Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

November 2, 2007 - 11:33am — shreekant.mishrikoti

೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ .
೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ?
೩. ಕನ್ನಡ ಮಕ್ಕಳು ಇಂಗ್ಲೀಷ್ ರೈಮ್ಸ್ ಹೇಳಿದರೆ ಕನ್ನಡಿಗರಲ್ಲಿ ಕನ್ನಡದ ಭವಿಷ್ಯ ಕುರಿತು ಆತಂಕ . ಸೋಲಿಗರ ಮಗು ’ ನಮ್ಮ ನಾಡು ಕನ್ನಡ , ನಮ್ಮ ನುಡಿಯು ಕನ್ನಡ’ ಎಂದು ಹಾಡಿದರೆ ಸೋಲಿಗರಲ್ಲಿ ಆತಂಕ .
ಕನ್ನಡ ಭಾಷೆ ಮುಂದೂ ಉಳಿಯುವದು . ಆದರೆ ಕನ್ನಡವಷ್ಟೇ ಉಳಿದರೆ ಸಾಕೆ ? ಉಳಿದೆಲ್ಲ ಭಾಷೆಗಳೂ ಉಳಿಯಬೇಕು . ಭಾಷೆಯಲ್ಲಿನ ಅಡಕವಾದ ಸಂಸ್ಕೃತಿ , ಜ್ಞಾನ , ಎಲ್ಲವೂ ಉಳಿಯಬೇಕು . ಯಾವುದೇ ಭಾಷೆಯನ್ನು ಅಳಿಯಲು ಬಿದಬಾರದು . ಆದರೆ ಹೇಗೆ ?

ಈ ಬಗ್ಗೆ ನಿನ್ನೆಯ ಪ್ರಜಾವಾಣಿ ( ೧-ನವಂಬರ್ -೨೦೦೭) ಯಲ್ಲಿ ಬರಹಗಳಿವೆ . ಹೆಚ್ಚಿನ ವಿವರ ತಿಳಿಯಲು ಹುಡುಕಿಕೊಂಡು ಓದಿ.

  • ಕನ್ನಡ
  • ಭಾಷೆ
Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 576 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 2, 2007 - 12:55pm — Sunil Jayaprakash

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

Sunil Jayaprakash's picture

ಮಿಶ್ರಿಕೋಟಿ, ನಾನು ಪ್ರಜಾವಾಣಿಯಲ್ಲಿ ಪ್ರಕಟವಾದ ಆ ಬರಹಗಳನ್ನು ಓದಿದೆ. ಒಂದಂತೂ ನನಗೆ ತೀರಾ ಅಂದರೆ ತೀರಾ ಎಳಸು ಅನಿಸಿತು. ಅದರಲ್ಲಿ ಹವ್ಯಕರನ್ನೂ ಕನ್ನಡದಿಂದ ಬೇರೆ ಎಂಬಂತೆ ತೋರಿಸಲಾಗಿದೆ. ಈ ಮಾಧ್ಯಮಗಳು ಇಷ್ಟೆಲ್ಲ ಸಾಹಿತ್ಯವಿದ್ದರೂ, ಕನ್ನಡ ಎಂಬ ಪದದ ಅರ್ಥವ್ಯಾಪ್ತಿಯನ್ನು ತೀರಾ ಸಂಕುಚಿತಗೊಳಿಸಿ ನಾವು ಬೇರೆ ಬೇರೆ ಸೀಮೆಯ ಜನರು ಒಂದಾಗುವುದಕ್ಕೆ ದೊಡ್ಡ ಅಪಾಯ ತಂದೊಡ್ಡಿದ್ದಾರೆ. ಕನ್ನಡ ಎಂದರೆ ಬರೀ ನುಡಿಯಲ್ಲ, ಅದೊಂದು ನಾಡು, ಆ ನಾಡಿನಲ್ಲಿ ಬದುಕುತ್ತಿರುವ ಜನರು, ಅವರ ನಾಡವಳಿ. ಇದು ನನ್ನ ಮಾತಲ್ಲ. ೯ನೇ ಶತಮಾನದ ಕವಿರಾಜಮಾರ್ಗದ ಈ ಮಾತುಗಳನ್ನು ಗಮನಿಸಿ.

