ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

November 2, 2007 - 5:02pm — shreekant.mishrikoti

ಊರು ಮುಂಬೈ ; ಒಬ್ಬ ಹೆಣ್ಣುಮಗಳು ; ಅವಳು ಮಾಡುವ ಅಮೃತಬಳ್ಳಿ ಕಷಾಯ ಹೆಸರುವಾಸಿ ; ಅದರ ರುಚಿಗೆ ಮರುಳಾಗಿ ಅನಾರೋಗ್ಯದ ಸುಳ್ಳುನೆವ ಹೇಳಿಯಾದರೂ ಕುಡಿದು ಹೋಗುವ ಜನ ; ಗಂಡ ಫೊಟೋ ಫ್ರೇಮ್ ಅಂಗಡಿಯನ್ನು ನಡೆಸುತ್ತಿದ್ದ; ಈಗ ಅವನು ಇಲ್ಲ ; ಮಗನು ಅದನ್ನು ನೋಡಿಕೊಂಡಿದ್ದಾನೆ. ಈ ಹೆಂಗಸು ಪರಿಚಯ ಇರಲಿ ಇಲ್ಲದಿರಲಿ ಇನ್ನೊಬ್ಬರ ತೊಂದರೆಗೆ ತನ್ನ ಸಂಸಾರವನ್ನು ಅಲಕ್ಷಿಸಿಯಾದರೂ ತನ್ನ ಕೈಮೀರಿ ಸಹಾಯ ಮಾಡುವವಳು.

ಫೋಟೋ ಫ್ರೇಮ್ ಅಂಗಡಿಯಲ್ಲಿ ಎಷ್ಟೋ ಜನ ಚೌಕಟ್ಟು ಹಾಕಲು ಹೇಳಿ ತಗೊಂಡು ಹೋಗದೇ ಇದ್ದಾರೆ . ಹೂವು ಹಣ್ಣು , ನಿಸರ್ಗದೃಶ್ಯ , ದೇವರುಗಳ ಚಿತ್ರವನ್ನು ಯಾರಾದರೂ ಅಗ್ಗದ ಬೆಲೆಗೆ ಕೊಂಡಾರು . ಆದರೆ ಕಟ್ಟು ಹಾಕಿದ ಮನುಷ್ಯರ ಚಿತ್ರಗಳನ್ನೇನು ಮಾಡಬೇಕು? ಸಹಾಯಕ್ಕಿರುವ ಹುಡುಗ ಆ ಚಿತ್ರಗಳನ್ನು ಹರಿದು ಹಾಕಿ ಚೌಕಟ್ಟನ್ನು ಬೇರೆ ಚಿತ್ರಗಳಿಗೆ ಬಳಸಬಹುದು ಎಂದರೆ ಈ ಮಗನಿಗೆ ಅದೇಕೋ ಸರಿ ಎನಿಸುವದಿಲ್ಲ . ಒಂದು ಮಾತು ತಾಯಿಯನ್ನು ಕೇಳಿದರಾಯಿತು ಎಂದು ಮನೆಗೆ ಬಂದಾಗ ಅವಳನ್ನು ಕೇಳುವನು . ’ಯಾರ್ಯಾರೋ ಕೆಲಸಕ್ಕೆ ಬರದ ದೇವರ ಚಿತ್ರ ಎಲ್ಲಾ ಇಟ್ಕೊಂಡಿದ್ದೀ ; ಈ ಮನುಷ್ಯರ ಚಿತ್ರಕ್ಕೆ ನಿನ್ನ ಅಂಗಡಿಯಲ್ಲಿ ಜಾಗ ಇಲ್ಲವೇ ? ’ ಎನ್ನುವಳು .

ಮಹಾನಗರದಲ್ಲಿ ಕೋಮು ಗಲಭೆಗಳು ನಡೆದಿವೆ . ಹೆಣಗಳು ಅಲ್ಲಲ್ಲಿ ಬೀಳುತ್ತಿವೆ . ಜನ ಸಂಶಯದಲ್ಲಿ ಇದ್ದಾರೆ . ತಮ್ಮ ಕೋಮು ಗೊತ್ತಾದೀತೆಂದು ಜನ ಒಬ್ಬರನ್ನೊಬ್ಬರು ಹೆಸರು ಹಿದಿದು ಕರೆಯರು . ಸರಕಾರೀ ಅಸ್ಪತ್ರೆಗಳಲ್ಲಿ ಹೊಸ ಗಾಯಾಳುಗಳಿಗ ಜಾಗ ಇಲ್ಲ ; ಗಾಯಾಳುಗಳನ್ನು ಹುದುಕಿಕೊಂಡೂ ಜನ ಅಲ್ಲಿ ಬರುತ್ತಿಲ್ಲ - ತಮ್ಮ ಹಿಂದು ಮುಂದು ಬಯಲಾದೀತೆಂದು ; ಅಲ್ಲಿ ಇರುವ ಜನ ಯಾರೆಂದು ನಂಬುವದು ಹೇಗೆ? ಸಂಬಂಧಿಗಳು ಕರೆದುಕೊಂಡು ಹೋಗಲಿ ಎಂದು ಸರಕಾರದವರು ಅನೌನ್ಸ್ ಮಾಡುತ್ತಿದ್ದಾರೆ .

ಫೋಟೋ ಅಂಗಡಿಯಲ್ಲಿನ ತೆಗೆದುಕೊಂಡು ಹೋಗದೆ ಇರುವ ಒಬ್ಬ ಮುದುಕ , ಒಬ್ಬ ಮುದುಕಿಯ ಫೋಟೋಗಳನ್ನು ನಾಟಕದಲ್ಲಿನ ಮನೆಯ ಕೋಣೆಯ ಗೋಡೆಯ ಮೇಲೆ ಹಕಲು ಒಬ್ಬ ನಾಟಕರಂಗದ ಗೆಳೆಯ ತಗೊಂಡು ಹೋಗಿದ್ದಾನೆ.
ಅವರೀಗ ಯಾವ ನಾಟಕದಲ್ಲಿ ಯಾರ ತಂದೆ ತಾಯಿ ಆಗಿದ್ದಾರೋ ಯಾರಿಗೆ ಗೊತ್ತು ?

ಈ ವೇಳೆಯಲ್ಲಿ ತರುಣನೊಬ್ಬ ಒಂದು ವಿಚಿತ್ರ ಕೋರಿಕೆ ಇಟ್ಟುಕೊಂಡು ಫೋಟೋ ಅಂಗಡಿಗಳಿಗೆ ಅಲೆಯುತ್ತಿದ್ದಾನೆ . ಅವನು ಅನಾಥ ; ತನಗೆ ಒಲಿದ ಹೆಣ್ಣನ್ನು ಮದುವೆ ಆಗಬೇಕು . ಅವಳಿಗೆ ಈತನ ಹಿಂಚು ಮುಂಚಿಲ್ಲದ ವಿಶಯ ಗೊತ್ತು. ಆದರೆ ಅವಳ ತಂದೆ ತಾಯಿ ಅದು ಹೇಗೆ ತನ್ನ ಮಗಳನ್ನು ’ ತಂದೆ ತಾಯಿ ಇಲ್ಲದ ಮನುಷ್ಯನಿಗೆ ಮಗಳನ್ನು ಹೇಗೆ ಮದುವೆ ಮಾಡಿ ಕೊಟ್ಟಾರು ? ’ ತನ್ನ ತಂದೆ ತಾಯಿ ಎಂದು ತೋರಿಸಲು ಯಾರಾದರೂ ವಯಸ್ಸಾದವರ ಫೋಟೋಗಳು ಬೇಕಿದೆ. ಕೊನೇ ಪಕ್ಷ ಮುದುಕನ ಫೋಟೋ ಆದರೂ ಬೇಕು ... ’ತಾಯಿ ಯಾರಿಗೇ ಆದರೂ ಇದ್ದೇ ಇರುತ್ತಾಳೆ . ಅದನ್ನು ಪ್ರೂವ್ ಮಾದುವ ಅಗತ್ಯ ಇಲ್ಲ ; ಅದರೆ ತಂದೆ ಅಂತ ಒಬ್ಬ ಇದ್ದ ಅಂತ ತೋರಿಸಲು ಒಂದು ಫೋಟೋ ಬೇಕೇ ಬೇಕು . ಹೇಗಾದರೂ ಒಂದು ಕೊಡಿ ; ಏನೇ ಬೆಲೆ ಆದರೂ ಕೊಡುತ್ತೇನೆ. ನನ್ನ ಜೀವನವೇ ನಿಮ್ಮ ಕೈಲಿದೆ ’ ಎಂದು ಅಂಗಲಾಚುತ್ತಾನೆ.
ಇದ್ದದ್ದನ್ನು ನಿನ್ನೆ ತಾನೇ ಗೆಳೆಯನಿಗೆ ಕೊಟ್ಟೆ ; ನಿನ್ನೆ ಆದರೂ ಬಂದಿದ್ರೆ ಸಿಗ್ತಿತ್ತು ಅಂತ ಹೇಳಿ .. ಏನೂ ಚಿಂತೆ ಮಾಡಬೇಡ . ಒಂದು ದಿನ ಟೈಮ್ ಕೊಡು ; ಏನಾದರೂ ಮಾಡುವ ಅಂತ ಹೇಳಿ ಆಶ್ವಾಸನೆ ಕೊಟ್ಟು ಕಳಿಸುತ್ತಾನೆ.
ಪರಿಚಯದ ಇನ್ನೊಂದು ಅಂಗಡಿಗೆ ಹೋಗಿ ಕೇಳಿದರೆ ’ ಮೊದಲೇ ಈ ಊರಲ್ಲಿ ಏನೆಲ್ಲ ನಡೆಯುತ್ತಿದೆ ; ಇಂಥ ಲಫಡಾ ಎಲ್ಲ ನಮಗೆ ಯಾಕೆ ಬೇಕು ? ನೀನು ಇಂಥದ್ದರಲ್ಲೆಲ್ಲ ಸಿಕ್ಕಾಕ್ಕೊಬೇಡ’ ಎಂದು ಆ ಅಂಗಡಿಯವ ಹೇಳುತ್ತಾನೆ..

ನಾಳೆಯವರೆಗೆ ಏನಾದರೂ ವಿಚಾರ ಮಾಡಿದರಾಯಿತು . ಎಂದು ಇವನು ಮನೆಗೆ ಬಂದರೆ ತಾಯಿ ಪ್ಲ್ಯಾಸ್ಟಿಕ್ ಬ್ಯಾಗೊಂದನ್ನು ಹಿಡಿದುಕೊಂಡು ಹೊರಟು ನಿಂತಿದ್ದಾಳೆ .
ಅಲ್ಲಿ ಒಬ್ಬ ಹುಡುಗ ಮಾತಿಲ್ಲದೆ ಮಲಗಿದ್ದಾನೆ . ಅವನ ಹೆಸರು , ವಿಳಾಸ , ಜಾತಿ ಹೇಳುತ್ತಿಲ್ಲ ; ಅವನನ್ನು ನೋಡಲೂ ಯಾರೂ ಬಂದಿಲ್ಲ . ಅವನ ಜತೆಗಿರಲು ಈ ಮಹಾತಾಯಿ ಮಗನಿಗೆ ಅಡಿಗೆ ಮಾಡಿಟ್ಟು ಆ ಹುಡುಗನಿಗೆ ಮಗನು ಬಳಸದಿರುವ ಬಟ್ಟೆ ಬರೆ , ಊಟ ತೆಗೆದುಕೊಂಡು ಹೋಗುತ್ತಿದ್ದಾಳೆ . ಹೋಗುವಾಗ ’ಯಾರಾದರೂ ಬಟ್ಟೆ ಬರೆ ಕೇಳಿದರೆ ನಿಮ್ಮ ಅಪ್ಪನ ಮದುವೆ ಕೋಟನ್ನು ಕೊಟ್ಟುಬಿಡು . ಈ ಚಳಿಗಾಲದಲ್ಲಿ ಯಾರಿಗಾದರೂ ಬೆಚ್ಚಗೆ ಆದೀತು ; ಇಲ್ಲಿ ಸುಮ್ಮನೆ ಟ್ರಂಕಿನಲ್ಲಿ ಕೊಳೆಯುತ್ತಿದೆ’ ಎಂದು ಹೇಳುತ್ತಾಳೆ .

