ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಟೀವಿ , ಇಂಟರ್ನೆಟ್ಟು , ಕೇಬಲ್ಲು ....ಇವೆಲ್ಲ ನಮಗೆ ಬೇಕೇ ?
ಬೆಳಗಾದರೆ ನೂರು ನೂರೈವತ್ತು ಪುಟಗಳ ಎರಡು ಪತ್ರಿಕೆಗಳು ..ಓದುವದು ಇರಲಿ .. ಸುಮ್ಮನೆ ಪುಟ ತಿರುವಲೂ ಅರ್ಧ ಗಂಟೆ ಬೇಕು . ಮೊದಲೆಲ್ಲ ನಾವು ೮-೧೦ ಪುಟಗಳ ಕನ್ನಡ ಪತ್ರಿಕೆ ಒಂದನ್ನೇ ಓದಿಕೊಂಡು ಇರಲಿಲ್ಲವೇ ? ಈ ನೂರೈವತ್ತು ಪುಟಗಳಿಂದ ನಾನು ಜಾಣನಾಗುವದಾದರೂ ಸಾಧ್ಯವೇ ? (ಕಸ್ತೂರಿಯವರು ಅನರ್ಥಕೋಶದಲ್ಲಿ ಅಂದೇ ಬರೆದಿದ್ದಾರೆ - ಪತ್ರಿಕೆ - ದಿನವೂ ನಮ್ಮ ಮನೆ ಬಾಗಿಲಿಗೆ ತಂದಿಡುವ ಜಗತ್ತಿನ ಕಸದ ಬುಟ್ಟಿ ಅಂತ !)
ಇನ್ನು ಟೀವಿ ಸೆಟ್- ಟಾಪ್ ಬಾಕ್ಸಿನ ಮೂಲಕ ಎರಡು ನೂರು ಚಾನೆಲ್ಲುಗಳು . ಇಪ್ಪತ್ತು ಇಂಗ್ಲೀಷ್ ಸಿನೇಮಾ ವಾಹಿನಿಗಳು ( ಮೂರರಲ್ಲಿ ದೊಡ್ಡೋರ ಸಿನೆಮಾ ನೋಡಬಹುದು - ಎಲ್ರೂ ಪೂಜೆ ಪುನಸ್ಕಾರ ಮಾಡೋ ಹೊತ್ತಲ್ಲಿ! ) , ಹತ್ತು ಹಿಂದಿ ಸಿನೇಮಾ ವಾಹಿನಿಗಳು , ಹತ್ತು ಹಿಂದಿ ಧಾರಾವಾಹಿ ವಾಹಿನಿಗಳು , ಅಮೇರಿಕಾ , ಆಸ್ಟ್ರೇಲಿಯಾ, ರಶಿಯಾ , ಅರಬ್ ದೇಶ ಸೇರಿದಂತೆ ೧೦ ಇಂಗ್ಲೀಷ್ ವಾಹಿನಿಗಳು ......ನಾಲ್ಕು ಕನ್ನಡ ......
ರಿಲಯನ್ಸ್ ನವರು ಎರಡುನೂರು ರೂಪಾಯಿಗೆ ಒಂದು ಸಾವಿರ ವಾಹಿನಿಗಳನ್ನು ಕೊದಲಿದ್ದಾರಂತೆ ! ಒಂದು ಚಾನೆಲ್ ಮೇಲೆ ಒಂದು ನಿಮಿಷ ಖರ್ಚು ಮಾಡಿದರೂ ... ಹತ್ತು ಗಂಟೆ .....
ಒಂದು ಕಾಲಕ್ಕೆ ಒಂದೇ ಚಾನೆಲ್ಲು .. ( ಅದರ ಹಿಂದೆ ಅದೂ ಇರಲಿಲ್ಲ ! ) ಆಗ ನೋಡಿದಷ್ಟೂ ಟೀವೀ ಈಗ ನೋಡ್ತಾ ಇಲ್ಲ ... ಆಗಿನಷ್ಟೂ ಸಂತೋಷವೂ ಆಗ್ತಾ ಇಲ್ಲ ...
ಇನ್ನು ಹತ್ತು ಎಫ್ ಎಂ ರೇಡಿಯೋ ವಾಹಿನಿಗಳು .
ಈಗಾಗಲೇ ಕಂಪ್ಯೂಟರ್ ಮನೆಗೆ ಬಂದಿದ್ದು ಅನ್ಲ್ಲಿಮಿಟೆಡ್ ಬ್ರಾಡ್ ಬ್ಯಾಂಡ್ ಮನೆಗೆ ಬರಲಿದೆ !!
