ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ

May 6, 2006 - 3:32pm — shreekant.mishrikoti

ನಾನು ಕಳೆದ ೩೭ ವರ್ಷಗಳಲ್ಲಿ ಹೆಚ್ಚಿನ ಸಮಯವನ್ನು ಓದುತ್ತಲೇ ಕಳೆದಿದ್ದೇನೆ. ( ಬರೆಯಲು ಜಾಣತನ ಬೇಕೇ ಹೊರತು ಓದಲು ಬೇಕಿಲ್ಲವಷ್ಟೆ? ) ಈವರೆಗೆ ಓದಿ ತಲೆಯಲ್ಲಿ ತುಂಬಿಕೊಂಡ ವಿಚಾರಗಳನ್ನು 'ಸಂಪದ'ದಲ್ಲಿ ಈವರೆಗೆ ಬರೆದು ತಲೆಯನ್ನು ಕೊಡವಿಕೊಂಡದ್ದಾಯಿತು. ಈ ಸಮಯದಲ್ಲಿ ಶ್ರೀ ಟಿ. ವಿ. ಶ್ರೀನಿವಾಸ ಅವರು ( ' ಸಂಪದ'ದ ಮೂಲಕವೇ ಅವರ ಪರಿಚಯವಾದದ್ದು ) ಕನ್ನಡಸಾಹಿತ್ಯ.ಕಾಂ ನ ಕುರಿತು ತಿಳಿಸಿದರು . ಅವರಿಗೆ ಬರಹಗಳನ್ನು ತಿದ್ದುವ ವಾಲಂಟೀರ್- ಸ್ವಯಂಸೇವಕರ ಅಗತ್ಯ ಇದೆ. ಎಂದು ತಿಳಿಸಿದರು .
ಅವರು ಹೇಳಿದಂತೆ ಯಾಹೂ ಗ್ರುಪ್ ( http://groups.yahoo.com/group/ksc-baraha-team) ನ ಸದಸ್ಯನಾಗಿದ್ದೇನೆ . ಅಲ್ಲಿಯ ರೋಹಿತ್ ಅವರು ಆಗಾಗ ಕೆಲವೊಂದು ಲೇಖನಗಳ ಲಿಂಕ್ ಕೊಡುತ್ತಾರೆ . 'ಬರಹ' ಮತ್ತು 'ನುಡಿ' ತಂತ್ರಾಂಶಗಳನ್ನು ಉಪಯೋಗಿಸಿ ಲೇಖನಗಳ ಕಾಗುಣಿತ ದೋಷಗಳನ್ನು ತಿದ್ದುತ್ತಲೇ , 'ನುಡಿ'ಯಲ್ಲಿನ ಪದಪರೀಕ್ಷಕ( ಅಂದ್ರೆ ಸ್ಪೆಲ್ಲ್ ಚೆಕ್ಕರ್ - ಕನ್ನಡದಲ್ಲಿ ! - ( ಅ. ರಾ. ಸೇ. ಯವರ 'ಸೊಗದಿರುಳು ನಲ್ವಗಲು' ಹಾಸ್ಯ ಕಾದಂಬರಿಯಲ್ಲಿ 'ಸೊಗದಿರುಳ್ ನನಗಕ್ಕೆ / ನಲ್ವಗಲ್ ನಿನಗಕ್ಕೆ' ಎಂದು ವಿಶ್ ಮಾಡಿದಾಗ ಯಾರೋ ' ಏನ್ಸಾ ಅಂಗಂದ್ರೆ ? ' ಅಂತ ಕೇಳ್ದಾಗ 'ಹಂಗಂದ್ರೆ ಕನ್ನಡದಾಗೆ ಗುಡ್ ನೈಟು , ಗುಡ್ ಡೇ ಅಂತ ಕಣಲೇ' ಅಂತ ವಿವರಿಸಿರ್ತಾರೆ!) ಉಪಯೋಗಿಸಿ ಪದಪರೀಕ್ಷಕಕ್ಕೆ ಅದು ಅರಿಯದ ಶಬ್ದಗಳನ್ನು ಸೇರಿರುವದು. ಈವರೆಗೆ ೧೯ ಲೇಕನಗಳನ್ನು ಪರೀಕ್ಷಿಸಿ/ತಿದ್ದಿ ಸುಮಾರು ಇಪ್ಪತ್ತು ಸಾವಿರ ಶಬ್ದ ಸೇ(ಪೇ)ರಿಸಿದ್ದೇನೆ.
ಅಂದರೆ ಇಲ್ಲಿ ನಾನು ಕನ್ನಡ ಶಬ್ದಗಳನ್ನು ಗುರುತಿಸುವ ಶಕ್ತಿಯನ್ನು ಯಂತ್ರಕ್ಕೆ ಕೊಡುತ್ತಿದ್ದೇನೆ . ಅದೇ ಸಮಯಕ್ಕೆ ಅರ್ಧ ಜೀವಮಾನದ ಓದಿನ ನಂತರ ನನಗೆಷ್ಟು ಕನ್ನಡ ಪದಗಳನ್ನು ಗುರುತಿಸಲಾಗುತ್ತದೆ ಎಂಬ ಅಂದಾಜೂ ಸಿಗುತ್ತದಲ್ಲವೆ ?

ನೀವೂ ನಿಮ್ಮ ಬಿಡುವಿನ ವೇಳೆಯನ್ನು ಈ ರೀತಿ ಸದುಪಯೋಗಮಾಡಿಕೊಳ್ಳ ಬಯಸಿದರೆ ( http://groups.yahoo.com/group/ksc-baraha-team) ಗೆ ಸದಸ್ಯರಾಗಿ ನಮ್ಮ ಜತೆಗೆ ಕೈ ಕೂಡಿಸಬಹುದು.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 1078 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 7, 2006 - 1:23pm — Rohit

'ಸ್ಪೆಲ್ ಚೆಕರ್‍' ನ ಬಗ್ಗೆ ಮತ್ತೊಂದಿಷ್ಟು.....

Rohit's picture

'ಕನ್ನಡಸಾಹಿತ್ಯ.ಕಾಂ'ನ ಸಹಯೋಗದಲ್ಲಿ ಪ್ರಾರಂಭವಾಗಿರುವ 'ಸ್ಪೆಲ್ ಚೆಕರ್‍'ಗೆ ಪದಸಂಚಯವನ್ನು ನಿರ್ಮಿಸುವ ಕಾರ್ಯದ ಬಗ್ಗೆ ಸಂಪದದಲ್ಲಿ ಮಾಹಿತಿ ಬಿತ್ತರಿಸಿದ್ದಕ್ಕೆ ಶ್ರೀಕಾಂತ್ ರವರಿಗೆ ನಾನು ಋಣಿಯಾಗಿದ್ದೇನೆ.
ಈಗ ಈ ದಿಸೆಯಲ್ಲಿ ಎದುರಾಗಿರುವ ಒಂದು ತಾಂತ್ರಿಕ ತೊಡಕಿನ ಬಗೆಗೆ ಹೇಳಬಯಸುತ್ತೇನೆ. ಈಗಾಗಲೇ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರು ನನಗೆ ಕಳುಹಿಸಿಕೊಟ್ಟಿರುವ dict ಫೈಲುಗಳನ್ನೆಲ್ಲ merge ಮಾಡಬೇಕಾಗಿದೆ. ಒಂದು ಫೈಲಿನಲ್ಲಿರುವ ಪದವು ಮತ್ತೊಂದರಲ್ಲೂ ಇರುವ ಸಾಧ್ಯತೆ ಇರುವುದರಿಂದ ಇಂತಹ duplicate entryಗಳನ್ನು ತೆಗೆಯುವ ಒಂದು batch ಸ್ಕ್ರಿಪ್ಟ್ನ ಅಗತ್ಯವಿದೆ. ಪರಿಣಿತರು ಇಂತಹದನ್ನು ಒದಗಿಸಿಕೊಟ್ಟಲ್ಲಿ ಪದಸಂಚಯದ ಕಾರ್ಯ ಮತ್ತಷ್ಟು ಶೀಘ್ರವಾಗಿ ಸಾಗಲು ಸಾಧ್ಯವಾಗುತ್ತದೆ.

ತಮ್ಮ ಸಹಕಾರ ಕೋರುತ್ತಾ....

ರೋಹಿತ್ ಆರ್‍.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2006 - 11:45am — prashanth kota

script ಬಗ್ಗೆ

prashanth kota's picture

ರೋಹಿತ್,
ನಿಮ್ಮ ಯಾವುದಾದರೂ ೨-೩ dict ಫೈಲುಗಳನ್ನು ನನ್ನ e-mailಗೆ ಕಳಿಸಿಕೊಡಿ. ನನಗೆ ಬಂದಷ್ಟು perl ಉಪಯೋಗಿಸಿ script ಬರೆಯಲು ಪ್ರಯತ್ನಿಸುತ್ತೆನೆ. ಸರಿ ಅನ್ನಿಸಿದರೆ ಮುಂದೆ ಎಲ್ಲಾ ಫೈಲುಗಳನ್ನು ಒಂದಾಗಿಸೊಣ.

ಪ್ರಶಾಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2006 - 8:40pm — Rohit

ಮೈಲ್ ಐಡಿ?

Rohit's picture

ಪ್ರಶಾಂತ್,

ತಮ್ಮ id? ಸಂಪದದ profileನಲ್ಲಿ ತಾವು ಈ-ಮೈಲ್ಗಳನ್ನು ಸ್ವೀಕರಿಸುವುದಿಲ್ಲ ಎಂದಿದೆ.

ರೋಹಿತ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 11:16am — prashanth kota

ಈಗ ಇ-ಪತ್ರಗಳನ್ನು ಸ್ವೀಕರಿಸುತ್ತಿದ್ದೇನೆ

prashanth kota's picture

ಆದರೆ ಶ್ರೀಕಾಂತ ಹೇಳಿದ ಪರಿಹಾರ ಒಳ್ಳೆಯದ್ದಾಗಿದೆ. ಅವರಿಗೂ ಕಳಿಸಿ.
ನಾನು ನುಡಿ ಅಥವಾ ಬರಹ ಇಲ್ಲದೆಯೆ ಮಾಡುವುದ್ದಕ್ಕೆ ಪ್ರಯತ್ನಿಸುವೆ.

ಪ್ರಶಾಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2006 - 2:30pm — ಮಹೇಶ ಭೋಗಾದಿ

ಕಗಪ - ಪದಪರೀಕ್ಷಕ

ಮಹೇಶ ಭೋಗಾದಿ's picture

ಈ ವಿಷಯವಾಗಿ ನಾವು "ಕಗಪ"ದ ಸಹಾಯಪಡೆಯಬೇಕು.

ನಾನು ನುಡಿ ತಂತ್ರಾಂಶದ ಪದಪರೀಕ್ಷಕಬಳಸಿ ನೋಡಿದ್ದೇನೆ. ಅದು ಯಾವ ಪ್ರಯೋಜನಕ್ಕೂ ಬರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 12:40pm — prashanth kota

ಭಾರತೀಯ ಭಾಷೆಗಳ spell-checkerನ ಸಮಸ್ಯೆಗಳು

prashanth kota's picture

ಗ್ರೀಕ್ ಲಾಟಿನ್ ಗಳನ್ನು ಆದರಿಸಿದ ಐರೋಪ್ಯ ಭಾಷೆಗಳಲ್ಲಿ ಸಂಧಿ-ಸಮಾಸ ಗಳು ಇಲ್ಲವೆನೊ. ಹಾಗಾಗಿ ಅವುಗಳಿಗೆ spell-checker ಮಾಡುವುದು ಸುಲಭ. ಇವತ್ತು ಸೆರಿಸಿದ ಒಂದು ಪದ ಬೇರೆ ಈಗಾಗಲೆ ಇರುವ ಪದಗಳೊಡಗೂಡಿ ಸಾವಿರಾರು ಪದಗಳನ್ನು ಸೃಷ್ಟಿಸುವುದಿಲ್ಲ. 'im', 'en', 'dis' ಮುಂತಾದ prefix ಗಳಿಂದ ಹೊಸ ಪದಗಳು ಹುಟ್ಟಬಹುದು. ಆದರೆ ಅವುಗಳು ಮಿತವಾಗಿವೆ (finite).

ಆದರೆ ಭಾರತೀಯ ಭಾಷೆಗಳು ಹಾಗಲ್ಲ. ಒಂದು ಹೊಸ ಪದ, ತನ್ನ ಮುಂಚೆ ಇದ್ದ ಬಹುತೇಕ ಎಲ್ಲಾ ಪದಗಳೊಡನೆ ಸೇರಿ ಹೊಸಪದಗಳನ್ನು ಹುಟ್ಟಿಹಾಕುತ್ತವೆ. ಭಾಷೆಯ ಬೆಳವಣಿಗೆಗೆ ಇದು ತುಂಬ ಒಳ್ಳೆಯದು. ಆದರೆ spell-checker ಮಾಡುವವರಿಗೆ ದೊಡ್ಡ ತಲೆನೋವು.

ಇಂಗ್ಲಿಷ್ spell-checker ಉಪಯೊಗಿಸಿದವರು ಕನ್ನಡ, ಸಂಸ್ಕೃತ ಪದ-ಪರೀಕ್ಷಕಗಳಿಂದ ಅದೇ ರೀತಿಯ ಪಕ್ವತೆ, ಪರಿಪೂರ್ಣತೆಯನ್ನು ಅಪೆಕ್ಷಿಸುತ್ತಾರೆ. ತಪ್ಪೆನಿಲ್ಲ. ಆದರೆ, ಆ ಹಂತವನ್ನು ತಲುಪುವರೆಗೂ ನಾವು "ಪದಗಳನ್ನು ಅವುಗಳ ಮೂಲ ರೂಪದಲ್ಲಿ ಮಾತ್ರ ಹುಡುಕಿ ಸರಿಪಡಿಸುವ" ಪದ-ಪರೀಕ್ಷಕಗಳಿಂದ ನಮ್ಮ ಕೆಲಸ ಸಾಗಿಸಬೇಕು.

ಪ್ರಶಾಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 1:00pm — shreekant.mishrikoti

ಅಥವಾ ಪದಗಳ ಎಲ್ಲ ರೂಪಗಳನ್ನು ನಾವು ಸ್ಪೆಲ್ ಚೆಕರ್ ಗಳಿಗೆ ಸೇರಿಸಬೇಕು

shreekant.mishrikoti's picture

ಅಥವಾ ಪದಗಳ ಎಲ್ಲ ರೂಪಗಳನ್ನು ನಾವು ಸ್ಪೆಲ್ ಚೆಕರ್ ಗಳಿಗೆ ಸೇರಿಸಬೇಕು . ನಾನು ಅದನ್ನೇ ಮಾಡ್ತಾ ಇದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 1:41pm — prashanth kota

ಹಾಗೆ ಸೆರಿಸಿದರೆ

prashanth kota's picture

ನಿಘಂಟು ತಿಮಿಂಗಲ ಗಾತ್ರದ್ದಾಗುತ್ತದೆ. ಪದ-ಪರೀಕ್ಷಕ ತುಂಬ ನಿಧಾನವಾಗಿ (ಮನಸ್ಸಿಗೆ ನೋವಾಗುವಷ್ಟು) ಕೆಲಸ ಮಾಡುತ್ತದೆ.

ಕನ್ನಡ ಸಂಧಿಗಳನ್ನು ಸರಿಯಾಗಿ ಬಿಡಿಸುವ ಕ್ರಮವನ್ನು ಗಣಕಕ್ಕೆ ಅಳವಡಿಸದ ಹೊರತು ಬೇರೆ ದಾರಿ ಇಲ್ಲ.

ಈ ನಿಟ್ಟಿನಲ್ಲಿ ನಿಮ್ಮ ಪರಿಚಿತರು ಯಾರಾದರು ಕೆಲಸ ಮಾಡುತ್ತಿದ್ದಾರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 1:48pm — ಮಹೇಶ ಭೋಗಾದಿ

ಪದ-ಪರೀಕ್ಷಕ

ಮಹೇಶ ಭೋಗಾದಿ's picture

ಈ ವಿಷಯವಾಗಿ ನನ್ನ ನಾನೇನಾದರು ಬಳಕೆಗೆ ಬರಬಹುದೆ?
ನನಗೆ ಈ ತಂತ್ರಗಳು ಗೊತ್ತಿಲ್ಲ.

ಬೇಕಾದಲ್ಲಿ ದಯವಿಟ್ಟು ಸಂಪರ್ಕಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2006 - 12:57pm — shreekant.mishrikoti

spell checker - merge solution

shreekant.mishrikoti's picture

ಡಿಕ್ಷನರಿ ಫ಼ೈಲುಗಳನ್ನು ಮೊದಲು ನುಡಿ ಜತೆಗೆ ಬಂದಿರುವ DictEdit ಡಿಕ್ಶನರಿ ಎಡಿಟರ್ ನಲ್ಲಿ ತೆರೆದು ಎಕ್ಸ್‍ಪೋರ್ಟ್ ಮಾಡಿಕೊಳ್ಳಿ .
ನಂತರ ಎಕ್ಸ್‍ಪೋರ್ಟ್ ಮಾಡಿಕೊಂಡ ಫೈಲನ್ನು ತೆರೆದು ಅಲ್ಲಿಂದ ಕಾಪಿ ಮಾಡಿ , ಬರಹದಲ್ಲಿ - 'Paste Special- Convert kannaDa ascii- ಮಾಡಿದರೆ ಎಲ್ಲ ಶಬ್ದಗಳು
ಇಂಗ್ಲಿಷ್ ಆಸ್ಕಿಯಲ್ಲಿ ಸಿಗುತ್ತವೆ.
ಇದನ್ನು ಬರಹ ಫ಼ೈಲಾಗಿ ಉಳಿಸಿರಿ

ಹೀಗೆ ಎಲ್ಲ ಫ಼ಲುಗಳನ್ನು ಮಾಡಿದರೆ ಅವುಗಳನ್ನು ಸೇರಿಸಿ ಲೈನಕ್ಸಿಗೋ / ಯೂನಿಕ್ಸಿಗೋ ತೆಗೆದುಕೊಂಡು ಹೋಗಿ ಅಲ್ಲಿರುವ sort | uniq ಕಮ್ಯಾಂಡುಗಳನ್ನು ಉಪಯೋಗಿಸಿದರೆ ನಿಮ್ಮ ಉದ್ದೇಶ ಸಾಧಿಸಿದಂತೆ.

ಬೇಕಾದರೆ ನಾನು ಮಾಡಿಕೊಡುತ್ತೇನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2006 - 2:25pm — ಮಹೇಶ ಭೋಗಾದಿ

ಪದಪರೀಕ್ಷ

ಮಹೇಶ ಭೋಗಾದಿ's picture

ನನಗೆ ನೀವು ಹೇಳುತ್ತಿರುವ ತಂತ್ರಗಳ ಬಗ್ಗೆ ಅರಿವಿಲ್ಲ.

ಪದಪರೀಕ್ಷ ಬೇಕೇಬೇಕು.

ಕೆಲವರು(ದೋಷಾರೋಪಣವಲ್ಲ) ಬಹಳ ತಪ್ಪುತಪ್ಪಾಗಿ ಬರೆದು, ಸಂಪದಕ್ಕೆ ಹಾಕುತ್ತಿದ್ದಾರೆ(ನಾನು ಕೂಡ).

ಅಲ್ಲದೆ ಎನ್ನಾದರು ಬರೆದರೆ, ಅದರ ಸರಿತನದ(ಹೊಸ ಪದವೆ?) ಬಗ್ಗೆ ಪದಪರೀಕ್ಷಕವನ್ನು ಬಳಸಿದರೆ, ನಿಷ್ಚಿಂತೆಯಿಂದಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 9, 2006 - 2:35pm — Sunil Jayaprakash

DictEdit

Sunil Jayaprakash's picture

ಶ್ರೀಕಾಂತ ರವರೆ,
ಸಾಧ್ಯವಾದರೆ ಒಂದು .dict ಫೈಲು ಕಳುಹಿಸಲು ಸಾಧ್ಯವೇ. ನನಗೆ ಈ ಡಿಕ್ಷನರಿ ಯಾವ ರೀತಿಯಲ್ಲಿದೆ ಎಂಬುದೇ ತಿಳಿಯುತ್ತಿಲ್ಲ.
ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 10, 2006 - 12:02pm — Sunil Jayaprakash

ಸ್ಕ್ರಿಪ್ಟ್ = Merge Solution

Sunil Jayaprakash's picture

ಶ್ರೀಕಾಂತರವರೆ,
ನೀವು ತಿಳಿಸಿದ ರೀತಿಯಲ್ಲಿ ಒಂದು ಸಣ್ಣ shell script ಮಾಡಿ ರೋಹಿತ್ ರವರಿಗೆ ಕಳುಹಿಸಿರುವೆ. ಕಾದು ನೋಡೋಣ ಅದು ಅವರಿಗೆ ಉಪಯೋಗಕ್ಕೆ ಬಂತೇ ಎಂದು.

./Merge_Dictionary [FILE_NAME_1] [FILE_NAME_2] .........ಅಂತ ಚಾಲೂ ಮಾಡಿದರೆ ಅದು Sorted_Merged_List_[TIME_STAMP] ಎಂಬ file create ಮಾಡಿ, ನಕಲಾದ ಪದಗಳನ್ನು ಬೇರ್ಪಡಿಸುತ್ತದೆ. ಆದರೆ ಅದು unix ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವಂಥದ್ದು.

ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
  • ನಾನು ಸೋಲುವೆನೋ ? ಕಂಪ್ಯೂಟರ್ ಸೋಲುವದೋ ?
  • 'ಎಂಥೆಂಥ ದೊಡ್ಡ ಜನರನ್ನೂ ಕಡೆಗಣಿಸಿದ್ದೇನೆ!' ಅಥವಾ 'ನನಗೆಷ್ಟು ಕನ್ನಡ ಗೊತ್ತಿದೆ?' ಅಥವಾ 'ಕನ್ನಡ ಪದಪರೀಕ್ಷಕದಲ್ಲಿ ಒಂದು ಲಕ್ಷ ಶಬ್ದಗಳು!'
  • ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
  • ಕಂಪ್ಯೂಟರ್‍‍ನಲ್ಲಿ ಕನ್ನಡ ಬಳಕೆದಾರರ ಗಮನಕ್ಕೆ -- ಕನ್ನಡ ಪದಪರೀಕ್ಷಕದ ಸದ್ಯದ ಸ್ಥಿತಿ.
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 201 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator