಾಗ್
- Login or register to post comments
- 403 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪ್ರಯೋಗ
ಚೆನ್ನಾಗಿ ಬಂದಿದೆ. ಆದರೆ ಕಾಲುದೀಪ ಒಂದು ಚೂರು ಓರೆಯಾಗಿದೆ.
ಎಸ್ ಎಲ್ ಆರ್ ಕ್ಯಾಮೆರಾದಲ್ಲಿ ಇದನ್ನೇ ಪ್ರಯತ್ನಿಸಿ ನೋಡಬೇಕು
ಉ: ಪ್ರಯೋಗ
ಎಸ್ ಅಲ್ ಆರ್ ಇದ್ದರೆ ಕಥೆಯೇ ಬೇರೆ ಇರ್ತಿತ್ತು ಬಿಡಿ... ಇದ್ದಿದ್ರಲ್ಲಿ ಏನೋ ಪ್ರಯೋಗ ಇದು, ಅಷ್ಟೆ..
ನನಗೆ ಈ ಕ್ಯಾಮರಾ ಕೂಡ ಹೊಸದು, ಅದರ ಭಾಷೆ ನಾನು ಪೂರ್ತಿ ಅರ್ಥ ಮಾಡ್ಕೊಂಡಾಗ ಇದೇ ಚಿತ್ರ ಇನ್ನೂ ಚೆನ್ನಾಗಿ ಬರಬಹುದೇನೋ?
ಉ: ಪ್ರಯೋಗ
ಚೆನ್ನಾಗಿದೆ ರೀ....ಬೆಳಕಿನ ಕಂಟ್ರೊಲ್ ಸರಿಯಾಗಿದೆ.
ಪೋಟೊಗ್ರಫಿ ಬಗ್ಗೆ ಹೆಚ್ಚಿನ ತಿಳುವಳಿಕೆಗೆ ಇಲ್ಲಿ ಎಡತಾಕಿ.
http://www.photoxels.com/digital-photography-tutorials.html
http://photo.net/equipment/digital/basics/
http://photography.about.com/library/weekly/aa120202f.htm
ಇವಲ್ಲಿ photoxels ನ ಬರಹಗಳು ಚೆನ್ನಾಗಿವೆ....
ಉ: ಪ್ರಯೋಗ
ಚಿತ್ರ ತುಂಬ ಚೆನ್ನಾಗಿದೆ.
ರಾತ್ರೆ ಫ್ಲಾಷ್ ಬಳಸದೇ ಇದ್ದಾಗ ಟ್ರೈಪಾಡ್ ಉಪಯೋಗಿಸುವುದು ಸೇಫ್.
ಉ: ಪ್ರಯೋಗ
ಇಲ್ಲಿರುವುದು ನಾನು ೪ನೇ ಸಲ ತೆಗೆದ ಚಿತ್ರ. ಅದನ್ನು Enlarge ಮಾಡಿ ನೋಡಿ, ದೀಪ ಮತ್ತು ಹುಡುಗನ ಮುಖದ ನಡುವೆ ಒಂದು ಬೆಳಕಿನ ವೃತ್ತವಿದೆ (glare? ಗೊತ್ತಿಲ್ಲ), ಏನೇನು ಮಾಡಿದರೂ ಅದನ್ನು ಹೋಗಲಾಡಿಸಲಾಗಲಿಲ್ಲ. ಅದು ಅದರ ಪಾಡಿಗೆ ಇದ್ದರೆ ಚೆನ್ನಾಗಿರುತ್ತಿತ್ತು, ಆದರೆ ಅದು ಹುಡುಗನ ಒಂದು ಕಣ್ಣಿಗೆ ವಿಚಿತ್ರ ಕಳೆ ತಂದು ಕೊಟ್ಟು, ಚಿತ್ರದ ಚಂದ ಮತ್ತು ಭಾವವನ್ನು ಹಾಳು ಮಾಡಿದೆ. ಬೆಳಕಿನ ಕಂಟ್ರೋಲ್ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಮಾಡಿದ್ದೇನೆ, ಆದರೆ ಅದು ಪರಿಪೂರ್ಣವಾಗಲಿಲ್ಲ. ದೀಪದ ಬೆಳಕು ಮತ್ತು ಆಕಾರ ಸರಿಯಾಗಿಲ್ಲ.
ಡಿಜಿಟಲ್ ಕ್ಯಾಮರಾದಲ್ಲಿ ಇನ್ನೂ ಉತ್ತಮವಾಗಿ ಇದನ್ನು ತೆಗೆಯಬಹುದಿತ್ತೆ?
ಉ: ಪ್ರಯೋಗ
ನಿಮ್ಮ ಚಿತ್ರವನ್ನು ಸ್ವಲ್ಪ edit ಮಾಡುವ ಪ್ರಯತ್ನ ಮಾಡಿದೆ. ಆದರೆ resolution ಕಡಿಮೆ ಇದ್ದುದರಿಂದ ತುಂಬ ಕೆಲಸ ಮಾಡಲಾಗಲಿಲ್ಲ. ನೀವು ಕೇಳಿರುವ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಚಿತ್ರದ depth ಹೆಚ್ಚಿಸುವ ಮೂಲಕ ಪರಿಹರಿಸಬಹುದು. ಆಗ ಗೋಡೆಯಮೇಲಿನ ಅನಗತ್ಯ detail ಗಳು ಇಲ್ಲವಾಗುತ್ತವೆ ಹಾಗೂ ರಾತ್ರೆಯ ನಿಗೂಢತೆಯ feel ಕೂಡ ಬರುತ್ತದೆ. ಸ್ವಲ್ಪ rotate ಮಾಡಿ crop ಮಾಡಿದ್ದರೆ ’ದೀಪ ಡೊಂಕಾಗಿದೆ’ ಎಂಬ ಪ್ರತಿಕ್ರಿಯೆ ಬರದ ಹಾಗೆ ನೋಡಿಕೊಳ್ಳಬಹುದಾಗಿತ್ತು!! ನಿಮ್ಮ ಈ - ಮೈಲ್ ವಿಳಾಸ ಕೊಟ್ಟರೆ ನಾನು edit ಮಾಡಿದ ನಿಮ್ಮದೇ ಚಿತ್ರವನ್ನು ನಿಮಗೆ ಕಳಿಸುತ್ತೇನೆ.
ಉ: ಪ್ರಯೋಗ
ಚೆನ್ನಾಗಿದೆ. ಚಿತ್ರ ತೆಗೆಯುವ ಮುಂಚೆ ವೈಟ್ ಬ್ಯಾಲನ್ಸ್ ಮಾಡಿದ್ದರೆ, ಕೆಂಬಣ್ಣ ಕಡಿಮೆಯಾಗಿ ಚಿತ್ರ "ಸಹಜ"ವಾಗುತ್ತಿತ್ತೋ ಅನ್ನಿಸಿತು?!
ಉ: ಪ್ರಯೋಗ
ನಿಜ, ಚಿತ್ರ ಸಹಜವಾಗಿರುತ್ತಿತ್ತು. ಆದ್ರೆ ಈ ಫೀಲ್ ಇರ್ತಿರಲಿಲ್ಲ.. (ಆದ್ರೂ ಈಗೇನು ಅಂದ್ಕೊಂಡ ಹಾಗೆ ಬಂದಿಲ್ಲ ಅದು)