ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಅರಾಸೇ ಅವರು ಬರೆದ ಹಾಸ್ಯ ಲೇಖನವೊಂದು ಅದೇಕೋ ನೆನಪಾಯಿತು .
ಕೇಳಿ ಎಂಜಾಯ್ ಮಾಡಿ!
ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ? ಎಂಬ ಕುರಿತು ಮಾಮೂಲಿನಂತೆ ಪ್ರಶ್ನಾವಳಿಗಳನ್ನು ಅನೇಕರಿಗೆ ಕಳಿಸಿದಾಗ
ಒಬ್ಬನ ಪ್ರತಿಕ್ರಿಯೆ
- ನವ್ಯ ಸಾಹಿತ್ಯದಲ್ಲಿ ಇಷ್ಟೇ ಏಕೆ ಕಾಮ?
![]()
ಇನ್ನೊಬ್ಬನ ಪ್ರತಿಕ್ರಿಯೆ
- ನೀವು ಹಳಗನ್ನಡ ಕಾವ್ಯ ಸರಿಯಾಗಿ ಓದಿಕೊಂಡಿಲ್ಲ ಅಂತ ಕಾಣ್ತದೆ !
:)

- shreekant.mishrikoti ರವರ ಬ್ಲಾಗ್
- Login or register to post comments
- 417 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಯಪ್ಪಾ, ಮಿಶ್ರಿಕೋಟಿಗಳೇ ನಕ್ಕು ನಕ್ಕೂ ಸಾಕಾಯಿತು. ಪ್ರಶ್ನೆ ಕೇಳಿದವರು ಸಖತ್ ಜಾಣರು.
೧. ಇಷ್ಟೇ ಏಕೆ ? ಇರೋದು ಏನೇನೂ ಸಾಲದು, ಇನ್ನೂ ಹೆಚ್ಚಬೇಕು ಅಂತ ಅವರ ಇಂಗಿತ ಇತ್ತು ಅಂತ ಕಾಣತ್ತೆ.
೨. ಉತ್ತರ ಕೊಟ್ಟವನಿಗೆ ಹಳೆಗನ್ನಡದಲ್ಲಿಯೇ ನವ್ಯಕ್ಕಿಂತ ಭಯಾನಕವಾದದ್ದು ಇದೆ ಅಂತ ಅನ್ನಿಸಿರಬೇಕು.
ಒಟ್ಟಿನಲ್ಲಿ ನನಗೆ ಎರಡೆರಡು ಸಲ ಸಖತ್ ನಗು ಬಂತು.
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಜೋಕ್ ಬಿಡಿಸಬೇಡ ಮಾರಾಯ!! .. ರುಚಿ (pun
) ಕೆಟ್ಟು ಹೋಗುತ್ತೆ 
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಅಯ್ಯಯ್ಯೋ, ಹೌದಲ್ಲಾ, ಶ್ರೀನಿಧಿ. ಇದೊಂದು ಬಾರಿ ಮನ್ನಿಸಪ್ಪಾ. ಇದನ್ನು ಯೋಚಿಸಿಯೇ ಇರಲಿಲ್ಲ.
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಹೀಗೆ ನನಗೆ ಹಿಂದೊಮ್ಮೆ ಆಗಿತ್ತು..
ನಾನು ಸಕ್ಕದ ಮೊದಲ ನುಡಿ ಓದುತ್ತಿದ್ದೆ ಪಿ.ಯು.ಸಿ ಯಲ್ಲಿ(ವಸತಿ ಸಾಲೆ). ಕನ್ನಡದವರಿಗೆ ಗಿರೀಶ ಕಾರ್ನಾಡರ ಯಾಯಾತಿ ಇತ್ತು. ಅದನ್ನು ಓದಿದ ಒಬ್ಬ ಸಕ್ಕದ ನಂನ ಗೆಳೆಯ ಅದರಲ್ಲಿ ಒಂದು ಸಾಲು "ಮೊಲೆಯ ಮೇಲೆ ಮಗನ ಹಲ್ಗುರುತು"(ಹೀಗೆ ಊ
ಸುನಿಲಾರ್ಪಣಮಸ್ತು
) ತೋರಿಸಿ ಏನಿದು ಕನ್ನಡ ಅಂದರೆ ಹೀಗೆ ಅಂದ.
ನನಗೆ ತುಸು ಅಚ್ಚರಿ ಆಯ್ತು. ಸಕ್ಕದ ಕಲಿವಾತನಾಗಿ ಈತ ಹೀಗೆ ಹೇಳಿದ್ದು ನನಗೆ ನಗೆ ತಂತು. ಅವನಿಗೆ ನಂಮ "ಪ್ರಥಮಾನುರಾಗ"ದ ಕೆಲವು ಶ್ಲೋಕಗಳನ್ನು ಬಿಡಿಸಲು ಹೇಳಿ ಒಂದು ಒರೆಗಂಟು ಕೊಟ್ಟೆ. ಬಳಿಕ ತುಸು ಹೊತ್ತು ಬಿಟ್ಟು ಬಂದು ನಂನ ಬಳಿ ಹಿ ಹಿ ಎಂದು ಹಲ್ಲುಕಿರಿದು ಕಿಸಿದ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಲೋಓಓಓಓಓಓಓಓಓಓಓಓಓಓಓಓಓಓಓ, ಮಾಯ್ಸ ಏನೋ ಇದು. ನನ್ನ ಮಾನ ಹರಾಜು ಹಾಕ್ತಾ ಇದ್ದೀಯಲ್ಲಪ್ಪಾ:grrrr:
:) 

ತಿಳಿಯದವರಿಗೆ ಊ = "ಹೀಗೆ ಏನೇನೋ" ಅಂತ ಓದಿಕೊಳ್ಳೀಪ್ಪಾ....ಉ/ಊ ಎಂಬುದರ ಹಿಂದೆ randomness ಭಾವ ಇದೆ ಅಂತ ಹಿಂದೆ, "ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ" ಎಂಬಲ್ಲಿ ಹೇಳಿದ್ದೆ. ಅದಕ್ಕೆ ಮಹೇಶ ನನ್ನನ್ನು ನೆನಪಿಸಿಕೊಂಡಿದ್ದಾನೆ ಅನ್ನಿಸುತ್ತೆ. ಅದರೆ ಮೇಲಿನ ಕಾಮೆಂಟಿನ ಮಿಕ್ಕುಳಿದ ವಿಷಯಗಳಿಗೂ ನನಗೂ ಯಾವುದೇ ನಂಟಿಲ್ಲ.....ನನ್ನನ್ನು ನೆನಪಿಸಿಕೊಳ್ಳುವ ಭರದಲ್ಲಿ ಮಹೇಶ ಹಿಂದಿನ ವಾಕ್ಯದೊಡನೆ ನನ್ನನ್ನು ಜೋಡಿಸಿಬಿಟ್ಟಿದ್ದಾನೆ.....
ಈಗ ನನ್ನ ಪಾಡು ಹೇಗಾಗಿದೆಯೆಂದರೆ, "ಈ ದೇಹದಿಂದ ದೂರನಾದೆ ಏಕೆ ಆತ್ಮನೇ ? ಈ ಸಾವು ನ್ಯಾಯವೇ" ಹಾಡಿನ ಧಾಟಿಯಲ್ಲಿ, "ಆಧಾರ ನೀನೆಂದು ಈ ಲೋಕ ನಂಬಿದೆ. ಪರಮೇಶ, ಪ್ರಾಯಕಾಂತ ಮರಳಿ ತಾರೆಯಾ, ಮರಳಿ ತಾರೆಯಾ, ಈ ದೇಹದಿಂದ ದೂರನಾದೆ ಏಕೆ ಮಾನವೇ ? ಈ ಹಾನಿ ನ್ಯಾಯವೇ ?"
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಶಾಲಾ ಮಟ್ಟದಲ್ಲೇ ಲೈಂಗಿಕ ಶಿಕ್ಷಣ ನೀಡಬೇಕೆಂಬ ವಾದ ಬಲವಾಗುತ್ತಿರುವ ಈ ಹೊತ್ತಿನಲ್ಲಿ ಶೃಂಗಾರ ಸಂಬಂಧೀ ಚರ್ಚೆಗೇಕೆ ನಾಚಿಕೆ. ಕೇಳಿಯ ಕುರಿತು ಕೇಳುವುದು, ಹೇಳುವುದು ತಪ್ಪಲ್ಲ ಬಿಡಿ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಅಯ್ಯೋ, ಇಸ್ಮಾಯಿಲ್ ನೀವು ಹಳ್ಳಕ್ಕೆ ಬಿದ್ರಿ. ಈ ಬಾರಿ ನಾನು ಶ್ರೀನಿಧಿ ನೀಡಿದ ಎಚ್ಚರಿಕೆಯಿಂದಾಗಿ ನಾನು ಖಂಡಿತವಾಗಿಯೂ ಜೋಕನ್ನು ಬಿಡಿಸುವುದಿಲ್ಲ. ಒಟ್ಟಿನಲ್ಲಿ ನನಗಂತೂ ಸಖತ್ ಮಜಾ ಬಂತು. ಸುನಿಲಂಗೆ ಸಂತೋಷ ಆಯ್ತು (ಮುಗಾಂಬೋಗೆ ಮಜಾ ಬಂತು ತರ).
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಊನಪ್ಪ ನಿಂದು ಸುನಿಲ.
ಊ ಉದಕ್ಕೆಲ್ಲ grr ಅಂತೀಯಲ್ಲ. ಹಿಂದೆ ನೀನೇ ನಂನ conceptualizationಅಂನು ಉವರು ಉಂದು ಉದಕ್ಕೂ ಬಳಸಿಲ್ಲ ಎಂದು ಉಮ್ಮೆಂದುಕೊಂಡಿದ್ದೆ.
ಈಗ ನಾನು ಬಳಸಿ ನಿನಗೆ ನಂನಿ ಹೇಳಿದರೂ, ಊ ಉವಕ್ಕೋ ಬಳಸಿ ನಂನ ಮಾನವಂನು ಊ ಓಸುಗರಕ್ಕೆ ಉವರ ಮುಂದೆ ಹರಾಜ ಹಾಕ್ತೀಯ ಅಂತೀಯ.
ನಾನು ಊ ಮಾಡಲಿ!!!
ಉಷ್ಟು ನಂನಿ ನಿಂಗೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ನವ್ಯ ಕಾವ್ಯ ಇರಲಿ, ಗದ್ಯಗಳಲ್ಲೂ ತುಂಬಾ ಕಾಮ ಇವೆ.
ಅಂದ ಹಾಗೆ ನನ್ನ signature (ಕೆಳಗಡೆ) ಯಲ್ಲೂ ಕಾಮ ಇದೆ
[ಬೇರೆ ಜೋಕ್]
ಮದುವೆ full-stop ಆದರೆ ಕಾಮ comma ??
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಸೂಪರ್ರಾಗಿದೆ ಕಣಪ್ಪಾ ಶ್ರೀನಿಧಿ. ನಿನ್ನ ಕಾಮೆಂಟ್ ನೋಡಿದಾಗ ನನಗೆ ಸಿಲ್ಲಿ ಲಲ್ಲಿ ನೆನಪಾಯಿತು. ಸಿಲ್ಲಿಯ ಸ್ಟೈಲಲ್ಲಿ, ನನಗೊಂದು ಟೈಟಲ್ ನೆನಪಾಗ್ತಾ ಇದೆ..
ಸಿಲ್ಲಿ : ಕಾಮ ಅಂತ comma ಎಳೆದ ಸೀನ <ಕಾಮಾsssssss> ಸೀನನೂ ಹಾಕ್ದ commaದ ಮೇಲೆ comma
ಎಲ್ಲರೂ : ಸಿಲ್ಲಿಈಈಈಈಈಈಈಈಈ.
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ಆ!
(ಸಂಭಾಷಣೆ ಮುಗಿದ ಮೇಲೆ ಎಲ್ಲರೂ ಆ! ಎಂದು stunಆಗಿ ನಿಲ್ಲಬೇಕು. ಇದು ಸಿಲ್ಲಿ-ಲಲ್ಲಿಯ ಅಲಿಖಿತ ನಿಯಮ)
ಉ: ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?
ರಾಮ ರಾಮ ಅನ್ನೋರು ಕಾಮ ಕಾಮ ಅಂತೀರಲ್ಲ, ರಾಮ ರಾಮ!!
ಬೇಟೆಗಾರನಾ ಹೃದಯಶೂನ್ಯನ ಹೋಗೆ ಬೇಟಗಾರನ ಹೃದಯಶೂನ್ಯನ ಆಯ್ತು
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !