ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

move ಗೆ (ಸರಿಯಾದ) ಕನ್ನಡ ಶಬ್ದ ಏನು ?

May 5, 2007 - 1:02pm — shreekant.mishrikoti

ಇವತ್ತು 'ಕನ್ನಡಿಗರ ಜನ್ಮ ಸಾರ್ಥಕತೆ' ಎಂಬ ಪುಸ್ತಕವನ್ನು ಮತ್ತೆ ಓದುತ್ತಿದ್ದೆ.

ಅದರಲ್ಲಿ ಇತ್ತು - 'ಪರಭಾಷೆಯ ವಿಚಾರಗಳನ್ನು ಸ್ವಭಾಷೆಯ ಅಜ್ಞಾನವಿದ್ದುದರಿಂದ ಅಚ್ಚಗನ್ನಡದಲಿ ತಿಳಿಸಲಿಕ್ಕೆ ಬರದಿದ್ದರೆ ಅದು ಕನ್ನಡದ ದೋಷವಲ್ಲ. ತಾನು ಕುಣಿಯಲಾರದೆ ನೆಲ ಡೊಂಕೆಂದು ಹೇಳುವದೂ ಕನ್ನಡದಲ್ಲಿ ವಿಚಾರಗಳನ್ನು ಪ್ರಕಟಿಸಲಿಕ್ಕೆ ಬರುವದಿಲ್ಲವೆನ್ನುವದೂ ಒಂದೇ ಸರಿ' .

ಇರಲಿ.

ಇದೀಗ ನನ್ನ ಸ್ವಭಾಷೆಯ ಅಜ್ಞಾನ ಬೆಳಕಿಗೆ ಬಂತು -

ಈಗ ಕಂಪ್ಯೂಟರ್‌ಗಳಲ್ಲಿ ಕೆಲಸಮಾಡುವ ನಾವು ಕಡತ(file)ಗಳನ್ನು ಒಂದು ಕಡತಕೋಶ( Directory) ದಿಂದ ಇನ್ನೊಂದಕ್ಕೆ move ಮಾಡುತ್ತೀವಿ ಅಲ್ಲವೆ . ಈ move ಶಬ್ದಕ್ಕೆ ಯಾವ ಶಬ್ದ ಸರಿ ಹೋದೀತು ? ನಿಮ್ಮ ವಿಚಾರ ತಿಳಿಸುವಿರಾ ?

ಸರಿಸು ಸರಿ ಎನ್ನಿಸುತ್ತದೆ ? ಚಲಿಸು ? ಮತ್ತೆ ಏನಾದರೂ ಬೇರೆ ಶಬ್ದ ?

  • ಕನ್ನಡ ಕಂಪ್ಯೂಟರ್ ಪಾರಿಭಾಷಿಕ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 655 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2007 - 1:13pm — ASHOKKUMAR

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

ASHOKKUMAR's picture

ನಡೆಸು,ಕದಲಿಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2007 - 2:22pm — kishorpatwardhan

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

kishorpatwardhan's picture

Move ಗೆ ಕನ್ನಡದಲ್ಲಿ ’ಒಯ್ಯು’ ಅಥವಾ ’ಕೊಂಡೊಯ್ಯು’ ಸರಿಯಾದೀತೇನೋ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2007 - 6:15pm — hpn

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

hpn's picture

ಈ ಕಾಂಟೆಕ್ಸ್ಟಿನಲ್ಲಿ "ಸ್ಥಳಾಂತರಿಸು" ಎಂದು ಬಳಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 11:51am — ASHOKKUMAR

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

ASHOKKUMAR's picture

ಸ್ಥಾನಾಂತರಿಸು ಹೇಗನ್ನಿಸುತ್ತದೆ? ಒಯ್ಯು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 11:54am — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಸ್ಥಳಾಂತರ = displacement, change in place
ಸ್ತಾನಾಂತರ = change in status.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 12:03pm — ASHOKKUMAR

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

ASHOKKUMAR's picture

statusಗೂ ಸ್ಥಾನಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ...!Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 12:26pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

statusಗೂ ಸ್ಥಾನಕ್ಕೂ ಇತ್ತಿಣಿಂದಿತ್ತಣ ನಂಟಿದೆಯ್ಯ..!! Smiling

ಸ್ಥಾನ ಅಂದರೆ state/status
ಶಾಸ್ತ್ರೀಯಸ್ಥಾನ = state/status of classical language.

