ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಅಂತೂ ಇಂತೂ ಫೈರ್‌ಫಾಕ್ಸ್ /ಮೊಝಿಲ್ಲ ಅನುವಾದ ಮುಗಿದು ಫ್ರೀ ಆದೆ.
ಇದರಿಂದ ಆದ ಉಪಲಾಭ ಎಂದರೆ ಫೈರ್‌ಫಾಕ್ಸ್ ನ ಒಳಹೊರಗು ಗೊತ್ತಾಗಿ ,ಅದಕ್ಕೇ ಶಿಫ್ಟ್ ಆಗುತ್ತಿದ್ದೇನೆ. ಅಲ್ಲಿ ಟ್ಯಾಬ್‌ಯುತ ಜಾಲವೀಕ್ಷಣೆ ಇದೆ. ( ಈ ಬಗ್ಗೆ ನೀವೂ ತಿಳಿದುಕೊಳ್ಳಬಹುದು - ಕನ್ನಡದ ಮೂಲಕವೇ . ಅನುವಾದಗಳು ಪರೀಕ್ಷೆಗೊಳಪಟ್ಟು , ಫೈರ್‌ಫಾಕ್ಸ್ ಆವೃತ್ತಿ ಬಿಡುಗಡೆಯಾದಾಗ)
ಸಕಾಲಕ್ಕೆ ಡಿಜಿಟಲ್ ಲೈಬ್ರರಿ ಸಿಕ್ಕು ಅಲ್ಲಿನ ಪುಸ್ತಕ ನೋಡುತ್ತಿರುವೆ . ಅಷ್ಟಾವಧಾನಿಯಂತೆ ಅನೇಕ ಟ್ಯಾಬ್‌ಗಳಲ್ಲಿ ಬೇರೆ ಬೇರೆ ಪುಸ್ತಕ ತೆರೆದು ಓದುತ್ತಿರುವೆ .
ಒಂದರಲ್ಲಿ ಚಾರ್ಲ್ಸ್ ಡಿಕನ್ಸನ - ಆಲಿವರ್ ಟ್ವಿಸ್ಟ್ ' - ಮಾಸ್ತಿಯವರ ಅನುವಾದ ,
ಮತ್ತೊಂದರಲ್ಲಿ ಅಷ್ಟೋಪನಿಶತ್
ಮಗದೊಂದರಲ್ಲಿ ಬಿ.ಎಂ.ಶ್ರೀ ಯವರ ಅಶ್ವತ್ಥಾಮನ್ ನಾಟಕ
ಮತ್ತೂ ಒಂದರಲ್ಲಿ ಅಕ್ರೂರಚರಿತವನ್ನೂ
ಇನ್ನೂ ಒಂದರಲ್ಲಿ ಅಮರುಶತಕ ಎಂಬ ಶೃಂಗಾರಕಾವ್ಯವನ್ನೂ
ಹೀಗೆ ಇಂಗ್ಲೀಷ್ , ಹಳೆಗನ್ನಡ , ಸಂಸ್ಕೃತ , ಆಧ್ಯಾತ್ಮ , ಶೃಂಗಾರವನ್ನೂ ಹೆಚ್ಚು ಕಡಿಮೆ ಏಕಕಾಲಕ್ಕೆ ಓದುತ್ತಿದ್ದೇನೆ! .

- shreekant.mishrikoti ರವರ ಬ್ಲಾಗ್
- Login or register to post comments
- 624 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಹೀಗೇ ಒಂದು ಸಂದೇಹ. ನನ್ನ ಬಳಿ IE (internet explorer) ಇದೆ, ಆರನೇ ಆವೃತ್ತಿ. ಇದರಲ್ಲಿ ಕೂಡಾ ಟ್ಯಾಬ್‍ಯುತ ಜಾಲವೀಕ್ಷಣೆ ಇದೆ. ಇದಕ್ಕೂ" ಫೈರ್ಫಾಕ್ಸ್"ನಲ್ಲಿರುವ ಟ್ಯಾಬ್‍ಗೂ ಏನಾದರೂ ವ್ಯತ್ಯಾಸ ಇದೆಯೇ? ನಾನೂ ಸಾಮಾನ್ಯ ಮೂರಾದರೂ ಟ್ಯಾಬ್‍ಗಳ ನಡುವೆ ಪಕ್ಷಾಂತರ ಮಾಡುತ್ತಲೇ ಓದೋದು!
- ಶ್ಯಾಮ್ ಕಿಶೋರ್
ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಇದರಲ್ಲಿ ಕೂಡಾ ಟ್ಯಾಬ್‍ಯುತ ಜಾಲವೀಕ್ಷಣೆ ಇದೆ. ಇದಕ್ಕೂ" ಫೈರ್ಫಾಕ್ಸ್"ನಲ್ಲಿರುವ ಟ್ಯಾಬ್‍ಗೂ ಏನಾದರೂ ವ್ಯತ್ಯಾಸ ಇದೆಯೇ?
ಬಹಳ ವ್ಯತ್ಯಾಸವಿದೆ.
ಮೊದಲಾಗಿ ಟ್ಯಾಬ್ ಕಾನ್ಸೆಪ್ಟನ್ನೇ ಮೈಕ್ರೊಸಾಫ್ಟಿನವರು ಫೈರ್ ಫಾಕ್ಸ್ ನಿಂದ ಚೋರಿ ಮಾಡಿದ್ದು ಎಂದು ಹೇಳಲಾಗುತ್ತದೆ (ಫೈರ್ ಫಾಕ್ಸಿನ ಮುತ್ತಾತನಾದ Netscape Communicatorನಲ್ಲಿಯೇ ಟ್ಯಾಬ್ ಗಳಲ್ಲಿ ಅಂತರ್ಜಾಲ ಪುಟಗಳನ್ನು ಓದುವ ಸವಲತ್ತು ಲಭ್ಯವಿತ್ತು).
ಫೈರ್ಫಾಕ್ಸಿನಲ್ಲಿ ಟ್ಯಾಬ್ ಬಹಳ usableಆಗಿ ಇದೆ. ನಾನು ಇಪ್ಪತ್ತಕ್ಕೂ ಹೆಚ್ಚು ಟ್ಯಾಬುಗಳನ್ನು ಒಂದೇ ಸಮಯಕ್ಕೆ ತೆರೆದಿಟ್ಟುಕೊಂಡಿರುತ್ತೇನೆ - ಇದುವರೆಗೂ ಮೆಮೋರಿ ತೊಂದರೆಗಳು ಎಂದೂ ಎದುರಾಗಲಿಲ್ಲ. IE 7.0ನಲ್ಲಿ ನನಗೆ ಕಂಡುಬಂದದ್ದೇನೆಂದರೆ ಮೂರ್ನಾಲ್ಕು ಟ್ಯಾಬುಗಳನ್ನು ತೆರೆಯುವಷ್ಟರಲ್ಲಿಯೇ ನನ್ನ ನೋಟ್ ಬುಕ್ ಕೆಮ್ಮುತ್ತಿರುತ್ತದೆ. ಮೆಮೋರಿ ಹೆಚ್ಚು ಬಳಕೆಯಾಗುತ್ತದೆ.
IE ಕ್ರಾಶ್ ಆಗೋದು ಸರ್ವೇಸಾಮಾನ್ಯ - ನೀವು ಇಪ್ಪತ್ತು ಮೂವತ್ತು ಪುಟಗಳನ್ನು ತೆರೆದಿಟ್ಟುಕೊಂಡಿರುವಾಗ ಕ್ರಾಶ್ ಆದ್ರೆ ದೇವರೆ ಗತಿ. ಫೈರ್ಫಾಕ್ಸಿನಲ್ಲಿ ತಂತಾನೆ ಪುಟಗಳು ಪುನಃ ತೆರೆದುಕೊಳ್ಳುತ್ತವೆ.
ಫೈರ್ಫಾಕ್ಸಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದು, ನಮಗೆ ಬೇಕಾದ ಏನೆಲ್ಲ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. IE ಯಲ್ಲಿ ಆ ಸ್ವಾತಂತ್ರ್ಯವಿಲ್ಲ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಪ್ರತಿ: ಉ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ನಾಡಿಗ್,
ವಿವರಣೆಗೆ ಧನ್ಯವಾದಗಳು. ಒಮ್ಮೆ ಫೈರ್ಫಾಕ್ಸ್ ಅನ್ನು ಇಳಿಸಿಕೊಂಡು ಬಳಸಿ ನೋಡಬೇಕು. ಸಂಪೂರ್ಣ ಕನ್ನಡದ ಆವೃತ್ತಿ ಬಂದ ಮೇಲೆ ಹೇಗಿದ್ದರೂ ಆ ಕೆಲಸ ಮಾಡಲೇಬೇಕಲ್ಲ (ಕನ್ನಡ ಅನುವಾದ ತಂಡದ ಶ್ರಮ ಎಷ್ಟರ ಮಟ್ಟಿಗೆ ಫಲಿಸಿದೆ ಅಂತ ತಿಳಿದುಕೊಳ್ಳಲು)!
- ಶ್ಯಾಮ್ ಕಿಶೋರ್
ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಮಾಹಿತಿಗಾಗಿ ನನ್ನಿಗಳು.
ನೀವು popup ಬಗ್ಗೆ ಹೇಳುತ್ತಿದ್ದಿರಾ? ಇದು IE 7ನಲ್ಲೂ ಇದೆಯಲ್ಲಾ? (ಖಂಡಿತ ನಾನು IEಯನ್ನು ಬೆಂಬಲಿಸುತ್ತಿಲ್ಲ).
ಅಲ್ಲದಿದ್ದರೆ ಹೇಗೆ ಎಂದು ತಿಳಿಸುತ್ತಿರಾ?
ಕನ್ನಡದ ಫೈರ್‌ಫಾಕ್ಸ್ ಆವೃತ್ತಿಗಾಗಿ ಕಾಯುತ್ತಿದ್ದೆನೆ.
ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಫೈರ್ಫಾಕ್ಸ್ ತುಂಬಾ ನೆನಪು ತಿನ್ನುತ್ತೆ. ಟಾಸ್ಕ್ ಮ್ಯಾನೆಜರ್‍ನಲ್ಲಿ ಯಾವಾಗ ತೆಗೆದು ನೋಡಿದ್ರು ಲಿಸ್ಟ್ ನಲ್ಲಿ ಬರುವ ಪ್ರೋಸಸ್‍ಗಳಲ್ಲಿ ಬೆಂಕಿನರಿಯದ್ದೇ ಮೇಲುಗೈ.
ಆದರೆ ಅದರ ಟ್ಯಾಬ್‍ಗಳಲ್ಲಿ ಬ್ರೌಸ್ ಮಾಡುವ ಅನುಕೂಲ ತುಂಬಾ ನೆರವಾಗುತ್ತೆ.
ಉ: ಅನುಮಾನ: ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
tab browsing + IE facility ಬೇಕಂದ್ರೆ Avant browser ಉಪಯೋಗ ಮಾಡಿರಿ. ನಾನು ಇದನ್ನು ಜಾಸ್ತಿ ಉಪಯೋಗಿಸುವುದು. netscape ಇದು ಒಳ್ಳೆಯದೇ.
www.avant.com
operaಅನ್ನು ಕೂಡ ಜನರು ಪ್ರಶಂಸಿಸುತ್ತಾರೆ.
ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಹಂತ ಭೋ!!
ಮಿಶ್ರಕೋಟಿಗಳೇ ಏನಿದು, ನಿಮಗೆ ಜಾಲವೀಕ್ಷಣಾಪ್ರವೀಣ, ಅಂತರಜಾಲೀಯಪಠಣಪಟು, ಅಂತರಜಾಲವೀಕ್ಷಣೋಪಕರಣಾನುವಾದಕೋತ್ತಮ ಅನ್ನು ಬಿರುದುಗಳನ್ನು ಕೊಡಬೇಕೆಂದು ಅನ್ನಿಸುತ್ತಿದೆ.
ಅಗ್ನಿಶೃಗಾಲವನ್ನು ಅಂತೂ ಪೂರ್ಣವಾಗಿ ಕರ್ಣಾಟಕ್ಕೆ ಅನುವಾದಿಸಿಯೇ ಬಿಟ್ಟಿರಾ!! ಭಲಾ!!
ಕರ್ಣಾಟಭಾಷಾಂತರಜಾಲಭುವನೇಶ್ವರಿ ನಿಮಗೆ ಇಷ್ಟೈಶ್ವರ್ಯಗಳನ್ನು ವರದಾನಿಸಲೆಂದು ಆಶಿಸುವೆನು.
ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಧನ್ಯವಾದಗಳು ,
ಅನುವಾದವನ್ನೇನೋ ಮಾಡಿದೆನು .
ಆದರೆ
ಅಣ್ಣಂದಿರಾ ,
translate.sampada.net ತಾಣಕ್ಕೆ ಅದೇನೋ ತೊಂದರೆ ಆಗಿದೆ. ಬಲ್ಲಿದರು ಯಾರಾದರೂ ತೊಂದರೆಯನ್ನು ಪರಿಹರಿಸಿ
ಅನುವಾದವನ್ನು ಬಿಡುಗಡೆ ಮಾಡಲು ಸಹಾಯ ಮಾಡುವಿರಾ ?
ಆಗ ನಾವು ನೀವು ಎಲ್ಲರೂ ಕನ್ನಡ ಬೆಂಕಿನರಿಯನ್ನು ಬಳಸಬಹುದು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ನಾನು ಸಹಾಯ ಮಾಡಲಾರನು. ನನಗೆ ಆ ಜಾಲಸ್ಥಳದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ.
ನೀವು ನನಗೆ ನಿಮ್ಮ ವೈಯಕ್ತಿಯ ಪ್ರತಿಯನ್ನು ವಿದ್ಯುನ್ಮಾನಜಾಲಪತ್ರದ ಮುಖೇನ ರವಾನಿಸಿರಿ. ನಾನು ಆ ತಂತ್ರಾಂಶವನ್ನು ಅನುಸ್ಥಾಪಿಸಿ, ಧಾವಿಸಿರಿ, ವೀಕ್ಷಸಿಸುವೆನು.
ಅನಲಶೃಗಾಲಕ್ಕಾಗಿ ಕಾತುರದಿಂದ ನಿರೀಕ್ಷಿಸುತ್ತಾ ಇದ್ದೀನಿ.
ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಅಗ್ನಿ ಶೃಗಾಲ ! ಅನಲಶೃಗಾಲ !!

ಈ ಪದವನ್ನು ಪಠಿಸಿ ನನ್ನ ಉದರದಲ್ಲಿ ವ್ರಣಗಳಾಗುತ್ತಿವೆ!!!
-ಹಂಸಾನಂದಿ
ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಅದು ದೈವಪ್ರೇರಿತ. ಇದನ್ನು ಪಠಿಸಿದವರಿಗೂ, ಪಠಿಸಲು ಅನುಕೂಲವಿತ್ತು ಸಹೃದಯರಿಗೂ, ಆ ದೈವವು ಸಮಸ್ತ ಸನ್ಮಂಗಳವನ್ನುಂಟು ಮಾಡುತ್ತಾನೆಂಬಲ್ಲಿಗೆ...............
ಉ: ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಸಹೃದಯಿ ಕನ್ನಡ ಸನ್ಮಿತ್ರರಿಗೆ ಸುನಿಲರಿಗೆ ನನ್ನ ನಮನಗಳು.
ನಿಮಗೆ ಸನ್ಮಂಗಗಳ ಪ್ರಾಪ್ತಿಯಾಗಲಿ...!!