ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
ಈ ವಾರದ ಸುಧಾದಲ್ಲಿ ಡಾ.ಕೆ. ಎನ್. ಗಣೇಶಯ್ಯರವರಿಂದ ಒಂದು ಹೊಸ ಧಾರಾವಾಹಿ ಆರಂಭವಾಗಿದೆ. ವಿಜಯನಗರದ ಪತನಾನಂತರ ಅಲ್ಲಿನ ಸಂಪತ್ತು ಏನಾಯಿತು ? ಯಾರಿಗೆ ದಕ್ಕಿತು? ಅಥವಾ ಅಲ್ಲೇ ಇನ್ನೂ ಆಡಗಿದೆಯೋ ? ಎಂಬ ಬಗ್ಗೆ ಅನೇಕ ಐತಿಹಾಸಿಕ ಅಂಶಗಳನ್ನು ಆಧರಿಸಿ 'ಕರಿಸಿರಿಯಾನ' ಎಂಬ ಕುತೂಹಲಕರ ರಹಸ್ಯಮಯ ಕತೆಯನ್ನು ಹೆಣೆದಿದ್ದಾರೆ. ಓದಲು ಮರೆಯದಿರಿ.
( ಕಳೆದ ವರುಷವಷ್ಟೇ ಅವರ ಕನಕಮುಸುಕು ಧಾರಾವಾಹಿ ಓದಿದ್ದು ನಿಮಗೆ ನೆನಪಿರಬಹುದು. ಅದರಲ್ಲಿ ಮೌರ್ಯ ಚಂದ್ರಗುಪ್ತನು ಗೋವಿನ ಜೋಳದ ತೆನೆಯ ರೂಪದಲ್ಲಿ ತಂದಿರಬಹುದಾದ ಅಪಾರ ಬಂಗಾರದ ಕುರಿತಾಗಿತ್ತು) ಇತ್ತೀಚೆಗೇ ಸುಧಾದಲ್ಲಿ ಹೊಯ್ಸಳರ ಕೆತ್ತನೆಗಳಲ್ಲಿ ಗೋವಿನ ಮುಖ ಕಂಡು ಬರುವುದರ ಹಿನ್ನೆಲೆ ಕುರಿತೂ ಒಂದು ಕಥೆ ಬರೆದಿದ್ದರು.

- shreekant.mishrikoti ರವರ ಬ್ಲಾಗ್
- Login or register to post comments
- 600 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
ನಿಮ್ಮ ಹಳೆಯ ಪೋಸ್ಟ್ ಅನ್ನು ಇವತ್ತು ನೋಡ್ತಿದ್ದೇನೆ. ಸಮಯ ಸಿಕ್ಕಾಗ, ಈ ಎರಡು ಪುಸ್ತಕಗಳ (ಅಥವಾ ಧಾರಾವಾಹಿಗಳ
) ಲ್ಲಿ ಗಣೇಶಯ್ಯನವರು ಏನು ಹೇಳ್ತಾರೆ ಅಂತ ಸ್ಬಲ್ಪ ಹೇಳಿ.
-ಹಂಸಾನಂದಿ
ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
ಸೊಲ್ಪದರಲ್ಲಿ ಹೇಳುಕ್ಕೆ ಆಗುಲ್ಲ ;
ಗಣೇಶಯ್ಯನವರ ಅನೇಕ ಕುತೂಲಕಾರಿ ರಹಸ್ಯಮಯ ಕತೆಗಳು ಈಗಾಗಲೇ ಸುಧಾ ವಾರಪತ್ರಿಕೆ ,ವಿಶೇಷಾಂಕ , ಪ್ರಜಾವಾಣಿ ವಿಶೇಷಾಂಕಗಳಲ್ಲಿ ಬಂದಿವೆ . ಇತಿಹಾಸ , ದಂತಕತೆ , ಪತ್ತೇದಾರಿ , ಸಾಹಸಗಳ ರಮ್ಯ ಸಂಯೋಜನೆ ಅಲ್ಲಿರುತ್ತದೆ ,
ಒಂದು ಸಂಕಲನವೂ ಪೇಟೆಗೆ ಬಂದಿದೆ .
ಅದರ ಬಗ್ಗೆ ವಿಮರ್ಶಕರ ಅಭಿಪ್ರಾಯ ಏನೇ ಇರಲಿ . ಒಂದು ಸಲ ಓದಲೇಬೇಕು .
ಉದಾಹರಣೆಗೆ , ತಿರುಪತಿಯ ದೇವರು ನಿಜಕ್ಕೂ ಯಾರು ? ಅಲ್ಲಿ ನಡೆದಿದೆ ಎಂದು ಹೇಳುವ ಪವಾಡದ ನಿಜಸ್ವರೂಪ ಏನು ?
ಅವನಿಗೂ ವಿಜಯನಗರಕ್ಕೂ ಏನು ಸಂಬಂಧ ? ರಾಜಕೀಯವೋ ಹಣದ ಸಂರಕ್ಷಣೆಯೋ ?
ವಿಜಯನಗರದ ಐಶ್ವರ್ಯ ಬಂದದ್ದು ಎಲ್ಲಿಂದ ? ಅವರು ಅದನ್ನು ಇಟ್ಟದ್ದು ಎಲ್ಲಿ ? ಆ ನಿಧಿಯ ಹುಡುಕಾಟ , ಅದರಲ್ಲಿ ಆಸಕ್ತಿ ಹೊಂದಿರುವವರಾರು ? ಇತ್ಯಾದಿ ’ಕರಿಸಿರಿಯಾನ’ದಲ್ಲಿದೆ .
ಈ ತರಹ ಅನೇಕ ಕತೆ/ಕಾದಂಬರಿ ಬರೆದಿದ್ದಾರೆ , ಎಲ್ಲದರಲ್ಲೂ
ಸಾಕಷ್ಟು ಶಾಸನಗಳು , ನಿಜಸಂಗತಿಗಳು , ಉಲ್ಲೇಖಗಳನ್ನೂ ಒದಗಿಸುತ್ತಾರೆ ,
ವಾಸ್ತವ ಮತ್ತು ಕಲ್ಪನೆಯ ಹಿತಮಿತ ಸಂಯೋಜನೆ ಅವರ ಬರಹದಲ್ಲಿರುತ್ತದೆ .
ಪುಸ್ತಕ ಹುಡುಕಿ ಕೊಂಡು ಓದಿ , ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ , ಎಲ್ಲಾದರೂ ಕತೆಗಳನ್ನು ಓದುವಾಗ ಅನುಕೂಲ ಆಗುತ್ತದೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
ಈ ವಾರ ಹೊಸ ಕುತೂಹಲಕಾರಿ ಧಾರಾವಾನಿ "ಅಂತ ಈಗ" ಆರಂಭ(ಅಂತ ನೆನಪಿದೆಯೇ?)
http://www.sudhaezine.com/svww_index1.php
*ಅಶೋಕ್