೧. ಕಾವೇರಿಯಿಂದಮಾ...
೨. ವಸುಧಾವಳಯವಿಲೀನವಿಷಯವಿಶದವಿಶೇಷಂ
೩. "ನಾಡೇ ನಾಡೇ ಕನ್ನಡ" (ಇದರ ಪದ್ಯದ ಸಂಖ್ಯೆಯನ್ನು ಬೇಕಿದ್ದರೆ ನಾನು ನೀಡಬಲ್ಲೆ)

ಇವೆಲ್ಲವೂ ತಿಳಿಸುವುದು, ಸೋಲಿಗ, ಬಡಗ, ಕೊಡವ, ಇವರೆಲ್ಲರೂ ಕನ್ನಡಿಗರೆಂಬ ಅಧಿಕೃತ ಮನ್ನಣೆ ಎಂದೋ ಸಿಕ್ಕಿದೆ. ಈಗಲೂ ಕೂಡ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಸಿಇಟಿ ಸೆಲ್ ಪ್ರಕಟಿಸುವ ಬ್ರೌಚರ್ ತೆಗೆದುನೋಡಲಿ. ಕನ್ನಡ ಅಂದರೆ ಬರೀ ನುಡಿ ಅಲ್ಲ ಅದೊಂದು ಸಂಸ್ಕೃತಿ ಎಂದು ಜನ ತಿಳಿದುಕೊಂಡಿರುವಾಗ, ಮಾಧ್ಯಮದವರು, ಇಲ್ಲ ಸೋಲಿಗರು ಬೇರೆ, ಹವ್ಯಕರು ಬೇರು, ಕೊಡವರು ಬೇರೆ ಅಂತೆಲ್ಲ ಬರೆದರೆ ಆ ದೇವರೇ ಕಾಪಾಡಬೇಕು.

ಸೋಲಿಗರ ಮಗು ’ ನಮ್ಮ ನಾಡು ಕನ್ನಡ , ನಮ್ಮ ನುಡಿಯು ಕನ್ನಡ’ ಎಂದು ಹಾಡಿದರೆ ಸೋಲಿಗರಲ್ಲಿ ಆತಂಕ

ನೋಡಿ, ಈ ಯೋಚನೆಯನ್ನು ಮೆಟ್ಟಿನಿಲ್ಲಬೇಕೆಂದರೆ, ಸೋಲಿಗರು(ಹಾಗು ಮುಖ್ಯವಾಗಿ ಕನ್ನಡ ಪಂಡಿತರು) ತಮ್ಮ ಪಾರಿಭಾಷಿಕ ಪದಗಳನ್ನು ಸಾಹಿತ್ಯದಲ್ಲಿ ಬಳಸುತ್ತಾ, ಗಟ್ಟಿಯಾಗಿರಬಹುದಾದಂತಹ ಅವರ ನುಡಿಗಟ್ಟಿಗಳಿಗೆ ಅಧಿಕೃತ ಮನ್ನಣೆಯನ್ನು ನೀಡುವುದು. ಆಗ "ಸೋಲಿಗ ಕನ್ನಡವೂ" ಉಳಿಯತ್ತೆ ಮತ್ತು "ಮಾಧ್ಯಮದವರ ಕನ್ನಡವೂ" ಸೋಲಿಗವನ್ನು ಆಶ್ರಯಿಸುತ್ತಾ ತಾನೂ ಬೆಳೆಯತ್ತೆ. ನಾನು ಸಂಪದದಲ್ಲಿಯೇ ಅನೇಕ ಬಾರಿ ಪ್ರಸ್ತಾಪಿಸಿದ ಹಾಗೆ ಕನ್ನಡಿಗರು ಬೆಳೆಯಬೇಕೆಂದರೆ ನಮ್ಮಲ್ಲಿಯ ಪಾರಿಭಾಷಿಕ ಪದಗಳಿಗೆ ಮನ್ನಣೆ ಸಿಗಬೇಕು. ಸುಮ್ಮನೆ "ಭಾರತ ಜನನಿಯ ತನುಜಾತೆ..." ಅಂತ ಜಪಮಾಡುತ್ತಾ ಕೂತಿರುವುದಲ್ಲ.

ನಾನು ಮೊದಲೇ ಹೇಳಿದ ಹಾಗೆ ಪ್ರಜಾವಾಣಿಯ ಆ ಬರಹ ನನಗೆ ತೀರಾ ತೀರಾ ಎಳೆಸು ಎನಿಸಿತು. ಏಕೆಂದರೆ ಸೋಲಿಗ, ಬಡಗ, ಹವ್ಯಕ ಇವುಗಳನ್ನು ಕುರಿತು ಮಾತು ಬಂದಾಗ ನಾವು ಹೇಳುವುದು "ಸೋಲಿಗ ಕನ್ನಡ", "ಬಡಗ ಕನ್ನಡ", "ಹವ್ಯಕ ಕನ್ನಡ", "ಕುಂದಗನ್ನಡ" ಮುಂತಾಗಿ. ಇಂತಹ ಗಂಭೀರ ವಿಚಾರಗಳನ್ನ ಎಳಸು ಎಳಸಾಗಿ ಓದುಗರ ಮುಂದಿಡುವ ಮುಂಚೆ ಬರೆಯುವವರು ಯೋಚಿಸಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 1:08pm — mahesha

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

mahesha's picture

ಸುನಿಲ..( ಬರೀ ನಿಂಗೆ )

ಪ್ರಜಾವಾಣಿಯೋ, ಅದರದೇ ಇನ್ನೊಂದೋಲೆ(ತುಶಾರವೋ, ಮಯೂರವೋ).. ಅದ್ರಲ್ಲಿ ಒಂದು ಬಂದಿತ್ತು... ಅದು ಎಶ್ಚು ಎಳಸು ಅಂದ್ರೆ.. Smiling

"ಎಲ್ಲಾ ಜನಾಂಗಕ್ಕೂ ನಾಲ್ಕು ನುಡಿಗಳಿರ್ತವೆ.

೧) ತಮ್ಮ ಮನೆಮಾತು
೨) ತಮ್ಮ ದೇಶದ ನುಡಿ
೩) ಸಾಂಸ್ಕೃತಿಕ ಭಾಷೆ
೪) ಬೇರೆ ಜನಾಂಗದ ಜೊತೆಗಿನ ವ್ಯಾವಹಾರಿಕೆ ಭಾಷೆ"

ಇದನ್ನು ಒಂದು ಸರತಿ, ಜಗದಲ್ಲಿ ಹೆಚ್ಚು ನುಡಿ ಮೇಲೆ ಇರುವ ದೇಶಗಳಿಗೆ ತಾಳೆ ಮಾಡಲಿ, ಜರ್ಮನಿ, ಜಪಾನ್, ಇಂಗ್ಲಾಂಡ್, ರಶ್ಶ ... ಇಲ್ಲೇಲ್ಲ ನಾಲ್ಕು ನಾಲ್ಕು ನುಡಿ ಕಲಿತಾರ?

ಒಟ್ಟಿನಲ್ಲಿ.. "ಕನ್ನಡಿಗರಿಗೆ ಮಾತ್ರ ನಾಲ್ಕು ಭಾಷೆಗಳು ಬೇಕೇ ಬೇಕು..
೧) ಕನ್ನಡ( ಅದ್ರಲ್ಲು, ಹವ್ಯಕ, ಕುಂದ ಕನ್ನಡ, ಬಡಗ, ಸೋಲಿಗ, ಈ ಒಡಕು ಇರಲೇ ಬೇಕು )
೨) ಹಿಂದಿ ( ನಮ್ಮ ಅನಧಿಕೃತವಾಗಿ ಹೇರಲಾದ ರಾಷ್ಟ್ರಭಾಷೆ )
೩) ಇಂಗ್ಲೀಶು ( ಅಧಿಕೃತವಾಗೇ ಹೇರಲಾದ ಭಾಷೆ )
೪) ಸಂಸ್ಕೃತ( ಇದನ್ನು ಅನಧಿಕೃತವಾಗಿ ಹೇರಲಾದ ಸಾಂಸ್ಕೃತಿಕ ಭಾಷೆ )

ಈಗೀಗ ಇವರು ಹೇಗೆ ಹೇಳ್ತಾ ಇದ್ದಾರೆ ಅಂದ್ರೆ, ಈ ನಾಲ್ಕು ನುಡಿಗಳನ್ನು ಕಲಿಯದವನು ಕನ್ನಡಿಗನೇ ಅಲ್ಲವಂತೆ...

ಇಲ್ಲಿ 'ಕನ್ನಡತನ'ದ definition ಕೂಡ ಇವರೇ.. ಪಾಪಾ ಇವರಿಗೆ ಕವಿರಾಜಮಾರ್ಗವಾಗಲಿ, ಮತ್ತೊಂದಾಗಲಿ ಎಲ್ಲಿಯ ಲೆಕ್ಕ.!

ಇದೆಲ್ಲದರ ಹಿಂದೆ ಉದ್ದೇರ, ಗುರಿ, ಹುನ್ನಾರಗಳನ್ನು ಅರಿಯದಶ್ಟು, ಹೆಡ್ಡರು ನಾವು.. !

ಈಗ ನನ್ನ, ಇನ್ನ ಉಗಿಯಕ್ಕೆ ಒಂದು ದಂಡು ಬತ್ತದೆ ನೋಡು Smiling.. "ಲೋ ನನ್ ಮಕ್ಳ ಅಚ್ಚಗನ್ನಡಿಗರಾ ಅಂತ".

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 1:09pm — mahesha

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

mahesha's picture

ಇನ್ನು = ನಿನ್ನ

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 2:23pm — ವೈಭವ

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

ವೈಭವ's picture

ಪಾಪ ಬರೆದಿರುವುವರು ಕವಿರಾಜಮಾರ್ಗ ಓದಿಲ್ಲ ಅನ್ಸುತ್ತೆ
ಅಲ್ಲಿ ಹೇಳಿರದು:-

೧) ಕನ್ನಡ ನಾಡಿನಲ್ಲಿ ಎಶ್ಟು ಕನ್ನಡಂಗಳ್ ಇದೆ ಅಂದರೆ ವಾಸುಗಿಯ(ವಿಶ್ಣು) ಎಲ್ಲ ನಾಲಿಗೆ ತೆರೆದರೂ ಎಲ್ಲ ಕನ್ನಡಂಗಳ್ ಆಡಕ್ಕಾಗಲ್ವಂತೆ.
೨) "ಕಾವೇರಿಯಂ...." ಪದ್ಯದಲ್ಲಿ 'ಭಾವಿಸಿದ ಜನಪದ' ಎಂಬ ಸಾಲು ಇದೆ. ಕನ್ನಡ ಎಂಬುದು ಬರೀ ನುಡಿಯಲ್ಲ, ನಾಡು ಮತ್ತು ಜನಪದ( ಬುಡಕಟ್ಟು,ಸಂಸ್ಕ್ರುತಿ,ನಡಾವಳಿ)ವೂ ಹೌದು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 3:18pm — savithru

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

savithru's picture

ಕವಿರಾಜಮಾರ್ಗ ವನ್ನು ಒಮ್ಮೆ ಓದುವ ಆಸೆ. ನೆಟ್ ನಲ್ಲಿ ಇದು ಸಿಗುತ್ತಾ? ದಯವಿಟ್ಟು ಅದರ ನೇರ ಕೊಂಡಿಯನ್ನು ಯಾರಾದರೂ ಇಲ್ಲಿ ಬರೆಯಿರಿ.
DLI ನಲ್ಲಿ ಹುಡುಕಿದೆ.. ಸಿಗಲಿಲ್ಲ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 8:09pm — ವೈಭವ

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

ವೈಭವ's picture

ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು" ಇದನ್ನ ಓದಿ. ಕವಿರಾಜಮಾರ್ಗದ ಮೇಲ್ಮೆ/ಹಿರಿಮೆ ಗಳೇನು ಎಂಬುದು ಗೊತ್ತಾಗುತ್ತದೆ. ಕವಿರಾಜಮಾರ್ಗ ಬರೀ ಕಬ್ಬಿಗರಿಗೆ ಬರೆದಿಲ್ಲ. ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಸರಕು

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 6:04pm — srinivasps

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

srinivasps's picture

ಕನ್ನಡ ನಾಡಲ್ಲಿ ಕನ್ನಡ ಕಲಿಕೆ ಎಲ್ಲ ಶಾಲೆಗಳಲ್ಲೂ ಮಾಡಬೇಕೆಂಬ ಸುಲಭ ಸಾಧ್ಯವಾದದನ್ನೇ ನಾವು ಜಾರಿಗೊಳಿಸಿಲ್ಲ...

ಇದು ಆಗುವವರೆಗು ನಮ್ಮ ಕೂಗು ಬರಿ ’ಕನ್ನಡ ಉಳಿಸಿ’ ಎಂದು ಉಳಿಯುತ್ತದೇ ಹೊರತು ’ಕನ್ನಡ ಬಳಸಿ’ ಎಂದಲ್ಲ....
ಛೇ! Sad

  • Login or register to post comments
  • link
  • Email this ಪ್ರತಿಕ್ರಿಯೆ
November 2, 2007 - 9:55pm — srinivasps

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

srinivasps's picture

ಹಲವು ಕಡೆ ಕನ್ನಡ ನಾಡಲ್ಲಿ ಶಾಲೇಲಿ ಕನ್ನಡ ಮಾತಾಡಿ ಮಕ್ಕಳು Fine(ದಂಡ) ಹಾಕಿಸ್ಕೋತಾರಂತೇ..ಇದು ದಿಟವಾ?
ಕನ್ನಡಿಗರು ತೆಪ್ಪಗೆ ದಂಡ ಕಟ್ ತಾರಂತೆ...ಹೌದಾ??? Sad

-ಶ್ರೀ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?
  • ಕನ್ನಡ ತಮಿಳು ಕವಲುಗಳು ಹೀಗಾದವು!
  • ಕನ್ನಡ ಕಲಿಯುವದು ಕಷ್ಟವೇ?
  • ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ
  • ತಮಿಳು ಭಾಷಾಭಿಮಾನದ ಇತಿಹಾಸ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
  • sushil
    ಉ: ಶ್ರೀಬಸವೇಶ್ವರರ ವಚನಗಳು
    May 12, 2008 - 11:25am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 17 ಅತಿಥಿಗಳು ಆನ್ಲೈನ್ ಇರುವರು.

ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator