ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಧಾರವಾಡ ಕನ್ನಡ- ಹೊಸ ಸರಣಿ
ಅದೆಷ್ಟೋ ಬಗೆಯ ಕನ್ನಡಗಳು ನಮ್ಮಲ್ಲಿವೆ - ಸುಮಾರು ಎಪ್ಪತ್ತು . ನಾವು ಕನ್ನಡದ ಬಗೆಗಳನ್ನು ಅರಿಯಬೇಕಲ್ಲದೆ , ಅವುಗಳ ಬಗ್ಗೆ ಸಹನೆಯನ್ನೂ ಗೌರವವನ್ನೂ ಬೆಳೆಸಿಕೊಳ್ಳಬೇಕು .
ಈ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನ ಒಂದು ಸರಣಿಯ ರೂಪದಲ್ಲಿ ಬರಲಿದೆ ...
ಧಾರವಾಡದ ಸುತ್ತಮುತ್ತಲಿನ ಜನ ಆಡುವ ಕನ್ನಡದ ಬಗ್ಗೆ ಒಂದಿಷ್ಟು ಬರೆಯೋಣ ಎನ್ನಿಸಿದೆ .. ಅಲ್ಲಿ ಕೂಡ ಜಾತಿವಾರು ವ್ಯತ್ಯಾಸಗಳಿವೆ ...ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ . ನಾನು ಆಡುವ ಕನ್ನಡವನ್ನು ಪ್ರಮುಖವಾಗಿ ತಿಳಿಸುವೆ .
ಪ್ರಮಾಣ ( ಪುಸ್ತಕ) ರೂಪದ ಕನ್ನಡಕ್ಕೆ ಹೋಲಿಸಿ ಕಂತುಗಳಲ್ಲಿ ಬರೆಯುವೆ .
ಇದೇ ತರಹ ... ಗುಲ್ಬರ್ಗ ಕನ್ನಡ ... ಮಂಡ್ಯ ...ಹಳೇ ಮೈಸೂರ್ ... ಹಳ್ಳಿ ಮೈಸೂರ್ ... ಐನಾಪುರ ಕನ್ನಡ ... ಇತ್ಯಾದಿಗಳನ್ನು ಯಾರಾದರೂ ಬರೆಯತೊಡಗಿದರೆ ಚೆನ್ನಾಗಿರುತ್ತದೆ ಅಲ್ಲವೇ ? ಕುಂದಗನ್ನಡದ ಬಗೆಗೆ ಒಂದು ಬ್ಲಾಗ್ ಈಗಾಗಲೇ ಇದೆ.
ನಿರೀಕ್ಷಿಸಿ.

- shreekant.mishrikoti ರವರ ಬ್ಲಾಗ್
- Login or register to post comments
- 332 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಧಾರವಾಡ ಕನ್ನಡ- ಹೊಸ ಸರಣಿ
ಹಂಗಾ ಮಾಡ್ರೀ...
ಭೇಷ್ ಇರ್ತೈತಿ..
ನನ್ನಿ
ಉ: ಧಾರವಾಡ ಕನ್ನಡ- ಹೊಸ ಸರಣಿ
ಮಿಶ್ರಿಕೋಟಿಗಳ.. ನೀವು .. ಹೈಗೈ ಕೆಲಸಕ್ಕ ಕೈಹಾಕೀರಿ ಬಿಡ್ರಿ...
)
ಮುಂದವರಿಸ್ರಿ.. ( ಮುಂದು ವರೆಸಿರಿ ಅಲ್ಲ.. ಮುಂದುವರಿಸಿರಿ...
ಮಹೇಶರೆ, ಅದು ಹಂಗಾ ಅಲ್ಲ ಹಂಗ...
ಉ: ಧಾರವಾಡ ಕನ್ನಡ- ಹೊಸ ಸರಣಿ
ಮಿಶ್ರಿಕೋಟಿಗಳ.. ನೀವು .. ಹೈಗೈ ಕೆಲಸಕ್ಕ ಕೈಹಾಕೀರಿ ಬಿಡ್ರಿ...
)
ಮುಂದವರಿಸ್ರಿ.. ( ಮುಂದು ಒರೆಸಿರಿ ಅಲ್ಲ.. ಮುಂದುವರಿಸಿರಿ...
ಮಹೇಶರೆ, ಅದು ಹಂಗಾ ಅಲ್ಲ ಹಂಗ...
ಉ: ಧಾರವಾಡ ಕನ್ನಡ- ಹೊಸ ಸರಣಿ
ಮನ್ನಿಸ್ರಪ್ಪೋ......
ನನ್ನಿ ....