ಇದೆಲ್ಲದರಿಂದ ನನಗೇನಾದರೂ ಹೆಚ್ಚು ಜಾಣತನ / ಮನರಂಜನೆ ಸಿಗುತ್ತಿದೆಯೇ ?
ನಾನು ಅವನ್ನೆಲ್ಲ ಬಳಸಿಕೊಳ್ತಿದೀನೋ ಅಥವಾ ಅವು ನನ್ನನ್ನ ?
ಭೋಗಾ ನ ಭುಕ್ತಾ: ವಯಮೇವ ಭುಕ್ತಾ:
ಅನ್ನಾ: ನ ಜೀರ್ಣಾ: , ವಯಮೇವ ಜೀರ್ಣಾ:
ಕಾಲೋ ನ ಯಾತ: ವಯಮೇವ ಯಾತ: ... ( ಮುಂದಿನ ಸಾಲು ಗೊತ್ತಿಲ್ಲ ; ನಿಮಗೆ ಗೊತ್ತಿದ್ದರೆ ಹೇಳಿ ) . ನೆನಪಿಗೆ ಬರುವದು.
ನನ್ನೊಬ್ಬ ಗೆಳೆಯ ಇಲ್ಲಿದ್ದ ; ಅವನು ಮನೆಯಲ್ಲಿ ಕೇಬಲ್ ಕನ್ನೆಕ್ಷನ್ ಇರಲಿ , ಟಿವಿ ಕೂಡ ಇಟ್ಟುಕೊಂಡಿರಲಿಲ್ಲ .
’ಸಾಫ್ಟ್ ವೇರ್ ಬಿಡಿ , ಹಾರ್ಡ್ ವೇರ್ ಕೂಡ ಇಲ್ಲ’ ಅಂತ ನಗ್ತಾ ಹೇಳ್ತಿದ್ದ .
’ಮತ್ತೆ ಮನೇಲಿ ಏನ್ಮಾಡ್ತೀಯಾ’ ಅಂದ್ರೆ ...’ಸೂರು ನೋಡ್ಕೊಂಡು ಮಕ್ಕೋತೀನಿ ’ ಅಂತಿದ್ದ
ನನಗೂ ಅದೇ ಸರಿ ಅನಿಸ್ತಿದೆ ....
ಮನೆ ಶಾಂತವಾಗಿಟ್ಟುಕೊಂಡು , ಮನಸ್ಸನ್ನು ಖಾಲಿ ನೀಲಿ ಆಕಾಶದ ಹಾಗೆ ಖಾಲಿ ಆಗಿಟ್ಕೊಂಡು ದೂರದಲ್ಲಿನ ವಾಹನದ ಸದ್ದು ದ , ಎಲ್ಲೋ ಹಕ್ಕಿಯ ಚಿಲಿಪಿಲಿ , ಕೇಳ್ತಾ ಇರೋದು ಎಷ್ಟು ಸುಖಾ ಅನ್ನಿಸ್ತಿದೆ .

- shreekant.mishrikoti ರವರ ಬ್ಲಾಗ್
- Login or register to post comments
- 292 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಟೀವಿ , ಇಂಟರ್ನೆಟ್ಟು , ಕೇಬಲ್ಲು ....ಇವೆಲ್ಲ ನಮಗೆ ಬೇಕೇ ?
ಸಾರ್...
ಹಿಂದೆ ಎಳೆತನದಲ್ಲಿ...
ಈ ವಾರದ ಬಾಲಮಂಗಳು ಮುಗಿಸಿ, ಮುಂದಿನ ಬಾಲಮಂಗಳಕ್ಕಾಗಿ ಹಾತೊರೆಯುತ್ತಿದ್ದ ಕಾಲವಿತ್ತು..
ಆದ್ರೆ ಮನಗೆ ಯಾವಾಗ ಇಪ್ಪತ್ತುನಾಲ್ಕು ಗಂಟೆಯೂ ಬರುವ ಕಾರ್ಟುನ್ ನೆಟ್‌ವರ್ಕು ಬಂತೋ, ನಮ್ಮ ಮನೆಯ ಹೈಕಳ ಬಾಲಮಂಗಳ, ಅಂಬಲಿಮಾಮಗಳನ್‌ನು ಮೂಸುವಿದೂ ಇಲ್ಲ.. ನಾನೇನಾರ.. "ರೋ, ವಸಿ ಬಾಲಮಂಗಳವೋ, ಚಂಪಕೋ, ತಿಂಗಳಿಗೊಮ್ಮಾದ್ರು ಓದ್ಕಳಿ" ಅಂದ್ರೆ ಅವು "ಹೋಗ್ಲೋ, ತಾತ" ಅಂತಾರೆ!