ರಾತ್ರಿ ವಿಚಾರ ಮಾಡಿ ಬೆಳಗಾಗುವದನ್ನೇ ಕಾದು ಅಂಗಡಿಗೆ ಧಾವಿಸುತ್ತಾನೆ . ಅಲ್ಲಿ ಆ ಹುಡುಗ ಅಂಗಡಿ ತೆರೆಯುವದನ್ನೇ ಕಾದುಕೊಂಡಿದ್ದಾನೆ... ಇವನು ಅಂಗಡಿ ತೆಗೆದವನೇ , ಸ್ಟೂಲನ್ನು ಇಟ್ಟುಕೊಂಡು ಅದನ್ನು ಹತ್ತಿ
....
....
....
....
ಅಲ್ಲಿರೋ ಅಪ್ಪನ ಫೋಟೋವನ್ನು ತೆಗೆದು ಕೊಟ್ಟು ಕಳಿಸಿಬಿಡುತ್ತಾನೆ .

----- ಇದು ಜಯಂತ ಕಾಯ್ಕಿಣಿಯವರ ಒಂದು ಅದ್ಭುತ ಕತೆ ... ಇಂಥ ಎಷ್ಟೋ ಕತೆಗಳನ್ನು ಬರೆದಿದ್ದಾರೆ ... ಹೀಗೆಲ್ಲ ಸಂಗ್ರಹವಾಗಿ ಹೇಳಲೂ ಬರುವದಿಲ್ಲ . ನೀವೇ ಓದಬೇಕು ....

  • ಕತೆ
  • ಕಾಯ್ಕಿಣಿ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 296 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 2, 2007 - 5:10pm — Sunil Jayaprakash

ಉ: ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

Sunil Jayaprakash's picture

ಮಿಶ್ರಿಕೋಟಿ, ಜಯಂತ ಕಾಯ್ಕಿಣಿಯವರ ಕತೆಗಳನ್ನು ಓದುವ ಉತ್ಸಾಹವನ್ನು ನನ್ನಲ್ಲಿ ತುಂಬಿದಿರಿ. ಸವಿಯೊದಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 2, 2007 - 5:24pm — shreekant.mishrikoti

ಉ: ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ ಅವರ ಶ್ರೇಷ್ಠ ಕತೆ

shreekant.mishrikoti's picture

ಕಾಯ್ಕಿಣಿ ಕತೆಗಳಲ್ಲಿ , ಗದ್ಯ ಕಾವ್ಯಮಯವಾಗಿದೆ ... ಅನ್ನೋದಕ್ಕಿಂತ ಹೆಚ್ಚು ...
ನಮ್ಮ ಬದುಕಿಗೆ ... ಮಾರ್ಗದರ್ಶನ ಸಿಗುತ್ತೆ

ಮೂರು ಕಥಾ ಸಂಕಲನ -
ತೂಫಾನ್ ಮೇಲ್ ,
ಜಯಂತ ಕಾಯ್ಕಿಣಿ ಕತೆಗಳು ,
ಬಣ್ಣದ ಕಾಲು

ಇಂಗ್ಲೀಷಲ್ಲಿ - Dots and Lines ಓದಿ ,
ಕನ್ನಡ ಬಾರದವರಿಗೆ ಶಿಫಾರ್ಸು ಮಾಡಿ ... ಉಡುಗೊರೆ ಕೊಡಲು ಒಳ್ಳೆಯ ಪುಸ್ತಕ

ಈ Dots and Lines ಬಗ್ಗೆ ಇನ್ನೊಮ್ಮೆ ಬರೆಯುವೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲವಣ ಅಂದ್ರೆ....
  • ಪರಿಶುದ್ಧ ಚರಿತ್ರ
  • ಲಕ್ಷ್ಮೀ.. ಬಾರಮ್ಮಾ..
  • ನಿಮ್ಮ ಸ್ವಭಾವ ಅರಿಯಬೇಕೆ?
  • ಸಿನಿಮಾ ಕತೆ ಕೇಳಿ- ಸತ್ಯಕಾಮ -೨
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 80 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator