ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಒಳ್ಳೆಯ ವ್ಯಂಗ್ಯಚಿತ್ರಗಳು
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ , ಒಳ್ಳೆಯ ವ್ಯಂಗಚಿತ್ರಗಳ ಸಮೃದ್ಧಿಯಿತ್ತು. ಆಗ ಸುಧಾ , ಮಯೂರ , ತುಷಾರಗಳಲ್ಲಿ ಕೆ. ಆರ್. ಸ್ವಾಮಿ ,ನಾಡಿಗ್ , ಶ್ರೀಧರ್ , ರಾವ್ ಬೈಲ್ ಮುಂತಾದವರ ಶ್ರೇಷ್ಠ ವ್ಯಂಗ್ಯಚಿತ್ರಗಳು ಕಾಣಸಿಗುತ್ತಿದ್ದವು . ಪ್ರಜಾವಾಣಿಯಲ್ಲಿ ಆರ್.ಕೆ. ಮೂರ್ತಿಯವರ ರಾಜಕೀಯ ವ್ಯಂಗ್ಯಚಿತ್ರಗಳಿರುತ್ತಿದ್ದವು . ಈಗ ಅವರೆಲ್ಲ ಎಲ್ಲಿ ಹೋದರೋ ? ಹೊಸಬರು ಏಕೆ ಬರಲಿಲ್ಲವೋ ? ಈಗ ವ್ಯಂಗ್ಯಚಿತ್ರಗಳಲ್ಲಿ ಸಾಧಾರಣ ಎಂಬ ಮಟ್ಟದ್ದೂ ಕಾಣುವದಿಲ್ಲ.
ನಮ್ಮ ಮನೆಯಲ್ಲಿ ವರ್ಷಗಟ್ಟಲೆಯ ಮಯೂರ / ತುಷಾರ ಸಂಚಿಕೆಗಳಿದ್ದವು . ಆದರೆ ಒಂದು ಸಲ ನಾನು ಬೇರೆ ಊರಿಗೆ ಹೋದಾಗ ಎಲ್ಲವನ್ನೂ ಮನೆಯವರು ರದ್ದಿ ಹಾಕಿಬಿಟ್ಟಿದ್ದರು. ಒಂದು ಥರ ನನಗೆ 'ತುಂಬಲಾಗದ ನಷ್ಟ' ಉಂಟಾಯಿತು.
ಆದರೆ ನಾಡಿಗರ ವ್ಯಂಗ್ಯಚಿತ್ರಗಳ ಸಂಗ್ರಹವೊಂದು 'ನಾಡಿಗರ ನಗೆ ಕಾರಂಜಿ' ಎಂಬ ಹೆಸರಿನಲ್ಲಿ ಮಾರಾಟಕ್ಕೆ ಲಭ್ಯವಿದೆ . ಚೆನ್ನಾಗಿದೆ. ನೀವೂ ಕೊಂಡು ಸಂತಸಪಡಿರಿ.
ಇಂಗ್ಲೀಷಿನಲ್ಲಿ ಆರ್.ಕೆ.ಲಕ್ಷ್ಮಣರ ವ್ಯಂಗ್ಯಚಿತ್ರಗಳ ಬಹಳಷ್ಟು ಪುಸ್ತಕಗಳು ಲಭ್ಯ ಇವೆ.

- shreekant.mishrikoti ರವರ ಬ್ಲಾಗ್
- Login or register to post comments
- 773 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ವ್ಯಂಗ್ಯಚಿತ್ರಗಳು
ಹರಿಣಿ, ಜನಾರ್ಧನ ಸ್ವಾಮಿಯವರು ಬರೆದಿರುವ ವ್ಯಂಗಚಿತ್ರಗಳನ್ನು ನೋಡಿದ್ದೀರ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಶ್ರೀ. ನಾಡಿಗರ ವ್ಯಂಗ್ಯ ಚಿತ್ರಗಳು !
ಶ್ರೀ. ನಾಡಿಗರ ವ್ಯಂಗ್ಯ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ನಾವು ಎಲ್ಲಾ ಚಿತ್ರಕಾರರನ್ನೂ ಆರ್.ಕೆ.ಲಕ್ಷ್ಮಣ್ ಜೊತೆಗೆ ಹೋಲಿಸಬಾರದು ! ನಾಡಿಗರು ಇನ್ನೂ ಸ್ಪಷ್ಟವಾಗಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಬರೆದರೆ ಒಳ್ಳೆಯದು ! ಪ್ರತಿ ವ್ಯಕ್ತಿಯ ಸೂಕ್ಷ್ಮ ರೇಖೆಯ ಎಳೆಗಳು ಇನ್ನೊಬ್ಬರನ್ನು ಹೋಲುವುದಿಲ್ಲ. ನನ್ನ ಆಪ್ತ ಗೆಳೆಯ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರೂ ಒಳ್ಳೆಯ ಚಿತ್ರಕಾರರಾಗಿದ್ದರು. ಅದನ್ನು ಅವರು ಸ್ವಲ್ಪ ಬದಿಗೆ ಸರಿಸಿ ಸಾಹಿತ್ಯದಮೇಲೆ ಒತ್ತು ಕೊಟ್ಟರು. ಏನೆ ಆಗಲಿ, ಒಬ್ಬ ವ್ಯಂಗ ಚಿತ್ರಕಾರನಿಗೆ ಅವನು ಕೆಳಗೆ ಬರೆಯುವ ವಿವಿರಣೆಯೂ ಅವನ ವರ್ಚಸ್ಸನ್ನು ಹೆಚ್ಚಿಸುತ್ತದೆ.ಸ್ಪಷ್ಟತೆಯ ಅರಿವಾಗುತ್ತದೆ. ಅಭ್ಯಾಸ ಮಾಡಬೇಕುಅಷ್ಟೆ !
ವೆಂಕಟೇಶ.
ಆರ್ ಕೆ ಲಕ್ಷ್ಮಣರ ವ್ಯಂಗ್ಯ ಚಿತ್ರಗಳು
ಆರ್. ಕೆ. ಲಕ್ಷ್ಮಣ್ ಬಹಳ ದೊಡ್ಡ ವ್ಯಂಗ್ಯ ಚಿತ್ರಕಾರರು ಎಂಬುದು ಸರಿ. ಅವರನ್ನು ಗೌರವಿಸುತ್ತಲೇ ಕೆಲವು ಅಡ್ಡ ಮಾತುಗಳನ್ನೂ ಆಡಬೇಕಾಗುತ್ತದೆ. ವ್ಯಂಗ್ಯ ಚಿತ್ರಕಾರ ರವಿಶಂಕರ್ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಿದರೆ ಆರ್ ಕೆ ಲಕ್ಷ್ಮಣ್ ರ ವ್ಯಂಗ್ಯ ಚಿತ್ರಗಳ ಮಿತಿ ಏನೆಂಬುದು ತಿಳಿಯುತ್ತದೆ. `ಲಕ್ಷ್ಮಣ್ ಬರೆದದ್ದು ಎರಡೇ ವ್ಯಂಗ್ಯ ಚಿತ್ರ. ಒಂದು-ನಾಲ್ಕೂ ಚಕ್ರಗಳು ಇಲ್ಲದಿರುವ ವಾಹನ. ಎರಡು-ಎರಡು ದಿಕ್ಕಿಗೆ ಸ್ಟಿಯರಿಂಗ್ ಇರುವ ವಾಹನ.'
ಆರ್.ಕೆ.ಲಕ್ಷ್ಮಣ್ ಅವರು ಭಾರತ ಕಂಡ ಒಬ್ಬ ಶ್ರೇಷ್ಟ ವ್ಯಂಗ್ಯ ಚಿತ್ರಕಾರರು !
ಶ್ರೀ ಇಸ್ಮೈಲ್ ರವರಿಗೆ,
ನಮಸ್ಕಾರ. ನೀವು ಕೊಟ್ಟ ಹೇಳಿಕೆ ಸರಿಯಾಗಿದೆ. ಲಕ್ಷ್ಮಣ್ ರ ಅರ್ಧ ಶತಮಾನದ ಕೊಡುಗೆಯನ್ನು ನೋಡಿದರೆ, ಅವರಷ್ಟು ವೈವಿಧ್ಯಮಯ ವ್ಯಂಗ್ಯ ಚಿತ್ರಕಾರರು ಬೆರೆಳೆಣಿಸುವಷ್ಟುಮಾತ್ರ ಇದ್ದಾರೆಂಬುದು ಆ ಕ್ಷೇತ್ರದಲ್ಲಿರುವ ಘಟಾನುಘಟಿಗಳ ಅಭಿಪ್ರಾಯ !ಆರ್.ಕೆ.ಲಕ್ಷ್ಮಣ್ ಅವರು ಭಾರತ ಕಂಡ ಒಬ್ಬ ಶ್ರೇಷ್ಟ ವ್ಯಂಗ್ಯ ಚಿತ್ರಕಾರರು ಎಂಬುದರಲ್ಲಿ ಎರಡು ಮಾತಿಲ್ಲ !
ಅವರು ಮುಂಬೈಗೆ ಬರುವಮೊದಲು ಶ್ರೀ ಬಾಲ್ ಠಾಕರೆಯವರು
ಅನಭಿಶಕ್ತ ದೊರೆಯಾಗಿದ್ದರು ! ಆರ್.ಕೆ.ಲಕ್ಷ್ಮಣ್ ಬಂದಮೇಲೆ ಈಗ ಕಳೆದ ಸುಮಾರು 50 ವರ್ಷಗಳಲ್ಲಿ ಮೇರುಪರ್ವತದಂತೆ ಬೆಳೆದಿದ್ದಾರೆ. ಪ್ರಥಮಬಾರಿ ಭಾರತದ ರಾಷ್ಟ್ರಪತಿಯವರು ಲಕ್ಷ್ಮಣ್ ಮನೆಗೆ ಭೇಟಿಮಾಡಿ ಅವರ ಹಸ್ತಾಕ್ಷರ ಪಡೆದ ವಿಷಯ ನೀವು ಓದಿರಬಹುದು ! (ಟೈಮ್ಸ್ ಆಫ್ ಇಂಡಿಯ ಪೇಪರ್ ನಲ್ಲಿ)
ವೆಂಕಟೇಶ.
ಇಲ್ಲಿ ಬಹುಶ: ವ್ಯಕ್ತಿಯೇ ಬದಲಾಯಿಸಿದೆ !! ನಾಡಿಗ್ ವ್ಯಂಗ್ಯ ಚಿತ್ರ ಕುರಿತು
ಇದು ಪತ್ತೇದಾರಿ ಕಾದಂಬರಿಕಾರ ಟಿ. ಕೆ. ರಾಮರಾವ್ ಅವರ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ವಾಕ್ಯ . ನಾನು ಬರೆದಿದ್ದು ಸುಮಾರು ೫೦ ವರ್ಷಗಳಿಂದ ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿರುವ ( ಈಗಲೂ ಉದಯವಾಣಿ, ತರಂಗ. ತುಷಾರ ಪತ್ರಿಕೆಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಅಪರೂಪಕ್ಕೆ ಕಾಣುವದುಂಟು) ಶ್ರೀ ಎಸ್. ಕೆ. ನಾಡಿಗ್ ಅವರ ಬಗ್ಗೆ . ಅವರ ವ್ಯಂಗ್ಯ ಚಿತ್ರಗಳು ಬಹಳ ಚೆನ್ನಾಗಿವೆ . 'ನಗೆ ಕಾರಂಜಿ' ಎಂಬ ಅವರ ಆಯ್ದ ಚಿತ್ರಗಳ ಸಂಗ್ರಹವನ್ನು ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದೆ. ಬೆಲೆ ಕೇವಲ ನಲವತ್ತು ರೂಪಾಯಿ ಮಾತ್ರ. ಬಹುಶ: ವೆಂಕಟೇಶ್ ಅವರು ನಮ್ಮ ಸಂಪದದ ಎಚ್.ಪಿ. ನಾಡಿಗ್ ಅವರ ಬಗ್ಗೆ ಬರೆದಿದ್ದಾರೆ.