ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
'ಸಿರಿಗನ್ನಡಂ ಗೆಲ್ಗೆ' ಯಲ್ಲಿ ತಮಿಳು ಪ್ರಭಾವ?
ಮೇ ೨೦೦೬ ತುಷಾರ ಹಾಸ್ಯ ವಿಶೇಷಾ?ಕವಾಗಿ ಬಂದಿದೆ. ಅದರೆ ಅದರಲ್ಲಿ ಹಾಸ್ಯವನ್ನು ಹುಡುಕಬೇಕು! ನನಗೆ ಎರಡೇ ಎರಡು ಪುಟ್ಟ ನಗೆಹನಿಗಳು ಸಿಕ್ಕವು!!
ಅದರಲ್ಲಿ ತಮಿಳು ಸಾಹಿತಿ ಅಖಿಲನ್ ಅವರ ಒಂದು ಕಥೆ ಬಂದಿದೆ. ಜತೆಗಿರುವ ತಮಿಳು ಸಾಹಿತ್ಯದ ಕುರಿತಾದ ಚಿಕ್ಕ ಪರಿಚಯಾತ್ಮಕ ಲೇಖನದಲ್ಲಿ ಹೀಗಿದೆ-
' ತಮಿಳು ಸಾಹಿತ್ಯದಿಂದ ಪ್ರಭಾವಿತರಾದ ಬಿ. ಎಂ. ಶ್ರೀ. ಅವರು ತಮ್ಮ ವಿದ್ಯಾರ್ಥಿಗಳಿಗೆ ಪ್ರಾಚೀನ ತಮಿಳು ಕಾವ್ಯಗಳನ್ನು ಓದಿ ವಿವರಿಸುತ್ತಿದ್ದರಂತೆ. ಅವರ 'ಸಿರಿಗನ್ನಡಂ ಬಾಳ್ಗೆ, ಗೆಲ್ಗೆ' ಎಂಬ ಉದ್ಘೋಷಣೆಯಲ್ಲೂ ತಮಿಳಿನ ಪ್ರಭಾವ ಎದ್ದು ಕಾಣುತ್ತದೆ. '

- shreekant.mishrikoti ರವರ ಬ್ಲಾಗ್
- Login or register to post comments
- 982 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬಿ. ಎಂ. ಶ್ರೀ.
ಇಲ್ಲಿ ನನ್ನದೊಂದು ಸಂದೇಹ
ಬಿ. ಎಂ. ಶ್ರೀ. ಯವರು ೧೦೦% ಕನ್ನಡಿಗರು. ಮತ್ತು ಅವರು ಮದರಾಸಿನಲ್ಲಿ ಇಂಗ್ಲೀಷ್- ಪದವಿ ಓದಿದ್ದಲ್ಲವೆ? ಅವರು ಆಂಗ್ಲಪ್ರಾಚಾರ್ಯರು ತಾನೆ?
ಹೀಗಿರುವಾಗ ಅವರು ತಮಿಳು ಸಾಹಿತ್ಯವನ್ನು ತರಗತಿಗಳಲ್ಲಿ ಯಾವಾಗಲು ವಿವರಿಸುತ್ತಿದ್ದರೆಂಬುದು, ನಾನಂತು ನಂಬಲಾರೆ.
ಸರಿ 'ಸಿರಿಗನ್ನಡಂ ಬಾಳ್ಗೆ, ಗೆಲ್ಗೆ' ಈ ವಾಕ್ಯವನ್ನು ಪರಿಶೀಲಿಸೋಣ. ಇಲ್ಲಿರುವ ಎಲ್ಲ ೪ ಪದಗಳು ಕನ್ನಡದ್ದೆ. ಯಾವುದು ತಮಿಳು? ಯಾವುದು ತಮಿಳು ಪ್ರಭಾವ?
ನಾನು ಅಂತರ್ಬಲೆಯ ಹಲವು ತಾಣಗಳಲ್ಲಿ, ಕನ್ನಡವು ತಮಿಳಿನಿಂದ ಬಂದದ್ದು ಎಂದು ಪ್ರಕಾಶಿಸಿರುವುದನ್ನು ನೋಡಿದ್ದೇನೆ. ಹಾಗೆಂದು ಅವು ನಂಬಲು ಸಾಧ್ಯವೆ?
ಇವೆಲ್ಲ ಶಾಸ್ತ್ರೀಯಭಾಷೆಪಟ್ಟದ ಹುನ್ನಾರವಷ್ಟೆ!!!
ಉ: ಬಿ. ಎಂ. ಶ್ರೀ.
ಕನ್ನಡ ತಮಿೞನಷ್ಟೆ ಹೞೆಯದೆನ್ನಬಹುದು. ಆದರೆ ತಮಿೞಿಗಿಂತ ಈಚಿನ ಭಾಷೆ ಎಂದು ನಾನು ನಂಬಲಾಱೆ. ತಮಿೞಿನಲ್ಲಿಲ್ಲದ ಸಕಾರ ಕನ್ನಡದಲ್ಲಿ ಯಾವಾಗಿನಿಂದಲೋ ಕಾಣಬರುತ್ತದೆ. ಉದಾಹರಣೆಗೆ ತಮಿೞಿನ ’ಉಯಿರ್’, ’ಪೆಯರ್’ಗಳಿಗೆ ಕನ್ನಡದ ಜ್ಞಾತಿ ಶಬ್ದಗಳು ಕ್ರಮವಾಗಿ ಉಸಿರ್ ಹಾಗೂ ಪೆಸರ್(ಹೆಸರು). ಹಾಗಾಗಿ ಹೞತನದಲ್ಲಿ ಕನ್ನಡ ತಮಿೞಿಗೆ ಸಮಸಮವಾಗಿ ನಿಲ್ಲುತ್ತದೆ. ತಮಿೞಿಗಿಂತ ಹೞೆಯದೆನ್ನಲು ಪುರಾವೆ ಸಿಗದಿದ್ದರೂ ತಮಿೞಿನಷ್ಟೆ ಕನ್ನಡ ಹೞೆಯ ಭಾಷೆ ಎನ್ನಲಡ್ಡಿಯಿಲ್ಲ.
ಉ: ಬಿ. ಎಂ. ಶ್ರೀ.
http://www.totalkannada.com/Kannada%20is%20as%20old%20as%20Tamil.asp
ಹಂಪನರ ಆ ಬರಹ ಕಾಣಿರಿ.
=====================================
ಮಾಯ್ಸ!
ಉ: ಬಿ. ಎಂ. ಶ್ರೀ.
ಕನ್ನಡಕಂದರೆ,
ನಿಮ್ಮ ವಾದ ಸರಿಯಾಗಿದೆ. ಒಪ್ಪತಕ್ಕಂತ ಮಾತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಬಿ. ಎಂ. ಶ್ರೀ.
ಒಮ್ಮೊಮ್ಮೆ ಮಹೇಶ್‍ರವರು ಸಿಟ್ಟಾದರೂ ಕೆಲವು ವಿಷಯಗಳಲ್ಲಿ ಸರಿಯೆನಿಸಿದರೆ ನಮ್ಮೊಡನೆ ಒಡಂಬಡುತ್ತಾರೆ.
ಧನ್ಯವಾದಗಳು.
ಉ: ಬಿ. ಎಂ. ಶ್ರೀ.
ಸರಿಯೆನ್ನಿಸಿದಕ್ಕೆ ಒಡಂಬಡುವುದೇ ಕನ್ನಡಿಗರ ಗುಣ.
ದೋಶವನ್ನು ದೋಶವೆಂದು ಕಡುನುಡಿಯುವವರು, ಸರಿಯನ್ನ ಸರಿಯಂದು ಒಡಂಬಡುವವರು.. ಕವಿರಾಜಮಾರ್ಗದ ಮಾತಲ್ಲವೇ!!
=====================================
ಮಾಯ್ಸ!