ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಗಣಕಯಂತ್ರವು ಸಂಪೂರ್ಣ ಕನ್ನಡದಲ್ಲಿ? - ಕನ್ನಡಪದ ಸೂಚಿಸಿ.
ಗೆಳೆಯರೇ ,
ನೋಡಿ http://sampada.net/forum/312
ಸದ್ಯ ಸಂಪದದಲ್ಲಿ ಲೀನಕ್ಸ್ ಆಧಾರಿತ ತಂತ್ರಾಂಶವನ್ನು ಕನ್ನಡಕ್ಕೆ ಅಳವದಿಸಲು ಕೆಲವು ಪದಗುಂಪುಗಳನ್ನು ಅನುವಾದ ಮಾಡುತ್ತಿರುವೆ. ಅಂದರೆ ಒಂದು ದಿನ ಗಣಕಯಂತ್ರವು ಸಂಪೂರ್ಣ ಕನ್ನಡದಲ್ಲಿದ್ದು , ಗಣಕಯಂತ್ರವನ್ನು ಬಳಸಲು ಇಂಗ್ಲೀಷ್ ತಿಳಿದಿರಬೇಕಿಲ್ಲ . ಈ ದಿನವನ್ನು ನಾವೂ ನೀವೂ ಬೇಗನೆ ನೋಡುವಂತಾಗಲು http://kannada.sampada.net ನೋಡಿ ನೀವೂ ಕೈಜೋಡಿಸಬಹುದು.
ಕಡೇ ಪಕ್ಷ ನನಗೆ ಗೊತ್ತಾಗದ/ತೋಚದ ಶಬ್ದಗಳನ್ನು ಆಗಾಗ ಇಲ್ಲಿ ಕೇಳುವೆನು . ನೀವು ಕನ್ನಡ ಪದ ಸೂಚಿಸಬಹುದು .
ಸದ್ಯಕ್ಕೆ ಈ ಶಬ್ದಗಳಿಗೆ ಸರಿಯಾಗಬಹುದಾದ ಕನ್ನಡಪದ ಸೂಚಿಸಿ.
default
settings
screens
configuration - ( ಸಂರಚನೆ ಸರಿಯೇ?)
authentication
authority

- shreekant.mishrikoti ರವರ ಬ್ಲಾಗ್
- Login or register to post comments
- 831 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಕೆಲವು ಪದಗಳು
ಸೂಚಿಸು - ಸೂಚನೆ ಕೊಡು - ತಿಳಿಸು
default - ಜನ್ನದೇ ಆದ
(ಜನ್ನುವುದು - ಪ್ರಯತ್ನಪಡುವುದು, ಜನ್ನದೇ - ಅಪ್ರಯತ್ನಪೂರ್‍ವಕ)
settings - ಹೊಂದಿಕೆಗಳು
(set ಮಾಡು - ಹೊಂದಿಸು)
screens - ಪರದೆ
configuration - ಜೋಡನೆ
(to configure - ಜೋಡಿಸು)
authentication - ಅನುಮತಿ ಗುರುತು (?)
authority - ಒಪ್ಪಿಸುವಿಕೆ
(to give authority - ಒಪ್ಪಿಸು)
ಸಲಹೆಗಳು
default - ಪೂರ್ವನಿಯೋಜಿತ
settings - ವ್ಯವಸ್ಥೆ
screens - ತೆರೆ, ಪರದೆ
configuration - ವಿನ್ಯಾಸ
authentication- ದೃಢೀಕರಣ
authority - ನಿಷ್ಣಾತ, ತಜ್ಞ್ನ
ಶ್ರೀಕಂಠರವರೇ,
ನನಗೂ ಗಣಕ ಯಂತ್ರವು ಸಂಪೂರ್ಣ ಕನ್ನಡದಲ್ಲೇ ನೋಡಬೇಕೆಂಬ ಆಸೆ. ಇದರ ಸಲುವಾಗಿ ನೀವು ಮಾಡುತ್ತಿರುವ ಕೆಲಸದಲ್ಲಿ ನಾನೂ ಕೂಡಾ ಸಹಾಯ ಮಾಡಬೇಕೆಂದು ನನಗೆ ಬಹಳ ಆಸೆ. ಅದಕ್ಕೇ ನಾನು http://kannada.sampada.net/ ಅಲ್ಲಿ ನನ್ನನ್ನು ನೋಂದಾಯಿಕೊಂಡೆ. ಅದರ ನಂತರ ಏನು ಮಾಡಬೇಕೆಂದು ಸರಿಯಾದ ಮಾಹಿತಿಯಿಲ್ಲದೇ ಸಹಾಯವನ್ನು http://kannada.sampada.net/volunteer#comment-41 ಇಲ್ಲಿ ಕೇಳಿದೆ. ಇದಾಗಿ ಒಂದೂವರೆ ದಿನಗಳು ಕಳೆದರೂ ಕೂಡಾ ಯಾವುದೇ ಪ್ರತಿಕ್ರಿಯೆ ಅಥವಾ ಸಹಾಯ ಬಂದಿಲ್ಲ. ಏಕೆ ಈ ರೀತಿ? ನಾನು ನಿಮ್ಮಂತೆ computer geek ಅಲ್ಲವೆಂಬುದು ಕಾರಣವೇ?
ನಾನು ವಿಂಡೋಸ್ XP ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. ಇದರಲ್ಲಿಯೇ ಇದ್ದು ನಿಮ್ಮ ಅಮೋಘ ಉದ್ದೇಶದಲ್ಲಿ ನಾನು ಭಾಗಿಯಾಗಲು ಸಾಧ್ಯವೇ? ಒಂದಂತೂ ನಿಜ.. ನಾನು open source movement ಅಲ್ಲಿ ಒಬ್ಬ ಸ್ವಯಂಸೇವಕನಾಗಿ ಕೆಲಸ ಮಾಡಲು ಸಿದ್ಧನಾಗಿದ್ದೇನೆ. ನಾನು ಮಾಡಬಹುದಾದ ಏನಾದರೂ ಕೆಲಸವಿದ್ದರೆ ದಯವಿಟ್ಟು ತಿಳಿಸಿ.
ಇತೀ ನಿಮ್ಮ ವಿಶ್ವಾಸಿ,
ಪ್ರದೀಪ ಅಡಿಗ