ಆದರೆ ಸ್ಥಾನ ಅಂದರೆ place ಅಂತನೂ ಬಳಕೆ ಇದೆ.

ಆದರೆ ಸ್ಥಳ ಇದು ಬರಿ place ಅಂತ.

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 12:14pm — shreekant.mishrikoti

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

shreekant.mishrikoti's picture

ನೂಕು , ದಬ್ಬು , ತಳ್ಳು ಕೂಡ ಬಳಸಬಹುದೇನೋ ?! ( ತಮಾಷೆಗೆ ಹೇಳಿದ್ದು)

ಇರಲಿ , ಸಲಹೆ ಕೊಟ್ಟು ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು .
ಸ್ಥಳಾಂತರಿಸು , ಸರಿಸು ಇವೆರಡೂ ಸರಿ .

'ಸರಿಸು' ಶಬ್ದ ಸರಳವೂ , ಚಿಕ್ಕದೂ , ಅಪ್ಪಟ ('ಶುದ್ಧ'ವಲ್ಲ!) ಕನ್ನಡವೂ ಆಗಿುವದರಿಂದ ಅದನ್ನು ಬಳಸಬಹುದು ಅಂತ ಕಾಣುತ್ತೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 1:44pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಪುಲ್ಲೆನಗೆ = ಪುಲ್ಲೆ + ನಗೆ = ಚಿಗರೆಯ ನಗೆ
ಪುಲ್ಲು ಎನಗೆ = ಹುಲ್ಲು ನನಗೆ.

ಒಂದು ಗವನಿಕೆ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 4:55pm — ವೈಭವ

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

ವೈಭವ's picture

move = ವತ್ತು ಆಗುವುದೆ??.....ಸೊಲ್ಪ ವತ್ರೀ ಅಂತ ಹೇಳೋದು ಬಸ್ಸಿನಲ್ಲಿ ಬಳಕೆಯಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 5:42pm — shreekant.mishrikoti

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

shreekant.mishrikoti's picture

ಅದು 'ಒತ್ತಿರಿ'.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 7:17pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಸಾರ್‍...

ನಾವು 'ವತ್ತಿ' ಅಂತ 'ವ' ತಿಳಿಯಾಗಿ ಕೇಳಿಸೋ ಹಂಗೇ ಹೇಳೋದು.

"ವತ್ತು, ವತ್ತುವರಿ, ವತ್ತರಿಸು, ವತ್ತರು" ಇವೆಲ್ಲವನ್ನೂ 'ಒ' ಇಂದ ಬರೆದರೂ, ನಮ್ಮ ಕಡೆ 'ವ' ಅಂತ ತಿಳಿಯಾಗಿ ಹೇಳೋದು.

'ವತ್ತು' ಮತ್ತು 'ಒತ್ತು' ಇವನ್ನು ಬೇರೆ ಬೇರೆಯಾಗೇ ಉಲಿತೀವಿ. ಅದಕ್ಕೆ ಬೇರೇ ಬೇರೇ ತಿಳಿವೂ ಐತೆ ಅಂತ ಅಂದುಕೊಂಡಿ ಇದ್ದೀವಿ.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 8:28pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಮಾದರಿ:

ಒಸಿ ವತ್ಲಾ = ಕೊಂಚ ಜರುಗಿಕೊ
ಒಸಿಯೊತ್ಲಾ ( ಒಸಿ ಒತ್ಲಾ ) = ಕೊಂಚ ಒತ್ತು!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 12:13pm — shreekant.mishrikoti

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

shreekant.mishrikoti's picture

'ಒ(ವ)ತ್ತು ' ಶಬ್ದದಲ್ಲಿ ಒತ್ತಡವೂ ಬಲಪ್ರಯೋಗವೂ ಇದೆ .

move ಗೆ ಅದು ಬೇಕಾಗಿಲ್ಲ!
ಸರಿಸು , ಸಾಗಿಸು ಸಾಕು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 12:31pm — ವೈಭವ

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

ವೈಭವ's picture

ಒಹ್.. ಲಿನಕ್ಸಿನ 'mv -f' ಗೆ ಕನ್ನಡದ 'ವತ್ತು' ಬಳಸಿ ಅಂತನ್ತೀರ?

mv -f ಅಂದ್ರೆ forcefully move the file

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 12:59pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಸಾರ್‍..

ವತ್ತು ಎಲ್ಲ ಕಡೆ ಹೇಳಲ್ಲ, ಅದು ಬೇಡ...

"ಸರಿಸು, ಜರುಗಿಸು" ಇವು ಸರಿ..

ಆದರೆ
ಸಾಗು, ಸಾಗಿಸು ಅಂದರೆ...move ಅಂತ ಅನ್ನೋದುಕ್ಕಿಂತ, ಹೆಚ್ಚು proceed, advancement, carry on, move forward ಅಂತ ತಿಳಿದುಕೊಂಡಿದ್ದೀವಿ ಅಲ್ವಾ!

"ಮರದ ದಿಮ್ಮಿಗಳನ್ನು ಆನೆಯ ಮೇಲೆ ಸಾಗಿಸುವರು" ಹೇಗೆ ಅಲ್ವಾ ಇದನ್ನೆ ಬಳಸೋದು.
ಆದರೆ
"ಕೊಂಚ ಸಾಗಿ" ಅಂದರೆ "ಕೊಂಚ ಸರಿರಿ" ಅಂತ ಅಲ್ಲ!


Ka. sāgu to go, move forward, proceed, advance, continue in time, last, come upon with grievous effect (as trouble), be brought about, achieved, or accomplished;
sāgu, sāga advance, improvement, cultivation, tillage;
sāgavaḷi, sāguvaḷi cultivation;
sāgisu to cause to go or go on, carry on, cause to proceed or advance, perform or do, conduct, carry on, manage, convey, sustain, maintain, foster, nourish, cultivate.

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 1:00pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

"ಹೇಗೆ ಅಲ್ವಾ" ಇದು "ಹೀಗೆ ಅಲ್ವಾ" ಅಂತ ಅಂದ್ಕೊಳ್ಳಿ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 1:16pm — ASHOKKUMAR

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

ASHOKKUMAR's picture

ಮಹೇಶ್,
ಬರೆದು ಪ್ರಕಟಿಸುವ ಮೊದಲು ತಿದ್ದಿ,ನಂತರವೇ ಪ್ರಕಟಿಸಿ ಎಂದು ನನ್ನ ಪುಕ್ಕಟೆ ಸಲಹೆ:)
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 1:23pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಇಲ್ಲಿ ಸಂಪದದಲ್ಲಿ, ನಮ್ಮ ಕಮೆಂಟನ್ನು ಅದಕ್ಕೆ ಇನ್ನೊಬ್ಬರು ಮರುನುಡಿಯುವ ಮುನ್ನ ತಿದ್ದುವ ಸವಲತ್ತು ಇತ್ತು. ಅದು ನನಗೆ ಅಲುವಾಟವಾಗಿದೆ.

ಆ ಸವಲತ್ತನ್ನೇಕೆ ತಗೆದರೋ ತಿಳಿಯದು.
ನಾನು ಎರಡೆರಡು ಸರತಿ ನೋಡೇ ಸಬ್ಮಿಟ್ ಮಾಡುತ್ತಿದ್ದೇನೆ. ಆದರೂ ಕೆಲವು ಕಣ್ತಪ್ಪಿ ಬಿಡುತ್ತಿವೆ. ಮನ್ನಿಸಿ.

ಮುಂದಿನ ಕಮೆಂಟುಗಳನ್ನು ಸಬ್ಮಿಟ್ಟುವ ಮುನ್ನ ಮೂರ ಸರತಿ ನೋಡುವೆನು Smiling

ನಿಮ್ಮ ಬಿಟ್ಟಿ ಸಲಹೆಗೆ ನನ್ನ ಬಿಟ್ಟಿ ನನ್ನಿ! Smiling
*ಮಹೇಶ

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 11:47am — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಒಯ್ = to carry

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 11:45am — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ನಡೆಸು = to make something walk, to manage
ಕದಲಿಸು = to agitate, to shake
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2007 - 8:37pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

move = ಸರೆ
to make some thing move = ಸರೆಸು
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2007 - 9:16pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಸರಿ, ಜರಿ
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 12:45pm — Prabhu Murthy

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

Prabhu Murthy's picture

ಶ್ರೀಕಾಂತ್ ಅವರೆ,

ಈ ಸಂದರ್ಭಕ್ಕೆ 'ಸಾಗಿಸು' / 'ಎತ್ತಿಡು' ಎನ್ನಬಹುದೇ? ಇಂತಹ ಸಂದರ್ಭಗಳಲ್ಲಿ ಸಹಜವಾದ ಸಮಾನಪದವನ್ನು ಗುರುತಿಸಲು ಸಾಧ್ಯವೆ ಎಂದು ಕೇಳಕೊಳ್ಳಬೇಕು. ಒಂದು ವಸ್ತುವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ 'ಸಾಗಿಸು'ವ ಅಥವಾ 'ಎತ್ತಿಡು'ವ ಕ್ರಿಯೆಗೆ ಕನ್ನಡದಲ್ಲಿ ಅತ್ಯಂತ ಸಹಜವಾದ ಕ್ರಿಯಾಪದ ಇದೆಯೆ ಎಂದು ಪ್ರಶ್ನೆ ಕೇಳಿಕೊಂಡರೆ ಉತ್ತರ (ಪ್ರಶ್ನೆಯಲ್ಲೆ) ಸಿಗುತ್ತದೆ.

ಬೇರೆ ಭಾಷೆಯ ಪದ, ಪದಪುಂಜ, ನುಡಿಗಟ್ಟುಗಳನ್ನು ಕನ್ನಡಕ್ಕೆ ತರಲು ಹಿಂದೆ ಕೆಲವೊಂದು ಕ್ರಮಗಳನ್ನು ಪಾಲಿಸುತ್ತಿದ್ದರು ಎನ್ನಿಸುತ್ತದೆ. ಈಗೀಗ ಬೇಕಾಬಿಟ್ಟಿಯಾಗಿ (ಅಥವಾ ತೀರಾ 'ಸೂಪರ್ಫಿಶಿಯಲ್ಲಾಗಿ' Smiling ) 'ಡಬ್ಬಿಂಗ್' ಮಾಡುವುದೇ ಹೆಚ್ಚಾಗಿ ಕಾಣಬರುತ್ತದೆ.

ನೆನ್ನೆ 'ಹಸರೀಕರಣ' ಎಂಬ ಪದವನ್ನು ಎಲ್ಲೋ ನೋಡಿದೆ. ಕನ್ನಡದ 'ಕೆಸರೀಕರಣ' ಅನ್ನಿಸಿತು Sad

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 1:43pm — mahesha

ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?

mahesha's picture

ಹೆಸರೀಕರಣ ಅನ್ನೋದು ಸರಿಯಲ್ಲ. ಕನ್ನಡದ ಒರೆಗೆ ಬೇರಾವುದೋ ನುಡಿಯ ವ್ಯಾಕರಣದ ಹೇರಿಕೆ.!!

ಹೆಸರಿಕೆ, ಹೆಸರಿಸುವಿಕೆ, ಹೆಸರಿಸಿಕೆ, ಹೆಸರಿಡಿಕೆ, "ಹೆಸರುಮಡುಗು", ಇವು ಸರಿಯಾ‌ದುವು, ಕನ್ನಡದ್ದೇ ತೆರದವು.

ಅಗಲೀಕರಣ ವನ್ನು, ಹಿಗ್ಗಿಸುವಿಕೆ, ಅಲಗ ಹೆಚ್ಚಿಕೆ, ಅಂತ ಹೇಳಬೋದು ಅಲ್ವಾ!!

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • move ಗೆ ಕನ್ನಡ ಶಬ್ದ ....
  • ’ಸಖೇದಾಶ್ಚರ್ಯ’ ಮತ್ತು ’ಸನೇಕ’
  • hacker ಶಬ್ದದ ಬಗ್ಗೆ
  • ಕನ್ನಡದ ಕಂದ
  • ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 618 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator