ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನೀವೂ ಕನ್ನಡ ಶಬ್ದಕೋಶ ಓದಿ

January 6, 2007 - 4:45pm — shreekant.mishrikoti

ಹಿಂದೆ ಕನ್ನಡ ಶಬ್ದಕೋಶ ಕುರಿತು ಇಲ್ಲಿ ಬರೆದಿದ್ದೆ .

ನಾನು ಓದುತ್ತ ಇದ್ದದ್ದು ಗುರುನಾಥ ಜೋಶಿ ಎಂಬವರ ಕನ್ನಡ-ಕನ್ನಡ ಶಬ್ದಕೋಶ. ಕವಲಿ ಯವರದು ಸ್ವಲ್ಪ ಅಡ್ವಾನ್ಸಡ್ ಇರುವದರಿಂದ ಇದನ್ನು ಓದಿದ ಮೇಲೆ ಓದುವೆ. ನಾನು ಕಂಡುಕೊಂಡ ಶಬ್ದಗಳು , ಹೊಸ ಶಬ್ದಗಳು ,ಸಂಬಂಧಿತ ಶಬ್ದಗಳು , ಬಳಕೆಯಲ್ಲಿರುವ ಸಂಸ್ಕೃತ ಶಬ್ದಗಳಿಗೆ ಕನ್ನಡದ ಶಬ್ದಗಳು ಇತ್ಯಾದಿ ಇತ್ಯಾದಿ ಸ್ವಲ್ಪ ನೋಡೋಣ ಬನ್ನಿ.

 ಅಡಿ - ಅಡಿಗಲ್ಲು - ಅಡಿಗಾಣು (ತಳಕಾಣು) - ಅಡಿಮುಟ್ಟ (ತಳದವರೆಗೆ)- ಅಡಿಮೆ (ದಾಸ್ಯ - ಅಡಿಯ (ಆಳು) -ಅಡಿಯಿಡು - ಅಡು(ಬೇಯಿಸು) -ಅಡುಗೆ- ಅಡುಕೂಳು (ಬೇಯಿಸಿದ ಅನ್ನ) -ಅಡುಗೂಲಜ್ಜಿ (ಇತರರಿಗೆ ಅಡಿಗೆ ಮಾಡಿ ಹಾಕುವವಳು) - ಅಡುಬಾಣಲೆ (ಅಡುಗೆಯ ಬಾಣಲೆ)

 ಅಡ್ಡ - ಅಡ್ಡಗಟ್ಟು , ಅಡ್ಡಕಟ್ಟೆ -ಅಡ್ಡಕಥೆ (ಪ್ರಾಸಂಗಿಕ/ಉಪ ಕಥೆ) - ಅಡ್ಡ ಕಸುಬು (ನಡತೆ ತಪ್ಪಿ ಮಾಡುವ ಉದ್ಯೋಗ) - ಅಡ್ಡನಗೆ (ಬಿಗಿ ಹಿಡಿದ ಅರ್ಧ ನಗೆ) ಅಡ್ಡನಾಮ ( ಸ್ಮಾರ್ತರ ನಾಮ , ಮನೆತನದ ಹೆಸರು) - ಅಡ್ಡನಾಲಿಗೆ - ಅಡ್ಡನುಡಿ( ವಿರ್‍ಓಧದ ನುಡಿ) ಅಡ್ಡಪಂಕ್ತಿ- ಅಡ್ಡಪಲ್ಲಕ್ಕಿ - ಅಡ್ಡಮಳೆ ( ಕಾಲದಲ್ಲಿನ ಮಳೆ)- ಅಡ್ಡವಾರ ( ಸಂತೆಯಿಲ್ಲದ ಸಾಮಾನ್ಯ ದಿನ)- ಅಡ್ಡಾಗು(ಒರಗು) - ಅಡ್ಡಾಡು -ಅಡ್ಡಿ 

 ಅತೋನಾತು - ಬಹಳ

ಅತಿ - ಬಹಳ

ಅದುರು -( ನಡುಗು ,ಕಂಪಿಸು)

ಅದೃಷ್ಯ -ಕಾಣದ

 ಅಧ- ಕೆಳಗೆ

ಅಧರ - ತುಟಿ , ಕೆಳದುಟಿ

ಅಧಿಕ (ಹೆಚ್ಚು , ಬಹಳ)- +ಮಾಸ +ಪ್ರಸಂಗ +ಸಂವತ್ಸರ +ವರ್ಷ ಇತ್ಯಾದಿ

ನೀವೂ ಏಕೆ ಒಂದು ಶಬ್ದಕೋಶ ಖರೀದಿಸಿ ಓದಲಾರಂಭಿಸಬಾರದು? ಪುರುಸೊತ್ತಾದಾಗ ಒಂದಿಷ್ಟು ಓದುತ್ತ ಇರಿ . ನಾನು ಗಮನಿಸಿದ ಹಾಗೆ

೧. ಹೆಚ್ಚು ಶಬ್ದಗಳು ಸಂಸ್ಕೃತದ್ದೇ- ಒಂದು ಕಾಲದ ಸಾಹಿತ್ಯದಲ್ಲಿ ಸಂಸ್ಕೃತ ಬಹಳಷ್ಟು ಸೇರಿಕೊಂಡದ್ದರಿಂದ ಇವನ್ನು ಸಾಹಿತ್ಯಾಭ್ಯಾಸಿಗಳಿಗೆ ಅನುಕೂಲವಾಗಲೆಂದು ಸೇರಿಸಿದ್ದಿರಬಹುದು.

೨. ನಾವು ಅರ್ಥ ಗೊತ್ತಿಲ್ಲದೇ ಬಳಸುವ ಶಬ್ದಗಳಿಗೆ ಅರ್ಥ ಗೊತ್ತಾಗುವದು .

೩. ನಾವು ಮರೆಯುತ್ತಿರುವ ಅನೇಕ ಕನ್ನಡ ಶಬ್ದಗಳು ನೆನಪಾಗುವವು.

೪. ಸಂಗನಗೌದರು ಹಿಂದೆ ಒತ್ತಕ್ಕರ ಸಂಬಂದಿಸಿದಂತೆ ಹೇಳಿದ ವಿಚಾರ ನಿಜ ಎಂದೂ ಮತ್ತು 'ವ'ದಿಂದ ಆರಂಭವಾಗುವ ಶಬ್ದಗಳು ನಮ್ಮಲ್ಲಿಲ್ಲ ಎಂಬುವದು ಖಚಿತವಾಗುವದು.

೫. ಹೊಸ ಶಬ್ದ ರಚನೆಗೆ ವಿಚಾರಗಳು ಲಭಿಸುವವು.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 430 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2007 - 6:01pm — shreekant.mishrikoti

ಉ: ನೀವೂ ಕನ್ನಡ ಶಬ್ದಕೋಶ ಓದಿ

shreekant.mishrikoti's picture

ಈ ಆರು ತಿಂಗಳಲ್ಲಿ ಅರ್ಧದವರೆಗೆ -' ನ' ವರೆಗೆ ಬಂದಿದ್ದೇನೆ.
ಇನ್ನಾರು ತಿಂಗಳಿಗೆ ಮುಗಿಸಬಹುದು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 6:49pm — mahesha

ಉ: ನೀವೂ ಕನ್ನಡ ಶಬ್ದಕೋಶ ಓದಿ

mahesha's picture

ಸಂಗನಗೌದರು ಹಿಂದೆ ಒತ್ತಕ್ಕರ ಸಂಬಂದಿಸಿದಂತೆ ಹೇಳಿದ ವಿಚಾರ ನಿಜ ಎಂದೂ ಮತ್ತು 'ವ'ದಿಂದ ಆರಂಭವಾಗುವ ಶಬ್ದಗಳು ನಮ್ಮಲ್ಲಿಲ್ಲ ಎಂಬುವದು ಖಚಿತವಾಗುವದು.

ಸಂಗನಗೌಡರ ಒತ್ತಕ್ಕರ ಕುರಿತ ಮಾತು ಎಲ್ಲಿದೆ?

೧) 'ವ' ಇಂದ ಮೊದಲುವ ಒರೆ ಕನ್ನಡದಲ್ಲಿ ಇವೆ, ಆದರೆ ಹೆಚ್ಚಿಲ್ಲ.
ಮಾದರಿ : "ವೇಮಾರಿಸು" ( ಇದೊಂದೆ ನನಗೆ ನೆನೆಪಿಗೆ ಬಂದುದು Sad )
೨) ಹಲವು 'ವ'ಯಿಂದ ಮೊದಲುವ ದ್ರಾವಿಡ ಒರೆಗಳು ಕನ್ನಡದಲ್ಲಿ 'ವ' ಬದಲು 'ಬ' ಯಿಂದ ಒಡರುತ್ತವೆ.
ವಾಯ್ = ಬಾಯ್
ವೈ = ಬೈ
೩) ಕನ್ನಡದಲ್ಲಿ 'ಒ'ಯಿಂದ ಮೊದಲಾಗುವ ಒರೆಗಳು, 'ವ'ಯಿಂದ ಬಂದಂತೆ ಆಗುವುದು
ವಾಲೆ, ವತ್ತುವರಿ.

ಕನ್ನಡದ ಒರೆಗಂಟುಗಳ ಬಗ್ಗೆ ಅರುಹಿಗಾಗಿ ನನ್ನಿ! ವಂದನೆಗಳು!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !
  • 'ಗೈವೆ ಮುತ್ತಿನಾರತಿ ದೇವಾ'
  • ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
  • ಪದಪರೀಕ್ಷಕದಲ್ಲಿ ಈಗ ೪೦೦೦೦ + ೭೦,೦೦೦ ಶಬ್ದಗಳು
  • ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator