ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

October 5, 2007 - 4:57pm — shreekant.mishrikoti

ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ .
ಬಹುಶ: ಇದು ಬೆಳವಡಿ ಇರಬೇಕು ...ನಾನು ಓದಿದ್ದು ನನಗೆ ಸರಿಯಾಗಿ ನೆನಪಿಲ್ಲ . ...
ಅಲ್ಲಿ ಹಾದು ಹೋಗುವಾಗ ಅವರೂ ಸ್ವಾಗತಿಸಿ ... ಗೌರವಿಸುವರು ... ಆದರೆ ... ಶಿವಾಜಿಯ ಸಂಗಡಿಗರು ಸ್ಥಳೀಯರನ್ನು ಕೆಣಕಿ ಸ್ವಲ್ಪ ಗೊಂದಲ ಉಂಟಾಗುವದು . ಅದೇನು ಅಂತ ನೋಡಿ ಬಗೆ ಹರಿಸಲು ಹೋದ ರಾಜನನ್ನು ಶಿವಾಜಿಯ ಕಡೆಯವರು ತಪ್ಪು ಕಲ್ಪನೆಯಿಂದ ಕೊಂದು ಬಿಡುವರು. ಆದರೆ ಅವನು ಸಾಯುವ ಮೊದಲು ಹೆಂಡತಿಯಿಂದ - ಇವಳು ಮಲ್ಲಮ್ಮ - ಶಿವಾಜಿಯನ್ನು ಕೊಲ್ಲುವದಾಗಿ - ವಚನ ತೆಗೆದುಕೊಳ್ಳುವನು ..
ಅವಳು ... ಹೌದು ... ಶಿವಾಜಿಯನ್ನು ಸಮಯ ಸಾಧಿಸಿ ... ಹಿಡಿದುಹಾಕುವಳು ... ನಂತರ ಶಿವಾಜಿಯು ಅವರಿಗೆಲ್ಲ ಸಮಾಧಾನ ಹೇಳಿ , ಅವಳ ಮಗನನ್ನು ತನ್ನ ಹತ್ತಿರ ಕರೆದುಕೊಂಡು ಮುದ್ದು ಮಾಡುವನು . ಶಿಲಾಶಾಸನವೊಂದರಲ್ಲಿ ಗ್ರೂಪ್ ಫೋಟೋ ತರಹದ ಕೆತ್ತನೆ ಇದ್ದು ಮಲ್ಲಮ್ಮ , ಶಿವಾಜಿ , ಶಿವಾಜಿಯ ತೊಡೆಯ ಮೇಲೆ ಮಲ್ಲಮ್ಮನ ಮಗನು , ಅಷ್ಟೇ ಏಕೆ , ಮಲ್ಲಮ್ಮನ ಮೆಚ್ಚಿನ ನಾಯಿ ಕೂಡ ಇದೆಯಂತೆ .

ಇದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ , ’ಶಿವಾಜಿ ಮಲ್ಲಮ್ಮ ಯಾಂಚೆ ಸಮರೋತ್ಸವ’ ಎಂಬ ಪುಸ್ತಕದಲ್ಲಿ ಇರುವದಾಗಿ ಕಸ್ತೂರಿಯಲ್ಲಿ ಓದಿದ ನೆನಪು .
ಈ ಮಲ್ಲಮ್ಮ ಬೆಳವಡಿ ಮಲ್ಲಮ್ಮ ಇರಬಹುದು. ಈ ಬೆಳವಡಿ ಎಲ್ಲಿದೆ .. ಯಾರಾದರೂ ಗೊತ್ತಿದ್ದರೆ ತಿಳಿಸಿ.

  • ಇತಿಹಾಸ
  • ಬೆಳವಡಿ ಮಲ್ಲಮ್ಮ
  • ಶಿವಾಜಿ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 483 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 6, 2007 - 12:23am — hpn

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

hpn's picture

ಅದು "ಬೆಳವಾಡಿ" ಇರಬೇಕು.

ಶಾಲೆಯಲ್ಲಿದ್ದಾಗ ನಮಗಿದ್ದ ಕನ್ನಡ ಪಠ್ಯದಲ್ಲಿ ಈ ಬಗ್ಗೆ ಕಥೆ ಓದಿದ ನೆನಪು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 6, 2007 - 2:20am — ವೈಭವ

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ವೈಭವ's picture

ಇಲ್ಲ. ಅದು 'ಬೆಳವಡಿ' ನೇ.

ಈ ಬೆಳವಡಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿದೆ. ಈಗ ಅದು ಚಿಕ್ಕ ಹಳ್ಳಿ. ಮಲ್ಲಮ್ಮನ ಕಾಲದಲ್ಲಿ ಅದು ಸಂಸ್ತಾನದ ಮುಕ್ಯ ಸ್ತಳವಾಗಿತ್ತು. ಇದಕ್ಕೆ ಈಶ್ವರ ಪ್ರಬು ಅರಸಾನಗಿದ್ದ. ಈತನ ಹೆಂಡತಿಯೇ ಮಲ್ಲಮ್ಮ.

ಮಲ್ಲಮನ ಬಗೆಗೆ ಕೆ.ಎಮ್. ಪುರಾಣಿಕರು ಮತ್ತು ಬೆಟಗೇರಿ ಕೃಶ್ಣ ಶರ್ಮರು ಬರೆದಿರುವ ಹೊತ್ತಗೆಗಳು ಡಿಎಲ್ಲೈನಲ್ಲಿದೆ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 6, 2007 - 5:12am — hamsanandi

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

hamsanandi's picture

ಹೌದು. ಬೆಳವಾಡಿ - ಹೊಯ್ಸಳರ ವೀರನಾರಾಯಣ ದೇವಾಲಯದಿಂದ ಖ್ಯಾತವಾಗಿರುವುದು, ಹಾಸನ - ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿದೆ;

ಮಲ್ಲಮ್ಮನ ಬೆಳವಡಿ ಇರುವುದು ಬೆಳಗಾವಿಯ ಬಳಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 6, 2007 - 11:01am — mahesha

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

mahesha's picture

ಬೆಳವಡಿ ಮಲ್ಲಮ್ಮಳ ಮೇಲೆ ಈ ಸಿವಾಜಿ ದಾಳಿಯಿಟ್ಟದ್ದು ಯಾಕೆ ನೋಡ್ರೀ... ಸುಮ್ನೆ ಪುಂಡಾಟಿಕೆಗೆಲ್ಲ ಒಬ್ಬ ಅರಸನ್ನು ಕೊಂದು ಹಾಕೊದೇ?

ನಾನು ಶಂಕರಭಾಸ್ಕರದಲ್ಲಿ( ಶೃಂಗೇರಿ ಮಠದಿಂದ ಹೊರಬರುವುದು) ಓದಿದಂತೆ, ಹಿಂಗೇ ಸಿವಾಜಿ ಕಡೆಯವ್ರು ಶೃಂಗೇರಿ ಮಠಕ್ಕೂ ದಾಳಿಯಿಟ್ಟು, ಅಲ್ಲಿದ್ದ ಮರದ ಶಾರದಾಂಬೆ ಗೊಂಬೆ/ಮೂರುತಿಯನ್ನು ಕಿತ್ತು ಹೊಳೆಗೆಸುದು ಹೋದ್ರಂತೆ. ತರುವಾಯ ಟಿಪ್ಪು ಕೊಟ್ಟ ಕಾಣಿಕೆಯಲ್ಲಿ ಮಠದ ರಿಪೇರಿ ನಡೆಯ್ತಂತೆ.

ಒಂದು ಕಡೆಯಂತೂ ಸಿವಾಜಿ + ಅವನ ಬಂಟರು ಪುಲ್ ಪುಂಡ್ರು ಎಂದು ಹೇಳೋ ಹಾಗೆ ಬರೆದಿದ್ದಾರೆ.

ಮೊನ್ನೆ ಹೀಗೆ ಸಿವಾಜಿ ಬಗ್ಗೆ ಏನೋ ಕೆಟ್ಟದಾಗಿ ಅರ್ಕುಟಲ್ಲಿ ಬರೆದುದಕ್ಕೆ ಬೆಂಗಳೂರಿನ ಮೂರು ಸಾಪ್ಟವೇರಿಗರನ್ನು ಪೊಲೀಸು ಸರೆಹಿಡಿದಿದೆ. ಅದಕ್ಕೆ ಈ ಸಿವಾಜಿ, ರಾಮ... ಇವರ ಬಗ್ಗೆ ಬರೇಬೇಕಾದ್ರೆ ಸಾನೆ ಜೋಕೆ ಮಾಡಬೇಕು. Sad Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 2:46pm — ಕೇವೆಂ

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ಕೇವೆಂ's picture

ಮರಾಟರ ದಂಡು ಶೃಂಗೇರಿಯನ್ನು ಮುತ್ತಿದ್ದು ೧೭೯೧ ರಲ್ಲಿ. ಆಗ ಶಿವಾಜಿ ಸತ್ತು ೧೧೦ ವರ್ಷ ಆಗಿತ್ತು. ತನ್ನ ಕಡುಹಗೆಗಳಾದ ಮೊಗಲರು ಮತ್ತು ಆದಿಲಶಾಹಿಗಳು ಹಿಂದು ದೇಗುಲಗಳನ್ನು ಒಡೆದಾಗ ಕೂಡ ಅವನು ಯಾವ ಮಸೀದಿಗೂ ಕೈ ಹಚ್ಚಲಿಲ್ಲ.ಆದರೂ ಶಿವಾಜಿ ಜವಾಬುದಾರನೆ?
ಮರಾಟರು ಪಾಣಿಪತ್ತಿನಲ್ಲಿ (೧೭೬೧) ತತ್ತರಿಸುವಂಥ ಸೋಲು ಕಂಡ ಮೇಲೆ ಪೇಶ್ವೆಗಳ ಆಡಳಿತ ಸಡಿಲವಾಯ್ತು. ದಂಡಿನ ದಳವಾಯಿಗಳೆಲ್ಲ ಪುಂಡು ಪೋಕರಿಗಳಾದರು. ಆ ಕಾಲದಲ್ಲಿ ನಡೆದ ಸಂಗತಿ ಇದು. ಅದನ್ನು ಉತ್ಪ್ರೇಕ್ಷೆ ಮಾಡುವ ಅಗತ್ಯ ಇಲ್ಲ. ಇಷ್ಟಕ್ಕೂ ಶೃಂಗೇರಿಯ ಮೇಲೆ ಏಕೆ ದಾಳಿಯಾಯಿತು ಎಂಬುದೇ ಅಚ್ಚರಿಯ ಸಂಗತಿ. ಯಾಕೆಂದರೆ ಲೂಟಿಗೆ ಅದಕ್ಕಿಂಥ ಹೆಚ್ಚು ಪ್ರಶಸ್ತವಾದ ಜಾಗಗಳಿದ್ದವು. ಶೃಂಗೇರಿಯ ರಸ್ತೆಯು ಕಡಿದು ಮತ್ತು ಮೈಸೂರು ಸೀಮೆಯ ಒಳನಾಡಿನಲ್ಲಿದೆ. ಇದರ ಬಗ್ಗೆ ಸಂಶೋಧನೆ ನಡೀಬೇಕು.
ಟೀಪು ಕಷ್ಟದಲ್ಲಿರುವಾಗ (೩ನೇ ಮೈಸೂರು ಕಾಳಗ) ತನ್ನ ಕೈ ಕೆಳಗಿರುವ ಸ್ಮಾರ್ತ ಬ್ರಾಹ್ಮಣರನ್ನು ಸಂತೈಸಲು ಮಾಡಿದ ಕೆಲಸದಿಂದ ಅಲ್ಲಿಯವರೆಗೂ ಮಾಡಿದೆಲ್ಲಾ ತೊಳೆದು ಹೋಗೊದಿಲ್ಲ.
ನೀವು ತಮಾಷೆಗೆ ಆದರೂ ಯೋಚನೆ ಮಾಡಿ ಬರೆಯಿರಿ.ಶಿವಾಜಿ ಮರಾಟಿಗರ ಆಸ್ತಿ ಅಲ್ಲ. ಅವನು ಚಿಕ್ಕಂದಿನಲ್ಲಿ ಕೆಲವು ಕಾಲ ಬೆಂಗಳೂರಿನಲ್ಲಿ ಬೆಳೆದದ್ದು ಉಂಟು.ಇಲ್ಲೇ ಹುಟ್ಟಿದ್ದು ಅಂತ ಕೂದ ಕತೆ ಇದೆ.ಆದ್ರಿಂದ ನಮಗೂ ಸೇರಿದವನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 2:54pm — mahesha

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

mahesha's picture

ಅರಿಮೆಗಳಿಗೆ ನನ್ನಿ!

ನಾ ಊ ಸಂಗತಿಯನ್ನೂ ಉಬ್ಬಿಸಿ ಹೇಳಲೆಳಸಿಲ್ಲ. ನಿಮಗೆ ಹಾಗೆ ಅನ್ನಿಸಿದಲ್ಲಿ ಮನ್ನಿಸಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 7:46pm — gc

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

gc's picture

"...ಶಿವಾಜಿ ಮರಾಟಿಗರ ಆಸ್ತಿ ಅಲ್ಲ. ಅವನು ಚಿಕ್ಕಂದಿನಲ್ಲಿ ಕೆಲವು ಕಾಲ ಬೆಂಗಳೂರಿನಲ್ಲಿ ಬೆಳೆದದ್ದು ಉಂಟು.ಇಲ್ಲೇ ಹುಟ್ಟಿದ್ದು ಅಂತ ಕೂದ ಕತೆ ಇದೆ.ಆದ್ರಿಂದ ನಮಗೂ ಸೇರಿದವನು..."

ಶಿವಾಜಿಯ ಪೂರ್ವಜರು ಗದಗ ಜಿಲ್ಲೆಯ ಸೊರಟೂರಿನವರು ಎಂದು ಡಾ. ಢೇರೆ ಬರೆದಿದ್ದಾರೆ. ಈ ಸಂಶೋಧನೆಯ ಬಗ್ಗೆ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳಿವೆ. ಈ ಕೊಂಡಿಯನ್ನು ನೋಡಿ -
http://www.kamat.com/jyotsna/blog/kannada_roots_of_shivaji.htm.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2007 - 12:35am — ಕೇವೆಂ

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ಕೇವೆಂ's picture

ಇದು ನಾನು ಕೇಳೇ ಇರಲಿಲ್ಲ. ಬಹಳ ಕುತೂಹಲ ಹುಟ್ಟಿಸತ್ತೆ. ಶಿವಾಜಿ ಹುಟ್ಟಿನಿಂದ ಕ್ಷತ್ರಿಯನೋ ಇಲ್ಲವೋ ... ಇದು ಒಂದು ರೀತಿಯಲ್ಲಿ ಅಪ್ರಸ್ತುತ. ಕ್ಷತ್ರಿಯತ್ವ ಸಿಗೋದು ತೋಳ್ಬಲದಿಂದ. ಅದಕ್ಕೆ ಗಾಗಾ ಭಟ್ಟನ " ಜಾತಿ ಪ್ರಮಾಣ ಪತ್ರ" ನಗು ತರಿಸುತ್ತೆ. ಆದರೆ ಇದನ್ನು ಓದಿದರೆ ಶಿವಾಜಿ ಗೊಲ್ಲರವನು ಅಂಥ ಅನ್ನಿಸುತ್ತೆ. ಇದೇನು ಸೋಜಿಗವು ಅಲ್ಲ. ಹಕ್ಕ ಬುಕ್ಕರು ಕುರುಬರಲ್ಲವೆ ? ಮಾಗಡಿ ಕೆಂಪೇಗೌಡ ಒಕ್ಕಲಿಗರವನು. ಮೈಸೂರಿನ ಅರಸುಗಳೂ ಕೂಡ ಇದೇ ರೀತಿ. ರಾಜ್ಯ ಗೆದ್ದ ಮೇಲೆ ಅವರೆಲ್ಲ ಚಂದ್ರ ವಂಶಕ್ಕೋ ಸೂರ್ಯ ವಂಶಕ್ಕೋ ಸೇರಿಕೊಂಡುಬಿಟ್ಟರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 12, 2007 - 10:23am — mahesha

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

mahesha's picture

ಶಿವಾಜಿಯ ಬೋಂಸಲೇ ತಲೆಮಾರು ನಮ್ಮ ಹೊಯ್ಸಳ ಕುಳಕ್ಕೆ ನಂಟಂತೆ..

ಅಲ್ಲೇ ಆ ಕಾಮತ್ ತಾಣದಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 18, 2007 - 4:58pm — sankul

ಉ: ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

sankul's picture

ಶಿವಾಜಿಯ ಭೋಸಲೆ ಮನೆತನದ ಬಗ್ಗೆ ಮತ್ತು ಅವರ ಪೂರ್ವಜರ ಬಗ್ಗೆ ಮಹಾರಾಷ್ಟ್ರದ ಖ್ಯಾತ ಇತಿಹಾಸಕಾರರಾದ ರಾಮಚಂದ್ರ ಚಿಂತಾಮಣ ಢೇರೆಯವರು ಸಾಕಾಷ್ಟು ಸಂಶೋಧನೆ ನಡೆಸಿ ಬರೆದಿರುವ ಪುಸ್ತಕ "ಶಿಖರ ಶಿಂಗಣಾಪುರಚ ಶಂಭು ಮಹಾದೇವ". ಇದು ಮರಾಠಿಯಲ್ಲಿದೆ. ಇದರಲ್ಲಿ ಅವರು ಶಿವಾಜಿಯ ಮೂಲ ಕರ್ನಾಟಕ ಎಂದು ಸಾರಿ ಹೇಳಿದ್ದಾರೆ. ಅದರ ಕನ್ನಡ ಅನುವಾದ 'ಶಿವಾಜಿ ಮೂಲ ಕನ್ನಡ ನೆಲ' (ಸರಜೂ ಕಾಟ್ಕರ). ಒಳ್ಳೆಯ ಪುಸ್ತಕ. ಇದೇ ರೀತಿ ಪಂಢರಪುರದ ವಿಠ್ಠಲನ ಬಗ್ಗೆಯೂ ಢೇರೆಯವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ಚಂದ್ರಕಾಂತ ಪೋಕಳೆಯವರು ಕನ್ನಡೀಕರಿಸಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಳಿಯಾಳ ತಾಲ್ಲೂಕು ಹುಣಸವಾಡಿಯ ಸೂಲಗಿತ್ತಿ ಮಲ್ಲಮ್ಮ ಪೂಜಾರಿ ಇಷ್ಟು ಸರಳ ಜೀವಿ. ಚಿತ್ರ:ಜೆ.ಜಿ.ರಾಜ್.
  • ಹಳಿಯಾಳ ತಾಲ್ಲೂಕು ಹುಣಸವಾಡಿಯ ಸೂಲಗಿತ್ತಿ ಮಲ್ಲಮ್ಮ ಪೂಜಾರಿ ಸುತ್ತಲಿನ ಗ್ರಾಮಗಳ ಬಡತಾಯಂದಿರಿಗೆ ಜೀವದಾಯಿ. ಚಿತ್ರ:ಜೆ.ಜಿ.ರಾಜ್.
  • 'ನಲ್ಲೀ ತಾವ್ ನಂ ಮಲ್ಲೀ'
  • 'ನಲ್ಲೀ ತಾವ್ ನಂ ಮಲ್ಲೀ'- ಜಿ. ಪಿ.ರಾಜರತ್ನಂ ರವರ ಕವನ, ಮತ್ತೊಮ್ಮೆ ಮೆಲುಕುಹಾಕಲು ಮುದಕೊಡುತ್ತದೆ !
  • ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 45 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator